ಸೆಲೆಬ್ರಿಟಿಗಳು ಯಾಕೆ ಮಕ್ಕಳ ಮುಖ ರಿವೀಲ್ ಮಾಡೋದಕ್ಕೆ ಇಷ್ಟ ಪಡೋದಿಲ್ಲ!

ಸೋಶಿಯಲ್ ಮೀಡಿಯಾ ಬಂದ್ಮೇಲೆ ಸೆಲೆಬ್ರಿಟಿಗಳು ಎಲ್ಲಿ ಹೋದ್ರು, ಏನೇ ಮಾಡಿದ್ರು ಅದು ಜನ ಸಾಮಾನ್ಯರಿಗೂ ಕೂಡ ಗೊತ್ತಾಗುತ್ತದೆ. ಸೆಲೆಬ್ರಿಟಿಗಳು ಧರಿಸುವ ಬಟ್ಟೆಗಳು, ಅವರ ಹೇರ್ ಸ್ಟೈಲ್, ಮೇಕಪ್ ಸ್ಟೈಲ್ ಎಲ್ಲವನ್ನೂ ಸಾಮಾನ್ಯ ಜನರು ಫಾಲೋ ಮಾಡ್ತಾರೆ. ಹೆಚ್ಚಿನ ಸೆಲೆಬ್ರಿಟಿಗಳು ಅವರು ಸಿನಿಮಾದಿಂದ ಹೆಸರು ಮಾಡದಿದ್ರೂ ಕೂಡ ಸೋಶಿಯಲ್ ಮೀಡಿಯಾ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ. ಆದ್ರೆ ಇತ್ತೀಚಿಗೆ ನೀವು ಗಮನಿಸಿರಬಹದು ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ತೋರಿಸೋದಕ್ಕೆ ಇಷ್ಟ ಪಡೋದಿಲ್ಲ.

2022 ರಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಗಳು ವಮಿಕಾ ಫೋಟೊ ದೇಶದಾದ್ಯಂತ ವೈರಲ್ ಆಗಿತ್ತು. ಅಷ್ಟು ದಿನಗಳ ಕಾಲ ಮಗಳ ಮುಖವನ್ನು ಎಲ್ಲೂ ರಿವೀಲ್ ಮಾಡಿರ್ಲಿಲ್ಲ. ಆದರೆ ಏಕಾ ಏಕಿ ಪೋಟೋ ವೈರಲ್ ಆಗಿತ್ತು. ಇದರಿಂದ ವಿರಾಟ್ ಹಾಗೂ ಅನುಷ್ಕಾ ತುಂಬಾನೇ ನೊಂದುಕೊಂಡಿದ್ರು. ಅಷ್ಟಕ್ಕೂ ಸೆಲೆಬ್ರಿಟಿಗಳು ಏಕೆ ಮಕ್ಕಳ ಫೋಟೋ ರಿವೀಲ್ ಮಾಡೋದಕ್ಕೆ ಇಷ್ಟ ಪಡೋದಿಲ್ಲ ಅನ್ನೋದನ್ನು ತಿಳಿಯೋಣ.

Top Facts About Celebrities Hiding Their Kids Faces on Social Media in Kannada

ವಿರಾಟ್ - ಅನುಷ್ಕಾ

2022 ರಲ್ಲಿ ವಮಿಕಾ ಫೋಟೋ ವೈರಲ್ ಆಗೋ ಮೊದಲು ಆಕೆಯ ಫೋಟೋವನ್ನು ತೆಗೆಯದಂತೆ ಮಿಡಿಯಾಗಳಲ್ಲಿ ವಿರಾಟ್-ಅನುಷ್ಕಾ ದಂಪತಿ ಮನವಿ ಮಾಡ್ಕೊಂಡಿದ್ರು. ಹೀಗಾಗಿ ಜನರಿಗೆ ವಮಿಕಾ ಫೋಟೋ ನೋಡೋದಕ್ಕೆ ಸಿಕ್ಕಿರ್ಲಿಲ್ಲ. ಅಷ್ಟಕ್ಕು ಮಗಳ ಮುಖ ಚಹರೆಯನ್ನು ಅಷ್ಟೊಂದು ಗೌಪ್ಯತೆಯಿಂದ ಯಾಕೆ ಕಾಯ್ದುಕೊಂಡು ಬರಲಾಗ್ತಿದೆ ಅನ್ನೋದಕ್ಕೂ ಕೂಡ ಅನುಷ್ಕಾ ಸ್ಪಷ್ಟನೆಯನ್ನು ನೀಡಿದ್ದಾರೆ.

