Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವರ್ಷಕ್ಕೆ 8,000 ಕೆಜಿ ಚಿನ್ನ ಉತ್ಪಾದಿಸುವ ಗಣಿ ಇದು: ಬರೋಬ್ಬರಿ 4 ಕಿ.ಮೀ ಆಳ ಇರುವ ಏಕೈಕ ಗಣಿ!
ವಿಶ್ವದಲ್ಲಿ ಈಗ ತೈಲ ದರ ಬಿಟ್ಟರೆ ಏರಿಕೆಯಾಗುತ್ತಿರುವುದು ಚಿನ್ನದ ದರ. ಭಾರತದಲ್ಲಿ ಚಿನ್ನದ ದರ ಗಗನಕ್ಕೇರಿದೆ. ಮಧ್ಯಮವರ್ಗ ಸಾಲ ಮಾಡಿ ಚಿನ್ನ ಖರೀದಿಸಬೇಕಾದ ಸ್ಥಿತಿಗೆ ಬಂದಿದೆ. ಹಾಗೆ ಈ ದರ ಏರಿಕೆಯಾಗುತ್ತಲೇ ಇದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ದರದಲ್ಲಿ ಏರಿಕೆಯಾಗುತ್ತಿರುವುದು ನೋಡಬಹುದು. ಹಾಗೆ ಭೂಮಿ ಮೇಲಿನ ಚಿನ್ನ ನಿಕ್ಷೇಪಗಳು ಕೂಡ ಬರಿದಾಗುತ್ತಿವೆ.
ದಶಕಗಳಿಂದ ಚಿನ್ನವನ್ನು ತೆಗೆದ ಪರಿಣಾಮವಾಗಿ ಹಲವು ಚಿನ್ನದ ಗಣಿಗಳಲ್ಲಿ ಈಗ ಸಿಗುವ ಚಿನ್ನದ ಪ್ರಮಾಣ ಬಹಳ ಕಡಿಮೆಯಾಗಿದೆ. ಭಾರತದ ಬಹುತೇಕ ಹಳೆಯ ಚಿನ್ನದ ಗಣಿಗಳಿಂದ ನಾವೀಗ ಕೆಲವೇ ಪ್ರಮಾಣದ ಚಿನ್ನ ಪಡೆಯುತ್ತಿದ್ದೇವೆ. ಹಾಗೆ ಹಲವು ಗಣಿಗಳು ಈಗಾಗಲೇ ಬಂದ್ ಆಗಿದೆ. ಹಾಗೆ ಹೊಸ ನಿಕ್ಷೇಪಗಳ ಹುಡುಕಾಟದಲ್ಲಿದ್ದೇವೆ.

ಚಿನ್ನವು ಒಂದಲ್ಲಾ ಒಂದು ದಿನ ಮುಗಿದು ಹೋಗುವ ಸಂಪನ್ಮೂಲವಾಗಿದೆ. ಒಮ್ಮೆ ಭೂಮಿಯಿಂದ ಕಣ್ಮರೆಯಾದರೆ ಮತ್ತೆ ಉತ್ಪಾದಿಸಲು ಸಾಧ್ಯವಿಲ್ಲ. ಹಾಗೆ ಇಂದಿಗೂ ಹಲವು ದೇಶದಲ್ಲಿ ಚಿನ್ನದ ಗಣಿ ಅತ್ಯುತ್ತಮ ಆದಾಯ ಮೂಲವಾಗಿದೆ. ಅವರ ಇಡೀ ದೇಶದ ಆರ್ಥಕತೆ ಈ ಚಿನ್ನದ ಗಣಿಯ ಉತ್ಪಾದನೆಯ ಮೇಲೆ ನಿಂತಿರಲಿದೆ. ಅಂತಹ ಒಂದು ಗಣಿಯಲ್ಲಿ ದಕ್ಷಿಣ ಆಫ್ರಿಕಾದ ಗಣಿ ಕೂಡ ಒಂದಾಗಿದೆ.
ದಕ್ಷಿಣಾ ಆಫ್ರಿಕಾದಲ್ಲಿ ಈ ನೈಸರ್ಗಿಕ ಸಂಪತ್ತು ಅಧಿಕವಾಗಿ ಸಿಗುತ್ತದೆ. ಆದ್ರೆ ಈ ಚಿನ್ನದ ಗಣಿ ನೀವು ಊಹಿಸಲು ಸಾಧ್ಯವಿಲ್ಲದಷ್ಟು ಪ್ರಮಾಣದ ಚಿನ್ನವನ್ನು ಜಗತ್ತಿಗೆ ಪೂರೈಸುತ್ತಿದೆ. ಈ ಗಣಿ ಬರೋಬ್ಬರಿ 4 ಕಿ.ಮೀ ಆಳಕ್ಕೆ ಇಳಿದಿದೆ. ಇದು ಭೂಮಿ ಮೇಲಿನ ಯಾವುದೇ ಗಗನಚುಂಬಿ ಕಟ್ಟಡಕ್ಕಿಂತಲೂ ಹೆಚ್ಚೂ ಆಳವಾದ ಅಳತೆ ಹೊಂದಿದೆ.
