Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
11 ವರ್ಷದ ಮೂವರು ಬೆಂಗಳೂರು ಮಕ್ಕಳ ಸ್ಟಾರ್ಟ್‌ಅಪ್: ಉದ್ಯಮಿಗಳಿಗೂ ಅಚ್ಚರಿ.! ವಿಡಿಯೋ ವೈರಲ್
ಬೆಂಗಳೂರು ಸ್ಟಾರ್ಟ್‌ಅಪ್‌ಗಳ ತವರೂರು. ಸಾವಿರಾರು ಕಂಪನಿಗಳು ಹುಟ್ಟಿದ್ದು ಬೆಂಗಳೂರಿನಲ್ಲಿ. ಹತ್ತಾರು ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಯುನಿಕಾರ್ನ್‌ಗಳಾಗಿ ಮಾರ್ಪಟ್ಟಿದ್ದು ಕೂಡ ಇದೇ ಬೆಂಗಳೂರಿನಲ್ಲಿ. ಇಂತಹ ಬೆಂಗಳೂರು ಪ್ರತಿದಿನ ನಮ್ಮ ಮುಂದೆ ಹೊಸ ಹೊಸ ವಿಚಾರಗಳ ಮುಂದಿಡುವುದು ನೋಡಬಹುದು. ಬೆಂಗಳೂರಿನ ಹಲವು ಅಚ್ಚರಿಗಳ ನಡುವೆ ಈಗ ಮತ್ತೊಂದು ಅಚ್ಚರಿ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಚಿಟಿಕೆ ಹೊಡೆಯುವ ಸಮಯದಲ್ಲಿ ಹೊಸ ವ್ಯಾಪಾರ, ವ್ಯವಹಾರಗಳ ಆರಂಭಿಸುವ ಕುರಿತು ಚಿಂತಿಸಬಹುದು. ಆದ್ರೆ ಅದನ್ನು ಜಾರಿಗೆ ತರುವುದು ಅಷ್ಟು ಸುಲಭವಲ್ಲ. ಆದ್ರೆ ಇಲ್ಲಿ ಮೂವರು ಶಾಲಾ ಮಕ್ಕಳೂ ಹೊಸ ಐಡಿಯಾದೊಂದಿಗೆ ಬೆಂಗಳೂರು ಜನರ ಮುಂದೆ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಬ್ಯುಸಿನೆಸ್ ಐಡಿಯಾ ಈಗ ಭಾರಿ ಸದ್ದು ಮಾಡುತ್ತಿದೆ.

11 ವರ್ಷದೊಳಗಿನ ಮೂವರು ಮಕ್ಕಳು ಬೆಂಗಳೂರು ಬೀದಿಯಲ್ಲಿ ಸರಳ ಕಲ್ಪನೆಯೊಂದಿಗೆ ತಮ್ಮದೆ ಸ್ಟಾರ್ಟ್‌ಅಪ್ ಆರಂಭಿಸುವ ಕನಸು ಹೊತ್ತು ಜನರ ಮುಂದೆ ಬಂದಿದ್ದಾರೆ. ಈ ಐಡಿಯಾ ಕಂಡು ಜನರು ಕೂಡ ಅಚ್ಚರಿ ಹೊರಹಾಕಿದ್ದಾರೆ. ಅದ್ರಲ್ಲೂ ಗಮ್ ಮತ್ತು ಟೇಪ್ ಬಳಸದೆಯೇ, ಪ್ಲಾಸ್ಟಿಕ್ ಮುಕ್ತ ಪೇಪರ್ ಬ್ಯಾಗ್ ಮಾಡುವ ನವೀನ ವಿಧಾನ ಇದಾಗಿದೆ. ಈ ಬ್ಯಾಗ್‌ನ ಬೆಲೆ ಕೇವಲ 10 ರೂಪಾಯಿ.
ಈ ವೀಡಿಯೊವನ್ನು ಮೊದಲು Startupro.in ನ Instagram ಪುಟದಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ನಂತರ ವ್ಯಾಪಕವಾಗಿ ವೈರಲ್ ಆಗಿದೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಸೇರಿದಂತೆ ಹಲವರು ಈ ಕ್ಲಿಪ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಹಾಗೆ ಈ ಐಡಿಯಾ ನೋಡಿ ಅವರು ಕೂಡ ಅಚ್ಚರಿಯ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದು ಶಾಲೆಯ ಒಂದು ಉದ್ದೇಶಿತ ಕಾರ್ಯಯೋಜನೆ ಎಂದು ತಿಳಿದುಬಂದಿದೆ. ಎಲ್ಲಾ 11 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದಾರೆ. ಅವರೆಲ್ಲಾ ಸೇರಿ ಈ ಉತ್ಪನ್ನ ಕುರಿತು ಹೇಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಹೆಚ್ಚಿನ ಜನರು ಪರಿಸರ ಸ್ನೇಹಿ ಉತ್ಪನ್ನಗಳನ್ನು ಆಯ್ಕೆ ಮಾಡಲು ಮತ್ತು ತಮ್ಮ ನೆರೆಹೊರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುವುದು ಎಂದು ಹೇಳಿದ್ದಾರೆ.
