Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 5 ರಾಶಿಯವರು ರಾಜನಂತೆ ಬದುಕುತ್ತಾರೆ!
ಶ್ರೀಮಂತಿಕೆ ಯಾರಿಗೆ ತಾನೇ ಬೇಡ ಹೇಳಿ. ಪ್ರತಿಯೊಬ್ಬರೂ ಕೂಡ ಶ್ರೀಮಂತಿಕೆಯ ಹಿಂದೆ ಬಿದ್ದವರು. ದುಡ್ಡಿದ್ರೆ ಯಾವುದೇ ಸಮಸ್ಯೆ ಬರೋದಿಲ್ಲ. ನಮಗೆ ಬೇಕಾದದ್ದನ್ನು ಕೊಂಡುಕೊಳ್ಳಬಹುದು. ಬೇಕಾದ ಹಾಗೆ ಜೀವನವನ್ನು ನಡೆಸಬಹುದು ಎಂದು ಎಲ್ಲರೂ ಅಂದುಕೊಳ್ತಾರೆ. ಇದಕ್ಕಾಗಿ ಕಷ್ಟ ಪಟ್ಟು ದುಡಿಯುತ್ತಾರೆ ಕೂಡ. ಆದ್ರೆ ದುಡಿದ ದುಡ್ಡು ಜೀವನ ನಡೆಸೋದಕ್ಕಷ್ಟೇ ಸಾಕಾಗುತ್ತದೆ.
ಆದ್ರೆ ಇನ್ನೂ ಕೆಲವರು ಬದುಕಿದ್ರೆ ರಾಜನ ಹಾಗೇ ಬದುಕಬೇಕು ಅಂತ ಕನಸು ಕಾಣುತ್ತಾರೆ. ಹಾಗೂ ಆ ಕನಸನ್ನು ಅವರು ನನಸು ಮಾಡಿಕೊಳ್ಳುತ್ತಾರೆ. ಎಷ್ಟೇ ಕಷ್ಟ ಆದ್ರೂ ಇವರು ಐಷಾರಾಮಿ ಜೀವನ ನಡೆಸದೇ ಇರೋದಿಲ್ಲ. ಈ ರಾಶಿಯವರು ಯಾವಾಗಲೂ ಐಷಾರಾಮಿ ಜೀವನ ನಡೆಸುವ ಬಗ್ಗೆ ಕನಸು ಕಾಣುತ್ತಿರುತ್ತಾರಂತೆ. ಅಷ್ಟಕ್ಕು ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯು ಶುಕ್ರನಿಂದ ಆಳಲ್ಪಡುತ್ತದೆ. ಹೀಗಾಗಿ ಈ ರಾಶಿಯವರು ಐಷಾರಾಮಿ ಜೀವನದತ್ತ ಬಹು ಬೇಗನೇ ಆಕರ್ಷಿತರಾಗುತ್ತಾರೆ. ವೃಷಭ ರಾಶಿಯವರು ಸೊಗಸಾದ ಭೋಜನ, ಸ್ಪಾ ಚಿಕಿತ್ಸೆ, ಉತ್ತಮ ಲೈಫ್ ಸ್ಟೈಲ್ ಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಐಷಾರಾಮಿ ಜೀವನ ನಡೆಸೋದಕ್ಕೆ ಅವರು ಎಷ್ಟು ಬೇಕಾದ್ರು ಖರ್ಚು ಮಾಡೋದಕ್ಕೆ ಸಿದ್ಧರಿದ್ದಾರೆ.
