Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಸತ್ತವರನ್ನ ಜೀವನದ ಉದ್ದಕ್ಕೂ ಬದುಕಿಸುತ್ತಾರೆ ಈ ಸಮುದಾಯ..! ಮೃತದೇಹದ ಜೊತೆಗೆ ಅವರ ಜೀವನ
ಹಿಂದೂ ಸಂಸ್ಕೃತಿಯಲ್ಲಿ ಮೃತಪಟ್ಟವರಿಗೆ ದೇವರ ಪಟ್ಟ ಸಿಗುತ್ತದೆ, ಅವರ ಅಂತ್ಯ ಸಂಸ್ಕಾರದ ಬಳಿಕ ಅವರಿಗೆ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಇಲ್ಲೊಂದು ಸಂಸ್ಕೃತಿಯಲ್ಲಿ ಮೃತರ ಜೊತೆಗೆ ಬದುಕು ಕಟ್ಟಿಕೊಳ್ಳುವುದು ನೋಡಿದರೆ ನಿಮಗೂ ಅಚ್ಚರಿಯಾಗುವುದು ಖಚಿತ. ಹೌದು ಈ ರೀತಿ ಸತ್ತವರನ್ನು ಸಹ ತಮ್ಮ ಜೊತೆಗೆ ಬದುಕಿನ ಉದ್ದಕ್ಕೂ ಉಳಿಸಿಕೊಂಡು ಹೋಗುವ ವಿಶ್ವದ ವಿಚಿತ್ರ ಸಂಸ್ಕೃತಿ ಇದಾಗಿದೆ.
ಇಂಡೋನೇಷ್ಯಾದ ಪರ್ವತ ಪ್ರದೇಶದಲ್ಲಿ ವಾಸವಿರುವ ಟೊರಾಜನ್ ಸಮುದಾಯ ತಮ್ಮ ಹಿರಿಯರು ಮೃತಪಟ್ಟರೆ ಅವರೊಂದಿಗೆ ಜೀವನ ನಡೆಸುತ್ತಾರೆ. ಅದು ಹೇಗೆ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಆದರೆ ಅವರು ಸತ್ತವರನ್ನು ಮತ್ತೆ ಮತ್ತೆ ತಮ್ಮೊಡನೆ ಕರೆತರುತ್ತಾರೆ. ನೀವು ಹಲವು ನಾಗರೀಕತೆಗಳಲ್ಲಿ ಮಮ್ಮಿ ಎಂಬ ಸಂಸ್ಕೃತಿಯನ್ನು ಕೇಳಿರಬಹುದು, ಇಲ್ಲಿಯೂ ಸಹ ಇದೇ ಸಂಸ್ಕೃತಿ ಜೀವಂತವಾಗಿದೆ.

ಈ ಟೊರಾಜನ್ ಸಮುದಾಯ ಮೃತರನ್ನು ಮಮ್ಮಿ ಮಾಡಿಟ್ಟು ಅವರನ್ನು ವರ್ಷಕೊಮ್ಮೆ ಎಬ್ಬಿಸುತ್ತಾರೆ, ಆದ್ರೆ ಹೀಗ್ಯಾಕೆ ಮಾಡುತ್ತಾರೆ. ಸತ್ತವರ ದೇಹ ಕೊಳೆಯದಂತೆ ಅವರು ಏನು ಮಾಡುತ್ತಾರೆ. ಮೃತದೇಹಗಳು ಹೇಗೆ ವರ್ಷಾನುಗಟ್ಟಲೆ ಹಾಗೆ ಉಳಿದುಬಿಡುತ್ತವೆ ಎಂಬುದು ಇಂದಿಗೂ ಕುತೂಹಲಕಾರಿ ಅಂಶವಾಗಿದೆ.
ಸತ್ತವರ ನೆನಪುಗಳು ವರ್ಷಗಳ ಕಾಲ ನಮ್ಮ ನಡುವೆ ಇರುವಂತೆ ಮಾಡಲು ಈ ಸಮುದಾಯ ಈ ಕಾರ್ಯ ಮಾಡುತ್ತಿದೆಯಂತೆ. ಮೃತರನ್ನು ಮೊದಲು ಪೆಟ್ಟಿಗೆಯಲ್ಲಿ ಹಾಕಿ ಅವರ ಸಂಸ್ಕೃತಿಯಂತಯೇ ಮಣ್ಣು ಮಾಡುತ್ತಾರೆ. ಆದ್ರೆ ಈ ಮೃತದೇಹಗಳಿಗೆ ಫಾರ್ಮಾಲ್ಡಿಹೈಡ್ ಮತ್ತು ನೀರಿನ ಲೇಪನ ಮಾಡಿ ಈ ದೇಹಗಳು ಕೊಳೆಯದಂತೆ ನೋಡಿಕೊಳ್ಳುತ್ತಾರೆ.
