Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ 5 ರಾಶಿಯವರು ಬೇರೆಯವರನ್ನು ಟೀಕಿಸುತ್ತಾ ಖುಷಿಪಡುತ್ತಾರೆ!
ಈ ಪ್ರಪಂಚದಲ್ಲಿ ಯಾರೊಬ್ಬರೂ ಪರ್ಫೆಕ್ಟ್ ಆಗಿ ಇರೋದಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಹುಳುಕು ಇದ್ದೇ ಇರುತ್ತದೆ. ಅನೇಕ ಬಾರಿ ನಾವು ಮಾಡೋ ತಪ್ಪುಗಳನ್ನು ತಿದ್ದಿಕೊಂಡು ಬಾಳೋದಕ್ಕೆ ಇಷ್ಟ ಪಡ್ತೀವಿ.

ಆದ್ರೆ ಕೆಲವರಂತೂ ಯಾವಾಗಲೂ ನಾವು ತಪ್ಪು ಮಾಡಲಿ ಅಂತಾನೇ ಕಾಯುತ್ತಾ ಕುಳಿತ್ತಿರುತ್ತಾರೆ. ನಮ್ಮ ತಪ್ಪುಗಳನ್ನು ಪದೇ ಪದೇ ಬೆರಳು ಮಾಡಿ ತೋರಿಸುತ್ತಾ ಅದ್ರಲ್ಲೇ ಖುಷಿ ಕಂಡುಕೊಳ್ಳುತ್ತಾರೆ. ಅಷ್ಟಕ್ಕು ಬೇರೆಯವರನ್ನು ಟೀಕಿಸುತ್ತಾ ಖುಷಿಪಡುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಪ್ರತಿಯೊಂದು ವಿಚಾರವನ್ನೂ ಹಾಗೂ ಪ್ರತಿಯೊಬ್ಬರನ್ನೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಕೆಲವೊಂದು ಸಲ ಇವರಲ್ಲಿರುವ ಅತಿಯಾಗಿ ಗಮನಿಸುವ ಗುಣ ಟೀಕೆಗೂ ತಿರುಗುವ ಸಾಧ್ಯತೆ ಇರುತ್ತದೆ. ಅವರ ಉದ್ದೇಶಗಳು ಸಾಮಾನ್ಯವಾಗಿ ಶುದ್ಧವಾಗಿರುತ್ತವೆ. ಮತ್ತು ಸುಧಾರಣೆಯ ಗುರಿಯನ್ನು ಹೊಂದಿದ್ದರೂ ಕನ್ಯಾ ರಾಶಿಯವರು ತಮ್ಮ ಪರಿಪೂರ್ಣತೆಯ ಅನ್ವೇಷಣೆಯಲ್ಲಿ ಟೀಕಿಸುವುದನ್ನು ಆನಂದಿಸಬಹುದು.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ತ್ವರಿತ ಬುದ್ಧಿ, ಹೊಂದಿಕೊಳ್ಳುವಿಕೆ ಮತ್ತು ಅಂತ್ಯವಿಲ್ಲದ ಕುತೂಹಲಕ್ಕೆ ಹೆಸರುವಾಸಿಯಾಗಿದ್ದಾರೆ. ಸಂವಹನದ ಗ್ರಹವಾದ ಬುಧದಿಂದ ಆಳಲ್ಪಟ್ಟ ಅವರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುವ ನೈಸರ್ಗಿಕ ಉಡುಗೊರೆಯನ್ನು ಪಡೆದಿರುತ್ತಾರೆ. ಇವರು ಆಡುವ ಮಾತುಗಳು ಟೀಕೆಗೆ ತಿರುಗಿ ಇವರಿಗೆ ಗೊತ್ತಿಲ್ಲದ ಹಾಗೇ ಮತ್ತೊಬ್ಬರಿಗೆ ನೋವುಂಟು ಮಾಡಬಹುದು. ಪ್ರತಿಯೊಂದು ಸೂಕ್ಷ್ಮಗಳನ್ನು ಅನ್ವೇಷಣೆ ಮಾಡುವ ಚಾಣಾಕ್ಷರು ಇವರು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಭಾವೋದ್ರಿಕ್ತ ವ್ಯಕ್ತಿಗಳು. ಈ ರಾಶಿಯವರು ಸಣ್ಣ-ಪುಟ್ಟ ವಿಚಾರಗಳ ಬಗ್ಗೆ ತುಂಬಾನೇ ಯೋಚಿಸುತ್ತಾರೆ. ಈ ರಾಶಿಯವರು ಬೇರೆಯವರ ಬಗ್ಗೆ ಯಾವುದೇ ರೀತಿಯ ಟೀಕೆಗಳು ಇದ್ದರೂ ನೇರವಾಗಿ ಹೇಳುತ್ತಾರೆ. ಇದರಿಂದ ಮತ್ತೊಬ್ಬರಿಗೆ ಖಂಡಿತ ನೋವಾಗುತ್ತದೆ. ಕೆಲವೊಂದು ಸಲ ಒಬ್ಬರ ಬಗ್ಗೆ ಮಾತನಾಡಬಾರದು ಅಂತ ಗೊತ್ತಿದ್ದರೂ ಕೂಡ ಅವರನ್ನು ಕೆಣಕೋದಕ್ಕೆ ಹೋಗುತ್ತಾರೆ. ಬೇರೆಯವರ ತಪ್ಪುಗಳನ್ನು ಬೆರಳು ಮಾಡಿ ತೋರಿಸೋದ್ರಲ್ಲಿ ಏನೋ ಒಂದು ರೀತಿ ಖುಷಿ ಕಂಡುಕೊಳ್ಳುತ್ತಾರೆ.
ಕರ್ಕಾಟಕ ರಾಶಿ
ಶನಿಯು ಕರ್ಕಾಟಕ ರಾಶಿಯನ್ನು ಆಳುತ್ತಿದ್ದಾನೆ. ಇವರು ತುಂಬಾನೇ ಜವಾಬ್ದಾರಿಯುತವಾಗಿ ಇರುತ್ತಾರೆ. ಬೇರೆಯವರ ತಪ್ಪುಗಳನ್ನು ಇವರು ಯಾವುದೇ ಮಾನದಂಡಗಳಿಲ್ಲದೇ ನೇರವಾಗಿ ಹೇಳುತ್ತಾರೆ. ಬೇರೆಯವರನ್ನು ನಿರುತ್ಸಾಹಗೊಳಿಸಬೇಕು ಎನ್ನುವ ಕಾರಣಕ್ಕಾಗಿ ಅವರನ್ನು ಟೀಕಿಸುತ್ತಾ ಖುಷಿ ಪಟ್ಟುಕೊಳ್ಳುತ್ತಾರೆ. ಕೆಲವೊಂದು ಸಲ ಇವರ ಮಾತುಗಳಿಂದ ಮತ್ತೊಬ್ಬರು ಬೆಳೆಯೋದಕ್ಕೂ ಸಹಾಯವಾಗುತ್ತದೆ.
ಮೇಷ ರಾಶಿ
ಮಂಗಳನು ಮೇಷ ರಾಶಿಯನ್ನು ಆಳುತ್ತಿದ್ದಾನೆ. ಈ ರಾಶಿಯವರು ತಮ್ಮ ನಿರ್ಭೀತ ಮತ್ತು ಸ್ಪರ್ಧಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಇವರು ಕೆಲವೊಂದು ಸಲ ಘಂಟಾಘೋಷವಾಗಿ ಬೇರೆಯವರನ್ನು ಟೀಕೆ ಮಾಡುತ್ತಾರೆ. ಈ ರಾಶಿಯವರು ಯಾವಾಗಲೂ ಬೇರೆಯವರಿಗೆ ಸವಾಲು ಹಾಕುತ್ತಾ ಖುಷಿ ಪಡುತ್ತಾರೆ. ಇವರು ಮಾತನಾಡುವಾಗ ಆಗುವ ಅಜಾಗರೂಕತೆಯೂ ಮತ್ತೊಬ್ಬರ ಮನಸ್ಸಿಗೆ ನೋವುಂಟು ಮಾಡುತ್ತದೆ.



Click it and Unblock the Notifications
