Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
70ನೇ ವಯಸ್ಸಿನಲ್ಲಿ ವಿಚ್ಛೇದನ ನೀಡಿದ ಅಜ್ಜಿಗೆ 73 ವಯಸ್ಸಿನಲ್ಲಿಆಯ್ತು ಟ್ರೂ ಲವ್
ಜೀವನದಲ್ಲಿ ನಿಜವಾದ ಪ್ರೀತಿ ಎಲ್ಲರಿಗೆ ಸಿಗಲ್ಲ, ಕೆಲವೊಂದು ಸಂಬಂಧದಲ್ಲಿ ಪ್ರೀತಿಗೆ ಅರ್ಥನೇ ಇರಲ್ಲ, ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುತ್ತಿರುತ್ತಾರೆ. ನಿಜವಾದ ಪ್ರೀತಿ ಸಿಗುವವರು ಅದೃಷ್ಟವಂತರು, ಇಲ್ಲೊಂದು ಅಜ್ಜಿ 73ನೇ ವಯಸ್ಸಿನಲ್ಲಿ ನಿಜವಾದ ಪ್ರೀತಿ ಕಂಡುಕೊಂಡೆ ಎಂದು ಮಾಡಿರುವ ಟ್ವೀಟ್ ವೈರಲ್ ಆಗಿದೆ.

ಪ್ರೇಮಿಗಳು ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಸಂಭ್ರಮದಿಂದ ಆಚರಿಸುತ್ತಿರುವಾಗ 73 ವರ್ಷದ ಕಾರ್ಲೊ ಹೆಚ್ ಮ್ಯಾಕ್ ಎಂಬುವವರು ಟ್ವೀಟ್ ಮಾಡಿ ಜೀವನವೆಂದರೆ ವಿಚಿತ್ರ, ಮದುವೆಯಾಗಿ 40 ವರ್ಷದ ಬಳಿಕ ನನ್ನ 70ನೇ ವಯಸ್ಸಿನಲ್ಲಿ ಒಂಟಿಯಾಗುತ್ತೇನೆ ಎಂದು ಭಾವಿಸಿರಲಿಲ್ಲ, ಆದರೆ ಕೊರೊನಾ ಸಾಂಕ್ರಾಮಿಕದ ಮಧ್ಯದಲ್ಲಿ ನನ್ನ 73ನೇ ವಯಸ್ಸಿನಲ್ಲು ಟ್ರೂ ಲವ್ ಕಂಡು ಕೊಂಡಿದ್ದೇನೆ' ಎಂದು ಬರೆದು ಮಾಡಿರುವ ಟ್ವೀಟ್ ಸಕತ್ ವೈರಲ್ ಆಗಿದೆ.
ಕ್ಯಾಲಿಫೋರ್ನಿಯಾದಲ್ಲಿರುವ ಇವರು ನಿವೃತ ನರ್ಸ್, ಎಜುಕೇಟರ್, ರೈಟ್ ಅಡ್ವಕೇಟ್ ಮತ್ತು ಪಬ್ಲಿಕ್ ಸ್ಪೀಕರ್ ಆಗಿದ್ದಾರೆ. ಇವರು ಟ್ರೂ ಲವ್ವರ್ ಯಾರು ಎಂಬುವುದನ್ನು ಹಾಕಿಲ್ಲ, ಆದರೆ ಕೈಯಲ್ಲಿ ರಿಂಗ್ ಇರುವ ಫೋಟೋವನ್ನು ಶೇರ್ ಮಾಡಿ ಟ್ರೂ ಲವ್ ಸಿಕ್ಕಿದೆ ಎಂದು ಹೇಳಿದ್ದಾರೆ.
ಅವರ ಫಾಲೋವರ್ ಒಬ್ಬರು ನಿಮ್ಮ ಗಂಡ ತೀರಿ ಹೋಗಿದ್ದಾರಾ ಎಂಬ ಪ್ರಶ್ನೆಗೆ ನನ್ನ ಗಂಡ ತೀರಿ ಹೋಗಿಲ್ಲ, ಬೇರೆ ಮಹಿಳೆಯೊಂದಿಗೆ ಸೇರಿ ನನಗೆ ಮೋಸ ಮಾಡಿದೆ, ನಾನೇ ಒದ್ದು ಹೊರ ಹಾಕಿದೆ' ಎಂಬುವುದನ್ನು ಹೇಳಿದ್ದಾರೆ.
ಈ ವಯಸ್ಸಿನಲ್ಲಿ ಸಾಮಾಜಿಕ ತಾಣದಲ್ಲಿ ತುಂಬಾ ಆ್ಯಕ್ಟಿವ್ ಆಗಿರುವ ಅವರು ನನಗಿಂತ ನನ್ನ ಪ್ರೇಮಿ ಟೆಕ್‌ನಲ್ಲಿ ಪ್ರವೀಣರು ಎಂದು ಹೇಳಿದ್ದಾರೆ.
ಈ ವಯಸ್ಸಿನಲ್ಲಿಯೂ ಪ್ರೀತಿ ಕಂಡು ಕೊಂಡಿರುವ ಕಾರ್ಲೋಗೆ ನೆಟ್ಟಿಗರು ಶುಭಾಶಯಗಳನ್ನು ನೀಡುತ್ತಿದ್ದಾರೆ.



Click it and Unblock the Notifications