ಆಗಾಗ ಈ ದೇಹಗಳನ್ನು ಹೊರಗೆ ತೆಗೆದು ಮೃತದೇಹದ ಇಷ್ಟದ ವಸ್ತುಗಳನ್ನು ಇಟ್ಟು ಪೂಜಿಸುತ್ತಾರೆ, ಸಿಗರೇಟ್, ಮದ್ಯ, ಕನ್ನಡಕಗಳು, ಬಟ್ಟೆ, ಪರ್ಫ್ಯೂಮ್ ಹೀಗೆ ಒಂದಲ್ಲಾ ಒಂದು ವಸ್ತುವನ್ನು ಈ ಮೃತ ದೇಹಗಳ ಬಳಿ ಇಟ್ಟು ಅವರ ಕೊನೆ ಆಸೆಯಂತೆ ಅವರೊಂದಿಗೆ ಬದುಕುತ್ತಾರೆ. ಆದರೆ ಈ ಮೃತದೇಹದಿಂದ ದುರ್ವಾಸನೆಯಂತು ಬರುತ್ತದೆ. ಈ ವಾಸನೆ ತಡೆಯಲು ಗಿಡಮೂಲಿಕೆಗಳು, ಪರ್ಫ್ಯೂಮ್‌ಗಳ ಬಳಸುತ್ತಾರೆ.
ಇನ್ನು ಈ ದೇಹಗಳು ಮತ್ತಷ್ಟು ವರ್ಷ ಕೊಳೆಯದಂತೆ ಮಾಡಲು ಅವರು ಕೆಲವು ರಾಸಾಯನಿಕ ದ್ರಾವಣ ಸಿಂಪಡಿಸುತ್ತಾರೆ. ಹಾಗೆ ಮೃತದೇಹವನ್ನು ಹೊರಗೆ ತೆಗೆದ ಬಳಿಕ ಸುಂದರವಾಗಿ ಅಲಂಕಾರ ಮಾಡಿ ಅವುಗಳೊಂದಿಗೆ ಫೋಟೋ ತೆಗೆದುಕೊಳ್ಳುತ್ತಾರೆ. ಈ ಮೃತರ ಸಾಲಿನಲ್ಲಿ ಹಿರಿಯರು, ಮಕ್ಕಳು ಇರುತ್ತಾರೆ ಅವರ ದೇಹ ಎಂದಿಗೂ ಹಾಳಾಗದಂತೆ ಕಾಪಾಡುವುದೇ ಈ ಸಮುದಾಯದ ಪ್ರಮುಖ ಕಾರ್ಯವಾಗಿರುತ್ತದೆ.
ಇನ್ನು ಈ ಸಮುದಾಯದಲ್ಲಿ ಸತ್ತವರಿಗೆ ಪ್ರತಿ ದಿನ ಆಹಾರ ನೀಡುವ ಸಂಸ್ಕಾರವಿದೆ. ಹಿಂದೂ ಧರ್ಮದಲ್ಲಿ ವರ್ಷಕ್ಕೊಮ್ಮೆ ಅನ್ನ ಆಹಾರ ನೀಡುವ ಸಂಪ್ರದಾಯದಂತೆ ಅಲ್ಲಿ ನಿತ್ಯವೂ ಆಹಾರ ನೀಡುವ ಸಂಪ್ರದಾಯವಿದೆ. ಅವರು ಮೃತಪಟ್ಟವರನ್ನು ನಮ್ಮಂತೆ ಸ್ಮಶಾನದಲ್ಲಿ, ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ. ಬದಲಿಗೆ ಅವರ ಮನೆಯ ಒಂದು ಕೋಣೆಯಲ್ಲಿಯೇ ಈ ದೇಹಗಳನ್ನು ಸಂರಕ್ಷಿಸಿಡುತ್ತಾರೆ.
ಅವರ ಸಮುದಾಯದಲ್ಲಿ ಯಾರಾದರು ಹಿರಿಯರು ಮೃತಪಟ್ಟರೆ ಅವರು ತಮ್ಮಿಂದ ದೂರಾಗಿದ್ದಾರೆ ಎಂದು ನಂಬುವುದಿಲ್ಲ. ಬದಲಿಗೆ ಮೌನವಾಗಿದ್ದಾರೆ, ನಮ್ಮ ನಡುವೆ ಇದ್ದಾರೆ, ನಮ್ಮ ರಕ್ಷಣೆ ಮಾಡುತ್ತಾರೆ ಎಂದು ನಂಬುತ್ತಾರೆ. ಇನ್ನು ಮನೆಯಿಂದ ಹಾಗೂ ಊರಿನಿಂದ ಹೊರಗೆ ಹೋದ ಕಿರಿಯ ಪೀಳೀಗೆ ವರ್ಷದಲ್ಲಿ ಒಮ್ಮೆಯಾದರು ಮನೆಗೆ ಬಂದು ಪೂರ್ವಜರ ಈ ದೇಹದ ಜೊತೆಗೆ ಕಳೆಯುತ್ತಾರೆ. ಈ ವೇಳೆ ಫೋಟೋಗಳ ತೆಗೆದುಕೊಳ್ಳುತ್ತಾರೆ. ಅವರಿಗೆ ಇದೊಂದು ಹಬ್ಬದ ರೀತಿಯಲ್ಲಿರಲಿದೆ. ಇದಕ್ಕೆಂದೇ ಸಾವಿರಾರು ಕಿ.ಮೀ ದೂರದಿಂದ ತಮ್ಮ ಸ್ವಂತ ಊರಿಗೆ ಬರುತ್ತಾರೆ.



Click it and Unblock the Notifications