Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ವಿಶ್ವದ ಅತ್ಯಂತ ಕಿರಿಯ ತಾಯಿ ಯಾರು ಗೊತ್ತಾ? ಆಕೆ 5 ವರ್ಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದ ಕಥೆ ಇದು!!
ಈ ಭೂಮಿ ಮೇಲೆ ಎಂತಹ ವಿಚಿತ್ರ ರೀತಿಯ ಘಟನೆಗಳು ನಡೆಯುತ್ತವೆ ಅಂದರೆ ನೀವು ಅದನ್ನು ಕೆಲವೊಮ್ಮೆ ಊಹಿಸುವುದು ಸಹ ಕಷ್ಟವಾಗುತ್ತದೆ. ಹಲವು ಬಾರಿ ಇಂತಹ ಘಟನೆಗಳು ನಿಮಗೆ ಅಚ್ಚರಿ ಹಾಗೂ ಕುತೂಹಲ ಮೂಡಿಸುತ್ತವೆ. ಅಂತಹ ಹತ್ತು ಹಲವು ವಿಚಾರಗಳು ಅಥವಾ ಘಟನೆಗಳ ಪೈಕಿ ನಾವಿಂದು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಗರ್ಭಧರಿಸಿದ ಹುಡುಗಿಯ ಕಥೆಯೊಂದರ ಕುರಿತಾಗಿ ತಿಳಿದುಕೊಳ್ಳೋಣ.
ಗರ್ಭಧರಿಸಲು ಮಹಿಳೆ ಒಂದು ವಯಸ್ಸಿಗೆ ಬರಬೇಕು. ಹಾಗೆ ಕಾನೂನು ಪ್ರಕಾರವಾಗಿಯೂ ಆ ವಯಸ್ಸನ್ನು ನಿಗಧಿ ಮಾಡಲಾಗಿದೆ. ಇದು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ವಿಶ್ವದ ಯಾವುದೇ ದೇಶಕ್ಕೆ ಹೋದರು ಸಹ ನೋಡಬಹುದು. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಚಿಕ್ಕ ಮಗು ಗರ್ಭಧರಿಸಿ ತನ್ನಂತೆ ಮತ್ತೊಂದು ಮಗುವಿಗೆ ಜನ್ಮ ನೀಡಿದ ವಿಚಿತ್ರ ಹಾಗೂ ಅಷ್ಟೇ ಕುತೂಹಲಕಾರಿ ಘಟನೆ ನೋಡಬಹುದು.

ಈ ಘಟನೆ ನಡೆದಿರುವುದು ಸೌತ್ ಅಮೆರಿಕದ ಸಣ್ಣ ದೇಶ ಪೆರುವಿನಲ್ಲಿ. ಪೆರುವಿನ ಸಣ್ಣ ಹಳ್ಳಿಯಾಗಿರುವ ಆಂಡಿಯನ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಹೌದು ಆಕೆ ಕೇವಲ 5 ವರ್ಷದ ಹುಡುಗಿ ಚಿಕ್ಕ ಮಗುವಿಗೆ ಜನ್ಮ ನೀಡಿದ್ದಳು. ಇದು ಇಡೀ ವೈದ್ಯಕೀಯ ಪ್ರಪಂಚಕ್ಕೆ ದೊಡ್ಡ ಅಚ್ಚರಿಯಾಗಿತ್ತು, ಹಾಗೆ ಆಕೆಯನ್ನು ವಿಶ್ವದ ಅತ್ಯಂತ ಕಿರಿ ವಯಸ್ಸಿನ ತಾಯಿ ಎಂದು ಕರೆಯಲಾಗಿತ್ತು.
ಏನಿದು ಘಟನೆ ಆಕೆ ತಾಯಿಯಾಗಿದ್ದು ಹೇಗೆ?
ಆಂಡಿಯನ್ ಹಳ್ಳಿಯಲ್ಲಿ 5 ವರ್ಷದ ಲೀನಾ ಮದೀನಾ ಎಂಬ ಹುಡುಗಿ 5 ವರ್ಷದವಳಾಗಿದ್ದಾಗ ಮಗುವಿಗೆ ಜನ್ಮ ನೀಡಿದ್ದಳು. ಇದು 1939ರಲ್ಲಿ ನಡೆದ ಘಟನೆಯಾಗಿದೆ. ಆಕೆಯ ಹೊಟ್ಟೆಯಲ್ಲಿ ಗಡ್ಡೆ ಬೆಳೆಯುತ್ತಿದೆ ಎಂದು ನಂಬಲಾಗಿತ್ತಾದರೂ ಬಳಿಕ ಆಕೆಯ ಹೊಟ್ಟೆಯಲ್ಲು ಭ್ರೂಣವಿದೆ ಎಂದು ತಿಳಿದು ಎಲ್ಲರು ಆಘಾತಕ್ಕೊಳಗಾಗಿದ್ದರು.
