Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈರಲ್ ಆದ ಮೂರು, ಒಂದೊಂದು ಮದುವೆಯೂ ವಿಭಿನ್ನ ಕಾರಣಕ್ಕೆ ಗಮನ ಸೆಳೆದಿದೆ
ಎಲ್ಲರಂತೆ ನಾವ್ಯಾಕೆ ನಮ್ಮ ಮದುವೆ ಮಾಡಬೇಕು, ನಮ್ಮ ಮದುವೆಯಲ್ಲಿ ಏನಾದರೂ ವಿಶೇಷತೆ ಇರಬೇಕು, ನಮ್ಮ ಬದುವೆಗೆ ಬಂದಿದ್ದವರು ಇಂಥ ಮದುವೆ ನೋಡಿದ್ದೇ ಇರಲಿಲ್ಲ ಎಂದು ಹಾಡಿ ಹೊಗಳಬೇಕು ಎಂದು ಈಗ ತುಂಬಾನೇ ಕ್ರಿಯೇಟಿವ್ ಆಗಿ ಆಲೋಚಿಸಿ ಮದುವೆ ಅರೇಂಜ್‌ಮೆಂಟ್ ಮಾಡ್ತಾರೆ. ತಮಿಳಿನಾಡಿನಲ್ಲಿ ತೆಂಗಿನಕಾಯಿ ವ್ಯಾಪಾರಿ ಮದುವೆಯಲ್ಲಿ ಊಟ ಹಾಲ್ ಡಿಸೈನ್ ಇದೀಗ ತುಂಬಾನೇ ವೈರಲ್ ಆಗಿದೆ.

ಆತನ ವೃತ್ತಿಗೆ ಸಂಬಂಧಿಸಿದಂತೆ ಮದುವೆ ಥೀಮ್
ಆತ ತೆಂಗಿನಕಾಯಿ ವ್ಯಾಪಾರಿ, ಅಲ್ಲಿ ಕೂರುವ ವ್ಯವಸ್ಥೆ ಕೂಡ ತೆಂಗಿನಕಾಯಿ ರೀತಿಯಿದೆ, ಜುಟ್ಟು ಇರುವ ತೆಂಗಿನ ಕಾಯಿ ಒಡೆದಾಗ ಯಾವ ಶೇಪ್ ಬರುತ್ತದೋ ಅದೇ ರೀತಿಯ ಶೇಪ್‌ನ ವಿನ್ಯಾಸ, ಊಟದ ಟೇಬಲ್ ಕೂಡ ತೆಂಗಿನಕಾಯಿ ಕತ್ತರಿಸಿಟ್ಟಾಗ ಹೇಗೆ ಕಂಡು ಬರುತ್ತದೋ ಅದೇ ರೀತಿ ಇದೆ, ಈ ಥೀಮ್ ಈಗ ಸಕತ್ ವೈರಲ್ ಆಗಿದೆ. ಇನ್ನು ಊಟದ ಮೆನು ಕೂಡ ಸೂಪರ್ ಆಗಿರಬಹುದು.
तामिलनाडु में नारियल कें व्यापारी कें यहाँ शादी का आनंद 😄😄😅😅 Enjoy Coconut Dealer marriage function in Tamilnadu 😅 pic.twitter.com/QM9Y2PwWLG
— Madhu S 🇮🇳 - (@mbmclass1990) November 28, 2024
ಊಟದ ಹಾಲ್ ಡೆಕೋರೇಷನ್ ಮಾಡುವವರು ತುಂಬಾ ಕಡಿಮೆ
ಸಾಮಾನ್ಯವಾಗಿ ಮದುವೆ ಮಂಟಪ ತುಂಬಾನೇ ಡೆಕೋರೇಟ್ ಮಾಡುತ್ತಾರೆ, ಊಟದ ಹಾಲ್‌ಗೆ ಲೈಟಿಂಗ್ಸ, ಟೇಬಲ್ ಕ್ಲೋತ್ ಅಂತ ಹಾಕಿಸಬಹುದು, ಆದರೆ ಇಡೀ ಊಟದ ಹಾಲ್ ಅನ್ನು ವಿಭಿನ್ನ ಥೀಮ್‌ನಲ್ಲಿ ಅಲಂಕರಿಸಿರುವುದು ನೋಡುವುದು ಅಪರೂಪ, ಆದರೆಈ ಮದುವೆಯಲ್ಲಿ ಮಂಟಪಕ್ಕಿಂತ ಊಟದ ಹಾಲ್ ವಿಭಿನ್ನ ವಿನ್ಯಾಸದಿಂದಾಗಿ ಗಮನ ಸೆಳೆದಿದೆ. ಥೀಮ್ ಸಕತ್ ಆಗಿದೆ ಅಲ್ವಾ?
