Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಐಪೋನ್ 16ಗಿಂತ ದುಬಾರಿ ಈ ಚಹಾ..! ಏಕೆ ಗೊತ್ತಾ..? ಇದರ ವಿಶೇಷವೇನು?
ನೀವು ಐಫೋನ್ 10 ಖರೀದಿಸಬೇಕಾದರೆ ಹತ್ತಿರ ಲಕ್ಷ ರೂಪಾಯಿಯಿಂದ ಅದರ ಬೆಲೆ ಆರಂಭಗೊಂಡು 1 ಲಕ್ಷ 40 ಸಾವಿರ ವರೆಗೂ ಆಗಬಹುದು. ಐಫೋನ್ ಈಗ ಟ್ರೆಂಡ್ ಹುಟ್ಟುಹಾಕಿರುವ ಮೊಬೈಲ್ ಸಂಸ್ಥೆ. ತನ್ನ ಕೆಲವೇ ಕೆಲವು ಮೊಬೈಲ್ ಅನ್ನು ದುಬಾರಿ ಬೆಲೆಗೆ ಅದು ಮಾರಾಟ ಮಾಡುತ್ತದೆ. ಹಾಗೆ ಅದನ್ನು ಖರೀದಿಸುವುದು ಯುವ ಜನರ ಕನಸು ಸಹ ಆಗಿರುತ್ತದೆ.
ಆದ್ರೆ ಇಲ್ಲೊಂದು ಕಡೆ ನೀವು ಐಫೋನ್ ಸುಲಭವಾಗಿ ಖರೀದಿಸಬಹುದು, ಆದ್ರೆ ಅಲ್ಲಿನ ಒಂದು ಟೀ ಕುಡಿಯುವುದು ಬಹಳ ದುಬಾರಿಯಾಗಲಿದೆ. ಹೌದು ನೀವು ಎಷ್ಟು ದುಬಾರಿ ಬೆಲೆ ನೀಡಿ ಟೀ ಕುಡಿದಿದ್ದೀರಿ ಎಂಬುದನ್ನು ನೆನೆಪಿಸಿಕೊಳ್ಳಿ. ಭಾರತದಲ್ಲಿ ದುಬಾರಿ ಟೀ ಅಂದ್ರೆ ನೀವು ಮುಂಬೈನ ತಾಜ್ ಹೋಟೆಲ್‌ಗೆ ತೆರಳಬೇಕು. ಅಲ್ಲಿ ಟೀ ಕುಡಿಯಬೇಕು ಎನ್ನುವುದು ಕೂಡ ಹಲವರ ಆಸೆಯಾಗಿರುತ್ತೆ.

ಆದ್ರೆ ಇಲ್ಲೊಂದು ಕಡೆ ಈ ಟೀ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಅದು ಬರೋಬ್ಬರಿ 1 ಲಕ್ಷ ರೂಪಾಯಿಗೂ ಅಧಿಕ ಹಣ ನೀಡಿ ಒಂದು ಕಪ್ ಟೀ ಕುಡಿಯಬೇಕು. ಈ ಟೀ ಅಂತಿಂತ ಟೀ ಅಲ್ಲ ಬದಲಿಗೆ ಚಿನ್ನದ ಟೀ. ಹೀಗೆ ಹೇಳಿದ್ರೆ ನಿಮಗೂ ಅಚ್ಚರಿಯಾಗಬಹುದು. ಹೌದು ದುಬೈನ ರೆಸ್ಟೋರೆಂಟ್ ಒಂದರಲ್ಲಿ ಈ ಚಿನ್ನದ ಟೀಗೆ 1.1 ಲಕ್ಷ ರೂಪಾಯಿ ನೀಡಿ ಕುಡಿಯಬೇಕಿದೆ.
ಈ ಟೀಯಲ್ಲಿ 24 ಕ್ಯಾರೆಟ್ ಚಿನ್ನದ ಕಣಗಳನ್ನು ಹಾಕಲಾಗುತ್ತದೆ. ಫುಡ್ ಬ್ಲಾಗರ್ ಒಬ್ಬರು ಕೆಫೆಯ ಈ ದುಬಾರಿ ಟೀ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದುಬೈನಲ್ಲಿರುವ ಈ ಸ್ಥಳವು AED 5000 ಕ್ಕೆ 24 ಕ್ಯಾರೆಟ್ ಚಿನ್ನದ ಟೀ ನೀಡುತ್ತದೆ. ಇದು ವಿಶ್ವದ ಐಷಾರಾಮಿ ಟೀ. ಹಾಗೆ ಶುದ್ಧ ಬೆಳ್ಳಿಯ ಲೋಟ ಹಾಗೂ ತಟ್ಟೆಯಲ್ಲಿ ನೀಡಲಾಗುತ್ತದೆ. ರುಚಿ ಕೂಡ ಹಾಗೆ ಅದ್ಭುತವಾಗಿದೆ ಎಂದು ಅವರು ವಿವರಿಸಿದ್ದಾರೆ.
ದುಬೈನ ಬೋಹೊ ಕೆಫೆಯಲ್ಲಿ ಚಿನ್ನದ ಚಹಾದ ಬೆಲೆ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಏಕೆಂದರೆ ಇದೇ ಹಣದಲ್ಲಿ ದುಬೈ ಹಾಗೂ ಭಾರತದಲ್ಲೂ ಐಫೋನ್ 16 ಆರಾಮಾಗಿ ಖರೀದಿಸಬಹುದು. ಇದರಲ್ಲಿ iPhone 16, iPhone 16 Plus, iPhone 16 Pro ಮತ್ತು iPhone 16 Pro Max ಸೇರಿವೆ. ಆರಂಭಿಕ ಬೆಲೆ 79,900 ರೂ. ನಿಂದ ಆರಂಭವಾಗುತ್ತದೆ. ಹೀಗಾಗಿ ಈ ಟೀ ಐಫೋನ್‌ಗಿಂತ ದುಬಾರಿ ಎನ್ನಬಹುದು.
ಆದ್ರೆ ಈ ಪೋಸ್ಟ್‌ಗೆ ಆನ್‌ಲೈನ್ ಭಾರೀ ಕಮೆಂಟ್‌ಗಳು ಹರಿದಾಡಿವೆ. ಇಷ್ಟು ದುಬಾರಿ ಹಣ ನೀಡಿ 5 ನಿಮಿಷದ ಟೀ ಕುಡಿಯುವುದು ಹಣ ವ್ಯರ್ಥ ಮಾಡುವ ಸುಲಭದ ದಾರಿ ಎಂದು ಹಲವು ಹೇಳಿದ್ದಾರೆ. ಹಾಗೆ ಇಷ್ಟೊಂದು ದುಬಾರಿ ಬೆಲೆಯ ಟೀ ಅನ್ನು ಯಾರು ತಾನೆ ಕುಡಿಯುತ್ತಾರೆ. ಅದರಲ್ಲೂ ಈ ಚಿನ್ನದ ಟೀ ಕುಡಿಯುವುದು ಯಾವ ಪ್ರಯೋಜನಕ್ಕೆ ಎಂಬ ಪ್ರಶ್ನೆ ಕೇಳಿದ್ದಾರೆ. ಹಾಗೆ ಈ ಚಿನ್ನದ ಟೀಯನ್ನ ಕುಡಿಯುವ ಬದಲು ಅಷ್ಟೇ ಹಣದ ಚಿನ್ನ ಖರೀದಿಸಿದರೆ ಅದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.



Click it and Unblock the Notifications