Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
Tortoise Ring Attracts Money: ಆಮೆಯ ಉಂಗುರ ಧರಿಸುವಾಗ ಈ ತಪ್ಪುಗಳು ಆಗಲೇಬಾರದು
ಆಮೆ ನೀರಿನಲ್ಲಿ ವಾಸಿಸುವ ಪ್ರಾಣಿ. ಆಮೆಯನ್ನು ಶುಭಕರ ಎಂದು ಪರಿಗಣಿಸಲಾಗಿದೆ. ಇದರಿಂದ ಅದೃಷ್ಟ, ಆರೋಗ್ಯ, ಸಂಪತ್ತು ಹೆಚ್ಚಾಗುತ್ತೆ ಎಂದು ನಂಬಲಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಏನು ಉಲ್ಲೇಖವಾಗಿದೆ ಅಂದ್ರೆ ಯಾರು ಆಮೆಯ ಉಂಗುರವನ್ನು ಧರಿಸುತ್ತಾರೆಯೋ ಅವರು ಯಾವಾಗಲೂ ಸಂತೋಷವಾಗಿರುತ್ತಾರೆ ಮತ್ತು ಅವರಲ್ಲಿ ಧನಾತ್ಮಕತೆಯೇ ತುಂಬಿರುತ್ತಂತೆ.
ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಹತ್ತು ಅವತಾರಗಳಲ್ಲಿ ಕೂರ್ಮಾವತಾರ ಅಂದ್ರೆ ಆಮೆಯ ಅವತಾರ ಕೂಡ ಒಂದಾಗಿದೆ. ಲಕ್ಷ್ಮೀ ದೇವಿಯು ಕೂಡ ನೀರಿನಿಂದ ಹುಟ್ಟುಕೊಂಡಿದ್ದು, ಹೀಗಾಗಿ ಯಾರು ಭಕ್ತಿಯಿಂದ ಲಕ್ಷ್ಮೀಯನ್ನು ಪೂಜೆ ಮಾಡುತ್ತಾರೆಯೋ ಅವರಿಗೆ ಅಷ್ಟೈಶ್ವರ್ಯ ವೃದ್ಧಿಯಾಗುತ್ತೆ ಎನ್ನುವ ನಂಬಿಕೆಯಿದೆ.

ಅದೇ ರೀತಿ ಯಾರು ಆಮೆಯ ಚಿಹ್ನೆ ಇರುವ ಉಂಗುರವನ್ನು ಧರಿಸುತ್ತಾರೆಯೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರಂತೆ. ಆದರೆ ನಮಗೆ ಇಷ್ಟ ಬಂದ ಹಾಗೆ ಆಮೆಯ ಉಂಗುರವನ್ನು ಧರಿಸೋ ಹಾಗಿಲ್ಲ. ಅದನ್ನು ಧರಿಸೋವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಆಮೆಯ ಉಂಗುರ ಧರಿಸುವಾಗ ಯಾವ ತಪ್ಪುಗಳು ಆಗಬಾರದು ಅನ್ನೋದನ್ನು ನೋಡೋಣ.
ಆಮೆಯ ಉಂಗುರವನ್ನು ಯಾವ ರೀತಿ ಧರಿಸಬೇಕು?
ಆಮೆಯ ಉಂಗುರವನ್ನು ಧರಿಸೋದ್ರಿಂದ ಒರ್ವ ಮನುಷ್ಯನ ಬಾಳಿನಲ್ಲಿ ಧನಾತ್ಮಕ ಬದಲಾವಣೆಗಳು ಆಗುತ್ತೆ ಎನ್ನುವ ನಂಬಿಕೆ ಹಿಂದಿನಿಂದಲೂ ಇದೆ. ಆದರೆ ಇದು ತುಂಬಾನೇ ಸೂಕ್ಷ್ಮ ವಿಚಾರ ಆಗಿರೋದ್ರಿಂದ ಆಮೆಯ ಉಂಗುರವನ್ನು ಖರೀದಿಸುವಾಗ ಮತ್ತು ಅದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸುವುದು ಇಲ್ಲಿ ಮುಖ್ಯವಾಗುತ್ತದೆ.
