ನಿಮ್ಮ ಊರಲ್ಲೂ 'ಕಳ್ಳ ಸಂಬಂಧ' ಇದ್ಯಾ? ಭಾರತದ ಟಾಪ್ 10 ನಗರಗಳಿವು! ಬೆಂಗಳೂರಿಗೆ ಯಾವ ಸ್ಥಾನ?

ನಿಮ್ಮ ನಗರದಲ್ಲೂ 'ಕಳ್ಳ ಸಂಬಂಧ' ಇದೆಯಾ? ಅತಿ ಹೆಚ್ಚು ವಿವಾಹೇತರ ಸಂಬಂಧಗಳಿರುವ ಭಾರತದ ಟಾಪ್ 10 ನಗರಗಳಿವು. ಬೆಂಗಳೂರಿಗೆ ಯಾವ ಸ್ಥಾನ ನೋಡಿ. ಭಾರತದಲ್ಲಿ ಮದುವೆಯನ್ನು ಕೇವಲ ಒಂದು ಸಂಬಂಧವೆಂದು ಪರಿಗಣಿಸುವುದಿಲ್ಲ. ಬದಲಾಗಿ, ಅದು ಭಾರತೀಯ ಸಂಸ್ಕೃತಿಯಲ್ಲಿ ಬಹು ಮುಖ್ಯ. 140 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ, ಮದುವೆಯು ಒಂದು ಪವಿತ್ರ ಆಚರಣೆಯೇ ಸರಿ. ಆದರೂ, ಕಳೆದ ಕೆಲವು ವರ್ಷಗಳಿಂದ, ದೇಶದಲ್ಲಿ ವಿವಾಹೇತರ ಸಂಬಂಧಗಳಲ್ಲಿ (Extramarital Affairs) ತೊಡಗಿರುವವರ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚುತ್ತಿದೆ.

ಪ್ರಸ್ತುತ ಅನೇಕ ವಿವಾಹಿತರು ಆಶ್ಲೇ ಮ್ಯಾಡಿಸನ್ (Ashley Madison) ನಂತಹ ಡೇಟಿಂಗ್ ಆಪ್‌ಗೆ ಅಂಟಿಕೊಂಡಿದ್ಧಾರೆ. ಈ ಮೂಲಕ ತಮ್ಮ ವೈವಾಹಿಕ ಬಂಧವನ್ನು ಮೀರಿ ಹೊಸ ಸಂಬಂಧಗಳನ್ನು ಹೊಂದಲು ಬಯಸುತ್ತಿದ್ದಾರೆ. ಇದು ಜಾಗತಿಕವಾಗಿ ವೈವಾಹಿಕ ಸಂಬಂಧಗಳನ್ನು ಅನ್ವೇಷಿಸಲು ಪ್ರಮುಖ ವೇದಿಕೆಯಾಗಿದೆ. ವಿಶೇಷವಾಗಿ, ವಿವಾಹಿತರು ತಮ್ಮ ಹೊಸ ಸಂಬಂಧಗಳನ್ನು ಇಲ್ಲಿ ಹುಡುಕುತ್ತಾರೆ. ಅತಿ ಹೆಚ್ಚು ವಿವಾಹೇತರ ಸಂಬಂಧಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ದೊಡ್ಡ ನಗರಗಳು ಮಾತ್ರವಲ್ಲದೆ, ಅತ್ಯಂತ ಚಿಕ್ಕ ನಗರಗಳೂ ಸೇರಿವೆ. ಹಾಗಿದ್ರೆ, ಅಕ್ರಮ ಸಂಬಂಧಗಳಲ್ಲಿ ಹೆಚ್ಚು ತೊಡಗಿರುವ ಭಾರತದ ಟಾಪ್ 10 ನಗರಗಳು ಯಾವುವು? (India's Top Cities with the Most Extramarital Affairs) ಎಂದು ತಿಳಿಯೋಣ ಬನ್ನಿ.

