Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಈ 5 ರಾಶಿಯವರು ನಿಷ್ಕಲ್ಮಶವಾಗಿ ಪ್ರೀತಿಸುತ್ತಾರೆ!
ಪ್ರೀತಿ ಯಾರು ಬೇಕಾದರೂ ಮಾಡಬಹುದು. ಆದರೆ ಒಬ್ಬರನ್ನು ಪೂರ್ಣ ಹೃದಯದಿಂದ ಪ್ರೀತಿಸೋದಕ್ಕೆ ಸಾಧ್ಯನಾ? ನಾವು ಒಬ್ಬರ ಜೊತೆಗೆ ಸಂಬಂಧದಲ್ಲಿ ಇದ್ದೇವೆ ಅಂದ ಮೇಲೆ ಅವರ ಮೇಲೆ ನಮಗೆ ಪ್ರೀತಿ, ಕಾಳಜಿ ಎಲ್ಲವೂ ಇರಬೇಕಾಗುತ್ತದೆ. ನಿಸ್ವಾರ್ಥ ಪ್ರೀತಿಯನ್ನು ನಾವು ತೋರಬೇಕು. ಕೆಲವೇ ಕೆಲವು ರಾಶಿಯವರು ಮಾತ್ರ ಪ್ರೀತಿಸಿದವರನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತಾರಂತೆ. ಅಷ್ಟಕ್ಕು ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೀನ ರಾಶಿ
ಮೀನ ರಾಶಿಯವರು ತಮ್ಮ ಸಹಾನುಭೂತಿಯ ಗುಣಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರೀತಿಸಿದವರ ಜೊತೆಗೆ ಇವರು ಭಾವನಾತ್ಮಕ ಸಂಪರ್ಕವನ್ನು ಹೊಂದಿರುತ್ತಾರೆ. ಇವರಲ್ಲಿ ನಿಸ್ವಾರ್ಥ ಗುಣ ಇದೆ. ಪ್ರೀತಿಸಿದವರಿಗಾಗಿ ಹಾಗೂ ಅವರ ಸಂತೋಷಕ್ಕಾಗಿ ಎಂತಹ ತ್ಯಾಗ ಮಾಡೋದಕ್ಕೂ ಇವರು ಸಿದ್ಧವಾಗಿರುತ್ತಾರೆ. ಇನ್ನೂ ಪ್ರೀತಿಸಿದವರನ್ನು ಇವರು ಮಗುವಿನಂತೆ ಕಾಳಜಿ ಮಾಡುತ್ತಾರೆ. ತಮಗಿಂತಲೂ ಹೆಚ್ಚಿನ ಮಹತ್ವವನ್ನು ಸಂಗಾತಿಗೆ ನೀಡುತ್ತಾರೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಆಳವಾದ ಭಾವನಾತ್ಮಕ ಸಾಮರ್ಥ್ಯ ಮತ್ತು ಅಚಲ ನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ. ಪ್ರೀತಿಸಿದವರಿಗಾಗಿ ಜೀವ ಕೊಡೋದಕ್ಕೂ ಇವರು ಸಿದ್ಧವಾಗಿ ಇರುತ್ತಾರೆ. ಇವರು ಸಹಾನುಭೂತಿಯ ಗುಣ ಹೊಂದಿದ್ದಾರೆ. ಪ್ರೀತಿಸಿದವರು ಬಾಯಿ ಬಿಟ್ಟು ಏನನ್ನೂ ಹೇಳದಿದ್ದರೂ ಕೂಡ ಅವರ ಮನಸ್ಸಿನ ಮಾತನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವರಿಗಿದೆ. ಪ್ರೀತಿಸಿದವರ ರಕ್ಷಣೆಗೆ ಸದಾ ಸಿದ್ಧರಾಗಿ ಇರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯವರು ತೀವ್ರವಾದ ಮತ್ತು ಭಾವೋದ್ರಿಕ್ತ ಪ್ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ. ಪ್ರೀತಿಸಿದವರ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ ಹಾಗೂ ಕಾಳಜಿಯನ್ನು ತೋರುತ್ತಾರೆ. ಈ ರಾಶಿಯವರು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತಾರೆ. ಪ್ರೀತಿಸಿದವರಿಗೆ ಸಣ್ಣ ನೀವಾದರೂ ಕೂಡ ಇವರಿಗೆ ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. ತಮ್ಮ ಪ್ರೇಮಿಯನ್ನು ಸಣ್ಣ ಮಗುವಿನಂತೆ ಕಾಳಜಿ ಮಾಡುತ್ತಾರೆ. ಅವರಿಂದ ತಪ್ಪಾದರೆ ತಿದ್ದುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಭಾವನಾತ್ಮಕ ಜೀವಿಗಳು ಹಾಗೂ ಉತ್ಸಾಹಿಗಳು. ಈ ರಾಶಿಯವರು ಪ್ರೀತಿಯಲ್ಲಿ ಬಿದ್ದಾಗ ತಾವು ಪ್ರೀತಿಸಿದವರ ಜೊತೆಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆಳವಾಗಿ ಸಂಪರ್ಕ ಹೊಂದಿರುತ್ತಾರೆ. ಈ ರಾಶಿಯವರು ಪ್ರೀತಿಯಲ್ಲಿ ನಿಷ್ಠೆಯನ್ನು ತೋರುತ್ತಾರೆ. ಹಾಗೂ ಪ್ರೀತಿಸಿದವರನ್ನು ತುಂಬಾನೇ ಕಾಳಜಿ ಮಾಡುತ್ತಾರೆ. ಹಾಗೂ ಅವರ ರಕ್ಷಣೆಗೆ ಸದಾ ಸಿದ್ಧವಾಗಿರುತ್ತಾರೆ. ತಮ್ಮ ಸಂಗಾತಿಯ ಜೊತೆಗೆ ಅನ್ಯೋನ್ಯತೆಯಿಂದ ಬಾಳ್ವೆ ಮಾಡುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಸಂಗಾತಿಯನ್ನು ದೃಢವಾದ ಮತ್ತು ಅಚಲವಾದ ಬದ್ಧತೆಯಿಂದ ಪ್ರೀತಿಸುತ್ತಾರೆ. ಇವರು ಪ್ರೀತಿಯಲ್ಲಿ ನಿಷ್ಠಾವಂತರಾಗಿ ಇರುತ್ತಾರೆ. ಇವರು ತಮ್ಮ ಸಂಬಂಧಗಳಿಗೆ ಸ್ಥಿರ ಮತ್ತು ಸುರಕ್ಷಿತ ಅಡಿಪಾಯವನ್ನು ರಚಿಸೋದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಯಾವುದಕ್ಕೂ ಕೊರತೆ ಮಾಡೋದಿಲ್ಲ. ಅವರನ್ನು ಸಂತೋಷವಾಗಿಡೋದಕ್ಕೆ ಪ್ರಯತ್ನಿಸುತ್ತಾರೆ. ಅವರಿಗೆ ಯಾವತ್ತಿಗೂ ನೋವು ಕೊಡೋದಕ್ಕೆ ಇಷ್ಟ ಪಡೋದಿಲ್ಲ.



Click it and Unblock the Notifications