Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಂಗಾರದ ಕೋರೆ ಹಲ್ಲು ಹಾಕಿಸಿಕೊಂಡ ಬೆಂಗಾಲ್ ಟೈಗರ್..! ಯಾಕೆ ಗೊತ್ತಾ?
ಜನ ಹುಲಿ ಉಗುರು, ಹಲ್ಲು, ಬಳಸಿ ಬಂಗಾರದಲ್ಲಿ ಆಭರಣ ಮಾಡಿಸಿ ಹಾಕಿಕೊಂಡು ಬಳಿಕ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾದ ಪ್ರಕರಣಗಳನ್ನು ನಾವು ನೋಡಿದ್ದೇವೆ. ಇದಾಗಿ ಈಗ ಸಿಂಥೆಟಿಕ್ ಉಗುರು ಹಾಗೂ ಹಲ್ಲುಗಳ ಬಳಸಿ ಚಿನ್ನದ ಆಭರಣ ತಯಾರಿಸಲಾಗುತ್ತದೆ. ಅಲ್ಲದೆ ಅವುಗಳ ಖರೀದಿಸುವ ಮಂದಿಯನ್ನೂ ಸಹ ನಾವು ನೋಡಿದ್ದೇವೆ.
ಆದರೆ ಇಲ್ಲೊಂದು ಹುಲಿ ಬಂಗಾರದ ಹಲ್ಲು ಹಾಕಿಸಿಕೊಂಡಿದೆ. ಅಚ್ಚರಿ ಆದರೂ ಇದು ಸತ್ಯ, ಅದರ ಒಂದು ಹಲ್ಲು ಶುದ್ಧ ಬಂಗಾರದಿಂದ ಮಾಡಲ್ಪಟ್ಟಿದೆ. ಅದೇನು ಆಟಿಕೆ ಹುಲಿಯಲ್ಲ, ಮಾಂಸಹಾರಿ ಪ್ರಾಣಿ ಬೆಂಗಾಲ್ ಟೈಗರ್. ಹಾಗಾದ್ರೆ ಅದಕ್ಕೆ ಬಂಗಾರದ ಹಲ್ಲು ಮಾಡಿಸಿದ್ದೇಕೆ? ಈ ಹುಲಿ ಎಲ್ಲಿದೆ? ಎಂಬ ಅಚ್ಚರಿಯ ಮಾಹಿತಿ ಇಲ್ಲಿದೆ ನೋಡಿ.

(ಫೋಟೋ ಕೃಪೆ-@BineyKoby)
ಮೇಲಿರುವ ಈ ಹುಲಿಯ ಚಿತ್ರವೊಮ್ಮೆ ಗಮನವಿಟ್ಟು ನೋಡಿ. ಆ ಚಿತ್ರದಲ್ಲಿ ಒಂದು ಹಲ್ಲು ಬಂಗಾರದಿಂದ ಮಾಡಲ್ಪಟ್ಟಿದೆ. ನೀವು ಬೇರೆ ಯಾವ ಹುಲಿಯ ಹಲ್ಲು ಬಂಗಾರದಿಂದ ಮಾಡಿದ್ದನ್ನು ನೋಡಲು ಸಾಧ್ಯವಿಲ್ಲ. ಹುಲಿ ಮಾತ್ರ ಏಕೆ ಯಾವ ಪ್ರಾಣಿಯ ಹಲ್ಲು ಸಹ ಬಂಗಾರದಿಂದ ಇರಲು ಸಾಧ್ಯವಿಲ್ಲ.
ಈ ಹುಲಿ ಜರ್ಮನಿಯ ಆಶ್ರಯಧಾಮದಲ್ಲಿದೆ. ಇದು ಬೆಂಗಾಲ್ ಟೈಗರ್ ಜಾತಿಗೆ ಸೇರಿರುವ ಅಪರೂಪದ ಹುಲಿಯಾಗಿದೆ. ಆದರೆ ಅದರ ಕೋರೆ ಹಲ್ಲು ಮಾತ್ರ ಬಂಗಾರದಿಂದ ಕೂಡಿದೆ. ಸುಮಾರು 9 ವರ್ಷದ ಈ ಹುಲಿ 60 ಕೆ,ಜಿ ತೂಕವಿದ್ದ ಈ ಹುಲಿ ಕಾದಾಟದಲ್ಲಿ ತನ್ನ ಹಲ್ಲು ಕಳೆದುಕೊಂಡಿಲ್ಲ. ಬದಲಾಗಿ ತನ್ನ ಆಟಿಕೆಯನ್ನು ಅಗೆಯುವಾಗ ಸಣ್ಣ ಮಟ್ಟದ ಪೆಟ್ಟು ಬಿದ್ದ ಕಾರಣ ಹಲ್ಲು ಮುರಿದಿತ್ತು. ಇದಾದ ಬಳಿಕ ಅತೀಯಾದ ನೋವಿನಿಂದ ಹುಲಿ ಬಳಲಿತ್ತು.
ಕಾರಾ ಎಂದು ಕರೆಯಲ್ಪಡುವ ಈ ಹೆಣ್ಣು ಹುಲಿಯು 2013 ರಲ್ಲಿ ಇಟಲಿಯಲ್ಲಿ ಅಕ್ರಮ ಸೆರೆಯಿಂದ ರಕ್ಷಿಸಲಾಯಿತು ಮತ್ತು 2015ರಲ್ಲಿ ಜರ್ಮನಿಗೆ ಕರೆತರಲಾಗಿತ್ತು, ಬಳಿಕ ಅಲ್ಲಿಂದ ಮಾಸ್ವೀಲರ್ ಪಟ್ಟಣದಲ್ಲಿರುವ ಹುಲಿ ಆಶ್ರಯ ತಾಣಕ್ಕೆ ತರಲಾಗಿತ್ತು. ಆರಂಭದಲ್ಲಿ ಅದಕ್ಕೆ ಸಿಲ್ವರ್ ಹಲ್ಲನ್ನು ಹಾಕಲು ನಿರ್ಧರಿಸಲಾಗಿತ್ತು. ಬಳಿಕ ಚಿನ್ನದ ಹಲ್ಲು ಹಾಕುವಂತೆ ಮಾಡಲಾಗಿತ್ತು.
ದಂತವೈದ್ಯ ಡ್ಯಾನಿಶ್ ಅವರ ತಂಡವು ಈ ಚಿನ್ನದ ಹಲ್ಲನ್ನು ಅಳವಡಿಸಿಲು ಎರಡು ವಾರಗಳ ಕಾಲ ಶ್ರಮಿಸಿದ್ದರು. ಅದರ ಎಕ್ಸ್‌ರೇ ಇಂದ ಹಿಡಿದು ಹಲ್ಲಿನ ರಚನೆಯಲ್ಲೂ ವೈದ್ಯಕೀಯ ತಂಡ ಶ್ರಮಿಸಿದೆ. ಬಳಿಕ ಹುಲಿಗೆ ಅರವಳಿಕೆ ನೀಡಿ ಬರೋಬ್ಬರಿ 4 ಗಂಟೆಗಳ ಕಾರ್ಯಾಚರಣೆ ಬಳಿಕ ಹಲ್ಲು ಜೋಡಣೆ ಯಶಸ್ವಿಯಾಗಿತ್ತು.
ಚಿನ್ನದ ಹಲ್ಲು ಪಡೆದಿದ್ದ ಹುಲಿ ಆರಂಭದಲ್ಲಿ ನೋವಿಗೆ ಒಳಗಾಗಿದೆ. ಈ ವೇಳೆ ಯಾವ ಆಹಾರವನ್ನೂ ಸೇವಿಸದೆ ಅಲೆದಾಡಿತ್ತು. ಬಳಿಕ ನಿಧಾನವಾಗಿ ಅದಕ್ಕೆ ದ್ರವ ರೂಪದ ಆಹಾರ ಹಾಗೂ ಮೂಳೆಗಳೆ ಇಲ್ಲದ ಮಾಂಸ ನೀಡಲಾಗಿತ್ತು. ಬಳಿಕ ನಿಧಾನವಾಗಿ ಅದು ಚಿನ್ನದ ಹಲ್ಲಿಗೆ ಹೊಂದಿಕೊಂಡಿತು.
ಈಗ ಈ ಹುಲಿ ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿಯಾಗಿದೆ. ಅದರ ಬಂಗಾರದ ಹಲ್ಲು ಆಕರ್ಷಣೆಯ ಕೇಂದ್ರ ಬಿಂದಾಗಿದೆ. ಕಾರಾ ಸಹ ತನ್ನ ಬಂಗಾರದ ಹಲ್ಲಿನಿಂದ ಹೆಮ್ಮೆ ಪಡುತ್ತಿದೆ. ಸದ್ಯ ಈ ಹುಲಿ ನೋಡಲು ದೂರದ ಸ್ಥಳಗಳಿಂದ ಪ್ರವಾಸಿಗರು ಆಗಮಿಸುತ್ತಾರೆ, ಆದರೆ ಕೆಲವೊಮ್ಮೆ ಹುಲಿ ತನ್ನ ಬಾಯಿ ತೆರೆಯದೆ ಎಲ್ಲರಿಗೂ ನಿರಾಸೆ ಮೂಡಿಸುತ್ತದೆ. ಇನ್ನು ಕೆಲವೊಮ್ಮೆ ತನ್ನ ಹೊಳೆಯುವ ಬಂಗಾರದ ಕೋರೆ ಹಲ್ಲನ್ನು ಪ್ರದರ್ಶಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತೆ.



Click it and Unblock the Notifications
