Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
2026ರ ವಿಶ್ವದ ಟಾಪ್ 10 ವಾಸಯೋಗ್ಯ ನಗರಗಳ ಪಟ್ಟಿ; ಸಿಲಿಕಾನ್ ಸಿಟಿಗೂ ಇದೆ ಸ್ಥಾನ!!
ಇಡೀ ವಿಶ್ವದಲ್ಲಿ ಕೆಲವೊಂದು ನಗರಗಳು ಅಥವಾ ದೇಶವು ಯಾವಾಗಲು ಪ್ರವಾಸಿಗರಿಂದ ತುಂಬಿರುತ್ತವೆ. ಹಾಗೆ ಕೆಲವೊಂದು ವಾಸಯೋಗ್ಯವಾಗಿ ಅಲ್ಲಿನ ಪ್ರಕೃತಿ ಸೌಂದರ್ಯದ ಗುಟ್ಟಾಗಿ ಎಲ್ಲರ ಗಮನ ಸೆಳೆಯುತ್ತವೆ. ಹಾಗೆ ಮತ್ತೆ ಕೆಲವು ಯುದ್ಧ, ಬಡತನ, ಆರ್ಥಿಕ ಹಿಂಜರಿತ ಸೇರಿದಂತೆ ಸಮಸ್ಯೆಗಳೊಂದಿಗೆ ಅಲ್ಲಿನ ಜನರ ಜೀವನ ಸಮಸ್ಯೆಗಳಿಂದ ತುಂಬಿರಲಿದೆ.
ಈಗ ಇಪ್ಸೋಸ್ ಜೊತೆಗಿನ ಸಹಭಾಗಿತ್ವದಲ್ಲಿ ರೆಸೋನೆನ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು ವಿಶ್ವದ ಟಾಪ್ 10 ವಾಸಯೋಗ್ಯ ನಗರಗಳನ್ನು ಪಟ್ಟಿದೆ. ಮಾಡಿದೆ. 2026ರ ವಾರ್ಷಿಕ ವಿಶ್ವದ ಅತ್ಯುತ್ತಮ ನಗರಗಳ ಸಾಲಿನಲ್ಲಿ ಲಂಡನ್ ಸತತ 11ನೇ ವರ್ಷವೂ ಮೊದಲ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್‌ನ ರಾಜಧಾನಿಯಾಗಿರುವ ಲಂಡನ್ ಎಲ್ಲಾ ಮಾನದಂಡದಲ್ಲೂ ಅತ್ಯಂತ ಶ್ರೇಷ್ಠ ನಗರ ಎನಿಸಿಕೊಂಡಿದೆ.

ಈ ವರದಿಯು 2025-2026 ರಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಪ್ರವಾಸ ಮಾಡಲು ವಿಶ್ವದ ಟಾಪ್ 100 ಅತ್ಯುತ್ತಮ ನಗರಗಳ ಪಟ್ಟಿ ಮಾಡಲಾಗಿದೆ. ಅದರಲ್ಲಿ ಯುರೋಪಿನ 4 ನಗರಗಳು ಅಗ್ರ ಸ್ಥಾನದಲ್ಲಿವೆ ಹಾಗೆ ಏಷ್ಯಾದ ಕೇವಲ 2 ನಗರಗಳು ಈ ಪಟ್ಟಿಯಲ್ಲಿವೆ. ಪಟ್ಟಿಯ ಮೊದಲ ಸ್ಥಾನವು ಲಂಡನ್ ಪಾಲಾದರೆ ಎರಡನೇ ಸ್ಥಾನ ಅಮೆರಿಕೆ ನ್ಯೂಯಾರ್ಕ್ ನಗರದ ಪಾಲಾಗಿದೆ.
ನ್ಯೂಯಾರ್ಕ್ ಸದ್ಯ ವಲಸಿಗರ ಸ್ವರ್ಗವಾಗಿದೆ. ಇದು ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಹಾಗೆ ಪ್ಯಾರಿಸ್ ಮೂರನೇ ಸ್ಥಾನಲ್ಲಿದೆ. ಟೊಕಿಯೋ ನಾಲ್ಕನೇ ಸ್ಥಾನ, ಮ್ಯಾಡ್ರಿಡ್ 5ನೇ ಸ್ಥಾನದಲ್ಲಿದ್ದರೆ ಸಿಂಗಾಪುರ್ 6ನೇ ಸ್ಥಾನ ಪಡೆದಿದೆ. ಇನ್ನು ಈ ಪಟ್ಟಿಯಲ್ಲಿ 7ನೇ ಸ್ಥಾನವು ರೋಮ್ ಪಾಲಾದರೆ 8ನೇ ಸ್ಥಾನದಲ್ಲಿ ದುಂಬೈ 9ರಲ್ಲಿ ಬರ್ಲಿನ್, 10ನೇ ಸ್ಥಾನವನ್ನು ಬಾರ್ಸಿಲೋನಾ ಪಡೆದುಕೊಂಡಿದೆ.
