Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಪಕ್ಷಿ ಪ್ರಪಂಚದ ಅತ್ಯಂತ ಸ್ವಾರ್ಥ ಪಕ್ಷಿ ಇದು..! ಕಣ್ಣು ಬಿಡುವ ಮುನ್ನವೇ ದೊಡ್ಡ ಕ್ರಿಮಿನಲ್!!
ನಾವು ಜೀವಿಸುವ ಈ ಪರಿಸರ ವ್ಯವಸ್ಥೆಯಲ್ಲಿ ಎಷ್ಟೊಂದು ವಿಚಿತ್ರಗಳು ನಡೆಯುತ್ತವೆ ಎಂದು ನಾವು ಊಹಿಸುವುದೇ ಕಷ್ಟವಾಗುತ್ತದೆ. ಅದ್ರಲ್ಲೂ ಪ್ರಾಣಿ, ಪಕ್ಷಿಗಳ ಪ್ರಪಂಚದಲ್ಲಿ ಎಷ್ಟೆಲ್ಲಾ ಅಚ್ಚರಿ ಸಂಗತಿಗಳು ಅಡಗಿವೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಹೀಗಾಗಿ ಪ್ರಾಣಿ ಪ್ರಪಂಚವನ್ನ ನಿಗೂಢತೆಗಳ ಬೀಡು ಎಂದು ಕರೆಯಲಾಗಿದೆ. ನಮಗೆ ಗೊತ್ತಿಲ್ಲದ ಮಹಾನ್ ಅಚ್ಚರಿಗಳೇ ಅಲ್ಲಿ ಅಡಗಿರುತ್ತವೆ.
ಇನ್ನು ಪಕ್ಷಿಗಳ ಲೋಕದಲ್ಲಿ ಲಕ್ಷ ಲಕ್ಷ ಪಕ್ಷಿ ಜಾತಿಗಳಿಂದು ಜೀವಿಸುತ್ತಿವೆ, ಭೂ ಮಂಡಲದ ಮೇಲೆ ಅದೆಷ್ಟು ವಿಚಿತ್ರ ರೀತಿಯ ಪಕ್ಷಿಗಳು ಜೀವಿಸುತ್ತಿವೆ ಎಂಬುದನ್ನ ಊಹಿಸಲು ಸಾಧ್ಯವಿಲ್ಲ. ಕೆಲವೊಂದು ನಶಿಸಿದ್ದರೆ ಮತ್ತೆ ಕೆಲವು ಅಳಿವಿನಂಚಿನಲ್ಲಿಯೂ ಇವೆ. ಆದ್ರೆ ಭೂಮಿ ಮೇಲೆ ಈಗ ವಾಸಿಸುತ್ತಿರುವ ಪಕ್ಷಿ ಸಂಕುಲಗಳು ಕುತೂಹಲಗಳ ತಮ್ಮಲ್ಲಿ ಇಟ್ಟುಕೊಂಡಿವೆ.
ಈಗ ನಾವಿಂದು ವಿಚಿತ್ರ ಪಕ್ಷಿಯೊಂದರ ಕುರಿತು ತಿಳಿಸುತ್ತೇವೆ ನೋಡಿ, ಈ ಪಕ್ಷಿ ಹುಟ್ಟಿ ಕಣ್ಣು ತೆರೆದು ಭೂಮಂಡಲವನ್ನ ನೋಡುವ ಮೊದಲೇ ಕೊಲೆಗಾರನಾಗಿರುತ್ತೆ ಅಂತಹ ವಿಚಿತ್ರ ಪಕ್ಷಿ ಇದು. ಇದು ಕೋಗಿಲೆಗಳ ಜಾತಿಗೆ ಸೇರಿರುವ ಕುಕ್ಯುಲಿಡೇ ಕುಟುಂಬಕ್ಕೆ ಸೇರಿದ ಪಕ್ಷಿಯಾಗಿದೆ. ಇದು ಯುರೋಪಿಯನ್ ಕೋಗಿಲೆ.

ಇದು ಗೂಡಿನಲ್ಲಿರುವಾಗ ವಿಚಿತ್ರ ವರ್ತನೆಯಿಂದ ಸುದ್ದಿಯಾಗುತ್ತದೆ. ಅಂದರೆ ಅದರ ತಾಯಿ ಮೂರು ಮೊಟ್ಟೆಗಳಿಡುತ್ತದೆ, ಈ ಮೂರು ಮೊಟ್ಟೆಗಳಲ್ಲಿ ಕೇವಲ ಒಂದು ಮೊಟ್ಟೆ ಮಾತ್ರ ಮರಿಯೊಡೆದು ಹೊರಬಂದು ಭೂಮಿ ಮೇಲೆ ನೆಲೆಸುತ್ತದೆ. ಉಳಿದ ಎರಡು ಮೊಟ್ಟೆಗಳನ್ನು ಮೊದಲು ಹೊರಬಂದ ಮರಿ ಕೊಲೆ ಮಾಡುತ್ತದೆ.
ನಿಮಗಿದು ಅಚ್ಚರಿ ಎನಿಸಬಹುದು. ಪ್ರಾಣಿ ಪ್ರಪಂಚದ ಅತ್ಯಂತ ಸ್ವಾರ್ಥ ಪಕ್ಷಿ ಎಂದೇ ಇದನ್ನು ಕರೆಯಲಾಗುತ್ತದೆ. ಇದು ಮೊದಲು ಮೊಟ್ಟೆಯಿಂದ ಹೊರಬಂದ ತಕ್ಷಣ ಗೂಡಿನಿಂದ ತಾಯಿ ಪಕ್ಷಿ ಆಹಾರ ಹುಡುಕಲು ಹೋದಾಗ ಕಣ್ಣು ಬಿಡದ ಮರಿ ಹಕ್ಕಿಯ ಕ್ರಿಮಿನಲ್ ಮೈಂಡ್ ಕೆಲಸ ಮಾಡಲು ಆರಂಭಿಸುತ್ತೆ. ತನ್ನ ಸುತ್ತ ಇರುವ ಇನ್ನೆರಡು ಮೊಟ್ಟೆಗಳ ನಾಶಕ್ಕೆ ಅದು ಮುಂದಾಗಲಿದೆ.
