Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಸ್ಕರ್ ರೇಸ್‌ಗೆ ಆಯ್ಕೆಯಾದ ಸಿನಿಮಾ ಇದು..! ಕನ್ನಡದ ಯಾವ ಸಿನಿಮಾ ಪಟ್ಟಿಯಲ್ಲಿದೆ?
97ನೇ ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದಿಂದ ಹಲವು ಸಿನಿಮಾಗಳ ಹೆಸರು ಹೇಳಿಬಂದಿತ್ತು. ಆಸ್ಕರ್ ಪಡೆಯುವುದು ದೊಡ್ಡ ಕನಸಾದರೆ, ಆಸ್ಕರ್‌ಗೆ ನಾಮ ನಿರ್ದೇಶನ ಆಗುವುದೇ ದೊಡ್ಡ ಹೆಮ್ಮಯ ವಿಚಾರವಾಗಿದೆ. ಭಾರತದಿಂದ ಈ ಬಾರಿ ಒಟ್ಟು 29 ಸಿನಿಮಾಗಳ ಪಟ್ಟಿ ಆಸ್ಕರ್ ರೇಸ್‌ನಲ್ಲಿದ್ದವು. ಆದರೆ ಈಗ ಒಂದು ಬಾಲಿವುಡ್ ಸಿನಿಮಾ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ಅದರಲ್ಲಿ ತಮಿಳಿನಿಂದ 6, ತೆಲುಗು 3, ಮಲಯಾಳಂ 4, ಒಡಿಯಾ 1, ಹಿಂದಿ 12, ಮರಾಠಿ 3 ಸಿನಿಮಾಗಳು ಈ ಪಟ್ಟಿಯಲ್ಲಿದ್ದವು. ಆದರೆ ಕನ್ನಡದಿಂದ ಒಂದೇ ಒಂದು ಸಿನಿಮಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ.

ಅಂತಿಮವಾಗಿ ಬಾಲಿವುಡ್‌ನ 'ಲಾಪತಾ ಲೇಡೀಸ್' ಭಾರತದಿಂದ ಆಸ್ಕರ್ ಅಕಾಡೆಮಿಕ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಘೋಷಿಸಿದೆ. ಈ ನಿರ್ಧಾರ ಚಿತ್ರದ ಅಸಾಧಾರಣ ಕಥಾಹಂದರ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಒತ್ತಿಹೇಳುತ್ತದೆ.
ಅಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನಮಾಡಿದ್ದ ಲಾಪತಾ ಲೇಡೀಸ್ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಇತರೆ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರಗಳೊಂದಿಗೆ ಸ್ಪರ್ಧೆಗಿಳಿಯಲಿದೆ. ಕಳೆದುಹೋದ ಹೆಂಡತಿಯರ ಸುತ್ತ ಸುತ್ತುವ ಈ ಚಿತ್ರ, ಮೇಲ್ನೋಟಕ್ಕೆ ಗೋಳಿನ ಕಥೆಯಂತೆ ಕಂಡರು ಕೂಡ ಚಿತ್ರವನ್ನು ಕಿರಣ್ ರಾವ್ ಹಾಸ್ಯಮಯವಾಗಿ ತೆರೆಗೆ ತಂದಿದ್ದಾರೆ.
ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ನಟಿಸಿದ್ದಾರೆ. ಈ ಮೂವರಿಗೂ ಇದು ಮೊದಲ ಸಿನಿಮಾ ಆಗಿತ್ತು. ಇವರ ಮೊದಲ ಪ್ರಯತ್ನದಲ್ಲೇ ಆಸ್ಕರ್‌ಗೆ ನಾಮ ನಿರ್ದೇಶನ ಆಗಿರುವುದು ಅವರಲ್ಲಿ ಅತೀವ ಅಚ್ಚರಿಗೆ ಕಾರಣವಾಗಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತ್ತಲ್ಲದೆ ಸಿನಿ ವಿಮರ್ಷಕರಿಂದಲೂ ಅಚ್ಚರಿಯ ಹೊಗಳಿಕೆಗೆ ಪಾತ್ರವಾಗಿತ್ತು.
ಟಫ್ ಕಾಂಪಿಟೇಟರ್ ಆಗಿದ್ದ ಮಹಾರಾಜ
ತಮಿಳಿನ ವಿಜಯ್ ಸೇತುಪತಿ ನಾಯಕನಾಗಿ ನಟಿಸಿದ್ದ ಮಹಾರಾಜ ಸಿನಿಮಾ ಸೂಪರ್ ಹಿಟ್ ಆಗಿತ್ತು. ಒಳ್ಳೆಯ ವಿಮರ್ಷೆಗೂ ಪಾತ್ರವಾಗಿತ್ತು. ತಮಿಳಿನಿಂದ ಆಯ್ಕೆಯಾಗಿದ್ದ ಸಿನಿಮಾಗಳಲ್ಲಿ ಮಹಾರಾಜ ಈ ಬಾರಿ ಆಸ್ಕರ್ ಗೆಲ್ಲುವ ಫೇವರಿಟ್ ಎನಿಸಿತ್ತು. ಆದರೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಅಳೆದು ತೈಗಿ ಲಾಪತ ಲೇಡಿಸ್ ಅನ್ನು ಆಯ್ಕೆ ಮಾಡಿದ್ದಾರೆ.
ಈ ಸಿನಿಮಾದ ಜೊತೆಗೆ ಪ್ರಭಾಸ್ ಅಭಿನಯದ ಕಲ್ಕಿ 2898 AD, ಹನುಮಾನ್, ರಣ್‌ದೀಪ್ ಹೂಡ ನಿರ್ದೇಶಿಸಿ ನಟಿಸಿರುವ ಸ್ವಾತಂತ್ರ್ಯ ವೀರ್ ಸಾವರಕರ್ , ಆರ್ಟಿಕಲ್ 370, ರಣ್‌ಬೀರ್ ಕಪೂರ್ ಅಭಿನಯದ ಅನಿಮಲ್, ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮಲಯಾಳಂನ ಆಟಂ ಸಿನಿಮಾ ಸೇರಿ ಮತ್ತೊಂದಿಷ್ಟು ಸಿನಿಮಾಗಳು ಈ ಪಟ್ಟಿಯಲ್ಲಿದ್ದವು.
ಲಾಪತಾ ಲೇಡಿಸ್ ಕಥೆ ಏನು?
ಕಳೆದುಹೋದ ಹೆಂಡತಿಯರ ಸುತ್ತ ಸುತ್ತುವ ಈ ಚಿತ್ರ, ಹಾಸ್ಯದ ಜೊತೆ ಭಾವನಾತ್ಮಕವಾಗಿ ಕೂಡ ಚಿತ್ರ ಸಾಗುತ್ತದೆ. ಲಿಂಗ ಸಮಾನತೆ ಮೇಲೆ ಕೇಂದ್ರೀಕರಿಸಿರುವ ಈ ಚಿತ್ರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ವ್ಯಾಪಕ ಪ್ರಶಂಸೆ ಸ್ವೀಕರಿಸಿತ್ತು. ಭಾರತದಲ್ಲಿ ಈ ಸಿನಿಮಾ ಸುಮಾರು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.



Click it and Unblock the Notifications

