Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಈ 4 ರಾಶಿಯವರು ಸೋಲನ್ನೇ ಗೆಲುವಿನ ಮೆಟ್ಟಲು ಮಾಡಿಕೊಳ್ತಾರೆ!
ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ಹಂತದಲ್ಲಿ ಸವಾಲುಗಳು ಎದುರಾಗುತ್ತಲೇ ಇರುತ್ತದೆ. ಹೆಚ್ಚಿನವರು ಈ ಸವಾಲುಗಳನ್ನು ಮೆಟ್ಟಿ ನಿಲ್ಲೋದ್ರಲ್ಲಿ ಎಡವುತ್ತಾರೆ. ಈ ಜೀವನವೇ ಸಾಕಪ್ಪಾ ಎಂದು ಅಳುತ್ತಾ ಕೂರುತ್ತಾರೆ. ಅಂತವರ ಮಧ್ಯೆ ಸವಾಲಿಗೆ ಎದೆಯೊಡ್ಡಿ ನಿಲ್ಲುವವರು ಸಿಗೋದು ತುಂಬಾನೇ ಕಡಿಮೆ.

ಹೌದು, ಕೆಲವೇ ಕೆಲವು ಜನ ಮಾತ್ರ ಎಷ್ಟೇ ದೊಡ್ಡ ಸವಾಲಾದ್ರೂ ಕೂಡ ಹೆಚ್ಚಾಗಿ ತಲೆ ಕೆಡಿಸಿಕೊಳ್ಳೋದಿಲ್ಲ. ಕಲ್ಲು ಬಂಡೆಯೇ ಎದುರಾದ್ರೂ ಕೂಡ ಅದನ್ನು ಕರಗಿಸುವ ತಾಕತ್ತನ್ನು ತೋರಿಸುತ್ತಾರೆ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರಿಗೆ ಸವಾಲುಗಳಂದ್ರೆ ಇಷ್ಟ. ಸವಾಲುಗಳನ್ನು ಮೆಟ್ಟಿ ನಿಲ್ಲೋದಕ್ಕೆ ಸದಾ ಸಿದ್ಧವಾಗಿರ್ತಾರೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ನಿರ್ಭೀತಿಯನ್ನು ಹೊಂದಿರುವಂತಹ ವ್ಯಕ್ತಿಗಳು. ಮೇಷ ರಾಶಿಯನ್ನು ಮಂಗಳನು ಆಳುತ್ತಿದ್ದಾನೆ. ಹೀಗಾಗಿ ಇವರು ಸವಾಲುಗಳನ್ನು ದೈರ್ಯದಿಂದ ಎದುರಿಸುವ ಸಹಜ ಸಾಮರ್ಥ್ಯ ಹೊಂದಿರುತ್ತಾರೆ. ಎಷ್ಟೇ ಅಡೆ-ತಡೆಗಳ ಮಧ್ಯೆಯೂ ಹೊಸ ಮಾರ್ಗವನ್ನು ಹುಡುಕುತ್ತಾರೆ. ಸವಾಲುಗಳನ್ನು ಭೇದಿಸೋದಕ್ಕೆ ತಮ್ಮ ಶಕ್ತಿಯನ್ನು ಮೀರಿ ಪ್ರಯತ್ನ ಪಡುತ್ತಾರೆ. ಎಷ್ಟೇ ಕಷ್ಟ ಆದರೂ ಛಲ ಬಿಡದ ಹಠವಾದಿಯಂತೆ ಕೊನೆಯವರೆಗೂ ಹೋರಾಟ ನಡೆಸುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯನ್ನು ಸೂರ್ಯನು ಆಳುತ್ತಿದ್ದಾನೆ. ಸೂರ್ಯನು ಅಚಲವಾದ ತೇಜಸ್ಸಿನಿಂದ ಹೊಳೆಯುವಂತೆ ಇವರು ಕೂಡ ಹೊಳೆಯುತ್ತಾರೆ. ಇವರಲ್ಲಿರುವ ಆತ್ಮ ವಿಶ್ವಾಸವೇ ಗುರಿಯನ್ನು ಸಾಧಿಸಲು ಇವರಿಗೆ ದಾರಿ ದೀಪವಾಗಿದೆ. ಈ ರಾಶಿಯವರು ಯಾವಾಗಲೂ ದೈರ್ಯದಿಂದಲೇ ಅಖಾಡಕ್ಕೆ ಕಾಲಿಡುತ್ತಾರೆ. ಮುಂದಿಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೆ ಹಿಂದಿಡುವವರಲ್ಲ ಇವರು. ಎಂತಹ ಸವಾಲುಗಳನ್ನು ಸ್ವೀಕರಿಸೋದಕ್ಕೆ ಹಿಂದೇಟು ಹಾಕುವವರಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿರುವ ದೈರ್ಯವೇ ವೈಯಕ್ತಿಕ ವಿಕಾಸಕ್ಕೆ ಮೆಟ್ಟಿಲುಗಳಾಗಿದೆ. ಕಷ್ಟಗಳು ಎಷ್ಟೇ ಸಾರಿ ಇವರನ್ನು ತುಳಿದರೂ ಕೂಡ ಮತ್ತೆ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಇವರು ಎದ್ದು ನಿಲ್ಲುತ್ತಾರೆ. ಸೋಲನ್ನು ಜಯಿಸೋದಕ್ಕೋಸ್ಕರ ಹೊಸ ಹೊಸ ತಂತ್ರಗಳನ್ನು ಹೂಡುತ್ತಾರೆ. ನಿರ್ಭೀತ ವ್ಯಕ್ತಿತ್ವವನ್ನು ಇವರು ಹೊಂದಿರುತ್ತಾರೆ. ಕಷ್ಟಗಳು ಬಂತು ಎಂದು ಎಂದಿಗೂ ಕುಗ್ಗಿ ಹೋದವರಲ್ಲ. ನಾಳಿನ ಹೊಸ ಭವಿಷ್ಯದ ಭರವಸೆಯ ಮೇಲೆ ಬದುಕುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ಸವಾಲುಗಳನ್ನು ಎದುರಿಸುವ ದೈರ್ಯವಂತರಾಗಿ ಇರುತ್ತಾರೆ. ಮಕರ ರಾಶಿಯವರು ತಮ್ಮ ದಾರಿಯಲ್ಲಿ ಬರುವ ಯಾವುದೇ ಅಡೆತಡೆಗಳನ್ನು ಜಯಿಸಲು ಅಚಲವಾದ ನಿರ್ಣಯವನ್ನು ಹೊಂದಿರುತ್ತಾರೆ. ಸವಾಲುಗಳಿಗೆ ಹೆದರಿ ಯಾವತ್ತೂ ಹಿಂಜರಿಯೋದಿಲ್ಲ. ಸೋಲನ್ನೇ ಗೆಲುವಿನ ಸೋಪಾನವನ್ನಾಗಿ ಮಾಡಿಕೊಳ್ಳುತ್ತಾರೆ. ಮಕರ ರಾಶಿಯವರು ಕರ್ತವ್ಯ ಮತ್ತು ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಸವಾಲುಗಳನ್ನು ಎದುರಿಸುತ್ತಾರೆ



Click it and Unblock the Notifications
