Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ವಿದೇಶಿಗನ ಭಾಂಗ್ರಾ ಕುಣಿತಕ್ಕೆ ಭಾರತೀಯರು ಫಿದಾ..!
ಭಾರತದಲ್ಲಿ ನಾವು ಅನೇಕ ರೀತಿಯ ನೃತ್ಯ ಪ್ರಕಾರಗಳನ್ನು ಕಾಣಬಹುದು. ಒಂದೊಂದು ರಾಜ್ಯವು ಒಂದೊಂದು ನೃತ್ಯ ಶೈಲಿಯನ್ನು ಹೊಂದಿದೆ. ಅದೇ ರೀತಿ ಪಂಜಾಬ್‌ನ ಭಾಂಗ್ರಾ ನೃತ್ಯದ ಬಗ್ಗೆ ನಿಮಗೆಲ್ಲಾ ಗೊತ್ತಿರುತ್ತೆ. ದೇಶ-ವಿದೇಶಗಳಲ್ಲಿಯೂ ಈ ನೃತ್ಯ ಪ್ರಖ್ಯಾತಿಯನ್ನು ಪಡೆದಿದೆ.

ಇತ್ತೀಚಿನ ದಿನಗಳಲ್ಲಿ ಅನೇಕ ಜನ ವಿದೇಶಿಯರು ಭಾರತೀಯ ನೃತ್ಯ ಪ್ರಕಾರಗಳನ್ನು ಇಷ್ಟಪಟ್ಟು ಕಲಿತು ಡಾನ್ಸ್ ಮಾಡಿರೋ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರೋದನ್ನ ನಾವು ನೋಡಿರ್ತಿವಿ. ಅದೇ ರೀತಿ ಇತ್ತೀಚಿಗೆ ಭಾಂಗ್ರಾ ನೃತ್ಯವೊಂದು ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗ್ತಿದೆ.
ಈ ವಿಡಿಯೋವನ್ನು Ed ಎಂಬುವವರು ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಮೊದಲಿಗೆ ಅವರು ನಿಮಗಿಷ್ಟವಾದ ಡಾನ್ಸ್ ಸ್ಟೆಪ್‌ಗಳನ್ನು ಕಲಿಸಿಕೊಡುವಂತೆ ಕೇಳುತ್ತಾರೆ. ನಂತರ ಪಂಜಾಬಿ ಶೈಲಿಯ ಉಡುಗೆಗಳನ್ನು ಧರಿಸಿ ಯೋ ಯೋ ಹನಿ ಸಿಂಗ್ ಹಾಗೂ ಜೆ-ಸ್ಟಾರ್ ಅವರ ಗರ್ಬು ಹಾಡಿಗೆ ನೃತ್ಯ ಮಾಡ್ತಾರೆ.
ವಿದೇಶಿಗನ ಈ ನೃತ್ಯವನ್ನು ಭಾರತೀಯರು ಮೆಚ್ಚಿಕೊಂಡು ಕಮೆಂಟ್ ಕೂಡ ಮಾಡಿದ್ದಾರೆ. ಈ ವಿಡಿಯೋಗೆ 40,000 ಕ್ಕೂ ಅಧಿಕ ಲೈಕ್ ಬಂದಿದ್ದು, ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.
ಭಾರತೀಯರೇ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಈ ಕಾಲದಲ್ಲಿ ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡು ಅದನ್ನು ಕಲಿತುಕೊಳ್ಳುತ್ತಿರುವುದು ನಿಜಕ್ಕೂ ವಿಶೇಷ ಅನ್ನಿಸುತ್ತೆ.



Click it and Unblock the Notifications
