Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ಪ್ರೇಮ ವಿವಾಹವಾಗೋದಿಲ್ಲ!
ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ಕನಸು ಇದ್ದೇ ಇರುತ್ತದೆ. ಕೆಲವರು ತಾವು ಇಷ್ಟಪಟ್ಟವರನ್ನೇ ಮದುವೆಯಾಗುತ್ತಾರೆ. ವರ್ಷಾನುಗಟ್ಟಲೇ ಕಾದು ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಇನ್ನೂ ಕೆಲವರಂತೂ ಪ್ರೀತಿ ಪಡೆಯೋದಕ್ಕೆ ಮನೆಯವರೊಂದಿಗೆ ಕಾದಾಡಿ ಕೊನೆಗೆ ತಾವು ಪ್ರೀತಿಸಿದವರನ್ನೇ ಕೈ ಹಿಡಿಯುತ್ತಾರೆ.
ಆದರೆ ಕೆಲವು ರಾಶಿಯವರು ಮಾತ್ರ ಮನೆಯಲ್ಲಿ ನೋಡಿದ ವಧು/ವರನನ್ನೇ ವಿವಾಹವಾಗುತ್ತಾರೆ. ಅದ್ರಲ್ಲೂ ಕೆಲವರು ಇಷ್ಟ ಇಲ್ಲದಿದ್ದರೂ ಮನೆಯವರು ನೋಡಿದವರನ್ನೇ ವಿವಾಹವಾಗುತ್ತಾರೆ. ಆದರೆ ಇನ್ನೂ ಕೆಲವರು ಮನೆಯವರ ಮಾತಿಗೆ ಒಪ್ಪಿಗೆ ಸೂಚಿಸಿ ಖುಷಿಯಿಂದ ವಿವಾಹವಾಗುತ್ತಾರೆ. ಅಷ್ಟಕ್ಕು ಯಾವ ರಾಶಿಯವರು ಮನೆಯವರು ನೋಡಿದ ವಧು/ವರರನ್ನೇ ವಿವಾಹವಾಗುತ್ತಾರೆ ಅನ್ನೋದನ್ನು ತಿಳಿಯೋಣ.

ವೃಷಭ ರಾಶಿ
ವೃಷಭ ರಾಶಿಯವರು ಬಲವಾದ ಸಾಂಪ್ರದಾಯಿಕ ಮೌಲ್ಯಗಳನ್ನು ಹೊಂದಿರುತ್ತಾರೆ. ಅವರ ವಿಶ್ವಾಸಾರ್ಹ ಮತ್ತು ನಿಷ್ಠಾವಂತ ಸ್ವಭಾವ ಹೊಂದಿರುತ್ತಾರೆ. ಇವರು ಮನೆಯವರ ಮಾತಿಗೆ ಬದ್ಧರಾಗಿ ಇರುತ್ತಾರೆ. ಮನೆಯವರ ಮನಸ್ಸಿಗೆ ನೋವು ಕೊಡೋದಕ್ಕೆ ಇಷ್ಟ ಪಡೋದಿಲ್ಲ. ಹೀಗಾಗಿ ವೃಷಭ ರಾಶಿಯವರು ಮನೆಯವರು ಇಷ್ಟ ಪಟ್ಟು ಆರಿಸಿದವರನ್ನೇ ಮದುಯಾಗುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಕುಟುಂಬಸ್ಥರ ಅಭಿಪ್ರಾಯಗಳನ್ನು ಗೌರವಿಸುತ್ತಾರೆ. ಇವರಲ್ಲಿರುವ ಪೋಷಣೆ ಮತ್ತು ಸಹಾನುಭೂತಿಯ ಸ್ವಭಾವವು ಬಲವಾದ ಕೌಟುಂಬಿಕ ಬಂಧಗಳನ್ನು ಬೆಳೆಸುತ್ತದೆ. ಕುಟುಂಬಸ್ಥರ ಮಾತನ್ನು ಎಂದಿಗೂ ಮೀರುವವರಲ್ಲ ಇವರು. ಕರ್ಕಾಟಕ ರಾಶಿಯವರು ಭಾವನಾತ್ಮಕ ಹೆಚ್ಚಿನ ಆಧ್ಯತೆಯನ್ನು ನೀಡುತ್ತಾರೆ. ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಜೋಡಿಸಲಾದ ವಿವಾಹಕ್ಕೆ ಇವರು ಸೈ ಎನ್ನುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಯಾವತ್ತಿದ್ದರೂ ಪ್ರಾಯೋಗಿಕವಾಗಿ ಚಿಂತಿಸುವ ಗುಣ ಹೊಂದಿರುತ್ತಾರೆ. ಅವರು ತಮ್ಮ ಜೀವನದಲ್ಲಿ ರಚನೆ ಮತ್ತು ಕ್ರಮವನ್ನು ಶ್ಲಾಘಿಸುತ್ತಾರೆ. ಮನೆಯವರು ನೋಡಿದವರನ್ನೇ ಮದುವೆಯಾಗೋದಕ್ಕೆ ಇವರು ಒಪ್ಪಿಕೊಳ್ಳುತ್ತಾರೆ. ಕನ್ಯಾರಾಶಿಯವರು ಸಾಮಾನ್ಯವಾಗಿ ದೀರ್ಘಾವಧಿಯ ಹೊಂದಾಣಿಕೆಗೆ ಆದ್ಯತೆ ನೀಡುತ್ತಾರೆ. ಮತ್ತು ಜೀವನ ಸಂಗಾತಿಯನ್ನು ಆಯ್ಕೆಮಾಡುವುದು ಸೇರಿದಂತೆ ನಿರ್ಣಾಯಕ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರ ಕುಟುಂಬಸ್ಥರ ಮಾತನ್ನೇ ಕೇಳುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಸಮತೋಲನವನ್ನು ಗೌರವಿಸುತ್ತಾರೆ. ಅವರ ರಾಜತಾಂತ್ರಿಕ ಸ್ವಭಾವವು ಅವರಿಗೆ ವ್ಯವಸ್ಥಿತ ವಿವಾಹಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ರಾಶಿಯವರು ಕುಟುಂಬಗಳ ಆಶಯಗಳನ್ನು ಗೌರವಿಸುತ್ತಾರೆ. ಪ್ರೇಮ ವಿವಾಹದ ಬಗ್ಗೆ ಇವರು ಹೆಚ್ಚು ಆಸಕ್ತಿ ತೋರುವುದಿಲ್ಲ. ಮನೆಯವರು ಒಪ್ಪಿದವರನ್ನೇ ಮದುವೆಯಾಗೋದಕ್ಕೆ ಇವರು ಮನಸ್ಸು ಮಾಡುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಜವಾಬ್ದಾರಿಯುತ ಮತ್ತು ಪ್ರಾಯೋಗಿಕ ವ್ಯಕ್ತಿಗಳು. ಅವರು ಸಾಮಾನ್ಯವಾಗಿ ಸಂಪ್ರದಾಯ ಮತ್ತು ಕುಟುಂಬವನ್ನು ಗೌರವಿಸುತ್ತಾರೆ. ಇವರು ಅಳವಡಿಸಿಕೊಂಡಿರೋ ಶಿಸ್ತಿನ ವಿಧಾನವು ಅವರನ್ನು ವ್ಯವಸ್ಥಿತ ವಿವಾಹಗಳಿಗೆ ಹೆಚ್ಚು ಮುಕ್ತವಾಗಿಸುತ್ತದೆ. ಪ್ರೇಮ ವಿವಾಹಗಳಲ್ಲಿ ಇವರು ಹೆಚ್ಚಿನ ಆಸಕ್ತಿಯನ್ನು ತೋರೋದಿಲ್ಲ. ಮನೆಯವರ ಮರ್ಯಾದೆಗೆ ಧಕ್ಕೆ ಬರಬಾರದು ಅನ್ನೋ ಕಾರಣಕ್ಕೆ ಅವರು ಹೇಳಿದಂತೆ ಕೇಳುತ್ತಾರೆ.



Click it and Unblock the Notifications