Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚಂದ್ರನ ಮೇಲೆ ಕಾಲಿಡುವ ಮುನ್ನ ಮರುಭೂಮಿಯಲ್ಲಿ ತರಬೇತಿ..! ನಾಸಾ ಹೀಗೆ ಮಾಡುತ್ತಿರೋದ್ಯಾಕೆ?
ಮಾನವರಿಗೆ ಚಂದ್ರ ಎಂದರೆ ಅದೇನೋ ಕುತೂಹಲ ಆತನ ಬಗ್ಗೆ ಎಷ್ಟು ಅಧ್ಯಯನ ನಡೆಸಿದರು ಅಲ್ಲಿನ ಕುತೂಹಲ ತಿಳಿಯುವ ಆಸೆ ಮತ್ತಷ್ಟು ಬಲವಾಗುತ್ತಲೇ ಇದೆ. ಮೊದಲ ಬಾರಿ ಚಂದ್ರನ ಮೇಲೆ ಕಾಲಿಟ್ಟ ಸಾಧನೆ ಮಾಡಿದ್ದ ನಾಸಾ ಅಂದಿನಿಂದ ಇಂದಿನವರೆಗೂ ನಾಸಾ ಚಂದ್ರನ ಕುರಿಯಂತೆ ವಿಶೇಷ ಅಧ್ಯಯನ ನಡೆಸುತ್ತಲೇ ಇದೆ.
ಆದರೆ ಅಪೊಲೋ ಯೋಜನೆಯಲ್ಲಿ ಮಾನವರನ್ನು ಚಂದ್ರನ ಮೇಲೆ ಇಳಿಸಿ ಸಾಧನೆ ಮಾಡಿದ್ದ ನಾಸಾ ಬಳಿಕ ಕೊಲಂಬಿಯಾ ದುರಂತ ಮಾನವ ಯೋಜನೆಯನ್ನು ಕೈಬಿಡುವಂತೆ ಮಾಡಿತ್ತು. ಆದರೆ ಈ ದುರಂತದ ಬಳಿಕ ಮತ್ತೆ ಪುಟಿದೆದ್ದ ನಾಸಾ ಈಗ ಮತ್ತೆ ಚಂದ್ರನ ಮೇಲೆ ಮಾನವರ ಕಳುಹಿಸುವ ಯೋಜನೆಗೆ ಮುಂದಾಗಿದೆ.

ಚಂದ್ರನ ಮೇಲೆ 2ನೇ ಬಾರಿಗೆ ಮಾನವರ ಕಳುಹಿಸಲು ನಾಸಾ ಮೂನ್ ಮಿಷನ್ ಆರ್ಟೆಮಿಸ್ 3 ಯೋಜನೆ ರೂಪಿಸಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಯೋಜನೆಗಾಗಿ ಒಂದು ವರ್ಷ ಮೊದಲೇ ಗಗನಯಾತ್ರಿಗಳಿಗೆ ತರಬೇತಿ ನೀಡಲು ಮುಂದಾಗಿದ್ದು, ಚಂದ್ರನ ಮೇಲೆ ಇಳಿದಾಗ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ಕಠಿಣ ತರಬೇತಿ ನೀಡಿ ಮನದಟ್ಟು ಮಾಡುವ ಕಾರ್ಯ ಮಾಡುತ್ತಿದೆ.
ಚಂದ್ರನ ಮೇಲೆ ತನ್ನ ಗಗನಯಾತ್ರಿಗಳು ಏನು ಮಾಡುತ್ತಾರೆ ಎಂಬುದರ ಕುರಿತು ಒಂದು ಸ್ನೀಕ್ ಪೀಕ್ ನೀಡಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ತನ್ನ ಗಗನಯಾತ್ರಿಗಳು ಮೂನ್‌ವಾಕ್ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿದೆ. ಆದರೆ ಅವರು ಚಂದ್ರನ ಮೇಲೆ ನಡೆಯುತ್ತಿಲ್ಲ ಬದಲಾಗಿ ಮರುಭೂಮಿಯಲ್ಲಿ ಗಗನಯಾತ್ರಿಗಳಿಗೆ ಅಭ್ಯಾಸ ನೀಡಲಾಗುತ್ತಿದೆ. ಚಂದ್ರನ ಮೇಲೆ ಯಾವ ರೀತಿಯ ಅನುಭವ ನೀಡಲಿದೆ ಎಂಬುದನ್ನು ಮರುಭೂಮಿಯಲ್ಲಿ ತರಬೇತಿ ನೀಡಲಾಗುತ್ತಿದೆ.
