Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ರಾಶಿಯವರು ಇತರರ ಸಹಾಯಕ್ಕೆ ಸದಾ ಸಿದ್ಧರಾಗಿ ಇರುತ್ತಾರೆ!
ಕೆಲವೊಂದು ಸಲ ನಮ್ಮೊಬ್ಬರಿಂದಲೇ ಎಲ್ಲಾ ಕೆಲಸವನ್ನು ಮಾಡೋದಕ್ಕೆ ಸಾಧ್ಯವಾಗುತ್ತೆ ಅನ್ನೋದು ನಮ್ಮ ಮೂರ್ಖತನ. ನಮ್ಮ ಕೆಲಸವನ್ನು ಪೂರ್ತಿ ಮಾಡಲು ನಾವು ಬೇರೆಯವರ ಸಹಾಯ ಪಡೆಯಲೇಬೇಕಾಗುತ್ತದೆ. ಆದರೆ ಎಲ್ಲರೂ ನಮ್ಮ ಸಹಾಯಕ್ಕೆ ಬರುತ್ತಾರೆ ಅಂತ ಹೇಳೋದಿಕ್ಕೆ ಆಗೋದಿಲ್ಲ. ಕೆಲವೇ ಕೆಲವು ಜನರಲ್ಲಿ ಮಾತ್ರ ಬೇರೆಯವರಿಗೆ ಸಹಾಯ ಮಾಡುವ ಗುಣ ಇರುತ್ತದೆ. ಅಷ್ಟಕ್ಕೂ ಯಾವ ರಾಶಿಯವರು ಸದಾ ಮತ್ತೊಬ್ಬರ ಸಹಾಯಕ್ಕೆ ನಿಲ್ಲುತ್ತಾರೆ ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯವರು ಪೋಷಣೆ ಮತ್ತು ಕಾಳಜಿಯ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯಲ್ಲಿ ಹುಟ್ಟಿದವರಿಗೆ ಇತರರಲ್ಲಿ ಕನಿಕರ ಹೆಚ್ಚಾಗಿರುತ್ತದೆ. ಇತರರಿಗೆ ಸಹಾಯ ಮಾಡುವ ಪ್ರವೃತ್ತಿಯು ಇವರಲ್ಲಿ ಉತ್ತಮವಾಗಿರುತ್ತದೆ. ಬೇರೆಯವರ ಕಷ್ಟಕ್ಕೆ ಇವರು ಯಾವಾಗಲೂ ಕಿವಿಯಾಗುತ್ತಾರೆ. ಅವರಿಗೆ ಸಾಂತ್ವಾನದ ಮಾತುಗಳನ್ನು ಹೇಳುವುದರ ಜೊತೆಗೆ ಅಗತ್ಯವಿರುವಾಗ ಸಹಾಯ ಹಸ್ತವನ್ನೂ ಚಾಚುತ್ತಾರೆ. ಕರ್ಕಾಟಕ ರಾಶಿಯವರು ಸ್ನೇಹಕ್ಕೆ ಯಾವಾಗಲೂ ವಿಶ್ವಾಸಾರ್ಹವಾಗಿ ಇರುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯನ್ನು ಬುಧಗ್ರಹವು ಆಳುತ್ತಿದೆ. ಇವರು ವಿಶ್ಲೇಷಣಾತ್ಮಕ ಮತ್ತು ಪ್ರಾಯೋಗಿಕ ವಿಧಾನಕ್ಕೆ ಹೆಸರುವಾಸಿಯಾಗಿರುತ್ತಾರೆ. ಯಾರಾದರೂ ಸಹಾಯವನ್ನು ಕೇಳಿದಾಗ ಇಲ್ಲ ಎನ್ನುವವರಲ್ಲ ಈ ರಾಶಿಯವರು. ಬೇರೆಯವರ ಸಮಸ್ಯೆಗಳನ್ನು ವಿಶ್ಲೇಷಿಸಿ ಅವರಿಗೆ ಮೌಲ್ಯಯುತವಾದ ಸಲಹೆ ಮತ್ತು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಬೇರೆಯವರ ಬಗ್ಗೆ ಅತಿಯಾದ ಕಾಳಜಿ ಹೊಂದಿರುತ್ತಾರೆ. ತಮ್ಮ ಆಪ್ತರೂ ಕೂಡ ಜೀವನದಲ್ಲಿ ಮುಂದೆ ಬರಲಿ ಎಂದು ಇವರು ಬಯಸುತ್ತಾರೆ.
ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರನು ಆಳುತ್ತಿದ್ದಾನೆ. ಇವರು ಸಾಮರಸ್ಯ ಹಾಗೂ ಸಮತೋಲನವನ್ನು ಸೃಷ್ಟಿಸುವ ಬಯಕೆಗೆ ಹೆಸರುವಾಸಿಯಾಗಿರುತ್ತಾರೆ. ತಮ್ಮ ಸುತ್ತಮುತ್ತಲಿರುವವರಿಗೆ ಸಹಾಯ ಮಾಡೋದಕ್ಕೆ ಇವರು ಯಾವತ್ತಿಗೂ ಮುಂದಿರುತ್ತಾರೆ. ತುಲಾ ರಾಶಿಯವರಲ್ಲಿ ರಾಜತಾಂತ್ರಿಕ ಕೌಶಲ್ಯಗಳು ಮತ್ತು ಬಹು ದೃಷ್ಟಿಕೋನಗಳನ್ನು ನೋಡುವ ಸಾಮರ್ಥ್ಯವು ಇರುತ್ತದೆ. ಬೇರೆಯವರ ಏಳಿಗೆ ನೋಡೋದಕ್ಕೆ ಇಷ್ಟ ಪಡುತ್ತಾರೆ. ಹಾಗೂ ಅದರಲ್ಲಿ ಖುಷಿಯನ್ನು ಕಂಡುಕೊಳ್ಳುತ್ತಾರೆ.
ಮೀನ ರಾಶಿ
ಮೀನ ರಾಶಿಯನ್ನು ಗುರುಗ್ರಹವು ಆಳುತ್ತಿದೆ. ಮೀನ ರಾಶಿಯವರಲ್ಲಿ ಸಹಾನುಭೂತಿ ಹೆಚ್ಚಾಗಿರುತ್ತದೆ. ಇವರಲ್ಲಿ ನೈಸರ್ಗಿಕವಾಗಿ ಸಹಾಯ ಮಾಡುವ ಮತ್ತು ಮಾರ್ಗದರ್ಶನ ಮಾಡುವ ಗುಣವಿದೆ. ಈ ರಾಶಿಯಲ್ಲಿ ಜನಿಸಿದವರು ಬೇರೆಯವರಿಗೆ ಭಾವನಾತ್ಮಕ ಬೆಂಬಲವನ್ನು ನೀಡುತ್ತಾರೆ. ಬೇರೆಯವರ ಒಳ ಮನಸ್ಸನ್ನು ಅರಿತುಕೊಂಡು ಅವರನ್ನು ಪೋಷಿಸಿ, ಕಾಳಜಿ ಮಾಡುತ್ತಾರೆ. ತಮ್ಮವರ ಏಳಿಗೆಗಾಗಿ ಸದಾ ಶ್ರಮಿಸುವ ಉತ್ತಮ ಗುಣ ಇವರಲ್ಲಿದೆ.



Click it and Unblock the Notifications