Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮುಟ್ಟಿದರೆ ಮುನಿ ಅಲ್ಲ ಇದು ಮುಟ್ಟಿದರೆ ಬೀಜ ಎಸೆಯುವ ಸಸ್ಯ..! ಹೇಗೆ ಗೊತ್ತಾ?
ಮುಟ್ಟಿದರೆ ಮುನಿ ಸಸ್ಯದ ಕುರಿತು ನೀವು ತಿಳಿದಿದ್ದೀರಿ. ಅವನ್ನು ಮುಟ್ಟಿದ್ದರೆ ಮಡಚಿಕೊಳ್ಳುತ್ತವೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಅವು ಮಾಡಚಿಕೊಳ್ಳುತ್ತವೆ. ಈ ಗಿಡಗಳು ಔಷಧಿ ಗುಣಗಳ ಹೊಂದಿರುವ ಕಾರಣ ಆಯುರ್ವೇದದಲ್ಲೂ ಹೆಸರಾಗಿದೆ. ಹಲವು ಚಿಕಿತ್ಸೆಗಳಲ್ಲಿ ಬಳಕೆಯಲ್ಲಿದೆ. ಹೀಗಾಗಿ ಮುಟ್ಟಿದರೆ ಮುನಿ ಸಸ್ಯ ಪ್ರಾಮುಖ್ಯತೆ ಪಡೆದುಕೊಂಡಿದೆ.
ಆದರೆ ನಿಮಗೆ ಸಸ್ಯ ಮುಟ್ಟಿದರೆ ಅದು ತನ್ನಲ್ಲಿರುವ ಬೀಜವನ್ನು ಹೊರಗೆ ಎಸೆಯುವ ಗಿಡ ನೋಡಿದ್ದೀರಾ? ಹೌದು ನೀವು ಮುಟ್ಟಿದರೆ ಈ ಗಿಡವು ಬೀಜವನ್ನು ಹೊರಗೆ ಎಸೆಯುತ್ತದೆ. ವುಡ್ ಸೋರೆಲ್ ಎಂದು ಕರೆಯಲ್ಪಡುವ ಸಸ್ಯವು ಈ ರೀತಿಯ ವಿಚಿತ್ರವಾದ ಗುಣ ಹೊಂದಿದೆ. ಯಾರಾದರು ಅದನ್ನು ಮುಟ್ಟಿದಾಗ ಅದರಲ್ಲಿರುವ ಬೀಜ ಹೊರಗೆ ಎಸೆಯಲ್ಪಡುತ್ತದೆ.
ಈ ಸಸ್ಯವು ಸೀಡ್ ಪಾಡ್‌ನಿಂದ ಆಕ್ಸಾಲಿಸ್ ಬೀಜಗಳನ್ನು ಹೊರಹಾಕುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕೋಲಿನಿಂದ ಗಿಡವನ್ನು ಮುಟ್ಟುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಆತ ಕೋಲಿನ ಸಂಪರ್ಕ ಮಾಡುತ್ತಿದ್ದಂತೆ ಗಿಡವು ತನ್ನ ಆಕ್ಸಾಲಿಸ್ ಬೀಜಗಳನ್ನು ಹೊರಹಾಕಲು ಪ್ರಾರಂಭಿಸುತ್ತದೆ.

ಕ್ಲಿಪ್‌ನಲ್ಲಿ ನೋಡಿದಂತೆ, ಸಸ್ಯವು ಈ ಬೀಜಗಳನ್ನು ಹೊರಹಾಕುವ ನಿರ್ದಿಷ್ಟ ಜಾಗ ಗುರುತಿಸಲು ಸಾಧ್ಯವಾಗುತ್ತಿಲ್ಲ ಆದರೆ ಗಿಡದ ಬಳಿಯಿಂದ ಬೀಜಗಳು ಮಾತ್ರ ನೆಲದ ಮೇಲೆ ಬೀಳುತ್ತವೆ. ಇದು ಹೇಗೆ ಎಂಬ ಕುತೂಹಲ ಮೂಡಿಸುತ್ತಿದೆ. ಅವು ಒಂದು ಕಾಯಿ ಆಕಾರದ ರಚನೆಯಿಂದ ಬೀಜಗಳು ಹೊರ ಬರುತ್ತಿರುವುದು ವಿಡಿಯೋದಲ್ಲಿ ನಾವು ನೋಡಬಹುದು.
