Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮೇ ತಿಂಗಳಿನಲ್ಲಿದೆ ರಕ್ತ ಚಂದ್ರಗ್ರಹಣ: ಯಾವಾಗ ಸಂಭವಿಸಲಿದೆ? ಭಾರತದಲ್ಲಿ ಕಂಡು ಬರುವುದೇ?
ನಭೋಮಂಡಲದಲ್ಲಿ ನಡೆಯುವ ಹಲವು ಖಗೋಳ ವಿದ್ಯಾಮಾನಗಳಲ್ಲಿ ಗ್ರಹಣ ಕೂಡ ಆಗಿದೆ. ಪ್ರತೀವರ್ಷ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸಂಭವಿಸುತ್ತಿರುತ್ತದೆ. ಈ ಗ್ರಹಣ ವೈಜ್ಞಾನಿಕ ಹಾಗೂ ಜ್ಯೋತಿಷ್ಯದ ದೃಷ್ಟಿಯಿಂದ ಮಹತ್ವವನ್ನು ಪಡೆದಿದೆ. ಈ ಗ್ರಹಣವನ್ನು ವಿಜ್ಞಾನ ಒಂದು ರೀತಿಯಲ್ಲಿ ಅವಲೋಕಿಸಿದರೆ ಜ್ಯೋತಿಷ್ಯದಲ್ಲಿ ಇದರ ಆಧಾರದ ಮೇಲೆ ಮುಂದೆ ನಡೆಯಬಹುದಾದ ಘಟನೆಗಳ ಕುರಿತು ಭವಿಷ್ಯ ಹೇಳಲಾಗುವುದು.
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30ಕ್ಕೆ ಸಂಭವಿಸಿತ್ತು. ಇದೀಗ 2022ರ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿ ರಕ್ತ ಚಂದ್ರಗ್ರಹಣ ಗೋಚರಿಸಲಿದೆ.
ವರ್ಷದ ಮೊದಲ ಚಂದ್ರಗ್ರಹಣ ಯಾವಾಗ ಗೋಚರಿಸಿದೆ? ಯಾವ ಸಮಯದಲ್ಲಿ ಗೋಚರಿಸಲಿದೆ? ಎಲ್ಲೆಲ್ಲಿ ಕಂಡು ಬರಲಿದೆ ಎಂಬ ಮಾಹಿತಿ ನೀಡಲಾಗಿದೆ ನೋಡಿ:

ಚಂದ್ರಗ್ರಹಣ ಎಂದರೇನು?
ಚಂದ್ರಗ್ರಹಣವನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣವು ನಡೆಯುವುದು. ಯಾಕೆಂದರೆ ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಇದರಿಂದಾಗಿ ಚಂದ್ರನಿಗೆ ಗ್ರಹಣ ಉಂಟಾಗುವುದು.
ಈ ಬಾರಿ ಸಂಭವಿಸಲಿರುವುದು ರಕ್ತ ಚಂದ್ರಗ್ರಹಣ.

ಚಂದ್ರಗ್ರಹಣ ಯಾವಾಗ? ಎಷ್ಟು ಹೊತ್ತಿಗೆ ಗೋಚರಿಸಲಿದೆ?
ಚಂದ್ರಗ್ರಹಣ ಮೇ, 15-16ಕ್ಕೆ ಸಂಭವಿಸಲಿದೆ. ಅಂದರೆ ನಿಮ್ಮ ಪ್ರದೇಶಕ್ಕೆ ಅದು ಯಾವಾಗ ಗೋಚರಿಸಲಿದೆ ಎಂಬುವುದು ನಿಮ್ಮ ಪ್ರದೇಶವನ್ನು ಅವಲಂಬಿಸಿದೆ. ಭಾರತದ ಕಾಲಮಾನ ಪ್ರಕಾರ ಮೇ.16ಕ್ಕೆ ಸಂಭವಿಸಲಿದೆ.
ಎಷ್ಟು ಹೊತ್ತಿಗೆ ಗೋಚರಿಸಲಿದೆ?
ಭಾರತದ ಕಾಲಮಾನ ಪ್ರಕಾರ ಬೆಳಗ್ಗೆ 07:02ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಿ 12:20ಕ್ಕೆ ಮುಕ್ತಾಯವಾಗುತ್ತದೆ. ನಮ್ಮ ಕಾಲಮಾನ 08:59ರ ಹೊತ್ತಿಗೆ ಸಂಪೂರ್ಣ ರಕ್ತಚಂದ್ರಗ್ರಹಣ ಸಂಭವಿಸಲಿದೆ.

