Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ 5 ರಾಶಿಯವರು ಸೋಶಿಯಲ್ ಮೀಡಿಯಾದಲ್ಲಿ ಬ್ಯೂಸಿಯಾಗಿರ್ತಾರೆ!
ಇದು ಸೋಶಿಯಲ್ ಮೀಡಿಯಾ ಯುಗ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು-ಹಣ್ಣು ಮುದುಕರವರೆಗೂ ಪ್ರತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರ್ತಾರೆ. ಇನ್ಸ್ಟಾದಲ್ಲಿ ರೀಲ್ಸ್ ಸ್ಕ್ರೋಲ್ ಮಾಡ್ತಾ ಕೂತ್ರೆ ಸಮಯ ಹೋಗೋದೇ ಗೊತ್ತಾಗೋದಿಲ್ಲ. ಅಷ್ಟರ ಮಟ್ಟಿಗೆ ಜನರನ್ನು ಈ ವರ್ಚುವಲ್ ಜಗತ್ತು ನಮ್ಮನ್ನು ಸೆಳೆದುಕೊಂಡು ಬಿಟ್ಟಿದೆ.

ಅದ್ರಲ್ಲೂ ಕೆಲವರಂತೂ ಮೂರು ಹೊತ್ತು ಸೋಶಿಯಲ್ ಮೀಡಿಯಾದಲ್ಲಿ ಬಿದ್ದಿರುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಮೊಬೈಲ್ ಹಿಡಿದು ಕುಳಿತು ಬಿಡ್ತಾರೆ. ಅಷ್ಟಕ್ಕು ಯಾವ 5 ರಾಶಿಯವತು ಸದಾ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರ್ತಾರೆ ಅನ್ನೋದನ್ನು ತಿಳಿಯೋಣ.
ಮಿಥುನ ರಾಶಿ
ಮಿಥುನ ರಾಶಿಯವರು ಹೆಚ್ಚು ಮಾತನಾಡುತ್ತಾರೆ. ಇವರು ಯಾವಾಗಲೂ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಳ್ಳೋದಕ್ಕೆ ಇಷ್ಟ ಪಡ್ತಾರೆ. ಹಾಗೂ ತಮ್ಮ ಆಲೋಚನೆಗಳನ್ನು ಕೂಡ ಇತರರ ಜೊತೆಗೆ ಹಂಚಿಕೊಳ್ತಾರೆ. ಇನ್ನೂ ಈ ರಾಶಿಯವರು ಆನ್ಲೈನ್ ನಲ್ಲಿ ಹೆಚ್ಚು ಆಕ್ಟೀವ್ ಆಗಿರ್ತಾರೆ. ಈ ರಾಶಿಯವರು ತಮ್ಮ ಬುದ್ಧಿವಂತಿಕೆ ಮತ್ತು ಬಹುಮುಖ ಸ್ವಭಾವದಿಂದ ಸೋಶಿಯಲ್ ಮೀಡಿಯಾವನ್ನು ಚೆನ್ನಾಗಿ ಬಳಸಿಕೊಳ್ತಾರೆ. ಮಿಥುನ ರಾಶಿಯವರು ವರ್ಚುವಲ್ ಕ್ಷೇತ್ರದ ರಾಜ-ರಾಣಿಯರು ಅಂತಾನೇ ಹೇಳಬಹುದು.
ತುಲಾ ರಾಶಿ
ತುಲಾ ರಾಶಿಯವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅಪರಿಚಿತರ ಜೊತೆಗೆ ಚೆನ್ನಾಗಿ ಹೊಂದುಕೊಳ್ಳುತ್ತಾರೆ. ಇವರು ಸೋಶೀಯಲ್ ಮೀಡಿಯಾದಲ್ಲಿ ಮುಕ್ತವಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ತಾರೆ. ಸ್ಫೂರ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳೋದು ಇವರಿಗೆ ಖುಷಿ ನೀಡುತ್ತದೆ. ಈ ರಾಶಿಯವರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ತಮ್ಮ ಫೋಟೋಗಳು ಪೋಸ್ಟ್ ಮಾಡಿ ಲೈಕ್ ಪಡೆದುಕೊಳ್ಳೋದ್ರಲ್ಲಿ ಇವರು ಖುಷಿ ಕಂಡುಕೊಳ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾ ಫ್ರೆಂಡ್ಲಿಯಾಗಿರ್ತಾರೆ ಕುಂಭರಾಶಿಯವರು. ಈ ರಾಶಿಯವರು ತಂತ್ರಜ್ಞಾನದ ಬಗ್ಗೆ ಗೊತ್ತಿರುವವರು ಮತ್ತು ಬುದ್ಧಿವಂತ ವ್ಯಕ್ತಿಗಳು. ಇಂಟರ್ನೆಟ್ ಬಳಸಿಕೊಂಡು ತಮ್ಮ ಕೌಶಲ್ಯವನ್ನು ತೋರುತ್ತಾರೆ. ಇದರಿಂದ ಅವರು ಹೆಸರು ಗಳಿಸೋದಕ್ಕೂ ಕಾರಣವಾಗುತ್ತದೆ. ಸೋಶಿಯಲ್ ಮೀಡಿಯಾನೇ ಇವರ ಜಗತ್ತಾಗಿರುತ್ತದೆ.
ಧನು ರಾಶಿ
ಧನು ರಾಶಿಯವರು ಆನ್ಲೈನ್ ಜಗತ್ತಿನಲ್ಲೇ ಸಂತೋಷವನ್ನು ಕಂಡುಕೊಳ್ತಾರೆ. ಈ ರಾಶಿಯವರು ಎಲ್ಲರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಧನು ರಾಶಿಯವರು ತಮ್ಮ ಪ್ರಯಾಣದ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುತ್ತಾರೆ. ತಮ್ಮ ಬದುಕಿನಲ್ಲಿ ನಡೆಯೋ ಎಲ್ಲಾ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳೋದಕ್ಕೆ ಇಷ್ಟ ಪಡುತ್ತಾರೆ. ಒಂದು ರೀತಿಯಲ್ಲಿ ಇವರು ಸೋಶಿಯಲ್ ಬಟರ್ ಫ್ಲೈ ಗಳು ಅಂತಾನೇ ಹೇಳಬಹುದು.
ಮೇಷ ರಾಶಿ
ಮೇಷ ರಾಶಿಯವರು ಆನ್ಲೈನ್ ನಲ್ಲಿ ಆಕ್ಟೀವ್ ಆಗಿರುತ್ತಾರೆ. ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೇಗವಾಗಿ ಬೆಳೆಯುತ್ತಾರೆ. ಮೇಷ ರಾಶಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋದಕ್ಕೆ ಸೋಶಿಯಲ್ ಮೀಡಿಯಾವನ್ನು ಬಳಕೆ ಮಾಡ್ತಾರೆ. ಇವರು ನೈಸರ್ಗಿಕವಾಗಿಯೇ ಪ್ರಭಾವಿಗಳಾಗಿ ಇರುತ್ತಾರೆ. ಇವರು ಒಬ್ಬರನ್ನು ಪ್ರೇರಣೆ ಮಾಡುವ ಶಕ್ತಿ ಹೊಂದಿರುತ್ತಾರೆ. ಇನ್ನೊಬ್ಬರಿಗೆ ಮಾದರಿಯಾಗುತ್ತಾರೆ.



Click it and Unblock the Notifications