ಈ ವಿಡಿಯೋವನ್ನು ಎನ್ ಅರುಣ್ ಕುಮಾರ್ ಎಂಬುದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್ ಆಗಿದೆ. ಈ ಗಿಡದ ಕುರಿತು ಹೆಚ್ಚಿನ ಯಾವುದೇ ಸಂಶೋಧನೆಗಳು ವಿಚಾರಗಳು ಈವರೆಗೆ ಪತ್ತೆಯಾಗಿಲ್ಲ. ಅಂದರೆ ಇದರ ವಿಶೇಷತೆಗಳನ್ನು ಯಾರು ಸಹ ಪತ್ತೆ ಮಾಡಿಲ್ಲ. ಇದು ಮುಟ್ಟಿದರೆ ಮುನು ಸಸ್ಯಕ್ಕಿಂತಲೂ ವಿಚಿತ್ರವಾದ ಸಸ್ಯವಾಗಿದೆ.
ತನ್ನ ರಕ್ಷಣೆಯ ಉದ್ದೇಶದಿಂದಲೇ ಈ ಸಸ್ಯ ತನ್ನ ಬೀಜಗಳನ್ನು ಹೊರಗೆ ಎಸೆಯಲ್ಪಡುತ್ತಿದೆ. ಆಕ್ಸಾಲಿಸ್ ಸ್ಪೈರಾಲಿಸ್ ಸಸ್ಯವು ಕೇವಲ ಒಂದು ಬೀಜಕ್ಕೆ ಪ್ರಚೋದಿಸುವ ಮೂಲಕ ನಿರಂತರವಾಗಿ ಉಳಿದ ಬೀಜಗಳ ಹೊರಗೆ ಎಸೆಯಲ್ಪಡುತ್ತದೆ. ಅಂದರೆ ಈ ಸಸ್ಯವು ಹೊರಗಿನ ಅಪಾಯವನ್ನು ಸ್ವೀಕರಿಸಿ ಅದಕ್ಕೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಅಚ್ಚರಿ ವಿವಾರ ಎಂದರೆ 0.1 ಸೆಕೆಂಡ್‌ಗಳ ಅಂತರದಲ್ಲಿಯೇ ಈ ಗಿಡಗಳು ಪ್ರತಿಕ್ರಯಿಸುತ್ತವೆ, ಇದು ಮುಟ್ಟಿದರೆ ಮುನಿ ಸಸ್ಯವೂ ಸೇರಿ ಉಳಿದಂತೆ ಎಲ್ಲಾ ಸಸ್ಯಗಳ ಪ್ರತಿಕ್ರಿಯಿಸುವ ಸಮಯಕ್ಕಿಂತಲೂ ಹೆಚ್ಚಾಗಿದೆ. ಈ ವುಡ್ ಸೋರ್ರೆಲ್ ಸಸ್ಯವು ಉಷ್ಣವಲಯದ ಬ್ರೆಜಿಲ್, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುತ್ತದೆ. ಅದರ ಸಂಗ್ರಹವಾದ ಶಕ್ತಿಯಿಂದಾಗಿ, ಈ ಸಸ್ಯವು 4 ಮೀಟರ್ ದೂರದಲ್ಲಿ ತನ್ನ ಬೀಜಗಳನ್ನು ಎಸೆಯುತ್ತದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಇದು ಪ್ರಪಂಚದಾದ್ಯಂತ ವಿಶೇಷವಾಗಿ ಏಷ್ಯಾದಲ್ಲಿ ವ್ಯಾಪಕವಾಗಿ ಹರಡಿರುವ ಹೂಬಿಡುವ ಸಸ್ಯವಾಗಿದೆ. ವುಡ್ ಸೋರ್ರೆಲ್ ಸಸ್ಯವು ಹೃದಯ ಆಕಾರದ ಚಿಗುರೆಲೆಗಳನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಮೂರು ಗುಂಪುಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಾಲ್ಕು ಎಲೆಗಳು ಒಂದು ತಳಿಯಾಗಿದೆ. ಚೀನಾದ ದಕ್ಷಿಣ ಭಾಗಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ. ಆದರೆ ಭಾರತದಲ್ಲಿ ಈ ಸಸ್ಯಗಳ ಮಾದರಿ ಪತ್ತೆಯಾಗಿರುವ ಕುರಿತು ಉಲ್ಲೇಖವಿಲ್ಲ.



Click it and Unblock the Notifications