Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಭೂಕಂಪ, ಬಾಂಬ್ ಸ್ಫೋಟ ಎದುರಿಸಿದ ಸೇತುವೆಗೆ 5 ರೂಪಾಯಿ ವಸ್ತು ಕಂಟಕ!!
ಭಾರತದಲ್ಲಿನ ಹತ್ತಾರು ಪ್ರವಾಸಿ ತಾಣಗಳು ಹಾಗೆ ಪ್ರಮುಖ ತಾಣಗಳಲ್ಲಿ ಕೋಲ್ಕತ್ತಾದ ಹೌರಾ ಬ್ರಿಡ್ಜ್ ಕೂಡ ಒಂದು. ಕೋಲ್ಕತ್ತಾ ನಗರ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಅಲ್ಲಿ ಇತಿಹಾಸ ಸಾರುವ ಹಲವು ವಿಚಾರಗಳು, ಹಾಗೆ ಆಧುನಿಕತೆಯನ್ನು ಬೆಸೆಯುವ ವಿಚಾರಗಳನ್ನು ಒಟ್ಟಿಗೆ ನೋಡಬಹುದು. ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಈ ಕೋಲ್ಕತ್ತಾ ಕೂಡ ಒಂದಾಗಿದೆ.
ಕೋಲ್ಕತ್ತಾದ ಕಾಲಾತೀತ ನಗರದಲ್ಲಿನ ಹೌರಾ ಸೇತುವೆ ಎಲ್ಲರ ಗಮನ ಸೆಳೆಯೋದು ನೋಡಬಹುದು. ವಿಕ್ಟೋರಿಯಾ ಸ್ಮಾರಕ ಮತ್ತು ದಕ್ಷಿಣೇಶ್ವರ ಕಾಳಿ ದೇವಾಲಯದ ಪ್ರಶಾಂತ ಆಧ್ಯಾತ್ಮಿಕತೆಯಂತಹ ಕೆಲವು ಸಾಂಪ್ರದಾಯಿಕ ಹೆಗ್ಗುರುತುಗಳ ಹೊಂದಿರುವ ವಿಶೇಷ ನಗರ. ಕಾಳಿ, ಹಾಗೆ ದುರ್ಗಾ ಪೂಜೆಯ ಸಮಯದಲ್ಲಿ ಇಡಿ ಕೋಲ್ಕತ್ತಾ ಭಕ್ತಿಯ ಸಾಗರದಲ್ಲಿ ಮುಳುಗಲಿದೆ. ಇನ್ನು 1943ರಲ್ಲಿ ನಿರ್ಮಾಣವಾದ ಹೌರಾ ಸೇತುವೆ ಇಂದಿಗೂ ಐಕಾನಿಕ್ ಪ್ರವಾಸಿ ತಾಣವಾಗಿದೆ.

ಈ ಅದ್ಭುತ ವಾಸ್ತುಶಿಲ್ಪವು ವಿಶ್ವದ ಮೂರನೇ ಅತಿ ಉದ್ದದ ಕ್ಯಾಂಟಿಲಿವರ್ ಸೇತುವೆಯಾಗಿತ್ತು. ಅದರ ರಚನೆಯೇ ಬಹಳ ವಿಶೇಷ ಎನಿಸುವಂತದ್ದು, ಹ್ಯಾಂಗಿಂಗ್ ಬ್ರಿಡ್ಜ್‌ಗಳಲ್ಲಿ ಈ ಸೇತುವೆ ಬಹಳ ದೊಡ್ಡದು ಎನ್ನಬಹುದು. ಬ್ರಿಟೀಷ್ ಅಧಿಕಾರಿಗಳು, ಇಂಜಿನಿಯರ್‌ಗಳ ಅಂದಿನ ಕಲೆಗಾರಿಕೆಯಲ್ಲಿ ಈ ಸೇತವೆ ಅರಳಿ ನಿಂತಿತ್ತು. ಹೌರಾ ಸೇತುವೆ ಪೂರ್ಣಗೊಳ್ಳಲು 8 ದೀರ್ಘ ವರ್ಷಗಳು ಬೇಕಾಯಿತು, 26,000 ಟನ್ ಉಕ್ಕನ್ನು ಬಳಸಿ ಬರೋಬ್ಬರಿ 3.33 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿತ್ತು.
ಈ ಸೇತುವೆ ಬಾಂಬ್ ಸ್ಟೋಟ ಹಾಗೆ ಭೂಕಂಪನದಂತಹ ನೈಸರ್ಗಿಕ ವಿಕೋಪವನ್ನು ಕೂಡ ಎದುರಿಸಿ ಗಟ್ಟಿಯಾಗಿ ನಿಂತಿದೆ, ವರ್ಷಗಳಿಂದಲೂ ಎರಡು ನಗರಗಳ ನಡುವೆ ಸಂಪರ್ಕ ಕೊಂಡಿಯಾಗಿದೆ. ಆದ್ರೆ ಈಗ ಕೇವಲ 5 ರೂಪಾಯಿ ವಸ್ತುವೊಂದು ಇಡೀ ಸೇತುವೆಯನ್ನೇ ಹಾಳು ಮಾಡುತ್ತಿದೆ, ಅದು ಮುಂದೊಂದು ದಿನ ಸಂಪೂರ್ಣವಾಗಿ ಹಾಳಾಗಿ ನಾಶವಾಗುವ ಹಂತ ತಲುಪುವ ಆತಂಕ ಎದುರಾಗಿದೆ.