ಲೀನಾಗೆ ಪೂರ್ಣ ಪರೀಕ್ಷೆಯನ್ನು ನೀಡಿದ ನಂತರ ವೈದ್ಯರು ಆಘಾತಕಾರಿ ವಿಚಾರ ಹೇಳಿದ್ದರು. ಆಕೆಯನ್ನು ಪರೀಕ್ಷೆಗೆ ಒಳಪಡಿಸುವ ಸಮಯಕ್ಕೆ ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು. ಹಾಗೆ ಆಕೆಗೆ ಶಸ್ತ್ರಚಿಕಿತ್ಸೆ ಮೂಲಕ 3 ಕೆ.ಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದಳು. ಈ ವೇಳೆಗೆ ಆಕೆ 5 ವರ್ಷ 7 ತಿಂಗಳು 21 ದಿನದ ಮಗು ಆಗಿದ್ದಳು. ಹೀಗಾಗಿ ವಿಶ್ವದ ಅತ್ಯಂತ ಕಿರಿಯ ತಾಯಿ ಎಂಬ ಕೀರ್ತಿ ಪಡೆದಳು.
ಆಕೆ ಗರ್ಭಿಣಿಯಾಗಿದ್ದಕ್ಕೆ ಸಿಗಲಿಲ್ಲ ಉತ್ತರ!
ಲೀನಾ ಗರ್ಭಿಣಿಯಾಗಿರುವುದು ಆರಂಭದಲ್ಲಿ ಪೋಷಕರಿಗೂ ತಿಳಿದಿರಲಿಲ್ಲ. ಆಕೆಯ ಉದರ ಉಬ್ಬಿಕೊಂಡಿದ್ದ ಕಾರಣ ಹೊಟ್ಟೆಯಲ್ಲಿ ಕ್ಯಾನ್ಸರ್ ಅಥವಾ ಇನ್ಯಾವುದೇ ಅನಾರೋಗ್ಯ ಇರಬಹುದು ಎಂದು ಪರೀಕ್ಷೆಗೆ ಮುಂದಾಗಲಾಗಿತ್ತು. ಆದ್ರೆ ಆಕೆ ಗರ್ಭಿಣಿ ಎಂಬ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದರು. ಆದ್ರೆ ಆಕೆ ಗರ್ಭಿಣಿಯಾಗಿರುವುದು ಹೇಗೆ ಅನ್ನೋದನ್ನು ಪತ್ತೆ ಮಾಡಲು ವೈದ್ಯರ ತಂಡ ಹಾಗೆ ಅಧಿಕಾರಿಗಳು ಸಹ ಮುಂದಾದರು.
ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸಲು ಮುಖ್ಯವಾಗಿ ಬೇಕಾಗಿದ್ದ ಅಂಗ ಆಕೆಯಲ್ಲಿ ರೂಪುಗೊಂಡಿತ್ತು. ಇದು ಹಾರ್ಮೋನ್ ಹೊರ ಸೂಸುವಿಕೆಯಲ್ಲಿನ ಅನಿಶ್ಚಿತತೆ ಇದೆ ಎಂಬುದನ್ನು ಸಹ ಸೂಚಿಸಿತ್ತು. ಆದ್ರೆ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದು ಯಾರು ಎಂಬುದನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು.
ಆಕೆಯಲ್ಲಿ ಹಾರ್ಮೋನ್ ಸಂಬಂಧಿತ ದೈಹಿಕ ಸಮಸ್ಯೆಗಳಿರುವುದನ್ನು ವೈದ್ಯರ ತಂಡ ಪತ್ತೆ ಮಾಡಿದ್ದರು. ಆಕೆ ಹುಟ್ಟುವಾಗಲೇ ಇಂತಹದೊಂದು ಸಮಸ್ಯೆಯೊಂದಿಗೆ ಹುಟ್ಟಿದ್ದಳು. ಲೀನಾ ಬಾಲ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಕಾಲಿಕ ಪ್ರೌಢಾವಸ್ಥೆಯ ಸ್ಥಿತಿಯ ಒಂದು ವಿಪರೀತ ಪ್ರಕರಣವನ್ನು ಪ್ರತಿನಿಧಿಸುತ್ತಾರೆ. ಅಕಾಲಿಕ ಪ್ರೌಢಾವಸ್ಥೆಯನ್ನು ಹುಡುಗಿಯರಿಗೆ 8 ವರ್ಷಕ್ಕಿಂತ ಮೊದಲು ಮತ್ತು ಹುಡುಗರಿಗೆ 9 ವರ್ಷಕ್ಕಿಂತ ಮೊದಲು ಪ್ರಾರಂಭವಾಗುವ ದ್ವಿತೀಯ ಲೈಂಗಿಕ ಬೆಳವಣಿಗೆ ಎಂದು ವ್ಯಾಖ್ಯಾನಿಸುತ್ತಾರೆ. ಆದ್ರೆ ಲೀನಾ ಪ್ರಕರಣದಲ್ಲಿ ಇದು ತದ್ವಿರುದ್ಧವಾಗಿತ್ತು.