- ಆಮೆಯ ಉಂಗುರವನ್ನು ಧರಿಸುವವರು ಮಧ್ಯದ ಬೆರಳಿಗೆ ಅಥವಾ ತೋರು ಬೆರಳಿಗೆ ಉಂಗುರವನ್ನು ಧರಿಸಬೇಕು. ಇನ್ನೂ ಈ ಉಂಗುರವನ್ನು ನಿಮ್ಮ ಬಲಗೈಯಲ್ಲಿ ಧರಿಸಿ.
- ಶುಕ್ರವಾರ ಸಂಪತ್ತಿನ ಅಧಿದೇವತೆ ಮಾತೆ ಲಕ್ಷ್ಮಿಯ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಮಾತ್ರ ಆಮೆಯ ಉಂಗುರವನ್ನು ಖರೀದಿಸಿ ಮತ್ತು ಧರಿಸಿದರೆ ಉತ್ತಮ.
- ಆಮೆಯ ಉಂಗುರವನ್ನು ಧರಿಸುವಾಗ ಅದರ ಮುಖ ನಮಗೆ ಎದುರಾಗಿರಬೇಕು. ನಮ್ಮ ವಿರುದ್ಧ ದಿಕ್ಕಿನಲ್ಲಿ ಇರಬಾರದು. ಒಂದು ವೇಳೆ ವಿರುದ್ಧ ದಿಕ್ಕಿನಲ್ಲಿ ಇದ್ದರೆ ನಮಗೆ ಅಶುಭ ಎಂದು ಪರಿಗಣಿಸಲಾಗಿದೆ.
- ಆಮೆಯ ಉಂಗುರವನ್ನು ಧರಿಸೋದ್ರಿಂದ ನೀವು ಉತ್ತಮ ಪ್ರಯೋಜನಗಳನ್ನು ಪಡೆಯಬೇಕಂದ್ರೆ ಪಂಚಧಾತು, ಅಷ್ಟಧಾತು ಮತ್ತು ಬೆಳ್ಳಿ ಆಮೆಯ ಉಂಗುರವನ್ನು ಧರಿಸಿದರೆ ಉತ್ತಮ.
- ಇನ್ನೂ ಆಮೆಯ ಉಂಗುರವನ್ನು ಧರಿಸುವ ಮೊದಲು ಆ ಉಂಗುರವನ್ನು ನೀವು ಧರಿಸುವ ಮೊದಲು ಅದನ್ನು ಹಸಿ ಹಾಲಿನಲ್ಲಿ ನೆನೆಸಿ, ಲಕ್ಷ್ಮೀ ದೇವಿಯ ಚಿತ್ರ ಅಥವಾ ವಿಗ್ರಹದ ಮುಂದಿಟ್ಟು ಪೂಜೆ ಮಾಡಿ. ಇದರಿಂದ ನೀವು ಅದ್ಭುತ ಪ್ರಯೋಜನಗಳನ್ನು ಪಡೆಯೋದಕ್ಕೆ ಸಾಧ್ಯವಾಗುತ್ತಂತೆ.
- ಇನ್ನೂ ಒಂದು ಸಲ ಬೆರಳಿಗೆ ಹಾಕಿದ ಉಂಗುರವನ್ನು ಮತ್ತೆ ಮತ್ತೆ ತೆಗೆಯೋದಕ್ಕೆ ಹೋಗಬೇಡಿ ಅದು ಒಳ್ಳೆಯದಲ್ಲ.
- ಉಂಗುರವನ್ನು ಲಕ್ಷ್ಮೀ ದೇವಿಯ ಮುಂದಿಟ್ಟು ಧರಿಸಿದರೆ ಅದಕ್ಕೆ ದೈವೀ ಶಕ್ತಿ ಬರುತ್ತೆ ಅನ್ನೋ ನಂಬಿಕೆಯಿದೆ.
ಆಮೆ ಉಂಗುರವನ್ನು ಯಾಕೆ ಧರಿಸಬೇಕು?
