ದುಬೈಯಲ್ಲಿ ಫ್ಯಾನ್ಸಿ ನಂಬರ್‌ಗೆ ಮಾರಾಟವಾದ ಬೆಲೆ ಕೇಳಿದರೆ ಅಚ್ಚರಿಯಾಗುತ್ತೆ, ಒಂದರೆಡು ಕೋಟಿಗೆ ಅಲ್ಲ ಇದಕ್ಕೆ ಸಿಕ್ಕ ಬೆಲೆ

ಮೊಬೈಲ್‌, ಕಾರು, ಬೈಕ್‌ಗೆ ಫ್ಯಾನ್ಸಿ ನಂಬರ್‌, ಲಕ್ಕಿ ನಂಬರ್‌ ಅನ್ನು ದುಬಾರಿ ದುಡ್ಡು ಖರೀದಿಸುವುದನ್ನು ನೋಡಿರುತ್ತೇವೆ. ಆದರೆ ಈ ಪಾಟಿ ದುಬಾರಿ ಹಣ ಕೊಟ್ಟು ನಂಬರ್‌ ಖರೀದಿಸುವವರೂ ಇದ್ದಾರೆ ಎಂದರೆ ಖಂಡಿತ ಅಚ್ಚರಿಯಾಗುತ್ತೆ, ಎಂಥ ಐಷಾರಾಮಿ ಬದುಕು ಎಂದನಿಸದೆ ಇರಲ್ಲ.

058-7777777 ಈ ನಂಬರ್ ಖರೀದಿಸಲು ಚಾರಿಟಿ ಹರಾಜು ಕರೆಯಲಾಯ್ತು. ಆದರೆ ಈ ನಂಬರ್ ಅನ್ನು ಖರೀದಿಸಿದ ಬೆಲೆ ಕೇಳಿದರೆ ಅಬ್ಬಾ! ಇಷ್ಟೊಂದು ಬೆಲೆಗೆ ಖರೀದಿಸುವವರು ಇದ್ದಾರಾ ಎಂದು ಅಚ್ಚರಿ ಉಂಟಾಗುವುದು. ಈ ಸಂಖ್ಯೆ ಖರೀದಿಸಲು ವ್ಯಕ್ತಿಯೊಬ್ಬರು ಖರೀದಿಸಿದ ಬೆಲೆ ಕೇಳಿದರೆ ದಂಗಾಗುತ್ತೇವೆ. ಈ ಸಿಮ್‌ ಕಾಲ್‌ ಗೆ ಬೆಲೆ ಸಿಕ್ಕಿದರೆ AED 3,200,000 ( ಅಂದರೆ ಭಾರತೀಯ ರುಪಾಯಿ ಪ್ರಕಾರ ಬರೋಬರಿ 7 ಕೋಟಿ).

Dubai Auction

ಹರಾಜು ಪ್ರಕ್ರಿಯೆ ಪ್ರಾರಂಭವಾಗಿದ್ದು AED 100,000 (ಸುಮಾರು 22 ಲಕ್ಷಕ್ಕೆ ).ಈ ಹರಾಜು ಪ್ರಕ್ರಿಯೆ ತುಂಬಾನೇ ಚುರುಕಾಗಿ ನಡೆಯಿತು. ಈ ಹರಾಜು ಪ್ರಾರಂಭವಾದ 3 ಸೆಕೆಂಡ್ ಒಳಗೆ ಇದರ ಬೆಲೆ ಹೆಚ್ಚಾಗುತ್ತಾ ಹೋಯ್ತು. 7 ಎಂಬುವುದು ಅದೃಷ್ಟದ ಸಂಖ್ಯೆ ಜೊತೆಗೆ ಫ್ಯಾನ್ಸಿ ನಂಬರ್ ಕೂಡ ಆಗಿರುವುದರಿಂದ ಜನರನ್ನು ಬಹು ಬೇಗನೆ ಆಕರ್ಷಿಸಿತು.