ಗಂಡು ಮಗು ಹೆಸರು ಗೆರಾರ್ಡೋ
ಆಕೆಗೆ ಜನಿಸಿದ ಗಂಡು ಮಗುವಿಗೆ ಗೆರಾರ್ಡೋ ಎಂದು ನಾಮಕರಣ ಮಾಡಲಾಗಿತ್ತು. ಆಕೆ ಮಗುವಿಗೆ ಜನ್ಮ ನೀಡಿದ್ದರೂ ಸಹ ಅದರ ಪಾಲನೆ ಹಾಗೂ ಪೋಷಣೆಯನ್ನು ಲೀನಾಳ ತಾಯಿ ನೋಡಿಕೊಂಡಳು, ಗೆರಾರ್ಡೋಗೆ ತನ್ನ ತಾಯಿ ಲೀನಾ ಎಂಬುದು 10 ವರ್ಷದವನಿದ್ದಾಗ ತಿಳಿದಿತ್ತು. ಹಾಗೆ ಆತ ತನ್ನ ತಾಯಿ ಲೀನಾಳನ್ನು ಅಕ್ಕ ಎಂದು ತಿಳಿದುಕೊಂಡಿದ್ದ. ಹಾಗೆ ಲೀನಾ ಕೂಡ ಮಗನೊಂದಿಗೆ ಯಾವಾಗಲು ಆಟವಾಡುತ್ತಿದ್ದಳು.
ತಂದೆಯ ವಿರುದ್ಧ ಪ್ರಕರಣ, ತನಿಖೆ, ನಿರಪರಾಧಿ
ಆಕೆ ಅತೀ ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದ ಕಾರಣಕ್ಕೆ ತಂದೆಯ ಮೇಲೆ ಅನುಮಾನ ಮೂಡಿತ್ತು, ಹೀಗಾಗಿ ಪೊಲೀಸರು ಆತನ ವಿಚಾರಣೆಗೆ ಒಳಪಡಿಸಿದ್ದರು. ಆದ್ರೆ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಹಾಗೆ ವೈದ್ಯರ ಸಮ್ಮುಖದಲ್ಲಿ ಮತ್ತು ಆಪ್ತ ಸಮಾಲೋಚಕರ ಸಮ್ಮುಖದಲ್ಲಿ ಲೀನಾ 6 ವರ್ಷದವಳಾಗಿದ್ದಾಗಲು ಆಕೆಯಿಂದ ಈ ವಿಚಾರ ತಿಳಿಯುವ ಸಲುವಾಗಿ ವಿಚಾರಣೆ ನಡೆಸಲಾಗಿತ್ತು. ಆದ್ರೆ ಆಕೆಯಿಂದ ಸಹ ಯಾವುದೇ ಸಾಕ್ಷಿ ಅಥವಾ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ಈ ಪ್ರಕರಣ ವೈದ್ಯಕೀಯವಾಗಿ ಹಾಗೆ ಕಾನೂನಾತ್ಮಕವಾಗಿ ಹಾಗೆ ಕೌತುಕಗಳ ಜೀವಂತವಾಗಿ ಇಟ್ಟುಕೊಂಡಿದೆ.
ಈಗ ಎಲ್ಲಿದ್ದಾರೆ ಗೆರಾರ್ಡೋ ಮತ್ತು ಲೀನಾ
ಈ ಇಬ್ಬರು ಒಟ್ಟಿಗೆ ಬೆಳೆದರು ಸಹ ಗೆರಾರ್ಡೋ 1979 ರಲ್ಲಿ 40 ನೇ ವಯಸ್ಸಿನಲ್ಲಿ ಮೂಳೆ ಕ್ಯಾನ್ಸರ್ ನಿಂದ ನಿಧನರಾದರು. ಅಲ್ಲಿಯವರೆಗೂ ಯಾವುದೇ ಅನಾರೋಗ್ಯವಿಲ್ಲದೆ ಬದುಕಿದ್ದ ಅವರು ಒಮ್ಮೆಲೆ ಮೂಳೆ ಕ್ಯಾನ್ಸರ್‌ಗೆ ತುತ್ತಾಗಿ ಮೃತಪಟ್ಟರು. ಆದ್ರೆ ಇನ್ನೊಂದು ಕಡೆ ಲೀನಾ ಅವರ ಕಥೆ ಬೇರೆಯಾಗಿದೆ. ಅವರು ಬೆಳೆಯುತ್ತಾ ಸಮಾಜದಿಂದ ದೂರ ಉಳಿಯಲು ನಿರ್ಧರಿಸಿದರು. ಹಾಗೆ ಲೀನಾ 33 ವರ್ಷದವರಾಗಿದ್ದಾಗ ವಿವಾಹ ಕೂಡ ಆದರು. ಇದಾದ ಬಳಿಕ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು. ಲೀನಾ ಮತ್ತು ಅವರ ಪತಿ ಲಿಮಾದಲ್ಲಿ "ಲಿಟಲ್ ಚಿಕಾಗೋ" ಎಂಬ ಪ್ರದೇಶದಲ್ಲಿ ವಾಸವಿದ್ದರು. ಆದ್ರೆ ಯಾವಾಗ ಅವರು ಮೃತಪಟ್ಟರು ಎಂಬುದು ಮಾತ್ರ ತಿಳಿದುಬಂದಿಲ್ಲ.



Click it and Unblock the Notifications