Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ಒಂದು ಮೊಟ್ಟೆಯ ಬೆಲೆ 21 ಸಾವಿರ..! ಕೋಟಿಯಲ್ಲಿ ಒಂದೇ ಮೊಟ್ಟೆ ಇದು..!
ನೀವು ಒಂದು ಕೋಳಿ ಮೊಟ್ಟಗೆ ಹೆಚ್ಚೆಂದರೆ 10 ರೂಪಾಯಿ ನೀಡಿ ಖರೀದಿಸಿರಹುದು. ಈಗ 5ರಿಂದ 6 ರೂಪಾಯಿಗೆ ಒಂದು ಮೊಟ್ಟೆ ಸಿಗುತ್ತದೆ. ನೀವು ಯಾವ ಮಾರುಕಟ್ಟೆಗೆ ಹೋದರ ಮೊಟ್ಟೆಯ ಬೆಲೆ ಇಷ್ಟೇ ಇರುತ್ತದೆ. ಆದ್ರೆ ಇಲ್ಲೊಂದು ಮೊಟ್ಟಗೆ ಮಾತ್ರ ನೀವ್ಯಾರು ಊಹಿಸಿರದ ದರವಿದೆ. ಹೌದ ಇಂಗ್ಲೆಂಡ್‌ನಲ್ಲಿ ನಡೆದ ಹರಾಜಿನಲ್ಲಿ ಮೊಟ್ಟೆಯೊಂದು ದಾಖಲೆ ಬೆಲೆಗೆ ಮಾರಾಟವಾಗಿದೆ.
ಈ ಭೂಮಿ ನಡೆಯುವ ಕೆಲವೊಂದು ವಿಚಿತ್ರ ಘಟನೆಗಳು ನಿಮಗೆ ಅಚ್ಚರಿ ಜೊತೆಗೆ ಅಘಾತ ತರುತ್ತವೆ. ಇಲ್ಲಿ ಈ ಮೊಟ್ಟೆಯ ಹರಾಜು ಕೂಡ ಹಲವರಿಗೆ ಈ ರೀತಿ ಅನಿಸದೆ ಇರದು. ಅಪರೂಪದಲ್ಲಿ ಅಪರೂಪದವಾದ ಮೊಟ್ಟೆ ಬರೋಬ್ಬರಿ 21 ಸಾವಿರ ರೂಪಾಯಿಗೆ ಹರಾಜಾಗಿ ದಾಖಲೆ ಬರೆದಿದೆ. ಹಾಗಾದ್ರೆ ಈ ಮೊಟ್ಟೆಯ ವಿಶೇಷತೆ ಏನು? ಇಷ್ಟೊಂದು ಬೆಲೆ ಏಕೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಬರ್ಕ್‌ಷೈರ್‌ನ ಲ್ಯಾಂಬೌರ್ನ್‌ನಿಂದ ಎಡ್ ಪಾವ್ನೆಲ್ಎಂಬಾತ ಈ ಮೊಟ್ಟೆಯ ಮಾಲಿಕರಾಗಿದ್ದಾರೆ. ಶತಕೋಟಿಗಳಲ್ಲಿ ಈ ಮೊಟ್ಟೆ ಒಂದು ಎಂದು ಹೇಳಲಾಗಿದೆ ಏಕೆಂದರೆ ಈ ಮೊಟ್ಟೆ ಸಾಮಾನ್ಯ ಮೊಟ್ಟೆಗಳಂತಿರದೆ ವೃತ್ತಾಕಾರ ಹೊಂದಿದೆ. ಹೌದು ಮೊಟ್ಟೆಗಳು ಸಾಮಾನ್ಯವಾಗಿ ಗೋಳಾಕಾರ ಇರುವುದಿಲ್ಲ. ಒಂದು ಬದಿ ಚೂಪಾದ ರಚನೆಯಿಂದ ಅದು ಕೂಡಿರುತ್ತದೆ. ಆದ್ರೆ ಈ ಮೊಟ್ಟೆ ನಿಂಬೆ ಹಣ್ಣಿನಂತೆ ಗೋಳಾಕಾರವಾಗಿತ್ತು, ಈ ರೀತಿ ಆಕಾರದ ಮೊಟ್ಟೆ ಶತಕೋಟಿಗಳಲ್ಲಿ ಒಂದು ಎನ್ನಲಾಗಿದೆ.
