Latest Updates
-
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು
ಬಟ್ಟೆಯ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಪುಟ್ಟ ಕಂದನ ಕಣ್ಣಿನ ಕಲರ್..! ಯಾರು ಈ ಬಾಲಕ..?
ಮಾನವರ ಕಣ್ಣುಗಳು ಕಪ್ಪು ಬಣ್ಣದಲ್ಲಿರುವುದು ಸಾಮಾನ್ಯ. ಹಾಗೆ ವಿಶೇಷ ಪ್ರಕರಣಗಳಲ್ಲಿ ನಾವು ನೀಲಿ ಕಣ್ಣು, ಜೇನಿನಂತ ಬಣ್ಣದ ಕಣ್ಣು, ತಿಳಿ ನೇರಳೆ, ಬೆಂಕಿನ ಕಣ್ಣಿನಂತರ ರಚನೆ ಇರುವುದು ಸಹ ನೋಡಬಹುದು. ಇದು ಹಲವು ವೈದ್ಯಕೀಯ ಕಾರಣಗಳಿಂದಾಗಿ ರೂಪುಗೊಂಡ ಕಣ್ಣಿನ ಬಣ್ಣ ಆಗಿರಲಿದೆ. ಮಗು ಹುಟ್ಟಿದ ತಕ್ಷಣ ಸಂಪೂರ್ಣವಾಗಿ ಬೆಳವಣಿಗೆ ಆಗಿರುವ ಏಕೈಕ ಅಂಗ ಎಂದರೆ ಅದು ಕಣ್ಣು. ಹುಟ್ಟುವಾಗ ಹೇಗಿರುತ್ತೋ ದೊಡ್ಡವರಾದರು ಯಾವುದೇ ಬದಲಾವಣೆಯಾಗದೆ ಹಾಗೆಯೆ ಉಳಿಯುತ್ತವೆ. ಆದ್ರೆ ದೃಷ್ಟಿ ವಿಚಾರದಲ್ಲಿ ಬದಲಾಗಬಹುದು.
ಹಾಗೆ ಮಗು ಹುಟ್ಟಿದಾಗ ಇರುವ ಕಣ್ಣಿನ ಬಣ್ಣವು ಮುಂದೆ ಬಳೆದು ದೊಡ್ಡವರಾದ ಮೇಲೆಯೂ ಅದೇ ರೀತಿ ಇರಲಿದೆ. ಆದ್ರೆ ಇಲ್ಲೊಂದು ಮಗುವಿನ ಕಣ್ಣಿನ ಬಣ್ಣ ಆ ಮಗು ಹಾಕುವ ಬಟ್ಟೆಯ ಬಣ್ಣಕ್ಕೆ ಬದಲಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಹೌದು ಈ ರೀತಿಯ ವಿಚಿತ್ರ ವಿದ್ಯಮಾನವೊಂದು ನಡೆಯುತ್ತಿದೆ. ಮಗು ಯಾವ ಬಣ್ಣದ ಬಟ್ಟೆ ಧರಿಸಲಿದ್ಯೋ ಆ ಬಣ್ಣಕ್ಕೆ ಆ ಮಗುವಿನ ಕಣ್ಣು ತಿರುಗುತ್ತದೆ.

ಇದನ್ನು ಕೇಳಿದರೆ ಊಸರವಳ್ಳಿ ಎಂದು ಕರೆಯುವ ಪ್ರಾಣಿ ನಿಮಗೆ ನೆನಪಾಗಬಹುದು, ಅದು ಪರಿಸರದೊಂದಿಗೆ ಬೆರೆಯುವಾಗ ತನ್ನ ಬಣ್ಣ ಬದಲಿಸುವ ವಿಶೇಷ ಶಕ್ತಿ ಹೊಂದಿರುವಂತೆ ಇಲ್ಲಿಯೂ ಈ ಬಾಲಕನ ಕಣ್ಣಿನ ಬಣ್ಣ ಆಗಾಗ ಬಲದಾಗುತ್ತದೆ. 1.5 ವರ್ಷದ ಮಗು ಈ ಅಸಾಧಾರಣ ಶಕ್ತಿಯ ಮೂಲಕ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾನೆ.
ಈ ವಿಚಿತ್ರ ಘಟನೆ ನಡೆಯುತ್ತಿರುವುದು ಯಾವುದೋ ವಿದೇಶದಲ್ಲಿ ಅಲ್ಲ, ಬದಲಿಗೆ ಭಾರತದಲ್ಲಿಯೇ, ಉತ್ತರ ಪ್ರದೇಶದ ಬುಲಂದರ್‌ಶಹರ್ ನಲ್ಲಿ 1.5 ವರ್ಷದ ಆರ್ಶ್ ಎಂಬ ಪುಟ್ಟ ಬಾಲಕನ ಕಣ್ಣುಗಳು ಈಗ ಅಚ್ಚರಿ ಹುಟ್ಟಿಸಿವೆ. ಆತನ ಕಣ್ಣು ನೀಲಿ ಬಣ್ಣದಿಂದ ಹಿಡಿದು ಕಡು ಕೆಂಪು ಬಣ್ಣಕ್ಕೆ ತಿರುವುದನ್ನು ಕಂಡ ಜನರು ಶಾಕ್‌ಗೆ ಒಳಗಾಗಿದ್ದಾರೆ.
