Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಭಾರತದ ಈ ರಾಜ್ಯದಲ್ಲಿ ಅತೀ ಹೆಚ್ಚು ಹಾವುಗಳಿವೆ.! ಕರ್ನಾಟಕ, ಪಶ್ಚಿಮ ಬಂಗಾಳ ಅಲ್ಲವೇ ಅಲ್ಲ!
ಭಾರತ ಹಲವು ವಿಶೇಷ ಹಾಗೆ ವಿಭಿನ್ನ ಪ್ರಾಣಿ ಸಂಕುಲಗಳಿಗೆ ವಾಸಸ್ಥಾನ ಆಗಿದೆ. ಇತಿಹಾಸದಲ್ಲೂ ಈ ಕುರಿತು ನಾವು ನೋಡಬಹುದು. ಹಾಗೆ ಶತನಮಾದ ಹಿಂದೆ ಅಳಿವಿನಂಚಿನಲ್ಲಿರುವ ಹಾಗೆ ವಿಶೇಷ ಎನಿಸುವ ಪ್ರಾಣಿಗಳೂ ಕೂಡ ಭಾರತದಲ್ಲಿವೆ. ಇಲ್ಲಿನ ವೈವಿಧ್ಯತೆಗೆ ಈ ಪ್ರಾಣಿ ಸಂಕುಲ ಕೂಡ ಕೈಗನನ್ನಡಿಯಾಗಿದೆ. ಇನ್ನು ಹಾವುಗಳು ಅತೀ ಹೆಚ್ಚು ಇರುವ ಸ್ಥಳಗಳ ಪೈಕಿ ಭಾರತ ಕೂಡ ಒಂದಾಗಿದೆ.
ಹಾವುಗಳು ವಿಶ್ವದ ಬಹುತೇಕ ಎಲ್ಲಾ ದೇಶದಲ್ಲೂ ಕಂಡುಬರುವಂತಹ ಜೀವಿಗಳು ಆದ್ರೆ ಭಾರತದಲ್ಲಿ ನೂರಾರು ಜಾತಿಯ ಹಾವುಗಳ ನೋಡಬಹುದು, ಹಾಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಹಾವುಗಳನ್ನು ನೋಡಬಹುದು. ಭಾರತದ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಹಾವುಗಳು ದೇಶದ ಬೇರೆ ಯಾವುದೇ ಮೂಲೆಯಲ್ಲೂ ಕಂಡುಬರುವುದಿಲ್ಲ.

ಹಾಗೆ ನಾವು ಉತ್ತರ ಭಾರತದಲ್ಲಿ ನೋಡುವ ವಿಭಿನ್ನ ರೀತಿಯ ಹಾವುಗಳು ದಕ್ಷಿಣ ಭಾರತದಲ್ಲಿ ನೋಡಲು ಸಾಧ್ಯವಿಲ್ಲ. ಇಷ್ಟೊಂದು ವೈವಿಧ್ಯತೆ ಹೊಂದಿರುವ ಪ್ರದೇಶವಿದು. ಇನ್ನು ಭಾರತದಲ್ಲಿಯೇ ಅತೀ ಹೆಚ್ಚು ಹಾವುಗಳನ್ನು ಹೊಂದಿರುವ ರಾಜ್ಯ ಯಾವುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಕೆಲವರು ಕರ್ನಾಟಕದಲ್ಲಿ ಹೆಚ್ಚು ಹಾವುಗಳಿವೆ ಎಂದು ಕೊಂಡಿರಬಹುದು.
ಆದ್ರೆ ದೇಶದಲ್ಲೇ ಅತೀ ಹೆಚ್ಚು ಹಾವುಗಳ ಹೊಂದಿರುವ ರಾಜ್ಯ ಕರ್ನಾಟಕ ಅಲ್ಲ. ಹಾಗೆ ನಾಗಾಲ್ಯಾಂಡ್, ಮೆಘಾಲಯ, ಅಸ್ಸಾಂನಂತಹ ಕಾಡು ಹೊಂದಿರುವ ಪ್ರದೇಶವೂ ಅಲ್ಲ. ಬದಲಿಗೆ ದೇವರ ಸ್ವಂತ ನಾಡು ಎಂದು ಕರೆಯುವ ಕೇರಳ. ಭಾರತದಲ್ಲೇ ಅತೀ ಹೆಚ್ಚು ಹಾವುಗಳು ಇರುವ ಪ್ರದೇಶ ಕೇರಳ ರಾಜ್ಯವಾಗಿದೆ.
ಕೇರಳ ಪಶ್ಚಿಮ ಘಟ್ಟ ಪ್ರದೇಶದ ಅತ್ಯಂತ ಸುಂದರ ರಾಜ್ಯ, ಬೆಟ್ಟ ಗುಡ್ಡಗಳು, ಹೆಚ್ಚು ಕಾಡು ಪ್ರದೇಶ ಹೊಂದಿರುವ ಹಾಗೆ ಮಳೆಯಾಗುವ ರಾಜ್ಯವೂ ಹೌದು, ಹೀಗಾಗಿ ಅಲ್ಲಿನ ಪ್ರಾಣಿ ಸಂಕುಲು ಕೂಡ ಸಮೃದ್ಧವಾಗಿದೆ. ಇದರಿಂದ ಹಾವುಗಳ ವಾಸಕ್ಕೆ ಯೋಗ್ಯವಾದ ಪರಿಸರ ಹಾಗೆ ವಾತಾವರಣ ಹೊಂದಿರುವ ರಾಜ್ಯ ಇದಾಗಿದೆ.
