Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಗೋಮೂತ್ರದಿಂದಲೇ ಸ್ನಾನ ಮಾಡುವ ಜನಾಂಗವಿದು..! ಅದಕ್ಕೆ ಕಾರಣವೇನು ಗೊತ್ತಾ?
ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಗೋವುಗಳ ದೇಹದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿವೆ ಎಂದು ಹೀಗಾಗಿ ಗೋವು ಪವಿತ್ರವೆಂದು ಪೂಜಿಸಲಾಗುತ್ತದೆ. ಜೊತೆಗೆ ಗೋವಿನಿಂದ ಸಿಗುವ, ಹಾಲು, ಗೋಮೂತ್ರ, ಸಗಣಿ ಸಹ ಬಳಕೆಗೆ ಬರುತ್ತದೆ. ಇದನ್ನು ಆಯುರ್ವೇದದಲ್ಲಿ ಔಷಧವಾಗಿ ಬಳಸಲಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ, ಭಾರತದಾದ್ಯಂತ ಹಬ್ಬಗಳಲ್ಲಿ ಹಸುವನ್ನು ಪೂಜಿಸಲಾಗುತ್ತದೆ. ಹಿಂದೂಗಳು ತಮ್ಮ ಹಸುಗಳನ್ನು ಎಷ್ಟು ಪ್ರೀತಿಯಿಂದ ಪ್ರೀತಿಸುತ್ತಾರೆ, ವರ್ಣರಂಜಿತ ಹಸುವಿನ ಆಭರಣಗಳು ಮತ್ತು ಬಟ್ಟೆಗಳನ್ನು ಭಾರತದ ಗ್ರಾಮಾಂತರದಾದ್ಯಂತ ಜಾತ್ರೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಚಿಕ್ಕಂದಿನಿಂದಲೂ ಹಿಂದೂ ಮಕ್ಕಳಿಗೆ ಹಸುವನ್ನು ಹೂಮಾಲೆ, ಬಣ್ಣ ಮತ್ತು ಆಭರಣಗಳಿಂದ ಅಲಂಕರಿಸಲು ಕಲಿಸಲಾಗುತ್ತದೆ. ಅವಳ ಸ್ವಭಾವವು ಕಾಮಧೇನು, ದೈವಿಕ, ಇಷ್ಟಾರ್ಥಗಳನ್ನು ಪೂರೈಸುವ ಹಸುವಿನಲ್ಲಿ ಬಿಂಬಿತವಾಗಿದೆ.

ಹಿಂದೂಗಳು ಗೋವನ್ನು ಪವಿತ್ರ ಎಂದು ನಂಬಿಕೊಂಡು ಬಂದಿರುವ ಸಂಪ್ರದಾಯ ಬಹಳ ಹಿಂದಿನ ಕಾಲದ್ದು ಎಂದು ಹೇಳಲಾಗಿದೆ. ಶತಮಾನಗಳ ಹಿಂದೆಯೂ ಇದರ ಉಲ್ಲೇಖವಿರುವುದು ನಾವು ಕಾಣಬಹುದು. ಹೀಗಾಗಿ ಇಂದಿಗೂ ಗೋವುಗಳಿಗೆ ದೇವರ ಸ್ಥಾನ ನೀಡಲಾಗಿದೆ. ಇನ್ನು ಭಾರತ ಮಾತ್ರವಲ್ಲದೆ ಇಲ್ಲೊಂದು ದೇಶದಲ್ಲಿ ಗೋವುಗಳನ್ನು ಪವಿತ್ರ ಎಂದು ನಂಬಲಾಗಿದೆ.
ಹೌದು ಭಾರತ ಮಾತ್ರವಲ್ಲ ಆಫ್ರಿಕಾದ ಈ ರಾಷ್ಟ್ರ ಸಹ ಗೋವನ್ನು ಪವಿತ್ರ ಪ್ರಾಣಿ ಎಂದು ನಂಬಿಕೊಂಡು ಬಂದಿದೆ. ಅಷ್ಟೇ ಅಲ್ಲ ಅವರು ಗೋಮೂತ್ರದಿಂದ ಸ್ನಾನ ಮಾಡುತ್ತಾರೆ. ತಲೆಯನ್ನು ಗೋಮೂತ್ರದಿಂದಲೇ ತೊಳೆದುಕೊಳ್ಳುತ್ತಾರೆ.
ಇನ್ನು ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ಆಫ್ರಿಕಾದ ರಾಷ್ಟ್ರವಾದ ಸೌತ್ ಸುಡಾನ್‌ನಲ್ಲಿ ಗೋವುಗಳನ್ನು ಪವಿತ್ರ ಎಂದು ಭಾವಿಸಲಾಗಿದೆ. ಅಲ್ಲಿ ಗೋಮೂತ್ರದಿಂದ ಜನ ಸ್ನಾನ ಮಾಡುತ್ತಾರೆ. ಗೋವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಗೋಮೂತ್ರದಲ್ಲಿ ಔಷಧಿ ಗುಣವಿದೆ ಎಂದು ಈ ಜನಾಂಗ ನಂಬಿಕೊಂಡು ಬಂದಿದೆ.