ಈ ಪೇಪರ್ ಬ್ಯಾಗ್ ಅನ್ನು ಮರುಬಳಕೆ ಮಾಡಬಹುದಾದ ವಸ್ತುವಿನಿಂದ ಮಾಡಲಾಗಿದೆಯಂತೆ. ಹಾಗೆ ಇದನ್ನು ತಯಾರಿಸಲು ಪ್ಲಾಸ್ಟಿಕ್ ಹಾಗೆ ಗಮ್ ಬಳಸದೆಯೇ ಮಾಡಲಾಗಿದೆ. ಇದು ಗಟ್ಟಿಮುಟ್ಟಾಗಿದ್ದು, ಮರುಬಳಕೆ ಮಾಡುವುದು ಸಹ ಸುಲಭವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಉದು ಅಗ್ಗವಾಗಿದೆ. 10 ರೂಪಾಯಿಯಲ್ಲಿ ಸಿಗುವ ಈ ಬ್ಯಾಗ್ ಪರಿಸರ ಸ್ನೇಹಿಯಾಗಿದೆ.
ವಿಡಿಯೋದಲ್ಲಿ ಹುಡುಕಿಯೊಬ್ಬಳು ಇದನ್ನು ಹೇಗೆ ಬಳಸುವುದು, ಬಿಡಿಸುವುದು ಎಂಬುದನ್ನು ವಿವರಿಸುವುದು ನೋಡಬಹುದು. ಹಾಗೆ ಗ್ರಾಹಕರು ತಮ್ಮ ವಿಳಾಸ ನೀಡಿದರೆ ಪ್ರತಿ ಭಾನುವಾರ ನಿಮ್ಮ ಮನೆಗೆ 2 ಬ್ಯಾಗ್ ನೀಡುವುದಾಗಿ ಮಕ್ಕಳು ವಿವರಿಸುತ್ತಿದ್ದಾರೆ. ಇದು ಚಂದಾದಾರಿಕೆಯಾಗಿ ಮಾಡಲಾಗುತ್ತದೆ ಎಂದು ಹೇಳುತ್ತಾರೆ. ಅಂದರೆ ಪ್ರತಿ ತಿಂಗಳು ನಿಮಗೆ 40ರಿಂದ 50 ರೂಪಾಯಿ ಖರ್ಚಾಗಬಹುದು. ಪ್ರತಿ ಬಾರಿ ನೀವು ಇದನ್ನು ಬಳಸಿ ಬೇರೆಯವರಿಗೂ ನೀಡಬಹುದು. ಇದರಿಂದ ಪ್ಲಾಸ್ಟಿಕ್ ಬಳಕೆಯೇ ಅಂತ್ಯವಾಗಲಿದೆ.
ಅಕ್ಟೋಬರ್ 29 ರಂದು ಹಂಚಿಕೊಂಡಾಗಿನಿಂದ ವೀಡಿಯೊ 3.3 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಈ ವಿಡಿಯೋ ನೋಡಿದ ಮಂದಿ ಮಕ್ಕಳ ಈ ಐಡಿಯಾಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕ್ಲೀನ್ ಬೆಂಗಳೂರು ಮಾಡಲು ಇದಕ್ಕಿಂತ ಉತ್ತಮ ಸಲಹೆ ಹಾಗೂ ಕಾರ್ಯಾಚರಣೆ ಮತ್ತೊಂದಿಲ್ಲ ಎಂದು ಬಣ್ಣಿಸಿದ್ದಾರೆ. ಮಕ್ಕಳಿಗೆ ಸರಿಯಾದ ಬೆಂಬಲ ಸಿಕ್ಕರೆ ಈ ಕಾಗದದ ಬ್ಯಾಗ್ ಮತ್ತಷ್ಟು ಉತ್ತಮ ರೀತಿಯಲ್ಲಿ ಜನರ ಕೈ ಸೇರಬಹುದು ಎಂದು ಬಳಕೆದಾರರು ಅಭಿಪ್ರಾಯಗಳ ಹಂಚಿಕೊಂಡಿದ್ದಾರೆ.



Click it and Unblock the Notifications