ದಕ್ಷಿಣ ಆಫ್ರಿಕಾದ ಕಾರ್ಲ್ಟನ್‌ವಿಲ್ಲೆ ಬಳಿಯ ವಿಟ್‌ವಾಟರ್‌ಸ್ರಾಂಡ್ ದಡದಲ್ಲಿ ಈ ಗಣಿ ಇದೆ. ಈ ಗಣಿಯನ್ನು ಎಂಪೊನೆಂಗ್ ಚಿನ್ನದ ಗಣಿ ಎಂದು ಕರೆಯಲಾಗುತ್ತದೆ. ಈ ಗಣಿ 236 ಮೈಲುಗಳಿಗಿಂತ ಹೆಚ್ಚು ಸುರಂಗಗಳನ್ನು ಹೊಂದಿದೆ, ಇದು ಇಡೀ ನ್ಯೂಯಾರ್ಕ್ ನಗರದ ಸುರಂಗಮಾರ್ಗ ವ್ಯವಸ್ಥೆಗಿಂತ ಉದ್ದವಾಗಿದೆ. ವಿಶ್ವದ ಅತಿ ಎತ್ತರದ ಲಿಫ್ಟ್‌ಗಳನ್ನು ಬಳಸಿಕೊಂಡು ಸುಮಾರು ಎರಡರಿಂದ ಮೂರು ಗಂಟೆಗಳ ಸಮಯದಲ್ಲಿ ಈ ಗಣಿಯ ತಳವನ್ನು ತಲುಪಬಹುದು.
ಹಾಗೆ ಈ ಗಣಿಯು ಒಂದು ವರ್ಷಕ್ಕೆ ಬರೋಬ್ಬರಿ 8,000 ಕೆ.ಜಿ ಅಷ್ಟು ಚಿನ್ನವನ್ನು ಉತ್ಪಾದಿಸುತ್ತದೆ. ಇದು ಸುಮಾರು 250,000ರಿಂದ 275,000 ಔನ್ಸ್ ಆಗಿರಲಿದೆ. ಪ್ರತಿದಿನ ಗಣಿ ಕೆಲಸಗಾರರು 5,000 ಪೌಂಡ್ ಸ್ಟೋಟಕಗಳ ಬಳಸಿ ಸುಮಾರು 6,400 ಟನ್ ಬಂಡೆಗಳನ್ನು ಸ್ಪೋಟಿಸುತ್ತಾರೆ. ಹಾಗೆ ಈ ಗಣಿಯಲ್ಲಿ 24 ಗಂಟೆಗಳ ಕಾಲ ಕೆಲಸ ನಡೆಯುತ್ತದೆ.
ಚಿನ್ನ ಮಾತ್ರವಲ್ಲದೆ ಈ ಗಣಿಯಿಂದ ಮ್ಯಾಗ್ನಿಸ್, ಕಬ್ಬಿಣ ಸಹ ಸಿಗುತ್ತದೆ. ಕೆಲವೊಮ್ಮೆ ಕಾರ್ಮಿಕರು ಸುರಂಗಳ ಬಳಸಿಕೊಂಡು 3 ತಿಂಗಳ ಕಾಲ ನಿರಂತರವಾಗಿ ಅಲ್ಲಿಯೇ ಉಳಿಯುತ್ತಾರೆ. ಹಾಗೆ ಆಫ್ರಿಕಾದಲ್ಲಿ ಇದೊಂದೆ ಅಲ್ಲದೆ ಹಲವು ಆಳವಾದ ಚಿನ್ನದ ಗಣಿಗಳಿವೆ. ಅವು ಜಗತ್ತಿಗೆ ಸಾವಿರಾರು ಕೆ,ಜಿ ಅಷ್ಟು ಚಿನ್ನ ಪೂರೈಸುತ್ತಿವೆ.
ವಿಶ್ವದ ಹಳೆಯ ಚಿನ್ನದ ಗಣಿ ಇರೋದು ನಮ್ಮಲ್ಲೆ
ರಾಯಚೂರಿನ ಹಟ್ಟಿ ಚಿನ್ನದ ಗಣಿ ವಿಶ್ವದ ಅತ್ಯಂತ ಹಳೆಯ ಗಣಿಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ ಸುಮಾರು 1500 ಕೆ.ಜಿ ಚಿನ್ನವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಹಾಗೆ ಕೆಜಿಎಫ್ (ಕೋಲಾರ ಚಿನ್ನದ ಗಣಿ) ಇನ್ನೂ ಗಮನಾರ್ಹವಾದ ಚಿನ್ನದ ನಿಕ್ಷೇಪಗಳನ್ನು ಹೊಂದಿದೆ. ಆದ್ರೆ ದುಬಾರಿ ವೆಚ್ಚದ ಕಾರಣ 2001ರಲ್ಲಿ ಆಳ ಗಣಿಗಾರಿಕೆ ನಿಂತಿದೆ. ಆದ್ರೆ ಮೇಲ್ಭಾಗದಲ್ಲಿ ರಾಶಿ ಹಾಕಲಾಗಿರುವ ಡಂಪ್‌ನಿಂದ ಚಿನ್ನ ತೆಗೆಯಲು ಸರ್ಕಾರ ಹರಾಜು ಪ್ರಕ್ರಿಯೆಗೆ ಪ್ರಯತ್ನಿಸುತ್ತಲೇ ಇದೆ.



Click it and Unblock the Notifications