Top 10 Cities Of Extramarital Affairs

ಹೆಚ್ಚು ಅಕ್ರಮ ಸಂಬಂಧಗಳಿರುವ ಟಾಪ್ 10 ನಗರಗಳಿವು

1. ಕಾಂಚೀಪುರಂ

ತಮಿಳುನಾಡಿನ ಈ ಪಟ್ಟಣವು ಅಕ್ರಮ ಸಂಬಂಧಗಳ ವಿಷಯದಲ್ಲಿ ಭಾರತದಲ್ಲಿಯೇ ಮೊದಲ ಸ್ಥಾನದಲ್ಲಿದೆ. ದೇವಾಲಯಗಳಿಗೆ ವಿಶ್ವಪ್ರಸಿದ್ಧವಾಗಿರುವ ಕಾಂಚೀಪುರಂ(Kanchipuram) 2025ರಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧಗಳನ್ನು ದಾಖಲಿಸಿದ ನಗರಗಳಲ್ಲಿ ಕಾಣಿಸಿಕೊಂಡಿರುವುದು ದುರದೃಷ್ಟಕರ. 2024ರಲ್ಲಿ ಕಾಂಚೀಪುರಂ 17ನೇ ಸ್ಥಾನದಲ್ಲಿತ್ತು. ದೆಹಲಿ ಮತ್ತು ಮುಂಬೈಯಂತಹ ಪ್ರಮುಖ ನಗರ ಕೇಂದ್ರಗಳನ್ನು ಮೀರಿ ಕಳ್ಳ ಸಂಬಂಧಗಳಲ್ಲಿ ಕಾಂಚೀಪುರಂ ಮೊದಲ ಸ್ಥಾನವನ್ನು ಪಡೆದಿರುವುದು ಆಘಾತ ಮೂಡಿಸಿದೆ.

2. ಸೆಂಟ್ರಲ್ ದೆಹಲಿ

2025 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧಗಳಲ್ಲಿ ತೊಡಗಿರುವವರು ಹೆಚ್ಚು ಇರುವ ನಗರಗಳಲ್ಲಿ ಮಧ್ಯ ಅಥವಾ ಸೆಂಟ್ರಲ್ ದೆಹಲಿ (Central Delhi) ಎರಡನೇ ಸ್ಥಾನದಲ್ಲಿದೆ. ರಾಜಧಾನಿಯ ಈ ಕೇಂದ್ರ ಭಾಗವು ಶ್ರೀಮಂತ ಕುಟುಂಬಗಳು ಮತ್ತು ಉನ್ನತ ಹುದ್ದೆಯಲ್ಲಿರುವವರಿಂದ ತುಂಬಿದೆ. ಆಧುನಿಕ ಜೀವನಶೈಲಿ, ಕೆಲಸದ ಒತ್ತಡ ಮತ್ತು ಹೆಚ್ಚಿದ ಸ್ವಾತಂತ್ರ್ಯ ಇಂತಹ ಸಂಬಂಧಗಳಿಗೆ ಕಾರಣವಾಗಬಹುದು.

3. ಗುರುಗ್ರಾಮ್

ದೆಹಲಿ ಎನ್‌ಸಿಆರ್ ಪ್ರದೇಶದ ಪ್ರಮುಖ ಕಾರ್ಪೊರೇಟ್ ಹಬ್ ಆಗಿರುವ ಗುರುಗ್ರಾಮ್ (Gurgaon) ಮೂರನೇ ಸ್ಥಾನದಲ್ಲಿದೆ. ಇಲ್ಲಿನ ದೀರ್ಘಾವಧಿಯ ಕೆಲಸ, ಒತ್ತಡದ ಕೆಲಸದ ಅಥವಾ ಕಾರ್ಪೊರೇಟ್ ವಾತಾವರಣವು ಈ ಪ್ರವೃತ್ತಿಗೆ ಕಾರಣವಾಗಬಹುದು. ವೈವಾಹಿಕ ಸಂಬಂಧಗಳಲ್ಲಿ ಭಾವನಾತ್ಮಕ ಅಂತರವನ್ನು ಸೃಷ್ಟಿಸಿ ಅಕ್ರಮ ಸಂಬಂಧಗಳಿಗೆ ಅವಕಾಶ ನೀಡುತ್ತಿದೆ.

4. ಗೌತಮ್ ಬುದ್ಧ ನಗರ - ನೋಯ್ಡಾ

ದೆಹಲಿ ಎನ್‌ಸಿಆರ್‌ನ ಮತ್ತೊಂದು ಮಹತ್ವದ ನಗರವಾದ ನೋಯ್ಡಾ (Gautam Buddha Nagar - Noida) ನಾಲ್ಕನೇ ಸ್ಥಾನದಲ್ಲಿದೆ. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಮದುವೆಯ ಹೊರಗೆ ಹೊಸ ಸಂಬಂಧಗಳನ್ನು ಹುಡುಕುವವರ, ವಿಶೇಷವಾಗಿ ಯುವಜನರು ಮತ್ತು ಕಾರ್ಪೊರೇಟ್ ಉದ್ಯೋಗಿಗಳಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದೆ.

5. ನೈರುತ್ಯ ದೆಹಲಿ

ದೆಹಲಿಯ ನೈರುತ್ಯ ಭಾಗವೂ (South West Delhi) ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಒಂದಾದ ನೈರುತ್ಯ ದೆಹಲಿಯೂ ದೊಡ್ಡ ಉದ್ಯೋಗಗಳು ಮತ್ತು ಹೆಚ್ಚು ವಿದ್ಯಾವಂತ ಜನರಿಂದ ತುಂಬಿದೆ. ವೇಗದ ಜೀವನಶೈಲಿ ಮತ್ತು ಆರ್ಥಿಕ ಸ್ವಾತಂತ್ರ್ಯ ಇಲ್ಲಿ ಹೆಚ್ಚುತ್ತಿರುವ ಅಕ್ರಮ ಸಂಬಂಧಗಳಿಗೆ ಕಾರಣವಾಗಬಹುದು.