ಸಿಂಹ ರಾಶಿ
ಸಿಂಹ ರಾಶಿಯು ಸೂರ್ಯನಿಂದ ಆಳಲ್ಪಡುತ್ತದೆ. ಈ ರಾಶಿಯಲ್ಲಿ ಜನಿಸಿದವರು ಮೆಚ್ಚುಗೆ ಪಡೆದುಕೊಳ್ಳುತ್ತಾರೆ. ಹಾಗೂ ಎಲ್ಲರಿಂದ ಗೌರವ ಪಡೆಯುತ್ತಾರೆ. ಇವರ ಲೈಫ್ ಸ್ಟೈಲ್ ತುಂಬಾನೇ ವಿಭಿನ್ನವಾಗಿರುತ್ತದೆ. ಇವರು ಫ್ಯಾಷನ್ ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇನ್ನೂ ತಮ್ಮ ರಜಾದಿನಗಳನ್ನು ಐಷಾರಾಮಿಯಾಗಿ ಕಳೆಯಲು ಬಯಸುತ್ತಾರೆ. ಈ ರಾಶಿಯವರು ತಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯನ್ನು ಫ್ಲೂಟೋ ಮತ್ತು ಮಂಗಳನು ಆಳುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಐಷಾರಾಮಿ ಜೀವನದತ್ತ ಆಕರ್ಷಿತರಾಗುತ್ತಾರೆ. ಇವರು ಸಂಪತ್ತನ್ನು ಗಳಿಸೋದಕ್ಕೆ ಎಷ್ಟು ಕಷ್ಟ ಪಡೋದಕ್ಕೂ ತಯಾರಿರುತ್ತಾರೆ. ಈ ರಾಶಿಯವರು ಹಣ ಹಾಗೂ ಅಧಿಕಾರಕ್ಕಾಗಿ ಶ್ರಮಿಸುತ್ತಾರೆ. ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಐಷಾರಾಮಿ ಜೀವನಕ್ಕೆ ಇವರ ಮನಸ್ಸು ಒಗ್ಗಿಕೊಂಡಿರುತ್ತದೆ.
ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರನು ಆಳುತ್ತಿದ್ದಾನೆ. ಈ ರಾಶಿಯಲ್ಲಿ ಜನಿಸಿದವರು ಐಷಾರಾಮಿ ಜೀವನದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ತಮ್ಮ ಸೌಂದರ್ಯದ ಕಾಳಜಿಯನ್ನು ಹೆಚ್ಚಾಗಿ ಮಾಡುತ್ತಾರೆ. ಈ ರಾಶಿಯವರು ಐಷಾರಾಮಿ ಪ್ರವಾಸ ಮಾಡೋದಕ್ಕೆ ಇಚ್ಛಿಸುತ್ತಾರೆ. ಹೊಸ ದೇಶಕ್ಕೆ ಪ್ರವಾಸಕ್ಕಾಗಿ ಹೋಗುತ್ತಾರೆ. ಬ್ರಾಡೆಂಡ್ ವಸ್ತುಗಳ ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಬೇಕಾದಷ್ಟು ದುಡ್ಡು ಖರ್ಚು ಮಾಡಿ ಆರಾಮಾಗಿ ಜೀವನ ನಡೆಸುತ್ತಾರೆ.
ಮಕರ ರಾಶಿ
ಮಕರ ರಾಶಿಯನ್ನು ಶನಿಯು ಆಳುತ್ತಿದ್ದಾನೆ. ಈ ರಾಶಿಯವರು ತಮ್ಮ ಅಚಲ ನಿರ್ಣಯ ಮತ್ತು ಯಶಸ್ಸಿನ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಬಲವಾದ ಕೆಲಸದ ನೀತಿಯನ್ನು ಹೊಂದಿದ್ದಾರೆ. ಮತ್ತು ಆರ್ಥಿಕ ಸ್ಥಿರತೆ ಮತ್ತು ವಸ್ತು ಸಂಪತ್ತನ್ನು ಸಾಧಿಸಲು ಶ್ರಮಿಸುತ್ತಾರೆ. ಮಕರ ರಾಶಿಯವರು ಐಷಾರಾಮಿ ಜೀವನ ಶೈಲಿಯತ್ತ ಆಕರ್ಷಿತರಾಗುತ್ತಾರೆ. ಇವರ ಕಠಿಣ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ.



Click it and Unblock the Notifications
