Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಯುಎಸ್‌ಗೆ ಟಿಕ್‌ಟಾಕ್ ವಾಪಸ್: ಒಂದೇ ದಿನ ಬ್ಯಾನ್ ಆಗಿದ್ದೇಕೆ?
ಟಿಕ್‌ಟಾಕ್ ಎಂಬ ದೈತ್ಯ ಸೋಶಿಯಲ್ ಮೀಡಿಯಾ ಶಾರ್ಟ್ ವಿಡಿಯೋ ಶೇರಿಂಗ್ ಆಪ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಭಾರತದ ಮಾರ್ಕೆಟ್‌ನಲ್ಲಿ ಹಿಂದೆ ತನ್ನ ಬಹುದೊಡ್ಡ ಸಾಮ್ರಾಜ್ಯ ಕಟ್ಟಿದ್ದ ಚೀನಾದ ಸಂಸ್ಥೆ ಇದು. ಆಂತರಿಕ ಭದ್ರತೆಯ ಅಪಾಯ ಹಿನ್ನೆಲೆ ಭಾರತದಲ್ಲಿ ನಿಷೇಧಕ್ಕೊಳಗಾಗಿತ್ತು. ಆದ್ರೆ ಅಮೆರಿಕದಲ್ಲೂ ನಿಷೇಧದ ಬೆಂಕಿಯೊಳಗೆ ಬಿದ್ದು ಮತ್ತೆ ಎದ್ದು ಬಂದಿದೆ.
ಡೊನಾಲ್ಡ್ ಟ್ರಂಪ್ ಚೀನಾದ ಈ ಟಿಕ್‌ಟಾಕ್ ವಿರುದ್ಧ ಕಿಡಿಕಾರಿದ್ದರಲ್ಲದೆ ಬ್ಯಾನ್ ಮಾಡುವುದಾಗಿ ಹೇಳಿದ್ದರು. ಅಲ್ಲದೆ ನಿನ್ನೆಯಿಂದ ಹಲವರು ಎಚ್ಚರಿಕೆಯ ಸಂದೇಶವನ್ನೂ ಸಹ ಪಡೆದಿದ್ದರು. ಅಲ್ಲದೆ ಟಿಕ್‌ಟಾಕ್ ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು ಕೂಡ. ಈ ಪ್ರಕ್ರಿಯೆ ನಡುವೆ ಟಿಕ್‌ಟಾಕ್ ಯುಎಸ್‌ನಲ್ಲಿ ಬ್ಯಾನ್ ಆಯಿತು ಎಂದೇ ಭಾವಿಸಲಾಗಿತ್ತು.

ಆದರೆ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಹೊತ್ತಿಗೆ ಮತ್ತೆ ಕಾರ್ಯಾರಂಭ ಮಾಡಿದೆ. ಇದು ಅಮೆರಿಕದ ಜನರಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಚ್ಚರಿ ತಂದಿದೆ. ಕೇವಲ 24 ಗಂಟೆಯೊಳಗೆ ಟಿಕ್‌ಟಾಕ್ ಮತ್ತೆ ಕಾರ್ಯಾರಂಭ ಮಾಡಿದ್ದು ಹೇಗೆ? ಇದಕ್ಕೆ ಕಾರಣವೇನು ಎಂಬುದು ದೊಡ್ಡ ಪ್ರಶ್ನೆಯಾಗಿ ಎಲ್ಲರಿಗೂ ಕಾಡುತ್ತಿದೆ.
ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್ ಮಾಡುವ ಕಾನೂನು ಜಾರಿಯಾಗಲಿದೆ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೆ ಮತ್ತೆ ಅಪ್ಲಿಕೇಶನ್ ಕೆಲಸ ಮಾಡಲು ಆರಂಭಿಸಿದೆ. ಕೆಲ ಕಾಲ ಈ ಅಪ್ಲಿಕೇಶನ್ ಸ್ಥಗಿತಗೊಂಡಿದ್ದರು ಯಾವುದೇ ಹಾನಿಗೆ ಒಳಗಾಗದೆ ಮತ್ತೆ ಎಂದಿನಂತೆ ಬಳಕೆದಾರರಿಗೆ ಲಭ್ಯವಾಗಿದೆ.
ಶನಿವಾರ ರಾತ್ರಿ ಟಿಕ್‌ಟಾಕ್ ಬಳಕೆದಾರರಿಗೆ ಅಪ್ಲಿಕೇಶನ್ ನಿಷೇಧ ಮಾಡುತ್ತಿರುವ ಕುರಿತಂತೆ ಸಂದೇಶ ಬಂದಿದೆ. ಆದರೆ ಇದಕ್ಕೂ ಮೊಲದೇ ಯುಎಸ್ ಮೂಲದ ವ್ಯಕ್ತಿಗಳಿಗೆ ಟಿಕ್‌ಟಾಕ್ ಖರೀದಿಸುವಂತೆ ಹಾಗೂ ಸಂಪೂರ್ಣ ಮಾಲಿಕತ್ವ ನೀಡಲು ಸಂಸ್ಥೆ ಮುಂದಾಗಿತ್ತು ಎಂಬ ಮಾತುಗಳು ಸಹ ಕೇಳಿಬಂದಿದೆ. ಟಿಕ್‌ಟಾಕ್ ಖರೀದಿಯಲ್ಲಿ ಉದ್ಯಮಿ ಎಲಾನ್ ಮಸ್ಕ್ ಹಾಗೂ ಖ್ಯಾತ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಹೆಸರು ಕೂಡ ಕೇಳಿಬಂದಿತ್ತು.
ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ದೃಢವಾಗಿರಲಿಲ್ಲ. ಆದ್ರೆ ಎಲಾನ್ ಮಸ್ಕ್ ಟಿಕ್‌ಟಾಕ್ ಖರೀದಿಗೆ ಆಸಕ್ತಿ ಹೊಂದಿದ್ದರು ಎಂದೇ ಹೇಳಲಾಗಿತ್ತು. ಇದಕ್ಕಾಗಿ ಜನವರಿ 13ರ ವರೆಗೆ ಟಿಕ್‌ಟಾಕ್ ಸಂಸ್ಥಗೆ ಕಾಲಾವಕಾಶ ನೀಡಲಾಗಿತ್ತು. ಆದ್ರೆ ಅಪ್ಲಿಕೇಶನ್ ಖರೀದಿಯಲ್ಲಿ ಯಾವುದೇ ವ್ಯವಹಾರ ನಡೆದಿರಲಿಲ್ಲ.
ಶನಿವಾರ ಬಳಕೆದಾರರು ನಿಷೇಧದ ಸಂದೇಶ ಸ್ವೀಕರಿಸಿದ ಬಳಿಕ ಎಲ್ಲರಿಗೂ ಅಚ್ಚರಿಯಾಗಿತ್ತು. ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್ ಆಗುವುದು ಖಚಿತ ಎಂದೇ ಭಾವಿಸಲಾಗಿತ್ತು, ಟಿಕ್‌ಟಾಕ್ ಕಡೆಯಿಂದ ಕಡೆಯ ಸಂದೇಶ ಎಂಬುದಾಗಿ ಇದನ್ನು ಬಳಕೆದಾರರಿಗೆ ನೀಡಲಾಗಿತ್ತು. ಆದ್ರೆ ಇಂದು ಮತ್ತೆ ಕಾರ್ಯಾರಂಭದ ಸಂದೇಶ ಎಲ್ಲಾ ಬಳಕೆದಾರರಿಗೂ ಬಂದಿದೆ.
ಪಿಆರ್ ಸ್ಟಂಟ್ ಮಾಡಿದ್ರಾ ಟ್ರಂಪ್
ಟಿಕ್ ಟಾಕ್ ಬ್ಯಾನ್ ಸಂಬಂಧ ಮೊದಲು ಟ್ರಂಪ್ ಉಲ್ಲೇಖಿಸಿದ್ದರು. ಹಾಗೆ ಪದಗ್ರಹಣದ ಹಿಂದಿನ ದಿನದ ವರೆಗೂ ಅವರು ಚೀನಾ ಸಂಸ್ಥೆಗಳಿಗೆ ನಮ್ಮ ವ್ಯವಹಾರಗಳ ನೀಡಬಾರದು. ಚೀನಾದಿಂದ ನಮ್ಮ ಉದ್ಯೋಗಗಳ ಉಳಿಸಿಕೊಳ್ಳಬೇಕು ಎಂದಿದ್ದರು. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ನಮಗೆ ಯುವ ಮತಗಳು ಬೀಳಬೇಕಾದರೆ ಟಿಕ್‌ಟಾಕ್ ಸಹ ಕಾರಣ ಎಂಬುದಾಗಿ ಅವರು ಹೇಳಿದ್ದರು. ಹೀಗಾಗಿ ನನಗೆ ಟಿಕ್‌ಟಾಕ್ ಇಷ್ಟ ಎಂದು ಕೂಡ ಭಾಷಣದ ವೇಳೆ ಹೇಳಿದ್ದರು.
ಇದಾದ ಮಾರನೆ ದಿನವೇ ಮತ್ತೆ ಟಿಕ್‌ಟಾಕ್ ಕಾರ್ಯಾರಂಭ ಮಾಡಿದೆ. ಇದೆಲ್ಲಾ ಟ್ರಂಪ್ ಅವರು ಮಾಡಿರುವ ಪಿಆರ್ ಸ್ಟಂಟ್ ಅಷ್ಟೇ ಎಂದು ಈಗ ಚರ್ಚೆ ಆರಂಭಗೊಂಡಿದೆ. ಟ್ರಂಪ್ ಯುಎಸ್ ಜನರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಾಗೆ ಟ್ರಂಪ್ ಅವರ ಈ ನಿರ್ಧಾರದ ಹಿಂದೆ ಬೇರೆ ಏನಾದರು ಕಾರಣ ಇರಬಹುದು ಎಂಬ ಚರ್ಚೆ ಬಹಳವಾಗಿ ಕೇಳಿಬರುತ್ತಿದೆ.



Click it and Unblock the Notifications
