Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಹುಡುಗಿಯಂತೆ ಡ್ರೆಸ್ ಧರಿಸಿ ಶಾಲೆಗೆ ಬಂದ 16 ಬಾಲಕ, ಈತನಿಗೆ ಸಿಕ್ತು ಭರಪೂರ ಮೆಚ್ಚುಗೆ
ಮಗನಾಗಿದ್ದರಂತೆ ಆತ ಪುರುಷನಂತೆಯೇ ಬಾಳಬೇಕು, ಮಗಳಾಗಿದ್ದರೆ ಆಕೆ ಸ್ತ್ರೀಯಂತೆ ಬಾಳಬೇಕು ಎಂದು ಈ ಬಯಸುತ್ತೆ ಈ ಸಮಾಜ... ಹುಡುಗ ಹುಡುಗಿಯಂತೆ ಡ್ರೆಸ್ ಧರಿಸುತ್ತೇನೆ ಎಂದರೆ ಸಮಾಜವ ಒಪ್ಪುತ್ತೋ, ಬಿಡುತ್ತೋ ಮನೆಯವರಿಗೆ ಅದನ್ನು ಸ್ವೀಕರಿಸಲು ಸಾಧಧ್ಯವಾಗುವುದಿಲ್ಲ, ತಂದೆ- ತಾಯಿ ಬಲವಾಗಿ ವಿರೋಧಿಸಬಹುದು, ಆದರೆ ಇಲ್ಲಿ ಈ ತಾಯಿ ಮಗನ ಆಸೆಗೆ ಬೆಂಬಲವಾಗಿ ನಿಂತಳು, ಅಷ್ಟು ಮಾತ್ರವಲ್ಲ ಆತ ಹೆಣ್ಣಿನಂತೆ ಡ್ರೆಸ್ ಧರಿಸಿ ಹೋದ ಫೋಟೋಗಳನ್ನು ಹೆಮ್ಮೆಯಿಂದ ಶೇರ್ ಮಾಡಿದಳು.
16 ವರ್ಷದತನ್ನ ಮಗ ಶಾಲೆಗೆ ಕೆಂಪು ಲಂಗ ತೊಟ್ಟು ಹೋದ ಫೋಟೋಗಳನ್ನು ಆಕೆ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದೇ ತಡ ಅದಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆ ಆಕೆಗೆ ಖುಷಿ ನೀಡಿದೆ. ನೆಟ್ಟಿಗರು ಆತನ ಫೋಟೋಗಳನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ.
ಹುಡುಗ ಬಾಲ್ ಗೌನ್ ಸ್ಕರ್ಟ್ ಹಾಗೂ ಸ್ಕ್ವಿಂಟೆಡ್ ಟ್ಯೂಕ್ಸೆಡೊ ಡ್ರೆಸ್ ಧರಿಸಿದ್ದು ಈತನ ವೇಷ ನೋಡಿ ಶಾಲಾ ಮಕ್ಕಳು ಹಾಗೂ ಟೀಚರ್ಸ್ ತುಂಬಾನೇ ಮೆಚ್ಚಿಕೊಂದ್ದರು, ಅವನ ತಾಯಿ ನೀನಾ ಗ್ರೀನ್ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದಾಗ ನೆಟ್ಟಿಗರು ಕೂಡ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

12 ವರ್ಷವಿದ್ದಾಗಲೇ ಗೌನ್ ಧರಿಸಿ ಸ್ಕೂಲ್ ಪ್ರೋಮ್‌ಗೆ ಹೋಗ ಬಯಸಿದ್ದ
ಆತ 12 ವರ್ಷವಿದ್ದಾಗಲೇ ಸ್ಕೂಲ್ ಪ್ರೋಮ್‌ಗೆ ಹೋಗುವಾಗ ಗೌನ್ ಧರಿಸಬೇಕೆಂದು ಬಯಸಿದ್ದ, ನಾಲ್ಕು ವರ್ಷಗಳ ಬಳಿಕ ಆತನ ಕನಸು ನೆರವೇರಿದೆ.

ಇಚ್ಛೆ ನೆರವೇರಿದ ಖುಷಿಯಲ್ಲಿ ಹುಡುಗ
ಈ ಹುಡುಗ ಬಿಲ್ಲಿ ಪೋರ್ಟರ್‌ನ ನಟನ ನೋಡಿ ಪ್ರಭಾವಿತನಾಗಿದ್ದ. ಸ್ಕ್ವಿಂಟೆಡ್ ಟ್ಯೂಕ್ಸೆಡೊ ಟಾಪ್ ಹಾಗೂ ಕೆಂಪು ಬಣ್ಣದ ಬಾಲ್ ಗೌನ್ ಸ್ಕರ್ಟ್ ತೊಟ್ಟು ತನ್ನ ತನ್ನ ಫೆಮಿನಾಸೈಡ್ ಪ್ರದರ್ಶಿಸಲು ಬಯಸಿದ್ದ.

ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೋಡಿ ತಾಯಿಯ ಕಣ್ತುಂಬಿ ಬಂದಿತ್ತು
ಆತ ಶಾಲೆಗೆ ತಲುಪಿದಾಗ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ ರೀತಿ ನೋಡಿ ತಾಯಿಯ ಕಣ್ತುಂಬಿ ಬಂದಿತ್ತು. ಈ ಹುಡುಗ ಕಾರಿನಿಂದ ಇಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವ ಮೂಲಕ ಆತನಿಗೆ ಚಿಯರ್ ಅಪ್ ಮಾಡಿದ್ದರು. ಶಿಕ್ಷಕರು ಆತನಿಗೆ ಪ್ರೋತ್ಸಾಹಿಸಿದ್ದರು.
ಮಕ್ಕಳು ಹೇಗಿದ್ದರೋ ಹಾಗೆ ಅವರನ್ನು ಸ್ವೀಕರಿಸಲು ಪೋಷಕರು ಕಲಿಯಬೇಕು, ತಮ್ಮ ಮಕ್ಕಳು ಇತರ ಮಕ್ಕಳ ರೀತಿ ಇಲ್ಲದೆ ಹೋದಾಗ ಅದಕ್ಕೆ ನಾವು ಬೇಸರ ಪಡುವುದು ಅಥವಾ ಅದಕ್ಕಾಗಿ ಅವರನ್ನು ದೂಷಿಸುವುದು ಮಾಡಬಾರದು. ನಮ್ಮ ಮಕ್ಕಳ ಬಗ್ಗೆ ಹೆಮ್ಮೆ ಇರಬೇಕು, ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸಬೇಕು ಎಂಬುವುದಾಗಿ ಹೇಳುತ್ತಾರೆ ಗ್ರೀನ್.




Click it and Unblock the Notifications