ಈ ಮೊಟ್ಟೆಯನ್ನು ಚಾರಿಟಿ ಮೂಲಕ ಹರಾಜು ಮಾಡಲಾಗಿದೆ. ಮೊಟ್ಟೆಯನ್ನು ಮಾರಾಟ ಮಾಡಲು ಪೊವ್ನೆಲ್ ಅವರು ರೋಜ್ ರಾಪ್ ಚಾರಿಟಿಗೆ ಹಸ್ತಾಂತರಿಸಿದ್ದರು. ಈ ಹರಾಜಿನಿಂದ ಸಂಗ್ರಹಿಸಲಾದ ಹಣದಿಂದ ಮಾನಸಿಕ ಆರೋಗ್ಯದೊಂದಿಗೆ ಹೋರಾಡುತ್ತಿರುವ 13-25 ವರ್ಷ ವಯಸ್ಸಿನವರಿಗೆ ಸಹಾಯ ಮಾಡಲು ನಿರ್ಧರಿಸಲಾಗಿದೆ. ಅವರಿಗೆ ಅಗತ್ಯವಿರುವ ಔಷಧಿ ನೆರವು, ಚಿಕಿತ್ಸೆ ಹೀಗೆ ಬೇರೆ ಕಾರ್ಯಗಳಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
ವಿಶೇಷವಾಗಿ ಈ ಮೊಟ್ಟೆಯನ್ನು ಮತ್ತಷ್ಟು ವರ್ಷಗಳ ಕಾಲ ಶೇಖರಿಸಿಡುವ ಉದ್ದೇಶದಿಂದ ಅದರ ಒಳಗಿರುವ ಬಿಳಿ ಹಾಗೂ ಹಳದಿಯ ಅಂಶಗಳನ್ನು ಹೊರತೆಗೆಯಲಾಗಿದ್ದು ಬರಿ ಮೊಟ್ಟೆಯ ಪದರವನ್ನು ಉಳಿಸಿಕೊಳ್ಳಲಾಗಿದೆ. ಹೀಗಾಗಿ ಈ ಮೊಟ್ಟೆ ಎಂದಿಗೂ ಹಾಳಾಗುವುದಿಲ್ಲ. ಹೀಗಾಗಿ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಇದು ಮಾರಾಟವಾಗಿದೆ. ನೋಡಲು ಕೂಡ ಈ ಮೊಟ್ಟೆ ಆರ್ಕಷಕವಾಗಿ ಕಂಡುಬರುತ್ತದೆ.
ಮೊಟ್ಟೆಗಳ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ.!
ಮೊಟ್ಟೆಯ ಚಿಪ್ಪನ್ನು ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಇತರ ಖನಿಜಗಳನ್ನು ಸೇರಿಸಲು ನೈಸರ್ಗಿಕ ಗೊಬ್ಬರವಾಗಿ ಬಳಸಬಹುದು. ಹೀಗಾಗಿ ಸಾವಯವ ಗೊಬ್ಬರದಲ್ಲಿ ಮೊಟ್ಟೆಯ ಚಿಪ್ಪುಗಳನ್ನು ಬಳಕೆ ಮಾಡುವುದು ಇಂದಿಗೂ ಚಾಲ್ತಿಯಲ್ಲಿದೆ
ಮೊಟ್ಟೆಗಳು ನಿಮ್ಮ ದೃಷ್ಟಿಗೆ ಆರೋಗ್ಯಕರ. ಅವು ಲುಟೀನ್ ಎಂಬ ಅಂಶ ಒಳಗೊಂಡಿರುತ್ತವೆ, ಇದು ಸ್ನಾಯುವಿನ ಕ್ಷೀಣತೆ ಮತ್ತು ಕಣ್ಣಿನ ಪೊರೆಗಳ ವಿರುದ್ಧ ರಕ್ಷಣೆ ನೀಡಲಿದೆ.
ಮೊಟ್ಟೆಯ ಚಿಪ್ಪಿನ ಬಣ್ಣವು ತಳಿಯನ್ನು ಅವಲಂಬಿಸಿರುತ್ತದೆ. ಕೆಲವು ತಳಿಗಳು ನೀಲಿ, ಹಸಿರು ಅಥವಾ ಗುಲಾಬಿ ಬಣ್ಣದ ಮೊಟ್ಟೆಗಳನ್ನು ಸಹ ಉತ್ಪಾದಿಸಬಹುದು, ಹೆಚ್ಚಿನ ವಾಣಿಜ್ಯಿಕವಾಗಿ ಉತ್ಪತ್ತಿಯಾಗುವ ಮೊಟ್ಟೆಗಳು ಕಂದು ಅಥವಾ ಬಿಳಿಯಾಗಿರುತ್ತವೆ. ಕಂದು ಮೊಟ್ಟೆಗಳನ್ನು ಇಡುವ ಕೋಳಿಗಳು ದೊಡ್ಡದಾಗಿರುತ್ತವೆ ಮತ್ತು ಹೆಚ್ಚಿನ ಆಹಾರದ ಅಗತ್ಯವಿರುತ್ತದೆ, ಕಂದು ಮೊಟ್ಟೆಗಳು ಹೆಚ್ಚು ದುಬಾರಿಯಾಗಿದೆ.



Click it and Unblock the Notifications
