Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳೋದು ಕಷ್ಟ!
ನಮಗೆ ಯಾರ ಮೇಲೆ ಪ್ರೀತಿ ಆಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಒಬ್ಬರನ್ನು ನೋಡಿದ ತಕ್ಷಣ ಅವರ ಮೇಲೆ ನಮಗೆ ಪ್ರೀತಿ ಹುಟ್ಟಿದ್ರೆ ಅವರೇ ಬೇಕು ಅಂತ ಅನ್ನಿಸೋದಕ್ಕೆ ಶುರುವಾಗುತ್ತೆ. ಹೇಗಾದ್ರೂ ಮಾಡಿ ಅವರನ್ನು ಪಡೆದುಕೊಳ್ಳಲೇಬೇಕು ಅಂತ ಹಠ ಹಿಡಿಯುತ್ತೇವೆ. ಅವರ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಕಾಡಿಸುತ್ತೇವೆ.

ಈ ಪ್ರಯತ್ನದಲ್ಲಿ ಅನೇಕ ಸಂದರ್ಭಗಳಲ್ಲಿ ನಾವು ಪ್ರೀತಿ ಮಾಡಿದವರು ನಮಗೆ ಸಿಗುತ್ತಾರೆ. ಇನ್ನೂ ಕೆಲವರು ಸ್ವಲ್ಪ ನಮ್ಮನ್ನು ಕಾಡಿಸಿ ಆ ನಂತರ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಮತ್ತೂ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅವರನ್ನು ಪ್ರೀತಿಯಲ್ಲಿ ಬೀಳಿಸೋದು ಕಷ್ಟ. ಅಷ್ಟಕ್ಕೂ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಶ್ಚಿಕ ರಾಶಿ
ಪ್ರೀತಿ ಎಂಬ ಒಂದು ಪದವೇ ಅಸಂಖ್ಯಾತ ಭಾವನೆಗಳನ್ನು ಆಹ್ವಾನಿಸುತ್ತದೆ. ವೃಶ್ಚಿಕ ರಾಶಿಯವರು ತಮ್ಮ ಭಾವೋದ್ರಿಕ್ತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಅಟ್ಯಾಚ್ಮೆಂಟ್ ಹೊಂದಿರುತ್ತಾರೆ. ಅಷ್ಟು ಸುಲಭವಾಗಿ ಯಾರೊಂದಿಗೂ ಇವರು ಪ್ರೀತಿಯಲ್ಲಿ ಬೀಳೋದಿಲ್ಲ. ಸತತ ಪ್ರಯತ್ನಗಳ ನಂತರ ನಿಮ್ಮ ಪ್ರೀತಿಯು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೂಡಿದೆ ಅಂತ ಗೊತ್ತಾದರೆ ಮಾತ್ರ ಅವರು ನಿಮ್ಮನ್ನು ಪ್ರೀತಿಸುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರ ಗುಣ ಎಂಥವರ ಹೃದಯಕ್ಕಾದರೂ ಹತ್ತಿರವಾಗುವಂತಿರುತ್ತದೆ. ಭಾವನಾತ್ಮಕವಾಗಿ ಇವರು ಬೇಗನೇ ಹತ್ತಿರವಾಗುತ್ತಾರೆ. ಈ ರಾಶಿಯವರು ತಮ್ಮ ಖಾಸಗಿ ಜೀವನವನ್ನು ಗೌರವಿಸುತ್ತಾರೆ. ಬೇರೆಯವರಿಗೆ ತಮ್ಮ ಬಾಳಿನಲ್ಲಿ ಬರೋದಕ್ಕೆ ಅಷ್ಟು