ಈ ಹರಾಜಿನಲ್ಲಿ ಸುಮಾರು 86 ಕೋಟಿ ಹಣ ಸಂಗ್ರಹವಾಯ್ತು ಎಂದು ಹೇಳಲಾಗುವುದು. ಮತ್ತೊಂದು ಫ್ಯಾನ್ಸಿ ಸಂಖ್ಯೆಗೆ 65 ಕೋಟಿ ಹಣ ಸಂಗ್ರಹವಾಯ್ತು, ಮತ್ತೊಂದು ಫ್ಯಾನ್ಸಿ ನಂಬರ್‌ಗೆ ಕೋಟಿ ಹಣ ಸಂಗ್ರಹವಾಗಿದೆ.

ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 10 ಫ್ಯಾನ್ಸಿ ನಂಬರ್ ಇತ್ತು ಹಾಗೂ 21 ಮೊಬೈಲ್‌ ನಂಬರ್‌ಗಳಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ದುಬೈನ ಮಂತ್ರಿಗಳನ್ನು ಸೇರಿ ಅನೇಕರು ವಿಐಪಿಗಳಿದ್ದರು.

ಈ ಸುದ್ದಿ ಕೇಳಿದರೆ ಜನರಿಗೆ ತುಂಬಾ ಹಣವಿದೆ, ಹಾಗಾಗಿ ಈ ರೀತಿ ಸಿಮ್‌ ಕಾರ್ಡ್‌ಗೆ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಹೇಳಿದರೆ ಇನ್ನು ಕೆಲವರು ಯಾವಾಗ ಹಣವನ್ನು ಏನು ಮಾಡಬೇಕೆಂದು ತಿಳಿಯದಾದಾಗ ಈ ರೀತಿಯೆಲ್ಲಾ ಆಗುತ್ತೆ ಎಂದು ಹೇಳಿದ್ದಾರೆ.

ವೆಲ್ತ್‌ ಎಂಬ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ 'ದುಬೈನಲ್ಲಿ ಸಿಮ್‌ ಕಾರ್ಡ್‌ವೊಂದು ಅಚ್ಚರಿಯ ಬೆಲೆಗೆ ಹರಾಜಾಗಿದೆ, ಈ ಸಿಮ್‌ ಕಾರ್ಡ್‌ ಬರೋಬರಿ $871,412 ಮೊತ್ತಕ್ಕೆ ಹರಾಜಾಗಿದೆ.

ಈ ರೀತಿಯ ಹರಾಜು ಪ್ರಕ್ರಿಯೆ ದುಬೈಯಲ್ಲಿ ಈಗ ಟ್ರೆಂಡ್ ಆಗಿದೆ. ವಿಶೇಷ ಸಿಮ್‌ ಕಾರ್ಡ್‌, ಗಾಡಿ ನಂಬರ್‌, ಲೈಸೆನ್ಸ್‌ ನಂಬರ್ ಎಲ್ಲಾ ಈ ರೀತಿಯ ಫ್ಯಾನ್ಸಿ ನಂಬರ್‌ ಹರಾಜು ಹಾಕಲಾಗುವುದು, ನಂತರ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದೀಗ ಒಂದು ಸಿಮ್‌ಕಾರ್ಡ್‌ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ದೊಡ್ಡ ಸುದ್ದಿಯಾಗಿದೆ.

In Dubai, a sim card with a unique phone number was recently sold for an astonishing $871,412 at auction!

This is part of a larger trend in the United Arab Emirates, where exclusive phone numbers and license plates are highly sought after as status symbols among the wealthy.

The eye-catching $871,412 price tag for this unique phone number shows the willingness of some affluent individuals in Dubai to invest substantial sums in order to secure these rare and prestigious assets.)

English summary

This Mobile Number Fetched These Many Crore At Dubai Auction

This Mobile Number Fetched These Many Crore At Dubai Auction, read on...
Story first published: Wednesday, April 3, 2024, 20:00 [IST]
X
Desktop Bottom Promotion