ಕೇರಳದಲ್ಲಿ ಸುಮಾರು 350 ಜಾತಿಯ ಹಾವುಗಳಿವೆ ಎಂದು ಅಂದಾಜಿಸಲಾಗಿದೆ. ಹವಾಮಾನವು ದಟ್ಟವಾದ ಕಾಡುಗಳು ಮತ್ತು ಸೊಂಪಾದ ಸಸ್ಯವರ್ಗವನ್ನು ಹೊಂದಿದೆ. ನಿಗದಿತ ಮಳೆ, ಅರಣ್ಯ ಪ್ರದೇಶದ ಕಾರಣ ಹಾವುಗಳ ವಾಸಕ್ಕೆ ಯೋಗ್ಯ ಸ್ಥಳವಾಗಿ ಮಾರ್ಪಟ್ಟಿದೆ. ವೈವಿಧ್ಯಮಯ ವಾತಾವರಣವು ಎಲ್ಲಾ ಜಾತಿಯ ಹಾವುಗಳಿಗೆ ಆವಾಸಸ್ಥಾನವಾಗಲಿದೆ. ಹಾವುಗಳು ಬೇಟೆಯಾಡಲು ಸಣ್ಣ ಪ್ರಾಣಿಗಳು, ಪಕ್ಷಿಗಳು ಮತ್ತು ದಂಶಕಗಳ ಸಾಕಷ್ಟು ಪೂರೈಕೆಯು ಕೂಡ ಈ ಪರಿಸರದಲ್ಲಿ ನೋಡಬಹುದು. ಇದು ಕೂಡ ಅಲ್ಲಿ ಹಾವಿನ ಸಂಖ್ಯೆ ಹೆಚ್ಚಳಕ್ಕೆ ನೇರ ಕಾರಣ ಎನ್ನಬಹುದು.
ಮಂಡಲ ಹಾವು, ಕಿಂಗ್ ಕೋಬ್ರಾ, ಕ್ರೈಟ್ ಸ್ನೇಕ್‌ನಂತಹ ವಿಷಕಾರಿ ಹಾವುಗಳಿಗೆ ಕೇರಳ ವಾಸಯೋಗ್ಯವಾಗಿದೆ. ಅಲ್ಲಿನ ಸ್ಥಳೀಯರು ರಸ್ತೆಗಳು, ತೋಟ, ಮನೆ ಸುತ್ತಮುತ್ತ ಕೂಡ ಇಂತಹ ವಿಷಕಾರಿ ಹಾವುಗಳ ದರ್ಶನ ಪಡೆಯುತ್ತಾರೆ. ಹಾಗೆ ಅಲ್ಲಿ ಹಾವುಗಳು ಹಾಗೂ ಮನುಷ್ಯದ ನಡುವಿನ ಸಂಘರ್ಷ ಕಡಿಮೆಯಾಗುತ್ತಿದೆ. ಸತತ ಪ್ರಯತ್ನಗಳು ಹಾಗೆ ಪ್ರಾಣಿಗಳೊಂದಿಗೆ ಬದುಕು ಕಟ್ಟಿಕೊಳ್ಳುವ ಬಗೆ ಅಲ್ಲಿನ ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯವಾಗುತ್ತಿದೆ.
ಕೇರಳ ನಂತರದ ಸ್ಥಾನವು ಪಶ್ಚಿಮ ಬಂಗಾಳ ಹೊಂದಿದೆ. ಅಲ್ಲಿಯೂ ಕೂಡ ವಿಶ್ವದ ಬೇರೆಲ್ಲೂ ನೋಡಲು ಸಿಗದಂತಹ ಅಪರೂಪದ ಜಾತಿಯ ಹಾವುಗಳು ನೆಲೆಸಿವೆ. ಆದ್ರೆ ಅತೀ ಹೆಚ್ಚು ಹಾವುಗಳನ್ನು ಹೊಂದಿರುವ ರಾಜ್ಯ ಎಂಬ ಬಿರುದನ್ನು ಕೇರಳ ಪಡೆದುಕೊಂಡಿದೆ. ಹಾಗೆ ಭಾರತದಲ್ಲಿ ದಕ್ಷಿಣ ಭಾರತ ಹೆಚ್ಚಿನ ಹಾವುಗಳ ಸಂತತಿಯನನ್ನು ಹೊಂದಿದೆ. ಪಶ್ಚಿಮ ಘಟ್ಟ ಸಾಲಿನಲ್ಲಿ ಕಂಡುಬರುವ ವಿವಿಧ ಜಾತಿಯ ಹಾವುಗಳು ದೇಶದ ಯಾವುದೇ ಮೂಲೆಯಲ್ಲೂ ನೋಡಲು ಸಾಧ್ಯವಿಲ್ಲ.



Click it and Unblock the Notifications