ನಟಿ ಅನುಪ್ಕಾ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರು, ನಾವು ನಮ್ಮ ಮಗುವಿನ ಗೌಪ್ಯತೆಯನ್ನು ಬಯಸುತ್ತೇವೆ. ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮದಿಂದ ಮುಕ್ತವಾಗಿ ತನ್ನ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ನೀಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಅವಳು ಬೆಳೆದು ದೊಡ್ಡವಳಾದಂತೆ ಅವಳಿಗೆ ನಾವು ನಿರ್ಬಂಧಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದರು.

ರಣವೀರ್ - ಆಲಿಯಾ

ಬಾಲಿವುಡ್ ನಟಿ ಆಲಿಯಾ ಹಾಗೂ ರಣವೀರ್ ಕಪೂರ್ ಅವರ ಪ್ರೀತಿಯ ಪುತ್ರಿ ರಾಹಾ ಫೋಟೋವನ್ನು ಎಲ್ಲೂ ಕೂಡ ರಿವೀಲ್ ಮಾಡದಂತೆ ದಂಪತಿಯು ಮೀಡಿಯಾಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆಕೆಗೆ ಎರಡು ವರ್ಷ ತುಂಬುವವರೆಗೂ ಅವಳ ಫೋಟೋವನ್ನು ಗೌಪ್ಯವಾಗಿ ಇಡಲಿದ್ದು, ಅಲ್ಲಿಯವರೆಗೆ ನಿಮ್ಮ ಕ್ಯಾಮರಾಗಳಲ್ಲಿ ಮಗಳ ಫೋಟೋ ಸೆರೆಯಾದ್ರೂ ಕೂಡ ಯಾವುದೇ ಕಾರಣಕ್ಕೂ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗೋದಕ್ಕೆ ಅವಕಾಶ ನೀಡಬೇಡಿ ಎಂದು ಮೀಡಿಯಾಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸೋನಮ್ ಕಪೂರ್-ಆನಂದ್ ಅಹುಜಾ

ಬಾಲಿವುಡ್ ನಟಿ ಸೋನಮ್ ಕಪೂರ್ ಕಳೆದ ವರ್ಷ ಆಗಸ್ಟ್ ನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ರು. ಆದರೆ ಇದುವರೆಗೂ ಮಗ ವಾಯು ಮುಖವನ್ನು ಅವರು ರಿವೀಲ್ ಮಾಡಿಲ್ಲ. ಇನ್ನೂ ಈ ಬಗ್ಗೆ ಮಾತನಾಡಿದ್ದ ಸೋನಮ್ ಇಲ್ಲಿಯವರೆಗೆ ನಾವು ಮಗನ ಫೋಟೋ ರಿವೀಲ್ ಮಾಡೋ ಬಗ್ಗೆ ಯೋಚಿಸಿಲ್ಲ. ದೊಡ್ಡವನಾದ ಮೇಲೆ ಅವನೇ ಈ ಬಗ್ಗೆ ನಿರ್ಧರಿಸಲಿ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ - ನಿಕ್ ಜೋನಸ್

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಸರೋಗೆಸಿ ಮೂಲಕ ಹೆಣ್ಣು ಮಗುವನ್ನು ಪಡೆದುಕೊಂಡಿದ್ರು. ಆದರೆ ಹೊರಗಡೆ ಬರೋವಾಗ ಮಗಳು ಮಾಲ್ತಿ ಮೇರಿ ಜೋನಸ್ ಫೋಟೋ ಎಲ್ಲೂ ರಿವೀಲ್ ಆಗದಂತೆ ಗೌಪ್ಯತೆ ಕಾಯ್ದುಕೊಂಡಿದ್ರು. ಇದಕ್ಕೆ ಅಭಿಮಾನಿಗಳು ಅಸಮಧಾನವನ್ನೂ ಹೊರ ಹಾಕಿದ್ರು. ಆದ್ರೆ ಇತ್ತೀಚಿಗಷ್ಟೇ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸೆಲೆಬ್ರಿಟಿಗಳು ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮುಖ ತೋರಿಸೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ಸ್ವಲ್ಪ ದೊಡ್ಡವರಾದ ಮೇಲೆ ಕೆಲವು ಸೆಲೆಬ್ರಿಟಿಗಳು ಮಕ್ಕಳ ಮುಖ ತೋರಿಸುತ್ತಾರೆ. ಇದರ ಹಿಂದೆ ಅನೇಕ ಕಾರಣಗಳು ಇರಬಹುದು. ಇದು ಅವರ ವೈಯಕ್ತಿಕ ವಿಚಾರ.

English summary

Top Facts About Celebrities Hiding Their Kids' Faces on Social Media in Kannada

These are the Top Facts About Celebrities Hiding Their Kids' Faces on Social Media.
Story first published: Monday, June 12, 2023, 18:00 [IST]
X
Desktop Bottom Promotion