Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಲೋನ್ ಮಾಡಿ ಶ್ರೀಮಂತರಾಗಬೇಕೆ? ಹಾಗಾದರೆ ಈ ಒಂದು ತಪ್ಪು ಮಾಡದಿರಿ
ನಮಗೆ ಯಾವುದಾದರು ವಸ್ತು ಖರೀದಿಸಬೇಕು ಅಥವಾ ಮನೆ ಮಾಡಬೇಕು ಆದರೆ ಕೈಯಲ್ಲಿ ಹಣವಿರಲ್ಲ, ಹಾಗಾದರೆ ನಮ್ಮ ಮುಂದೆ ಇರುವ ದಾರಿಯಾದರೂ ಏನು? ಲೋನ್ ಮಾಡುವುದು, ಲೋನ್ ಮಾಡದೆ ಜೀವನನ ನಡೆಸುವವರು ತುಂಬಾನೇ ವಿರಳ, ಎಂಥ ಕೋಟ್ಯಾಧೀಶನಾದರೂ ಅವನು ಅವನ ಬ್ಯುಸ್‌ನೆಸ್ ಸಾಮ್ರಾಜ್ಯ ವಿಸ್ತರಿಸಲು ಲೋನ್ ಮಾಡಿಯೇ ಮಾಡುತ್ತಾನೆ.

ಲೋನ್ ಮಾಡಿ ನಾವು ಮತ್ತಷ್ಟು ಶ್ರೀಮಂತರಾಗಬೇಕೆ ಹೊರತು ಸಾಲದ ಸುಳಿಯಲ್ಲಿ ಸಿಕ್ಕಾಕಿಕೊಳ್ಳುವಂತೆ ಆಗಬಾರದು. ಲೋನ್ ಪಡೆದು ನಾವು ಹಣ ಮಾಡಬೇಕೆಂದರೆ ಮೊದಲಿಗೆ ಕೆಟ್ಟ ಲೋನ್ , ಒಳ್ಳೆಯ ಲೋನ್ ಬಗ್ಗೆ ನಮಗೆ ತಿಳಿದಿರಬೇಕು, ಒಳ್ಳೆಯ ಲೋನ್ ನಮ್ಮನ್ನು ಶ್ರೀಮಂತರನ್ನಾಗಿ ಮಾಡಿದರೆ ಕೆಟ್ಟ ಲೋನ್ ನಮ್ಮನ್ನು ಸಾಲಗಾರನ್ನಾಗಿ ಮಾಡುತ್ತದೆ, ಹಾಗಾದರೆ ಇದರ ಬಗ್ಗೆ ತಿಳಿಯಲೇಬೇಕು ಅಲ್ವಾ?
ಈ ಒಳ್ಳೆಯ ಲೋನ್ ಎಂದರೇನು?
ನೀವು ಸಾಲ ಮಾಡಿದರೂ ಆ ಸಾಲದ ಹಣದಿಂದ ನೀವು ಹಣ ಗಳಿಸುವಂತಾಗಬೇಕು. ನಾವು ಒಂದು ಲಕ್ಷ ಸಾಲ ತೆಗೆದರೆ ಅದಕ್ಕೆ ನಾವು 12-16 ಸಾವಿರ ಬಡ್ಡಿ ಕಟ್ಟಿದರೆ ಅದರಿಂದ ನಾವು ಎರಡು ಲಕ್ಷ ಪಡೆಯುವಂತಾಗಬೇಕು, ಆವಾಗ ಮಾತ್ರ ನಾವು ಮಾಡಿದ ಸಾಲ ತೀರಿಸಲು ಸಾಧ್ಯವಾಗುವುದು.
ಯಾವ ರೀತಿಯ ಸಾಲ ಒಳ್ಳೆಯದು?
ಮನೆ ಲೋನ್:ಹೋಂ ಲೋನ್ ಮಾಡಿದರೆ ಬಡ್ಡಿ ತುಂಬಾನೇ ಕಟ್ಟುತ್ತೇವೆ ನಿಜ, ಆದರೆ 20 ವರ್ಷದ ನಂತರ ಸ್ಥಳ ಹಾಗೂ ಮನೆಯ ಮೌಲ್ಯ ಕೂಡ ಅಷ್ಟೇ ಹೆಚ್ಚಾಗಿರುವುದರಿಂದ ಮನೆಗೆ ಮಾಡುವ ಲೋನ್ ಪ್ರಯೋಜನವನ್ನೇ ನೀಡುತ್ತದೆ.
ಎಜುಕೇಷನ್ ಲೋನ್: ಓದಿಗೆ ಹಾಕಿದ ಹಣ ಯಾವತ್ತೂ ನಿರುಪಯುಕ್ತವಾಗಲ್ಲ, ಓದಿಗೆ ಹಾಕಿದ ಹಣ ನಾವು ಒಳ್ಳೆಯ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸ ಪಡೆಯಲು ಸಹಾಯ ಮಾಡುತ್ತದೆ.
ವ್ಯವಹಾರಕ್ಕೆ ಮಾಡುವ ಲೋನ್: ನಾವು ನಮ್ಮದೇ ಆದ ಸ್ವಂತ ಉದ್ಯಮ ಪ್ರಾರಂಭಿಸುತ್ತೇವೆ ಎಂದಾದರೆ ಅದಕ್ಕೆ ಹಾಕುವ ಲೋನ್ ಕೂಡ ವ್ಯರ್ಥವಾಗಲ್ಲ. ವ್ಯವಹಾರದಲ್ಲಿ ಬೆಳೆಯಬಹುದು,ಆದರೆ ಇದರ ಹೂಡಿಕೆ ಸ್ವಲ್ಪ ರಿಸ್ಕ್, ನಿಮಗೆ ತೀರಿಸಲು ಆಗುವಷ್ಟು ಲೋನ್ ಮಾಡಿ, ತುಂಬಾ ಹೂಡಿಕೆ ಲೋನ್ ತೆಗೆದು ಮಾಡುವುದು ಅಷ್ಟು ಸೂಕ್ತವಲ್ಲ.