ದಕ್ಷಿಣ ಸುಡಾನ್‌ನಲ್ಲಿ ಪುಟ್ಟ ಗ್ರಾಮವೊಂದರಲ್ಲಿ ನೆಲೆಸಿರುವ ಮುಂಡರಿ ಮತ್ತು ಡಿಂಕಾ ಜನಾಂಗವು ಗೋವುಗಳನ್ನ ಸಾಕುವ ಜೊತೆಗೆ ಅವುಗಳನ್ನು ಪವಿತ್ರ ಸ್ಥಾನದಲ್ಲಿಟ್ಟು ಸಂರಕ್ಷಿಸುವ ಕಾರ್ಯ ಮಾಡುತ್ತಿದೆ. ಈ ಜನಾಂಗದ ಜನರು ಗೋಮೂತ್ರದ ಮೂಲಕ ಸ್ನಾನ ಮಾಡುತ್ತಾರೆ.
ದಕ್ಷಿಣ ಸುಡಾನ್‌ನಗಲ್ಲಿ ಸೋಂಕುಗಳಿಂದ ಹರಡುವ ಕಾಯಿಲೆಗಳು ಅಧಿಕವಾಗಿದೆ. ಅಂದರೆ ಅಲ್ಲಿ ಉಷ್ಣವಲಯದ ಪ್ರದೇಶವಾಗಿರುವುದರಿಂದ ಸೊಳ್ಳೆಗಳಿಂದ ಹರಡುವ ರೋಗಗಳ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಈ ಜನಾಂಗ ಸೊಳ್ಳೆಗಳ ಕಡಿತದಿಂದ ಪಾರಾಗಲು ಗೋಮೂತ್ರದಿಂದ ಸ್ನಾನ ಮಾಡುತ್ತಾರಂತೆ. ಹೀಗೆ ಮಾಡುವುದರಿಂದ ಸೊಳ್ಳೆಗಳು ಇವರ ಸುತ್ತ ಸುಳಿಯುವುದಿಲ್ಲವಂತೆ.
ಈ ರೀತಿ ಯುವಕನೊಬ್ಬ ಗೋಮೂತ್ರದಿಂದ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಆತ ಗೋವು ಮೂತ್ರ ಮಾಡುತ್ತಿರುವ ವೇಳೆ ನೇರವಾಗಿ ಅದರ ಕೆಳಗೆ ತಲೆಯಿಟ್ಟು ಸ್ನಾನ ಮಾಡುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಈ ಪ್ರದೇಶದಲ್ಲಿ ಸೊಳ್ಳೆಗಳಿಂದ ಪಾರಾಗಲು ಈ ಎರಡು ಜನಾಂಗಗಳು ಗೋಮೂತ್ರ ಹಾಗೂ ಸಗಣಿಯನ್ನು ಬಳಸುತ್ತಾರಂತೆ, ಗೋಮೂತ್ರದಿಂದ ಸ್ನಾನ ಮಾಡಿದ ಬಳಿಕ ಅವರ ಹತ್ತಿರ ಸೊಳ್ಳೆಗಳು ಸುಳಿಯುವುದಿಲ್ಲ. ಇದರಿಂದ ಯಾವ ಕಾಯಿಲೆಯು ಬರುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ.
ಈ ವಿಡಿಯೋವೊಂದನ್ನು @Rainmaker1973 ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.''ಇದು ನೋಡಲು ಸ್ವಲ್ಪ ವಿಲಕ್ಷಣವಾಗಿ ಕಾಣಿಸಬಹುದು, ಆದರೆ ದಕ್ಷಿಣ ಸುಡಾನ್ ನ ಮುಂಡರಿ ಮತ್ತು ಡಿಂಕಾ ಬುಡಕಟ್ಟು ಜನಾಂಗದವರು ಪ್ರತಿನಿತ್ಯ ಗೋಮೂತ್ರದಿಂದಲೇ ಸ್ನಾನ ಮಾಡುತ್ತಾರೆ. ಏಕೆಂದರೆ ಗೋಮೂತ್ರ ನಂಜು ನಿರೋಧಕ ಮಾತ್ರವಲ್ಲದೆ ಅದು ಸೊಳ್ಳೆ ಕಡಿತದಿಂದಲೂ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಭಾವಿಸುತ್ತಾರೆ'' ಎಂದು ಬರೆದುಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಕುರಿತು ಚರ್ಚೆಗಳು ನಡೆಯುತ್ತಿದೆ.



Click it and Unblock the Notifications