ಗೂಡಿನಲ್ಲಿರುವ ಎರಡು ಮೊಟ್ಟೆಗಳನ್ನು ಅದು ಹೊರಕ್ಕೆ ಎಸೆಯಲು ಮುಂದಾಗುತ್ತದೆ. ಆಗ ತಾನೆ ಹುಟ್ಟಿರುವ ಮರಿಗೆ ಶಕ್ತಿಯೇ ಇಲ್ಲದಿದ್ದರೂ ತನ್ನ ಬೆನ್ನು ಬಳಸಿ ಮೊಟ್ಟೆಗಳನ್ನು ಗೂಡಿನಿಂದ ಹೊರದೂಡಲು ಮುಂದಾಗುತ್ತದೆ. ಹೇಗಾದರು ಮಾಡಿ ಎರಡು ಮೊಟ್ಟೆಗಳನ್ನು ಗೂಡಿನಿಂದ ಕೆಳಗೆ ದೂಡಲ್ಪಡುತ್ತದೆ. ಏಕೆಂದರೆ ತಾಯಿ ತನಗಷ್ಟೇ ಆಹಾರ ತಂದು ನೀಡಬೇಕು, ತಾನೊಂದೆ ಬದುಕುಳಿಯಬೇಕು ಎಂಬ ಸ್ವಾರ್ಥ ಆ ಮರಿ ಪಕ್ಷಿಯಲ್ಲಿರುತ್ತದೆ. ಹೀಗಾಗಿ ಕಣ್ಣು ಬಿಟ್ಟು ಪ್ರಪಂಚ ನೋಡುವ ಮೊದಲೇ ಇದು ಕೊಲೆಗಾರ ಪಕ್ಷಿಯಾಗಿ ಬದಲಾಗಿರುತ್ತದೆ.
ಈ ಜಾತಿಯ ಎಲ್ಲಾ ಪಕ್ಷಿಗಳಲ್ಲೂ ಅಂದರೆ ರೋಡ್‌ರನ್ನರ್ಸ್, ಕೋಯೆಲ್ಸ್, ಮಲ್ಕೋಹಾಸ್, ಕೂವಾಸ್, ಕೂಕಲ್ಸ್ ಮತ್ತು ಅನಿಸ್‌ಗಳನ್ನು ಒಳಗೊಂಡಿದೆ. ಕೌಕಲ್‌ಗಳು ಮತ್ತು ಅನಿಸ್ ಜಾತಿಯ ಪಕ್ಷಿಗಳಲ್ಲೂ ಈ ರೀತಿ ವರ್ತನೆ ನೋಡಬಹುದಂತೆ. ಅಚ್ಚರಿ ಏನೆಂದರೆ ಹುಟ್ಟುವಾಗಲೇ ಇವಕ್ಕೆ ಈ ರೀತಿ ವರ್ತನೆ ಬರಲು ಕಾರಣವೇನು ಎಂಬುದು ತಿಳಿದಿಲ್ಲ. ಆದರೆ ಈ ಪಕ್ಷಿ ಜೀನ್ಸ್ ಮೂಲಕ ಇಂತಹ ಸ್ವಾರ್ಥ ವರ್ತನೆ ತಾಳಿರುತ್ತವೆ. ಮೊದಲು ಮೊಟ್ಟೆಯಿಂದ ಹೊರಬರುವ ಪಕ್ಷಿ ಉಳಿದ ಯಾವುದೇ ಮೊಟ್ಟೆಯನ್ನು ಗೂಡಿನಲ್ಲಿ ಉಳಿಸುವುದಿಲ್ಲ.
ಆದರೆ ತಾಯಿ ಗೂಡಿನಲ್ಲಿ ಇರುವಷ್ಟು ಹೊತ್ತು ಮಾತ್ರ ಆ ಮೊಟ್ಟೆಗಳು ಸುರಕ್ಷಿತವಾಗಿರುತ್ತವೆ, ಒಂದು ವೇಳೆ ಎರಡು ಮರಿಗಳು ಮೊಟ್ಟೆಯಿಂದ ಹೊರಬಂದರೂ ಉಳಿದ ಮೊಟ್ಟೆಗಳ ಬೀಳಿಸಿ ಅವೆರಡು ಮರಿಗಳು ಒಂದಾನೊಂದು ಮುಗಿಸಲು ಮುಂದಾಗುತ್ತವೆ. ಅದೃಷ್ಟಕ್ಕೆ ತಾಯಿ ಪಕ್ಷಿ ವಾಪಾಸು ಗೂಡಿಗೆ ಬಂದರೆ ಎರಡು ಬದುಕುಳಿಯುತ್ತವೆ. ಆದರೆ ತಾಯಿ ಆಹಾರ ಹುಡುಕಿ ಬರುವುದು ತಡವಾದರೆ ಯಾವುದಾದರು ಒಂದು ಗೂಡಿನಿಂದ ಕೆಳಗೆ ಬಿದ್ದು ಮೃತಪಟ್ಟಿರುತ್ತದೆ. ಇದು ಪಕ್ಷಿ ಜಗತ್ತಿನ ಅತ್ಯಂತ ಸ್ವಾರ್ಥ ಪಕ್ಷಿಯಾಗಿದೆ.



Click it and Unblock the Notifications