Bro has his own priorities pic.twitter.com/CEVJnfPpvb
— Muskan (@Muskan_nnn) November 27, 2024
ಮದುವೆ ಮಂಟಪದಲ್ಲಿ ಲುಡೋ ಆಟದಲ್ಲಿ ಬ್ಯುಸಿಯಾದ ಮಧುಮಗ
ಮತ್ತೊಂದು ಮದುವೆ ವೀಡಿಯೋ ಕೂಡ ವೈರಲ್ ಆಗುತ್ತಿದೆ, ಅದರಲ್ಲಿ ಹುಡುಗ ಮೊಬೈಲ್ ಹಿಂದೆ ಇಟ್ಟು ಲುಡೋ ಆಡ್ತಾ ಇದ್ದಾನೆ, ಮದುವೆಯೆಂದರೆ ಶಾಸ್ತ್ರಗಳು, ಮದುವೆಗೆ ಬರುವ ಅತಿಥಿಗಳನ್ನು ಮಾತನಾಡಿಸುವುದು ಅಂತ ಬ್ಯುಸಿಯಾಗಿರುತ್ತಾರೆ, ಆದರೆ ಅದೆಲ್ಲವೂ ಬಿಟ್ಟು ಲುಡೋ ಆಟದಲ್ಲಿ ಬ್ಯುಸಿಯಾಗಿದ್ದಾರೆ ಎಂದರೆ Bro has his own priorities ಎಂಬ ಕ್ಯಾಪ್ಷನ್ ಅಡಿಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಿರುವುದು ಸರಿಯಾಗಿಯೇ ಇದೆ.
ಪುಣ್ಯಕ್ಕೆ ಮದುಮಗಳು ಗಮನಿಸಿಲ್ಲ ಕಾಣುತ್ತೆ
ಎಷ್ಟೋ ಮದುವೆಗಳು ಚಿಕ್ಕ ಕಾರಣಕ್ಕೆ ಮುರಿದು ಹೋಗುತ್ತಿದೆ, ಅಂಥದ್ದರಲ್ಲಿ ಮದುವೆ ದಿನ ಒಂದಿಷ್ಟೂ ಸೀರಿಯಸ್‌ನೆಸ್ ಇಲ್ಲದೆ ಲುಡೋ ಆಡ್ತಾ ಕೂತರೆ ಯಾರಿಗಾದರೂ ಪಿತ್ತ ನೆತ್ತಿಗೇರುತ್ತೆ. ಲುಡೋ ಆಡ್ತಾ ಕೂತಿರುವ ಈತನಿಗೆ ಮದುವೆಯಾದರು ಯಾಕೆ ಮಾಡ್ತಾ ಇದ್ದಾರೋ ಎಂದನಿಸದೆ ಇರಲ್ಲ.
ಮದುವೆಯಲ್ಲಿ ಅಪ್ಪ ಮಗನ ಕೂಲ್ ಡ್ಯಾನ್ಸ್
ಇದಂತೂ ತುಂಬಾ ಸೂಪರ್ ಆಗಿದೆ, ಅಪ್ಪನ ಮಗನ ಡ್ಯಾನ್ಸ್ ತುಂಬಾನೇ ವೈರಲ್ ಆಗಿದೆ, ಅದರಲ್ಲಿಯೂ ಅಪ್ಪನ ಎನರ್ಜಿ ಬೇರೆ ಲೆವರ್, ಅಷ್ಟೊಂದು ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಂಕಲ್ ಸ್ಟೋಲ್ ದಿ ಶೋ ಮ್ಯಾನ್ ಎಂದು ಒಬ್ಬರು ಕಮೆಂಟ್ ಮಾಡಿದರೆ, ಈ ವಯಸ್ಸಿನಲ್ಲಿ ಅಂಕಲ್ ಎಷ್ಟೊಂದು ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಮತ್ತೊಬ್ಬ ಯುವಕ ಕಮೆಂಟ್ ಮಾಡಿದ್ದಾರೆ. ಕಪ್ಪು ಬಣ್ಣದ ಮ್ಯಾಚಿಂಗ್ ಕುರ್ತಾ ಧರಿಸಿ ಇವರು ಹಾಕಿರುವ ಡ್ಯಾನ್ಸ್ ಸ್ಟೆಪ್ಸ್ ತುಂಬಾ ಸೂಪರ್ ಆಗಿದೆ.



Click it and Unblock the Notifications