ಸುಲಭವಾಗಿ ಅವಕಾಶ ಕೊಡುವವರಲ್ಲ ಇವರು. ಈ ರಾಶಿಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳೋದು ಅಷ್ಟು ಸುಲಭವಲ್ಲ. ಹೀಗಾಗಿ ಇವರನ್ನು ಪ್ರೀತಿಯಲ್ಲಿ ಬೀಳಿಸೋದು ಕಷ್ಟ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಮಹತ್ವಾಕಾಂಕ್ಷೆ ಮತ್ತು ಸಮರ್ಪಣಾ ಗುಣಕ್ಕೆ ಹೆಸರುವಾಸಿಯಾಗಿರುತ್ತಾರೆ. ಮಕರ ರಾಶಿಯವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಹೆಣಗಾಡುತ್ತಾರೆ. ಏಕೆಂದರೆ ದುರ್ಬಲತೆಯು ತಮ್ಮ ಪ್ರಗತಿಗೆ ಅಡ್ಡಿಯಾಗಬಹುದೆಂದು ಅವರು ಭಯಪಡುತ್ತಾರೆ. ಮಕರ ರಾಶಿಯವರು ಪ್ರೀತಿಸುವಾಗ ತಾಳ್ಮೆ ಮತ್ತು ತಿಳುವಳಿಕೆ ಮುಖ್ಯ ಎಂದು ಭಾವಿಸುತ್ತಾರೆ. ಹೀಗಾಗಿ ಒಬ್ಬರನ್ನು ಸಂಪೂರ್ಣವಾಗಿ ನಂಬೋದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಹೊಸ ಅನುಭವಗಳು ಮತ್ತು ಜ್ಞಾನಕ್ಕಾಗಿ ನಿರಂತರವಾಗಿ ಹಂಬಲಿಸುತ್ತಾರೆ. ಅವರು ತಮ್ಮ ಸ್ವಾತಂತ್ರ್ಯವನ್ನು ಅಪಾರವಾಗಿ ಗೌರವಿಸುತ್ತಾರೆ. ಹೊಸ ವ್ಯಕ್ತಿಗೆ ತಮ್ಮ ಬದುಕಿನಲ್ಲಿ ಅಷ್ಟು ಸುಲಭವಾಗಿ ಜಾಗ ನೀಡೋದಿಲ್ಲ. ಯಾರಾದರೂ ಬಂದು ಇವರ ಬಳಿ ಪ್ರೀತಿಯನ್ನು ಹೇಳಿಕೊಂಡರೆ ತುಂಬಾ ದಿನಗಳವರೆಗೆ ಅವರನ್ನು ಕಾಯಿಸುತ್ತಾರೆ. ಅಷ್ಟು ಸುಲಭವಾಗಿ ಯಾರ ಮೇಲೂ ನಂಬಿಕೆ, ವಿಧ್ವಾಸವನ್ನು ಇಡೋದಿಲ್ಲ ಇವರು.
ಮಿಥುನ ರಾಶಿ
ಮಿಥುನ ರಾಶಿಯವರ ಕುತೂಹಲಕಾರಿ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಪ್ರೀತಿ ವಿಚಾರದಲ್ಲಿ ಅಷ್ಟು ಸುಲಭದಲ್ಲಿ ನಿರ್ಧಾರ ತೆಗೆದುಕೊಳ್ಳುವವರಲ್ಲ ಇವರು. ಯಾವುದೇ ವಿಚಾರವಾದರೂ ಬುದ್ಧಿವಂತಿಕೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರೀತಿಯಲ್ಲಿ ಹೆಚ್ಚಿನ ಆಸಕ್ತಿ ಇರೋದಿಲ್ಲ. ಒಂದು ವೇಳೆ ಬೇರೆಯವರು ಇವರ ಮೇಲೆನ ಪ್ರೀತಿಯನ್ನು ವ್ಯಕ್ತ ಪಡಿಸಿದ್ರೆ ಅಷ್ಟು ಸುಲಭವಾಘಿ ಒಪ್ಪಿಕೊಳ್ಳೋದಿಲ್ಲ.



Click it and Unblock the Notifications