Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ 5 ರಾಶಿಯ ಮಹಿಳೆಯರ ಹೃದಯ ತುಂಬಾನೇ ದೊಡ್ಡದು!
ಒಳ್ಳೆಯ ಮನಸ್ಸು ಅನ್ನೋದು ಎಲ್ಲಾ ಮಹಿಳೆಯರಿಗೂ ಇರೋದಿಲ್ಲ. ಕೆಲವೇ ಕೆಲವು ಜನರಿಗೆ ಮಾತ್ರ ಬೇರೆಯವರಿಗೆ ಒಳ್ಳೆಯದನ್ನು ಬಯಸುತ್ತಾರೆ. ಕಷ್ಟ ಕಾಲದಲ್ಲಿ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರಿಗೆ ಹೊಟ್ಟೆ ಕಿಚ್ಚು ಹೆಚ್ಚಾಗಿ ಇರುತ್ತಂತೆ.
ಆದರೆ ಈ ರಾಶಿಯ ಮಹಿಳೆಯರು ಹಾಗಲ್ಲ ತುಂಬಾನೇ ಒಳ್ಳೆಯವರು. ವಿಶಾಲ ಹೃದಯವನ್ನು ಹೊಂದಿರುತ್ತಾರೆ. ಆ 5 ರಾಶಿಯ ಮಹಿಳೆಯರು ಮಾತ್ರ ಹೃದಯ ಶ್ರೀಮಂತಿಕೆಯನ್ನು ಹೊಂದಿರುತ್ತಾರೆ. ಅಷ್ಟಕ್ಕು ಆ 5 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಮಹಿಳೆಯರು ಸಹಾನುಭೂತಿ ಮತ್ತು ಕಾಳಜಿಯುಳ್ಳ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕಷ್ಟ ಕಾಲದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುವ ವಿಶಾಲವಾದ ಮನಸ್ಸು ಇವರಿಗಿದೆ. ಕರ್ಕಾಟಕ ರಾಶಿಯ ಮಹಿಳೆಯರು ತಮ್ಮ ಪ್ರೀತಿಪಾತ್ರರನ್ನು ಸದಾ ರಕ್ಷಿಸುತ್ತಾರೆ. ಇತರರ ಸಂತೋಷ ಹಾಗೂ ಯೋಗಕ್ಷೇಮಕ್ಕೆ ಏನು ಬೇಕಾದರೂ ಮಾಡೋದಕ್ಕೆ ಸಿದ್ಧರಾಗಿರ್ತಾರೆ.
ಮೀನ ರಾಶಿ
ಮೀನ ರಾಶಿಯ ಮಹಿಳೆಯರು ಇತರರ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದಾರೆ. ಹಾಗೂ ಇವರು ಬೇರೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕಷ್ಟ ಕಾಲದಲ್ಲಿ ಬೇರೆಯವರಿಗೆ ಸಹಾಯ ಮಾಡುವ ದೊಡ್ಡ ಮನಸ್ಸು ಇವರಿಗಿದೆ. ಮೀನ ರಾಶಿಯ ಮಹಿಳೆಯರು ತಮ್ಮ ದಯೆಯ ಕಾರ್ಯಗಳಲ್ಲಿ ನಿಸ್ವಾರ್ಥವಾಗಿರುತ್ತಾರೆ. ಇವರು ಯಾವತ್ತೂ ಸ್ವಾರ್ಥಿಯಾಗಿ ಯೋಚಿಸೋದಿಲ್ಲ. ಇನ್ನೂ ಇವರು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವವರಲ್ಲ.
ತುಲಾ ರಾಶಿ
ತುಲಾ ರಾಶಿಯ ಮಹಿಳೆಯರು ಯಾವಾಗಲೂ ನ್ಯಾಯೋಚಿತವಾಗಿ ಆಲೋಚನೆ ಮಾಡುತ್ತಾರೆ. ಯಾರೊಬ್ಬರಿಗೂ ಅನ್ಯಾಯ ಮಾಡೋದಕ್ಕೆ ಇವರು ಇಷ್ಟ ಪಡೋದಿಲ್ಲ. ಒಂದು ವಿಚಾರವನ್ನು ಅನೇಕ ದೃಷ್ಟಿಕೋನಗಳಲ್ಲಿ ನೋಡಿ ಆಮೇಲೆ ಒಂದು ನಿರ್ಧಾರಕ್ಕೆ ಬರುತ್ತಾರೆ. ಇವರಿಗೆ ಜಗಳ, ಮನಸ್ಥಾಪದಿಂದಿರೋದು ಇಷ್ಟ ಆಗೋದಿಲ್ಲ. ಎಲ್ಲರ ಜೊತೆಗೂ ಕೂಡ ಬಾಳುವ ಗುಣ ಹೊಂದಿದ್ದಾರೆ.
ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ಸೌಮ್ಯ ಸ್ವಭಾವದವರಾಗಿದ್ದಾರೆ. ಇತರರನ್ನು ಕಾಳಜಿ ಮಾಡುವ ಒಳ್ಳೆಯ ಮನಸ್ಸು ಇವರಿಗಿದೆ. ಈ ರಾಶಿಯವರು ದಯಾಮಯಿಗಳು. ವೃಷಭ ರಾಶಿಯ ಮಹಿಳೆಯರು ಸಂಬಂಧಗಳಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಸೃಷ್ಟಿಸುತ್ತಾರೆ. ಯಾರಾದರೂ ಇವರ ಬಳಿಗೆ ಕಷ್ಟ ಎಂದು ಹೇಳಿಕೊಂಡು ಬಂದಾಗ ಅವರಿಗೆ ಸಹಾಯ ಮಾಡದೇ ಇರುವವರಲ್ಲ.
ಕನ್ಯಾ ರಾಶಿ
ಕನ್ಯಾರಾಶಿ ಮಹಿಳೆಯರು ಇತರರ ಬಗ್ಗೆ ತುಂಬಾನೇ ಕಾಳಜಿ ಮಾಡುತ್ತಾರೆ. ಈ ರಾಶಿಯವರು ಸೇವಾಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಒಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡುವವರಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣವನ್ನು ಇವರು ಹೊಂದಿದ್ದಾರೆ. ಕಷ್ಟದಲ್ಲಿರುವವರ ಜೀವನ ಸುಧಾರಿಸೋದಕ್ಕಾಗಿ ಸಾಕಷ್ಟು ಶ್ರಮ ಪಟ್ಟು ಕೆಲಸ ಮಾಡುತ್ತಾರೆ.



Click it and Unblock the Notifications

