Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರೋಹಿತ್ ಫೋಟೋದಲ್ಲಿ ಅಚ್ಚರಿ ಮೂಡಿಸಿದ 3ನೇ ಕೈ.! ಇದರ ರಹಸ್ಯ ನಾವು ಹೇಳುತ್ತೇವೆ ನೋಡಿ!
ಇತ್ತೀಚಿಗೆ ಭಾರತ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ಗೆದ್ದು ಭಾರತಕ್ಕೆ ವಾಪಾಸು ಬಂದಾಗ ಭರ್ಜರಿ ಸ್ವಾಗತ ಕಾದಿತ್ತು. ಇದಾಗಿ ವಾರಗಳು ಕಳೆದರೂ ಕೂಡ ಇಂದಿಗೂ ಭಾರತದ ಆಟಗಾರರಿಗೆ ಪ್ರಶಂಸೆಗಳು, ಸನ್ಮಾನ ನಡೆಯುತ್ತಲೇ ಇದೆ. ಆದ್ರೆ ಈಗ ನಾಯಕ ರೋಹಿತ್ ಶರ್ಮಾ ಅವರ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು ರೋಹಿತ್ ಶರ್ಮಾ ಅವರ ಫೋಟೋದಲ್ಲ ಮೂರನೇ ಕೈಯೊಂದು ಕಾಣಿಸಿಕೊಂಡು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮೂರನೇ ಕೈ'ಯ ಕುತೂಹಲಕಾರಿ ಪ್ರಕರಣ ಈಗ ಸಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಯೋಗೇಶ್ ಪಟೇಲ್ ಅವರು ರೋಹಿತ್‌ನ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅವರಿಗೆ ಹಿಂದಿನ ದಿನದಲ್ಲಿ ವಿದ್ಯಾರ್ಥಿವೇತನವನ್ನು ನೀಡಿದರು.

ಸದ್ಯ ಈ ಫೋಟೋದಲ್ಲಿರುವುದು ಸಹ ಯೋಗೇಶ್ ಪಟೇಲ್ ಆಗಿದ್ದಾರೆ. ಅದರೆ ರೋಹಿತ್ ಶರ್ಮಾ ಅವರ ಭುಜದ ಮೇಲೆ 3ನೇ ಕೈ ಇರುವುದು ಅಚ್ಚರಿ ಜೊತೆ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಫೋಟೋದಲ್ಲಿ ಇಬ್ಬರೇ ಇದ್ದು ಇಬ್ಬರ ಕೈಗಳು ನಮಗೆ ಕಾಣಿಸುತ್ತಿವೆ. ಆದರೆ ರೋಹಿತ್ ಭುಜದ ಮೇಲಿರುವ ಕೈ ಯಾರದ್ದು, ಅದು ಹೇಗೆ ಕೈ ಮಾತ್ರ ಕಾಣಿಸುತ್ತಿದೆ ಎಂಬುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಫೋಟೋ ಗಮನಿಸಿದ ಮಂದಿ ಶಾಕ್ ಆಗಿರುವ ಜೊತೆಗೆ ಕಮೆಂಟ್‌ಗಳ ಮಳೆ ಹರಿಸಿದ್ದಾರೆ. ಕೆಲವರು ಈ ಫೋಟೋ ಹೇಗೆ ತೆಗೆಯಲಾಗಿದೆ. ಈ ಕೈ ಯಾರದ್ದು ಎಂದು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಮತ್ತೆ ಕೆಲವರು ಈ ಫೋಟೋವನ್ನು ನೋಡಿ ಇದು ಎಡಿಟ್ ಮಾಡಲಾದ ಫೋಟೋ ಆಗಿದೆ, ಮೂರು ಜನರ ಫೋಟೋವನ್ನು ಕತ್ತರಿಸಿ ಇಬ್ಬರೇ ಇರುವಂತೆ ತೋರಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಮತ್ತೆ ಕೆಲವರು ಇದು AI ತಂತ್ರಜ್ಞಾನದ ಮೂಲಕ ತೆಗೆಯಲಾದ, ಎಡಿಟ್ ಮಾಡಲಾದ ಫೋಟೋ ಆಗಿದೆ ಎಂದು ವಾದ ಮಾಡುತ್ತಿದ್ದಾರೆ. ಆದರೆ ಯಾರಿಗೂ ನಿರ್ಧಿಷ್ಟ ಉತ್ತರ ಸಿಕ್ಕಂತೆ ಕಾಣುತ್ತಿಲ್ಲ. ಆದರೆ ನಾವು ಈ ಫೋಟೊದ ಅಸಲಿಯತ್ತೇನು ಎಂಬುದನ್ನು ವಿವರಿಸುತ್ತೇವೆ ನೋಡಿ.