ಯಾವ ಬಗೆಯ ಲೋನ್ ಕೆಟ್ಟ ಲೋನ್
ಕಾರು ಲೋನ್: ಶೇ. 90ರಷ್ಟು ಜನ ಲೋನ್ ಮಾಡಿಯೇ ಕಾರು ಖರೀದಿ ಮಾಡುತ್ತಾರೆ, ಅಲ್ಲದೆ ತಮ್ಮ ಆದಾಯಕ್ಕಿಂತ ದುಬಾರಿ ಬೆಲೆಯ ಕಾರು ಖರೀದಿ ಮಾಡುತ್ತಾರೆ, ಏಕೆಂದರೆ ದುಬಾರಿ ಕಾರು ಖರೀದಿ ಮಾಡುವುದರಿಂದ ನನ್ನ ಸ್ಟೇಟಸ್ ಹೆಚ್ಚಾಗುತ್ತದೆ ಎಂಬ ನಂಬಿಕೆ. ಆದರೆ ಕಾರು ಲೋನ್ ಮಾಡುವುದರಿಂದ ನಮಗೆ ನಷ್ಟ. ನಾವು ಒಂದು 10 ಲಕ್ಷದ ಮೌಲ್ಯದ ಕಾರು 8 ಲಕ್ಷ ಲೋನ್ ಮಾಡಿ ಖರೀದಿ ಮಾಡಿದರೆ ಅದರ ಬಡ್ಡಿ ಸೇರಿ 10 ಲಕ್ಷಕ್ಕೂ ಹೆಚ್ಚು ಹಣ ಖರೀದಿಸುತ್ತೇವೆ, ಕಾರು ಹಳೆಯದಾಗುತ್ತಾ ಹೋದಂತೆ ಕಾರಿನ ಮೌಲ್ಯ ಕಡಿಮೆಯಾಗುವುದು. ಅದೇ 10 ಲಕ್ಷ ಜಾಗ ಅಥವಾ ಮನೆಗೆ ಹಾಕಿದರೆ ವರ್ಷದಿಂದ ವರ್ಷಕ್ಕೆ ಬೆಲೆ ದುಪ್ಪಟ್ಟಾಗುವುದು.
ಮೊಬೈಲ್ ಖರೀದಿಗೆ ಲೋನ್ ಮಾಡುವುದು: ಈಗ ದುಬಾರಿ ಬೆಲೆಯ ಫೋನ್ ಖರೀದಿ ಹಲವರ ಕ್ರೇಝ್ ಆಗಿದೆ. ಒಂದು ಲಕ್ಷದ ಒಂದೂವರೆ ಲಕ್ಷದ ಮೌಲ್ಯದ ಫೋನ್ ಸಾಲ ಮಾಡಿ ತೆಗೆದುಕೊಳ್ಳುವುದು, ಇದು ನಮ್ಮನ್ನು ಸಾಲದ ಸುಳಿಗೆ ತಳ್ಳುತ್ತದೆ.
ಸಾಲ ಮಾಡಿ ಮದುವೆ ಮಾಡುವುದು, ಟ್ರಿಪ್ ಹೋಗುವುದು, ರೆಸ್ಟೋರೆಂಟ್‌ಗಳಲ್ಲಿ ಖರ್ಚು ಮಾಡುವುದು
ಸಾಲ ಮಾಡಿ ಈ ರೀತಿ ಖರ್ಚು ಮಾಡುವುದರಿಂದ ನಮಗೆ ಹಣ ಉಳಿತಾಯ ಮಾಡಲು ಸಾಧ್ಯವಾಗಲ್ಲ, ನಮ್ಮನ್ನು ಮತ್ತಷ್ಟು ಸಾಲಗಾರನ್ನಾಗಿ ಮಾಡುತ್ತದೆ, ನಮಗೆ ಹಣವನ್ನು ಉಳಿತಾಯ ಮಾಡುವುದಾಗಲಿ, ಹೂಡಿಕೆ ಮಾಡುವುದಾಗಲಿ ಮಾಡಲು ಸಾಧ್ಯವಿಲ್ಲ.
ಇನ್ನು ಮದುವೆಗೆ ಮಾಡುವ ಸಾಲ ಕೂಡ ವ್ಯರ್ಥ, ನಮ್ಮ ಬಜೆಟ್ ಎಷ್ಟಿದೆ ಅಷ್ಟರೊಳಗೆ ಮದುವೆ ಮಾಡಿದರೆ ಮದುವೆಯಾದ ಬಳಿಕ ನೆಮ್ಮದಿಯ ಬದುಕು ನಡೆಸಬಹುದು, ಇಲ್ಲದಿದ್ದರೆ ಒಂದಿಷ್ಟು ವರ್ಷ ಸಾಲ ತೀರಿಸಲು ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಸಾಲ ಮಾಡಿ, ಮಾಡುವ ಸಾಲದಿಂದ ನಾವು ಶ್ರೀಮಂತರಾಗಬೇಕೆ ಹೊರತು ಬಡವರಾಗಬಹುದು.



Click it and Unblock the Notifications
