Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದುಬಾರಿ ಟೊಮೆಟೊ: ಈ ಮೀಮ್ಸ್‌ಗಳ ನೋಡಿದರೆ ಪಕ್ಕಾ ನೀವು ನಗುವಿರಿ!
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈಗ ಟೊಮೆಟೊದ್ದೇ ಕಾಲ, ಕೆಂಪಗೆ ಕಾಣುವ ಟೊಮೆಟೊ ಈ ಹಿಂದಿಗಿಂತಲೂ ಹೆಚ್ಚು ಸುಂದರವಾಗಿ ಕಾಣುತ್ತಿದೆ, ಬಡವನ ಕೈಗೆಟುಕದ್ದೇ ಲಕ ಲಕ ಅಂತ ಹೊಳೆಯುತ್ತಿದೆ, ಚಿನ್ನವನ್ನು ಕಾಯುವಂತೆ ಟೊಮೆಟೊ ಕಾಯಬೇಕಾದ ಪರಿಸ್ಥಿತಿ ರೈತರಿಗೆ, ಟೊಮೆಟೊ ವ್ಯಾಪಾರಿಗಳಿಗೆ ಬಂದಿದೆ.
ಟೊಮೆಟೊ ಕದ್ದ ಕೇಸ್ ಈ ಹಿಂದೆ ಎಂದೂ ಕೇಳಿರಲಿಲ್ಲ, ಆದರೆ ಟೊಮೆಟೊ ಕಳ್ಳತನವಾಗಿದೆ, ಅಲ್ಲದೆ ಒಡಿಸ್ಸಾದಲ್ಲಿ ವ್ಯಾಪಾರಿಯೊಬ್ಬರು ಬೌನ್ಸರ್‌ಗಳನ್ನು ಇಟ್ಟು ಟೊಮೆಟೊ ವ್ಯಾಪಾರ ಮಾಡಿರುವ ಘಟನೆಯೂ ನಡೆದಿದೆ, ಟೊಮೆಟೊ ದುಬಾರಿಯಾದ ಬಳಿಕ ಟೊಮೆಟೊ ಕುರಿತು ಹಲವಾರು ಮೀಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ, ಒಂದೊಂದು ಮೀಮ್ಸ್ ನಿಮ್ಮ ತುಟಿಯಂಚಿನಲ್ಲಿ ನಗು ಮೂಡಿಸುವಂತಿದೆ ನೋಡಿ:
ಆ್ಯಪಲ್ ಫೋನ್ ಜೊತೆ ಟೊಮೆಟೊ ಹೋಲಿಕೆ ಮಾಡಿ ಮೀಮ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದೆ.

ಪೆಟ್ರೋಲ್ ದುಬಾರಿ ಎಂದು ಎಲ್ಲರೂ ಬೊಬ್ಬೆ ಹಾಕುತ್ತಿದ್ದರು, ಆದರೆ ಈಗ ಟೊಮೆಟೊ ಮುಂದೆ ಪೆಟ್ರೋಲ್ ಏನೂ ಅಲ್ಲ ಎಂಬ ಮೀಮ್ಸ್ ಹರಿದಾಡುತ್ತಿದೆ.
ಒಂದು ಕೆಜಿ ಟೊಮೆಟೊ ಕಮ್ಮತ್ತು ನಿಮಗೇನು ಗೊತ್ತು ರಮೇಶ್ ಬಾಬು... ಎಂಬರ್ಥದ ಈ ಮೀಮ್ಸ್ ನೋಡಿ ಸಕತ್ ಫನ್ನಿಯಾಗಿದೆ ಅಲ್ವಾ?
ಇನ್ನು ಫೇಮಸ್ ಪುಷ್ಪ ಚಿತ್ರ ಬಳಸಿ ಕೂಡ ಟೊಮೆಟೊ ಮೀಮ್ಸ್ ಮಾಡಲಾಗಿದೆ ನೋಡಿ.
ಹುಡುಗ ಏನು ಮಾಡುತ್ತಿದ್ದಾನೆ ಎಂದರೆ ಟೊಮೆಟೊ ವ್ಯಾಪಾರಿ ಎಂದರೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಹೀಗೆ ಟೊಮೆಟೊ ಕುರಿತ ಲವಾರು ಮೀಮ್ಸ್ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು ಈ ಮೀಮ್ಸ್ ನೋಡುವಾಗ ನಗು ಬಂದರೂ ಟೊಮೆಟೊ ಖರೀದಿಸಲು ಹೋದಾಗ ಕಣ್ಣಿನಲ್ಲಿ ನೀರು ಬರುವಂತಾಗಿದೆ.
ಬರೀ ಮೀಮ್ಸ್ ಅಷ್ಟೇ ಅಲ್ಲ ಟೊಮೆಟೊ ಕುರಿತ ಫನ್ನಿ ವೀಡಿಯೋಗಳು ಕೂಡ ಸಕತ್ ಸದ್ದು ಮಾಡುತ್ತಿದೆ. ಈಗ ಕೆಂಪಗೆ ಹೊಳೆಯುವ ಟೊಮೆಟೊ ಕೈಗೆಟುಕದ ನಕ್ಷತ್ರದಂತೆ ಬಡವರಿಗೆ ಭಾಸವಾಗುತ್ತಿದೆ.... ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಇದಕ್ಕೆ ಹೇಳುವುದು ಇರಬಹುದು ಅಲ್ವಾ?



Click it and Unblock the Notifications








