Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ 5 ಸಸ್ಯಗಳು ಮನೆಯಲ್ಲಿದ್ದರೆ ಈಗಲೇ ಮನೆಯಿಂದ ಹೊರಹಾಕಿ! ಮನೆಗೆ ಒಳ್ಳೆಯದಲ್ಲ
ಹಳ್ಳಿ ಮನೆಗಳಲ್ಲಿ ನಾವು ಮನೆಯ ಸುತ್ತ-ಮುತ್ತ ಸಸ್ಯಗಳನ್ನು ಕಾಣುತ್ತೇವೆ. ಹೂವಿನ ಗಿಡಗಳನ್ನು ಸುಂದರವಾಗಿ ಬೆಳೆಸಲಾಗುತ್ತದೆ. ಆದ್ರೆ ಪಟ್ಟಣಗಳಲ್ಲಿ ಮನೆ ಕಟ್ಟೋದಕ್ಕೆ ಜಾಗ ಇರೋದಿಲ್ಲ. ಇನ್ನೂ ಹೂವು ಗಿಡಗಳನ್ನು ನೆಡೋದು ಎಲ್ಲಿ? ಹೀಗಾಗಿ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸುವ ಅಭ್ಯಾಸವನ್ನು ಇಲ್ಲಿನ ಮಂದಿ ಮಾಡಿಕೊಂಡಿದ್ದಾರೆ.

ಕೆಲವೊಂದು ಸಲ ನೋಡೋದಕ್ಕೆ ಆಕರ್ಷಕವಾಗಿರುತ್ತೆ ಅಂತ ನಾವು ಗಿಡಗಳನ್ನು ತಂದು ಮನೆಯಲ್ಲಿ ಬೆಳೆಸುತ್ತೇವೆ. ಇದೇ ನೋಡಿ ನಾವು ಮಾಡೋ ತಪ್ಪು. ಕೆಲವು ಗಿಡಗಳನ್ನು ಮನೆಗಳಲ್ಲಿ ಬೆಳೆಸಬಾರದು. ಇದರಿಂದ ನಿಮ್ಮ ಮನೆಗಳಲ್ಲಿ ಸಮಸ್ಯೆ ಹೆಚ್ಚಾಗುತ್ತೆ. ಅಷ್ಟಕ್ಕೂ ಯಾವ ಸಸ್ಯಗಳನ್ನು ಮನೆಯಲ್ಲಿ ಬೆಳೆಸಬಾರದು ಅನ್ನೋದನ್ನು ತಿಳಿಯೋಣ.
ವೈದಿಕ ಜ್ಯೋತಿಷ್ಯದ ಪ್ರಕಾರ ಈ ಜಗತ್ತಿನಲ್ಲಿರುವ ಕೆಲವು ಸಸ್ಯಗಳು ಮನೆಯೊಳಗೆ ಸಮತೋಲನಕ್ಕೆ ಅಡ್ಡಿಪಡಿಸುತ್ತಂತೆ. ಅಷ್ಟೇ ಅಲ್ಲದೇ, ನಕಾರಾತ್ಮಕ ಶಕ್ತಿಯನ್ನು ಮನೆಗೆ ಒಯ್ಯುತ್ತವೆ ಎಂದು ನಂಬಲಾಗಿದೆ. ಹೀಗಾಗಿ ಈ 5 ಸಸ್ಯಗಳನ್ನು ನಿಮ್ಮ ಮನೆಯಲ್ಲಿ ಬೆಳೆಸಲೇಬಾರದು. ಇವುಗಳು ಅಭಯಾರಣ್ಯದಲ್ಲಿ ಬೆಳೆಸಲಷ್ಟೇ ಸೂಕ್ತ.
ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಪರಿಕಲ್ಪನೆ ಹೇಗಿರುತ್ತೆ?
ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ಸಸ್ಯಗಳು ನಿರ್ದಿಷ್ಟ ಶಕ್ತಿಯನ್ನು ಹೊರಸೂಸುತ್ತವೆ ಎಂದು ನಂಬಲಾಗಿದೆ. ಅದು ತಾನಿರುವ ಜಾಗದಲ್ಲಿ ಶಕ್ತಿಯನ್ನು ವರ್ಧಿಸುತ್ತದೆ. ಅದು ಧನಾತ್ಮಕವೂ ಆಗಿರಬಹುದು. ಅಥವಾ ಋಣಾತ್ಮಕವೂ ಆಗಿರಬಹುದು. ಅದ್ರಲ್ಲೂ ಕೆಲವು ಸಸ್ಯಗಳು ನಕಾರಾತ್ಮಕತೆಯನ್ನು ಹೊರ ಸೂಸುತ್ತದೆ. ಇದರಿಂದ ಇಡೀ ಮನೆಯಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆಯಿದೆ.
ಈ 5 ಸಸ್ಯಗಳನ್ನು ಮನೆಯಲ್ಲಿ ಇಡಬೇಡಿ!
1. ಕಳ್ಳಿ ಗಿಡಿ
ಕಳ್ಳಿ ಗಿಡ ಅಥವಾ ಕ್ಯಾಕ್ಟಸ್ ಇದನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಇಡಬಾರದು.
ಪಾಪಾಸುಕಳ್ಳಿ ತೀಕ್ಷ್ಣವಾದ ಮತ್ತು ಮೊಣಚಾದ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಇದು ನಿಮ್ಮ ಮನೆಯಲ್ಲಿದ್ದರೆ ಉದ್ವೇಗ ಮತ್ತು ಅಪಶ್ರುತಿಗೆ ಕಾರಣವಾಗಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ಪಾಪಾಸುಕಳ್ಳಿಗಳನ್ನು ಮನೆಯೊಳಗೆ ಇಟ್ಟುಕೊಳ್ಳುವುದರಿಂದ ಧನಾತ್ಮಕ ಶಕ್ತಿಗಳ ಹರಿವಿಗೆ ಅಡ್ಡಿಯಾಗುತ್ತಂತೆ. ಅಷ್ಟೇ ಅಲ್ಲದೇ, ಕುಟುಂಬಸ್ಥರ ಸಂಬಂಧಗಳು ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತಂತೆ.
2. ಬೋನ್ಸಾಯ್
ಬೋನ್ಸಾಯ್ ಮರಗಳು ಹೆಚ್ಚು ಬೆಳವಣಿಗೆಯನ್ನು ಹೊಂದುವುದಿಲ್ಲ. ಕುಂಠಿತ ಗಾತ್ರದಲ್ಲೇ ಇರುತ್ತದೆ. ಇವುಗಳು ತಮ್ಮ ಸೌಂದರ್ಯ ಮತ್ತು ಕಲಾತ್ಮಕತೆಗಾಗಿ ಮೆಚ್ಚುಗೆ ಪಡೆದಿದ್ದರೂ ಅವುಗಳು ತಮ್ಮ ಚಿಕ್ಕ ಗಾತ್ರದ ಕಾರಣದಿಂದಾಗಿ ಕುಂಠಿತ ಬೆಳವಣಿಗೆಯನ್ನು ಪ್ರತಿನಿಧಿಸುತ್ತವೆ. ಮನೆಯಲ್ಲಿ ಬೋನ್ಸಾಯ್ ಮರಗಳನ್ನು ಇಟ್ಟುಕೊಳ್ಳುವುದು ನಿಶ್ಚಲತೆ ಮತ್ತು ಜೀವನದಲ್ಲಿ ಪ್ರಗತಿಯ ಕೊರತೆಯನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಇದು ಮನೆಯವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯನ್ನು ತಡೆಯುತ್ತದೆ.