ಸಂಪೂರ್ಣ ಚಂದ್ರಗ್ರಹಣ ಎಂದರೇನು?
ಸೂರ್ಯ ಮತ್ತು ಚಂದ್ರನ ಮಧ್ಯ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನ ಮೇಲೆ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಆವರಿಸುತ್ತದೆ.
2022ರಲ್ಲಿ 2 ಸಂಪೂರ್ಣ ಚಂದ್ರಗ್ರಹಣವಿದೆ. ಒಂದು ಮೇ 16ಕ್ಕೆ ಸಂಭವಿಸಲಿದೆ, ಮತ್ತೊಂದು ನವೆಂಬರ್ 8ಕ್ಕೆ ಇರಲಿದೆ.

ರಕ್ತ ಚಂದ್ರಗ್ರಹಣವೆಂದರೇನು?
ಗ್ರಹಣದ ಸಮಯದಲ್ಲಿ ಸೂರ್ಯ ಮತ್ತು ಚಂದ್ರ ನಡುವೆ ಭೂಮಿ ಅಡ್ಡ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಕಾಂತಿ ಕಳೆದುಕೊಳ್ಳುತ್ತಾನೆ. ಖಗ್ರಾಸ ಚಂದ್ರ ಗ್ರಹಣದಲ್ಲಿ ಭೂಮಿಯ ಸಂಪೂರ್ಣ ನೆರಳು ಚಂದ್ರನ ಮೇಲೆ ಬಿದ್ದು, ನಂತರ ಭೂಮಿ ಕೊಂಚ ಸರಿದಾಗ ಸೂರ್ಯ ಕಿರಣಗಳು ಭೂಮಿಯ ಅಂಚಿನಿಂದ ಚಂದ್ರನ ಮೇಲೆ ಬೀಳುತ್ತವೆ. ಆಗ ವಾತಾವರಣದ ಧೂಳಿನ ಕಣಗಳು ಸೂರ್ಯನ ಬೆಳಕಿಗೆ ಅಡ್ಡಬಂದು ಚಂದ್ರ ರಕ್ತವರ್ಣದಲ್ಲಿ ಕಾಣಿಸುತ್ತಾನೆ. ಇದನ್ನು 'ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ಎಂದು ಕರೆಯಲಾಗುವುದು. ಆದ್ದರಿಂದ ಬಣ್ಣದ ಕಾರಣಕ್ಕೆ ಆತಂಕ ಪಡಬೇಕಾಗಿಲ್ಲ.

ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದೇ?
ಚಂದ್ರಗ್ರಹಣ ಸಮಯದಲ್ಲಿ ಭಾರತದಲ್ಲಿ ಸೂರ್ಯ ಹುಟ್ಟಿರುತ್ತಾನೆ. ಆದ್ದರಿಂದಾಗಿ ಭಾರತದಲ್ಲಿ ಚಂದ್ರಗ್ರಹಣ ಕಂಡು ಬರುವುದಿಲ್ಲ.

ರಕ್ತ ಚಂದ್ರಗ್ರಹಣ ಎಲ್ಲೆಲ್ಲಿ ಕಂಡು ಬರಲಿದೆ?
ಅಮೆರಿಕ, ಅಂಟಾರ್ಟಿಕಾ, ಯುರೋಪ್, ಆಫ್ರಿಕಾ, ಪೂರ್ವ ಫೆಸಿಫಿಕ್, ನ್ಯೂಜೆಲ್ಯಾಂಡ್, ಪೂರ್ವ ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಕಂಡು ಬರಲಿದೆ.



Click it and Unblock the Notifications