6. ಡೆಹ್ರಾಡೂನ್

ಉತ್ತರಾಖಂಡದ ಸುಂದರ ನಗರವಾದ ಡೆಹ್ರಾಡೂನ್ (Dehradun) ಸಹ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇದು ಭಾರತದ ಪ್ರಮುಖ ಮತ್ತು ಶಾಂತಿಯುತ ಗಿರಿಧಾಮ ನಗರ. ಆದರೂ, ಹೆಚ್ಚಿದ ನಗರೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯವು ಇಲ್ಲಿ ವಿವಾಹೇತರ ಸಂಬಂಧ ಹೆಚ್ಚಲು ಕಾರಣವಾಗಿದೆ.

7. ಪೂರ್ವ ದೆಹಲಿ

ದೆಹಲಿಯ ಪೂರ್ವ ಭಾಗವೂ (East Delhi) ಅಕ್ರಮ ಸಂಬಂಧಗಳ ವಿಷಯದಲ್ಲಿ ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ. ಪೂರ್ವ ದೆಹಲಿ ಹೆಚ್ಚಾಗಿ ವಸತಿ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಹೊಂದಿದೆ. ಇವರು ಹೊಸ ಆಸಕ್ತಿದಾಯಕ ಸಂಬಂಧಗಳನ್ನು ಹುಡುಕಲು ಹೆಚ್ಚಾಗಿ ಅಂತರ್ಜಾಲದ ಕಡೆಗೆ ಮುಖ ಮಾಡುತ್ತಿದ್ದಾರೆ.

8. ಪುಣೆ

ಮಹಾರಾಷ್ಟ್ರದ ಪ್ರಮುಖ ಐಟಿ ಹಬ್ ಆಗಿರುವ ಪುಣೆ (Pune) ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು ಮತ್ತು ಹೊರಗಿನ ರಾಜ್ಯದವರು ಸೇರಿದ್ದಾರೆ. ಇಲ್ಲಿನ ಜನರ ಜೀವನಶೈಲಿಯ ಮೇಲೆ ಪಾಶ್ಚಾತ್ಯ ಪ್ರಭಾವ ಮತ್ತು ರಾತ್ರಿ ಜೀವನವು ಇದಕ್ಕೆ ಆಹ್ವಾನ ನೀಡುತ್ತಿದೆ.

9. ಬೆಂಗಳೂರು

ಭಾರತದ ಸಿಲಿಕಾನ್ ವ್ಯಾಲಿ, ಕರ್ನಾಟಕದ ರಾಜಧಾನಿ ಬೆಂಗಳೂರು (Bengaluru) ಕೂಡ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಇಲ್ಲಿನ ವೇಗದ ಜೀವನ, ಕಾರ್ಪೊರೇಟ್ ಸಂಸ್ಕೃತಿ ಮತ್ತು ವಲಸಿಗರ ಸಂಖ್ಯೆ ವಿವಾಹೇತರ ಸಂಬಂಧಗಳಿಗೆ ಕಾರಣವಿರಬಹುದು.

10. ಸೌತ್ ದೆಹಲಿ

ದೆಹಲಿಯ ದಕ್ಷಿಣ ಭಾಗವು (South Delhi) ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇದು ಐಷಾರಾಮಿ ಮನೆಗಳು ಸ್ವಾತಂತ್ರ್ಯ ಮತ್ತು ರಹಸ್ಯ ಗುರುತುಗಳಿಗೆ ಹೆಸರುವಾಸಿ. ಇಲ್ಲಿ ವಿವಾಹೇತರ ಸಂಬಂಧಗಳು ವೇಗವಾಗಿ ಹೆಚ್ಚಾಗುತ್ತಿರುವುದು ಆಶ್ಚರ್ಯವೇನಿಲ್ಲ.

ಒಟ್ಟಾರೆಯಾಗಿ, ಈ ಪಟ್ಟಿಯು ವಿವಾಹೇತರ ಸಂಬಂಧಗಳು ಈಗ ಕೇವಲ ದೊಡ್ಡ ನಗರಗಳು ಅಥವಾ ಮಹಾನಗರಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಚಿಕ್ಕ ಗ್ರಾಮಗಳು ಮತ್ತು ನಗರಗಳೂ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂಬ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ. ಆಧುನಿಕ ಜೀವನಶೈಲಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಹೆಚ್ಚಿದ ಬಳಕೆ ಮತ್ತು ಒತ್ತಡಗಳು ಇದಕ್ಕೆ ಕಾರಣ ಎನ್ನಲಾಗಿದೆ.

English summary

Top 10 Indian cities with the most extramarital affairs; See Bengaluru's ranking

Top 10 Indian cities with the most extramarital affairs; See Bengaluru's ranking
Story first published: Sunday, July 27, 2025, 17:30 [IST]
X
Desktop Bottom Promotion