ಈ ಫೋಟೋದ ಗುಟ್ಟೇನು?
ಇದು ನಾವು ನೀವು ತೆಗೆಯುವ ಸಾಮಾನ್ಯ ಚಿತ್ರವೇ ಆಗಿದೆ. ಈ ಫೋಟೋವನ್ನು AI ಸಹಾಯದಿಂದಲೇ ಕತ್ತರಿಸಲಾಗಿದೆ. ಹೌದು ಈ ಫೋಟೋದಲ್ಲಿ ಮೂವರು ಜನರಿದ್ದರು. ಆರೆ ಎಐ ಸಹಾಯದಿಂದಾಗಿ ಫೋಟೋ ಹಾಳಾಗದಂತೆ ಮೂರನೇ ವ್ಯಕ್ತಿಯನ್ನು ಫೋಟೋದಿಂದ ತೆಗೆದು ಹಾಕಲಾಗಿದೆ. ಆದರೆ ಮೂರನೇ ವ್ಯಕ್ತಿಯ ಕೈ ಮಾತ್ರ ರೋಹಿತ್ ಭುಜದ ಮೇಲೆ ಉಳಿದುಬಿಟ್ಟಿದೆ.
ಇದನ್ನು ನಾವು ಫೋಟೋದ ಕೊನೆಯಲ್ಲಿ ಎಐ ಇಂದ ರಚಿಸಲಾಗಿದೆ ಎಂಬುದಕ್ಕೆ ಪುರಾವೇ ಎಂಬಂತೆ ಲೋಗೋ ಇರುವುದನ್ನು ನಾವು ಗಮನಿಸಬಹುದು. ಇದನ್ನು ಕೆಲವರು ಗಮನಿಸಿದ್ದಾರೆ. ಆದರೆ ಮತ್ತೆ ಕೆಲವರಿಗೆ ಈ ಫೋಟೋ ಹಿಂದಿರುವ ಕುತೂಹಲ ಕಡಿಮೆ ಆಗಿಯೇ ಇಲ್ಲ. ಹೀಗಾಗಿ ಅವರು ಎಲ್ಲಾ ಕಡೆಗಳಲ್ಲೂ ಈ ಫೋಟೋವನ್ನ ಹಂಚಿಕೊಳ್ಳುತ್ತಿದ್ದಾರೆ.
ಜೊತೆಗೆ ಈ ಎಡಿಟ್ ಮಾಡಲಾದ ಫೋಟೋವನ್ನ ಸ್ವತಃ ಯೋಗೇಶ್ ಪಟೇಲ್ ಅವರೇ ಹಂಚಿಕೊಂಡಿದ್ದಾರೆ. ಅವರ ಸ್ಮಾರ್ಟ್ ಫೋನ್ ಮೂಲಕವೇ ಇದನ್ನು ಎಡಿಟ್ ಮಾಡಲಾಗಿದೆ. ಈ ಎಐ ತಂತ್ರಜ್ಞಾನ ಎಷ್ಟು ನಿಖರವಾಗಿ ಈ ಕೆಲಸಗಳ ಮಾಡುತ್ತೆ ಅಂದ್ರೆ ಇದನ್ನು ಎಡಿಟ್ ಮಾಡಲಾಗಿದೆ ಎಂದು ಕಂಡುಹಿಡಿಯುವುದು ಬಹಳ ಕಷ್ಟವಾಗುತ್ತದೆ. ಆದರೆ ಎಐನಲ್ಲಿ ವ್ಯಕ್ತಿಯ ಕೈ ಗುರುತನ್ನು ತೆಗೆಯಲು ಸಾಧ್ಯವಾಗಿಲ್ಲ. ಏಕೆಂದರೆ ಅದು ಎಐ ತಂತ್ರಜ್ಞಾನದ ಕೆಲಸದಿಂದ ಹೊರಗಿರುವ ಅಂಶವಾಗಿದೆ. ಹೀಗಾಗಿ ಇಲ್ಲಿ ಮೂರನೇ ವ್ಯಕ್ತಿಯ ಕೈ ಮಾತ್ರ ಉಳಿದು ಬಿಟ್ಟಿದೆ.



Click it and Unblock the Notifications