1. ಸಂಪತ್ತು ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ
ಯಾರು ಆಮೆಯ ಉಂಗುರವನ್ನು ಸರಿಯಾಗಿ ಧರಿಸುತ್ತಾರೆಯೋ ಅವರ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಯಾಗುತ್ತಂತೆ. ಒಂದು ವೇಳೆ ನೀವು ವ್ಯವಹಾರದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದ್ದರೆ ಈ ಉಂಗುರವನ್ನು ಧರಿಸೋದ್ರಿಂದ ನೀವು ಲಾಭ ಗಳಿಸೋದಕ್ಕೆ ಸಾಧ್ಯವಾಗುತ್ತಂತೆ. ಅಷ್ಟೇ ಅಲ್ಲ, ನೀವು ಹಿಂದೆಂದಿಗೂ ಕಾಣದ ಸಂಪತ್ತನ್ನು ಕಾಣಲಿದ್ದೀರಿ. ಹಾಗೂ ನಿಮ್ಮ ಜೀವನದಲ್ಲಿ ಎಲ್ಲವೂ ಉತ್ತಮವಾಗಲಿದೆ.
2. ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತೆ
ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಜೊತೆ ನಿಕಟ ಸಂಪರ್ಕ ಹೊಂದಿರುವುದರಿಂದ ಆಮೆಯ ಉಂಗುರವನ್ನು ಧರಿಸುವುದರಿಂದ ನಿಮ್ಮ ಮೇಲೆ ಲಕ್ಷ್ಮೀ ಹಾಗೂ ವಿಷ್ಣುವಿನ ಆಶೀರ್ವಾದ ಯಾವಾಗಲೂ ಇರುತ್ತಂತೆ. ಹಾಗೂ ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಜೊತೆಗೆ ನಿಮ್ಮ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಲು ಸಾಧ್ಯವಾಗುತ್ತಂತೆ.
3. ಧನಾತ್ಮಕ ಪರಿಣಾಮ ಬೀರುತ್ತದೆ
ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಚೀನಿ ಶಾಸ್ತ್ರದ ಪ್ರಕಾರ ನಿಮ್ಮ ಜೀವನದಲ್ಲಿ ಸಮತೋಲನ, ಸಕಾರಾತ್ಮಕತೆ ಮತ್ತು ಪ್ರಶಾಂತತೆಯನ್ನು ತರಲು ಆಮೆಯ ಉಂಗುರವನ್ನು ಧರಿಸಲು ಶಿಫಾರಸು ಮಾಡಲಾಗುತ್ತದೆ. ಇದು ನಿಮ್ಮ ವೈಯಕ್ತಿಕ ಸಂಬಂಧಗಳ ಮೇಲೆ ಧನಾತ್ಮಕ ಪರಿಣಾಮ ಬೀರುವುದಲ್ಲದೇ ಪ್ರೀತಿ ಮತ್ತು ಬಾಂಧವ್ಯವನ್ನು ಕೂಡ ಹೆಚ್ಚು ಮಾಡುತ್ತದೆ.
ಹೆಚ್ಚಾಗಿ ಶುಭ ಸಂಕೇತವೆಂದು ನಂಬಿ ಆಮೆಯ ಉಂಗುರವನ್ನು ಎಲ್ಲರೂ ಧರಿಸುತ್ತಾರೆ. ಆದರೆ ಇದನ್ನು ಹೇಗೆ ಧರಿಸಬೇಕು? ಅನ್ನೋ ಕೆಲವೊಂದು ಸೂಕ್ಷ್ಮ ವಿಚಾರಗಳು ಹೆಚ್ಚಿನವರಿಗೆ ಗೊತ್ತಿರೋದಿಲ್ಲ. ಹೀಗಾಗಿ ಆಮೆಯ ಉಂಗುರ ಧರಿಸೋ ಮೊದಲು ಈ ವಿಚಾರಗಳು ಗೊತ್ತಿರಲಿ.



Click it and Unblock the Notifications