3. ಮುಳ್ಳಿನ ಸಸ್ಯಗಳು (Thorny Plants)
ಚೂಪಾದ ಮುಳ್ಳುಗಳನ್ನು ಹೊಂದಿರುವ ಗುಲಾಬಿಗಳಂತಹ ಮುಳ್ಳುಗಳನ್ನು ಹೊಂದಿರುವ ಸಸ್ಯಗಳನ್ನು ವೈದಿಕ ಜ್ಯೋತಿಷ್ಯದಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಮುಳ್ಳುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಮತ್ತು ಮನೆಯ ಶಾಂತಿಯುತ ವಾತಾವರಣಕ್ಕೆ ಅಡ್ಡಿಪಡಿಸಬಹುದು ಎಂದು ನಂಬಲಾಗಿದೆ.
4. ಸತ್ತ ಅಥವಾ ಒಣಗಿದ ಸಸ್ಯಗಳು
ವೈದಿಕ ಜ್ಯೋತಿಷ್ಯದ ಪ್ರಕಾರ ಸತ್ತ ಅಥವಾ ಒಣಗಿದ ಸಸ್ಯಗಳನ್ನು ಮನೆಯೊಳಗೆ ಇಡಬಾರದು ಎಂದು ನಂಬಲಾಗಿದೆ. ಇವುಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದು ಮಾತ್ರವಲ್ಲದೇ ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಅಡ್ಡಿ ಪಡಿಸುತ್ತಂತೆ. ಹೀಗಾಗಿ ಮನೆಯಲ್ಲಿ ಸತ್ತ ಅಥವಾ ಒಣಗಿದ ಗಿಡಗಳಿದ್ದರೆ ಆದಷ್ಟು ಬೇಗ ಅವುಗಳ ದುರಸ್ಥಿಯನ್ನು ಮಾಡಬೇಕು.
5. ತೆವಳುವ ಸಸ್ಯಗಳು
ಈ ತೆವಳುವ ಸಸ್ಯಗಳಿಗೆ ನೇರವಾಗಿ ನಿಲ್ಲುವ ಸಾಮರ್ಥ್ಯ ಇರುವುದಿಲ್ಲ. ಅವುಗಳು ಬಳ್ಳಿಯ ಹಾಗಿರುತ್ತದೆ ಹಾಗೂ ಬೇಗನೇ ಇಡೀ ಪ್ರದೇಶದ ತುಂಬೆಲ್ಲಾ ಹಬ್ಬಿಕೊಳ್ಳುತ್ತದೆ. ಇವುಗಳನ್ನು ನಿಯಂತ್ರಿಸೋದಕ್ಕೆ ಸಾಧ್ಯವಿಲ್ಲ. ಉದಾಹರಣೆಗೆ ಐವಿ ಅಥವಾ ಕ್ರೀಪರ್ಸ್. ಹಾಗೂ ಇಂತಹ ಸಸ್ಯಗಳ ಆಯುಷ್ಯವೂ ಕಡಿಮೆ. ಇವುಗಳು ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿಯ ಹರಿವಿಗೆ ಅಡ್ಡಿ ಪಡಿಸುತ್ತದೆ. ನೀವು ವಾಸಿಸುವ ಜಾಗದಲ್ಲಿ ಅವ್ಯವಸ್ಥೆ ಹೆಚ್ಚಾಗಬಹುದು.
ಸುಂದರವಾಗಿದೆ ಎಂದು ಮನೆಯಲ್ಲಿ ಯಾವುದೋ ಸಸ್ಯಗಳನ್ನು ತಂದು ಬೆಳೆಸೋದಕ್ಕೆ ಹೋಗಬೇಡಿ. ಕೆಲವು ಸಸ್ಯಗಳು ನಿಮ್ಮ ಮನೆಗೆ ಶೋಭೆ ತರೋದಿಲ್ಲ. ಇಂತಹ ಸಸ್ಯಗಳು ನಿಮ್ಮ ಮನೆಯಲ್ಲಿದ್ದರೆ ಒಂದಲ್ಲ ಒಂದು ಸಮಸ್ಯೆ ತಪ್ಪಿದ್ದಲ್ಲ.



Click it and Unblock the Notifications