ಬೆಂಗಳೂರಿಗೂ ಇದೆ ಸ್ಥಾನ
ಇನ್ನು ಏಷ್ಯಾದ ಕೇವಲ 2 ನಗರಗಳ ಪೈಕಿ ಟೊಕಿಯೋ ಹಾಗೂ ಸಿಂಗಾಪುರ್ ಟಾಪ್ 10ರಲ್ಲಿ ಸ್ಥಾನ ಪಡೆದಿದೆ. ಇನ್ನು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ಪಟ್ಟಿಯಲ್ಲಿ 29ನೇ ಸ್ಥಾನ ದಕ್ಕಿದೆ. ಅನಂತರ ಮುಂಬೈ 40 ನೇ ಸ್ಥಾನದಲ್ಲಿದೆ, ರಾಷ್ಟ್ರೀಯ ರಾಜಧಾನಿ ದೆಹಲಿ 54 ನೇ ಸ್ಥಾನದಲ್ಲಿದೆ ಮತ್ತು ಹೈದರಾಬಾದ್ 82 ನೇ ಸ್ಥಾನದಲ್ಲಿದೆ.
ಪಟ್ಟಿ ನಿರ್ಧರಿಸುವ ಅಂಶಗಳೇನು?
ವರದಿಯು ವಿಶ್ವದಾದ್ಯಂತ 270 ಕ್ಕೂ ಹೆಚ್ಚು ನಗರಗಳನ್ನು ಮೌಲ್ಯಮಾಪನ ಮಾಡಿದೆ, ಎಲ್ಲವೂ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರಗಳಾಗಿವೆ. ಈ ಪಟ್ಟಿಗಾಗಿ ಆ ನಗರದಲ್ಲಿನ ಒಟ್ಟಾರೆ ಜನ ಜೀವನ, ಶಿಕ್ಷಣ, ಸಂಸ್ಕೃತಿ, ಸಂಪರ್ಕ, ನೈಟ್ ಲೈಫ್, ಸುರಕ್ಷತೆ, ಆರೋಗ್ಯ, ಜೀವನ ಮಟ್ಟ ಸೇರಿ ಹಲವಾರು ಸೂಚಕಗಳು ಹಾಗೆ ಅಂಶಗಳ ಅಧ್ಯಯನದ ಭಾಗವಾಗಿ ತೆಗೆದುಕೊಳ್ಳಲಾಗಿದೆ.
ಈ ಎಲ್ಲಾ ಅಂಶಗಳನ್ನು ವಿಶ್ಲೇಷಿಸಿದ ನಂತರ ಪ್ರತಿ ನಗರಕ್ಕೆ ಮೂರು ದೊಡ್ಡ ಸ್ತಂಭಗಳ ಆಧಾರದ ಮೇಲೆ ಪ್ಲೇಸ್ ಪವರ್ ಸ್ಕೋರ್ ನೀಡಲಾಗುತ್ತದೆ. ವಾಸಯೋಗ್ಯತೆ ಎಂದರೆ ಆ ನಗರದಲ್ಲಿ ಜೀವನ ಎಷ್ಟು ಆರಾಮದಾಯಕ ಮತ್ತು ಅನುಕೂಲಕರವಾಗಿದೆ. ಇದು ಜೀವನ ವೆಚ್ಚ, ಸ್ವಚ್ಛತೆ ಮತ್ತು ಆರೋಗ್ಯ ಸೇವೆಗಳನ್ನು ಒಳಗೊಂಡಿದೆ. ಅಲ್ಲಿನ ಜನಜೀವನ ಎಷ್ಟು ಸಂತೋಷದಿಂದ ಇದ್ದಾರೆ, ವಾತಾವರಣ, ಕ್ರೈಮ್ ರೇಟ್, ಪೊಲೀಸ್ ವ್ಯವಸ್ಥೆಯಿಂದ ಹಿಡಿದು ಬಹಳಷ್ಟು ಅಂಶಗಳನ್ನು ಪರಿಗಣಿಸಲಾಗುತ್ತದೆ.
ಸದ್ಯ ಈ ಪಟ್ಟಿಯಲ್ಲಿ ಕಳೆದ 11 ವರ್ಷದಿಂದಲೂ ಲಂಡನ್ ಮೊದಲ ಸ್ಥಾನದಲ್ಲಿ ಮುಂದವರೆದಿದೆ. ಹೀಗಾಗಿ ಬಹುತೇಕ ಶ್ರೀಮಂತರು, ಉದ್ಯಮಿಗಳು ಲಂಡನ್‌ನಲ್ಲೇ ನೆಲೆಸಲು ಮುಂದಾಗುತ್ತಾರೆ. ಭಾರತದ ಬಹುತೇಕ ಶ್ರೀಮಂತ ವರ್ಗ ಲಂಡನ್‌ನಲ್ಲಿ ನೆಲೆಸಿದೆ.



Click it and Unblock the Notifications