ಗಗನಯಾತ್ರಿಗಳಾದ ಕೇಟ್ ರೂಬಿನ್ಸ್ ಮತ್ತು ಆಂಡ್ರೆ ಡೌಗ್ಲಾಸ್ ಅವರು ಸಿಬ್ಬಂದಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಮರುಭೂಮಿಯಲ್ಲಿ ಮೂನ್ ವಾಕ್ ಮಾಡುವಾಗ ಚಂದ್ರನ ಮೇಲೆ ಧರಿಸಬೇಕಾದ ಮೋಕ್ಅಪ್ ಸ್ಪೇಸ್‌ಸೂಟ್ ಸಿಸ್ಟಮ್‌ಗಳನ್ನು ಧರಿಸಿದ್ದಾರೆ. ವಿವಿಧ ತಂತ್ರಜ್ಞಾನ ಪ್ರದರ್ಶನಗಳು, ಹಾರ್ಡ್‌ವೇರ್ ಚೆಕ್‌ಔಟ್‌ಗಳು ಮತ್ತು ಆರ್ಟೆಮಿಸ್ ವಿಜ್ಞಾನ-ಸಂಬಂಧಿತ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲಿದ್ದಾರೆ.
ಈ ರೀತಿಯ ತರಬೇತಿ ಅವರಿಗೆ ಚಂದ್ರನ ಮೇಲೆ ಇಳಿದಾಗ ಎದುರಾಗುವ ಸಮಸ್ಯೆಗಳಿಂದ ದೂರ ಇಡಲಿದೆಯಂತೆ. ಜೊತೆಗೆ ಚಂದ್ರನ ಮೇಲೆ ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು. ಅಲ್ಲಿನ ಪರಿಸರ ಹೇಗಿರಲಿದೆ. ಅಷ್ಟು ತೂಕನ ಸೂಟ್ ಧರಿಸಿ ಚಂದ್ರನ ಮೇಲೆ ಇಳಿದಾಗ ಉಂಟಾಗುವ ಒತ್ತವನ್ನು ನಿಭಾಯಿಸಲು ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ.
ಅರಿಜೋನಾ ಮರುಭೂಮಿಯಲ್ಲಿಯೇ ತರಬೇತಿ ಏಕೆ?
ನಾಸಾ ಪ್ರಕಾರ, ಅರಿಜೋನಾ ಮರುಭೂಮಿಯು ಚಾಲೆಂಜಿಂಗ್ ಭೂಪ್ರದೇಶವಾಗಗಿದೆ. ಆಸಕ್ತಿದಾಯಕ ಭೂವಿಜ್ಞಾನ ಮತ್ತು ಕನಿಷ್ಠ ಸಂವಹನ ಮೂಲಸೌಕರ್ಯ ಸೇರಿದಂತೆ ಚಂದ್ರನ ಪರಿಸರಕ್ಕೆ ಹೋಲುವ ಅನೇಕ ಗುಣಲಕ್ಷಣಗಳನ್ನು ಹೊಂದಿದೆ, ಇವೆಲ್ಲವೂ ಗಗನಯಾತ್ರಿಗಳು ಆರ್ಟೆಮಿಸ್ ಕಾರ್ಯಾಚರಣೆಯ ಸಮಯದಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಅನುಭವಿಸುತ್ತಾರೆ. ಹೀಗಾಗಿ ತರಬೇತಿಗೆ ಇದೇ ಮರುಭೂಮಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಈ ತರಬೇತಿಯಲ್ಲಿ ಆರ್ಟೆಮಿಸ್ III ಮತ್ತು ಅದರಾಚೆಗೆ ಯೋಜಿಸಲಾದ ಕಾರ್ಯಾಚರಣೆಗಳನ್ನು ಅನುಸರಿಸುವ ನಾಲ್ಕು ಸಿಮ್ಯುಲೇಟೆಡ್ ಮೂನ್‌ವಾಕ್‌ಗಳನ್ನು ಒಳಗೊಂಡಿದೆ, ಜೊತೆಗೆ ಆರು ಸುಧಾರಿತ ತಂತ್ರಜ್ಞಾನ ರನ್‌ಗಳನ್ನು ಒಳಗೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಎದುರಿಸಲಿರುವ ಹಲವು ಸವಾಲುಗಳ ಕುರಿತು ಅವರು ತರಬೇತಿ ವೇಳೆ ಅರಿಯಲಿದ್ದಾರೆ.
ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಅಂತರಗಳು ಮತ್ತು ಸವಾಲುಗಳನ್ನು ಮೌಲ್ಯಮಾಪನ ಮಾಡುತ್ತದೆ, ಡೇಟಾ ಸಂಗ್ರಹಣೆ ಮತ್ತು ಕ್ಷಿಪ್ರ ನಿರ್ಧಾರ-ಮಾಡುವ ಪ್ರೋಟೋಕಾಲ್‌ಗಳಿಗಾಗಿ ಹೂಸ್ಟನ್‌ನಲ್ಲಿರುವ ವಿಮಾನ ನಿಯಂತ್ರಣ ತಂಡ ಮತ್ತು ವಿಜ್ಞಾನ ತಂಡದ ನಡುವಿನ ಸಂವಹನ ನಡೆಸುವ ಕುರಿತಂತೆಯೂ ಇಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ.



Click it and Unblock the Notifications