ಆತನ ಕಣ್ಣು ಬಣ್ಣ ಬದಲಿಸುವ ಕುರಿತು ಸುದ್ದಿಗಳು ಹೊರಬೀಳುವ ಮುನ್ನವೇ ಆತನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು ಕೂಡ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹಲವರು ಹೇಳುತ್ತಿದ್ದಾರೆ. ಹಾಗೆ ಈ ಮಗು ಈಗ ಸುತ್ತ ಮುತ್ತಲಿನ ಹಳ್ಳಿಯಲ್ಲಿ ಬಹಳ ಫೇಮಸ್ ಆಗಿದ್ದಾನೆ. ಆತನ ವಿಶೇಷ ಕಣ್ಣುಗಳ ನೋಡಲೆಂದೇ ಜನರು ಆಗಮಿಸುತ್ತಿದ್ದಾರೆ, ಹಾಗೆ ಫೋಟೋ, ವಿಡಿಯೋ ತೆಗೆದುಕೊಳ್ಳುವುದು ಮಾಡುತ್ತಿದ್ದಾರೆ.
ಆದ್ರೆ ಈ ರೀತಿ ಬಣ್ಣ ಬದಲಾಗುವ ಹಿಂದೆ ಯಾವುದೇ ಪುರಾವೆಗಳಿಲ್ಲವಂತೆ, ಹಾಗೆ ಕಣ್ಣಿನ ಬಣ್ಣ ಬದಲಾಗುವುದಿಲ್ಲವಂತೆ. ಇದು ಕಾರ್ನಿಯಲ್ ಮೇಲೆ ಬಿದ್ದ ಬೆಳಕಿನ ಬಣ್ಣ ಎಂಬುದು ಹಲವರ ವಾದವಾಗಿದೆ. ಅಂದರೆ ಆ ಬಾಲಕನ ಕಣ್ಣುಗಳು ವಿಶೇಷ ಬಣ್ಣದಲ್ಲಿವೆ, ಸಾಮಾನ್ಯರಂತೆ ಕಪ್ಪು ಬಣ್ಣದಲ್ಲಿಲ್ಲ. ಕಪ್ಪು ಬಣ್ಣದ ಕಣ್ಣುಗಳಿರುವ ಮಂದಿಯಲ್ಲಿ ಬೆಳಕನ್ನು ಹೆಚ್ಚು ಗ್ರಹಿಸುವ ಶಕ್ತಿ ಇರಲಿದೆ. ಇಲ್ಲಿ ಬಾಲಕ ಹಾಕಿರುವ ಬಟ್ಟೆಯ ಬಣ್ಣವು ಆತನ ಕಣ್ಣುಗಳಿಂದ ಪ್ರತಿಫಲಿಸುತ್ತಿದೆ. ಇದು ಕಣ್ಣಿನ ಬಣ್ಣವೇ ಬದಲಾದಂತೆ ಆಪ್ಟಿಕಲ್ ಭ್ರಮೆ ಹುಟ್ಟಿಸುತ್ತಿದೆ ಎಂಬ ವಿಶ್ಲೇಷಣೆ ನೀಡಲಾಗಿದೆ.
ಈ ಪುಟ್ಟ ಬಾಲಕನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಹಲವರು ಈ ಕುರಿತಂತೆ ತಮ್ಮ ಅಭಿಪ್ರಾಯಗಳ ಹೇಳಿದ್ದಾರೆ. ಇದು ಎಡಿಟ್ ಮಾಡಲಾದ ವಿಡಿಯೋ, ಪುಟ್ಟ ಕಂದನ ಕಣ್ಣುಗಳ ಬಣ್ಣ ಬದಲಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಒಂದು ಕುಟುಂಬದಲ್ಲಿ ಕಣ್ಣಿನ ಬಣ್ಣ ಬದಲಾಗಿರುವ ಹಲವರನ್ನು ನೋಡಬಹುದು. ಇದು ಕೂಡ ಒಂದು ಉದಾಹರಣೆ ಇರಬಹುದು, ಆದರು ಆತನ ಕಣ್ಣುಗಳು ಸುಂದರವಾಗಿವೆ ಎಂದು ಮತ್ತೊಬ್ಬರು ವಿವರಿಸಿದ್ದಾರೆ.



Click it and Unblock the Notifications