ಯಾವುದದು 5 ರೂಪಾಯಿ ವಸ್ತು?
ಹೌರಾ ಸೇತುವೆಯು ಭೂಕಂಪನ, ಬಾಂಬ್ ದಾಳಿಗೂ ಅಲುಗಾಡಿರಲಿಲ್ಲ ಆದರೆ ಕೇವಲ 5 ರೂಪಾಯಿಗೆ ಅಂಗಡಿಗಳಲ್ಲಿ ಸಿಗುವಂತಹ ವಸ್ತುವಿನಿಂದ ಈಗ ವಿನಾಶದ ಆಪತ್ತು ಎದುರಿಸುತ್ತಿದೆ. ಅದು 5 ರೂಪಾಯಿಗೆ ಸಿಗುವ ಗುಟ್ಕಾ. ಹೌದು ಕೇವಲ 5 ರೂಪಾಯಿಯ ಗುಟ್ಕಾ ಈಗ ಸೇತುವೆಯ ರಚನೆಯನ್ನು ನಾಶ ಮಾಡುತ್ತಾ ಸಾಗಿದೆ. ಪಾದಚಾರಿಗಳು ಗುಟ್ಕಾ, ತಂಬಾಕು ಅಗಿದು ಉಗುಳುವುದರಿಂದ ಸೇತುವೆ ಅಂದ ಮಾತ್ರವಲ್ಲ ಅದರ ಮೂಲ ರಚನೆ ಹಾಳಾಗುತ್ತಿದೆ.
2013ರಲ್ಲಿ ಕೋಲ್ಕತ್ತಾ ಬಂದರು ಟ್ರಸ್ಟ್‌ನ ಮುಖ್ಯ ಎಂಜಿನಿಯರ್ ಎ.ಕೆ. ಮೆಹ್ರಾ, ಹ್ಯಾಂಗರ್ ಬೇಸ್‌ಗಳ ಕವರ್‌ಗಳ ಮೇಲೆ ದಪ್ಪನೆಯ ಗುಟ್ಕಾ ಪದರಗಳು ಸಂಗ್ರಹವಾಗಿರುವುದನ್ನು ಗಮನಿಸಿದ್ದರು. ಲಾಲಾರಸ, ಸುಣ್ಣ ಮತ್ತು ಉಪ್ಪಿನಿಂದ ಲೇಪಿತವಾದ ಗುಟ್ಕಾ ಹಾನಿಕಾರಕ ರಾಸಾಯನಿಕ ಕ್ರಿಯೆಯನ್ನು ಸೃಷ್ಟಿಸುತ್ತಿದೆ, ಇದು ಕಬ್ಬಿಣ ಹಾಗೂ ಉಕ್ಕಿನ ವಸ್ತುವನ್ನು ನಾಶಪಡಿಸುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಆಡಳಿತ ಮಂಡಳಿಯು ಉಕ್ಕಿನ ಫಲಕಗಳನ್ನು ಸುಲಭವಾಗಿ ತೊಳೆಯಬಹುದಾದ ಫೈಬರ್‌ಗ್ಲಾಸ್ ಕವರ್‌ಗಳಿಂದ ಬದಲಾಯಿಸಿದೆ. ಇದನ್ನು ಆಗಾಗ ನೀರಿನಿಂದ ವಾಷ್ ಮಾಡಲಾಗುತ್ತದೆ.
ಇಷ್ಟಾದರೆ ಸೇತುವೆಯ ಎರಡೂ ಬದಿಯಲ್ಲೂ ಗುಟ್ಕಾ ಹಾಕಿ ಉಗುಳಿದ ಕಲೆಗಳಿರುವುದು ನೋಡಬಹುದು. ಸ್ಥಳಿಯ ಆಡಳಿತ ಈ ಕುರಿತಾಗಿ ಜಾಗೃತೆ ಮೂಡಿಸುತ್ತಿದ್ದರೂ ಕೂಡ ಜನರ ಅಭ್ಯಾಸ ಇಂದಿಗೂ ಬದಲಾಗಿಲ್ಲ. ಬದಲಾಗಿ ಮತ್ತಷ್ಟು ಉಗುಳುವಿಕೆ ಹೆಚ್ಚಾಗಿದೆ. ಹಾಗೆ ಈ ಸೇತುವೆ ಸೌಂದರ್ಯ ಸವಿಯಲು ತೆರಳಿದ್ದ ಮಂದಿ ಈ ಗುಟ್ಕಾ ಕಲೆಗಳನ್ನು ವಿಡಿಯೋ ಮಾಡಿ, ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ನೋಡಬಹುದು.



Click it and Unblock the Notifications
