Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಎಂಟ್ರಿ ಸಾಂಗ್ ಇಲ್ಲದಿರುವುದಕ್ಕೆ ಮದುವೆ ಮಂಟಪ ಹತ್ತದೆ ಹಠ ಹಿಡಿದ ವಧು: ವೀಡಿಯೋ ವೈರಲ್
ಮದುವೆ ಬಗ್ಗೆ ಪ್ರತಿಯೊಬ್ಬರಿಗೆ ನೂರೆಂಟು ಕನಸುಗಳಿರುತ್ತದೆ. ನನ್ನ ಮದುವೆಗೆ ಈ ರೀತಿ ಅರೇಂಜ್‌ಮೆಂಟ್ ಇರಬೇಕು, ಇಷ್ಟು ಜನರನ್ನು ಕರೆಯಬೇಕು, ಡ್ರೆಸ್ಸಿಂಗ್ ಹೀಗೇ ಇರಬೇಕು ಎಂಬೆಲ್ಲಾ ಆಸೆಗಳಿರುತ್ತದೆ. ಮದುವೆಯೆಂಬುವುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವುದರಿಂದ (ಬಹುತೇಕರ ಜೀವನದಲ್ಲಿ) ಮದುವೆ ಎಂದರೆ ಸಡಗರ-ಸಂಭ್ರಮ ಹೆಚ್ಚಿರುತ್ತದೆ.

ಇನ್ನೂ ಮದುವೆಯಲ್ಲಿ ಎಂಟ್ರಿ ಸಾಂಗ್ ಟ್ರೆಂಡ್ ಆಗಿದೆ, ಅದಕ್ಕೆ ವಧು ಹಾಗೂ ವರ ಪ್ರಿಪರೇಷನ್ ಕೂಡ ಮಾಡಿರುತ್ತಾರೆ, ವಧು-ವರ ನೃತ್ಯ ಮಾಡುವುದು, ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವುದು ಇವೆಲ್ಲಾ ಅಲ್ಲಿ ನೆರೆದವರಿಗೆ ತುಂಬಾನೇ ಖುಷಿ ನೀಡುವುದು. ಆದರೆ ಇಲ್ಲೊಂದು ಮದುವೆಯಲ್ಲಿ ಪಾಪ ಹುಡುಗಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಬೇಕೆಂದು ಬಯಸಿರುತ್ತಾಳೆ, ಆದ್ರೆ ಎಂಟ್ರಿ ಸಾಂಗ್ ಅವಳು ಬಯಸಿದ್ದು ಆಗಿರಲಿಲ್ಲ.. ಮದುಮಗಳಿಗೆ ನಿರಾಸೆ ತಾಳಲಾರದೆ ಜೋರಾಗಿ ಅತ್ತಿದ್ದಾಳೆ ಅಲ್ಲದೆ ಎಂಟ್ರಿ ಸಾಂಗ್ ಇಲ್ಲದೆ ಮಂಟಪಕ್ಕೆ ಬರಲ್ಲ ಎಂದು ಹಠ ಹಿಡಿದಿದ್ದಾಳೆ.
ಇದೀಗ ಈ ವೀಡಿಯೋ ಸಕತ್ ವೈರಲ್ ಆಗಿದೆ. ಹುಡುಗಿ ಮದುವೆ ಮಂಟಪಕ್ಕೆ ಏಕೆ ಹೋಗುತ್ತಿಲ್ಲ ಎಂದು ನೋಡಿ, ಮದುವೆ ಸಿದ್ಧತೆಯಲ್ಲಿರುವ ಹೆಣ್ಮಕ್ಕಳೇ ನಿಮ್ಮ ಎಂಟ್ರಿ ಸಾಂಗ್ ಮೊದಲೇ ರೆಡಿ ಮಾಡಿ, ಲಾಸ್ಟ್ ಮಿನಿಟ್ ತೊಂದರೆಯಾಗುವುದು ಬೇಡ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ...
ಮದುವೆಯಲ್ಲಿ ನಡೆಯುವ ಫನ್ನಿ ಸನ್ನಿವೇಶಗಳು ಆಗಾಗ ವೈರಲ್ ಆಗುತ್ತಿರುತ್ತವೆ, ಇಲ್ಲಿ ಕೂಡ ಒಂದು ಎಂಟ್ರಿ ಸಾಂಗ್‌ಗೋಸ್ಕರ ಮಂಟಪಕ್ಕೆ ಹೋಗದೆ ಹಠ ಹಿಡಿದ ಮದುಮಗಳನ್ನು ನೋಡಿ ನಗು ಬಂದ್ರೂ ಅವಳ ಕಣ್ಣೀರು ನೋಡಿ ಪಾಪ ಅನಿಸುತ್ತಿದೆ ಅಲ್ವಾ?



Click it and Unblock the Notifications
