Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶಾಲೆ ಹೋಗುತ್ತಲೇ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ ಈ ಬಾಲಕ..! ಹೇಗೆ ಗೊತ್ತಾ?
ಹಣ ಮಾಡಬೇಕು, ಒಳ್ಳೆಯ ಕೆಲಸ ಇರಬೇಕು ಅನ್ನೋದು ಎಲ್ಲರ ಕನಸಾಗಿರುತ್ತೆ. ಅದರಲ್ಲೂ ಕೆಲವರು ಕಾಲೇಜಿಗೆ ಹೋಗುವಾಗಲೇ ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ, ಒಳ್ಳೆಯ ಹಣವನ್ನೂ ಗಳಿಸುತ್ತಾರೆ. ಬಳಿಕ ಡಿಗ್ರಿ ಪಡೆದು ಯಾವುದಾದ್ರು ಕೆಲಸ ಪಡೆಯಬೇಕು ಅನ್ನೋದು ಎಲ್ಲರ ಕನಸು.
ಆದವರೆ ಇಲ್ಲೊಬ್ಬ ಬಾಲಕ ಶಾಲೆಗೆ ಹೋಗುತ್ತಿರುವಾಗಲೇ ದುಡಿಮೆಗೆ ಇಳಿದು ಲಕ್ಷ ಲಕ್ಷ ಸಂಪಾದಿಸಿದ್ದಾನೆ ಅಂದ್ರೆ ನಂಬುತ್ತೀರಾ? ಹೌದು ಈ ಬಾಲಕ ಶಾಲೆಗೆ ಹೋಗುವ ಮುನ್ನ ಪಾರ್ಟ್‌ಟೈಮ್ ರೀತಿ ತನ್ನ ಬ್ಯುಸಿನೆಸ್ ಆರಂಭಿಸಿ ಅದರಲ್ಲಿ ಲಕ್ಷ ಲಕ್ಷ ದುಡಿಮೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

10 ವರ್ಷದ ಜಾಕೋಬ್ ಹೈಟ್‌ಮನ್‌ನ ಶಾಲೆಗೆ ಹೋಗುವ ಮುನ್ನ ನಿತ್ಯ 2 ಗಂಟೆ ಆತನ ಬ್ಯುಸಿನೆಸ್‌ಗೆ ತೆಗೆದಿಟ್ಟು ಸಾವಿರಾರು ಡಾಲರ್ ಗಳಿಸುತ್ತಾನೆ. ಅರೆ ಹಾಗಾದರೆ ಆತ ಯಾವ ಕೆಲಸ ಮಾಡುತ್ತಾನೆ, ಶಾಲೆಗೆ ಹೋಗುವ ಮುನ್ನ ಆತ ಯಾವ ರೀತಿ ದುಡಿಮೆ ಮಾಡುತ್ತಾನೆ ಎಂಬ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಜಾಕೋಬ್ ತನ್ನ ಮನೆಯಲ್ಲಿದ್ದ ಕಂಪ್ಯೂಟರ್ ಹಾಗೂ 3ಡಿ ಪ್ರಿಂಟಿಂಗ್ ಮೆಷಿನ್ ಬಳಸಿ ಉದ್ಯಮ ಆರಂಭಿಸಿದ್ದಾನೆ. ಈ 3ಡಿ ಮುದ್ರಣದ ಮೂಲಕ ಆತ ಲಕ್ಷ ಲಕ್ಷ ಗಳಿಸಿದ್ದಾನೆ. ಬೆಳಗ್ಗೆ ಎದ್ದವನೇ ಕಂಪ್ಯೂಟರ್ ಮುಂದೆ ಕುಳಿತು ಒಳ್ಳೆಯ 3ಡಿ ವಸ್ತುಗಳ ಪ್ರಿಂಟ್ ಮಾಡಲು ಆರಂಭಿಸುತ್ತಾನೆ.
ಹೌದು ಆತ 3ಡಿ ಪ್ರಿಂಟಿಂಗ್‌ನಿಂದ ಆಟಿಕೆಗಳ ತಯಾರಿಸಿ ಆನ್‌ಲೈನ್ ವೆಬ್‌ಸೈಟ್ ಮೂಲಕ ಮಾರಾಟ ಮಾಡುತ್ತಾನೆ. ಇದರಿಂದ ಜನವರಿಯಿಂದ ಈವರೆಗೆ ಆತ ಲಕ್ಷಕ್ಕೂ ಅಧಿಕ ಹಣ ಗಳಿಸಿದ್ದಾನೆ ಎಂದು ವರದಿಯಾಗಿದೆ. 4ನೇ ತರಗತಿ ವಿದ್ಯಾರ್ಥಿಯಾಗಿರುವ ಆತ ಮನೆಯಲ್ಲಿದ್ದ ಕಂಪ್ಯೂಟರ್ ಹಾಗೂ 3ಡಿ ಪ್ರಿಂಟಿಂಗ್ ಮೆಷಿನ್ ಕಂಡು ಇದರಿಂದ ಏನಾದರು ಮಾಡಬಹುದು ಎಂದು ನಿರ್ಧರಿಸಿದ್ದ. ಬಳಿಕ ಸಣ್ಣ ಸಣ್ಣ ಆಟಿಕೆಗಳನ್ನು ಪ್ರಿಂಟ್ ಮಾಡಲು ಮುಂದಾಗಿದ್ದ.
ಇದು ಒಂದು ಆಟಿಕೆ ಮುದ್ರಿಸಲು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಆತ ಪ್ರಿಂಟಿಂಗ್ ಮಾಡಲು ಬಿಟ್ಟು ಶಾಲೆಗೆ ತೆರಳುತ್ತಾನೆ. ಅವನು ತನ್ನ ವೆಬ್‌ಸೈಟ್ ಮೂಲಕ ಮತ್ತು ಅವನ Etsy ಅಂಗಡಿಯಲ್ಲಿ ತನ್ನ 3D ಮುದ್ರಿತ ಆಟಿಕೆಗಳನ್ನು ಸಹಪಾಠಿಗಳಿಗೆ ಮಾರಾಟ ಮಾಡುತ್ತಾನೆ, ಪ್ರತಿಯೊಂದಕ್ಕೂ $20 (ಅಂದಾಜು ರೂ. 1666) ಬೆಲೆ ನಿಗದಿ ಮಾಡಲಾಗಿದೆ.
ಅವರು ತಮ್ಮ ವ್ಯವಹಾರದಲ್ಲಿ ಪ್ರತಿ ದಿನ ಸುಮಾರು ಮೂರು ಗಂಟೆಗಳ ಕಾಲ ಕಳೆಯುತ್ತಾನೆ. ಕಳೆದ ವರ್ಷದ ಜುಲೈನಲ್ಲಿ, ಹೀಟ್‌ಮನ್ ತನ್ನ ಮೊದಲ 3D ಪ್ರಿಂಟರ್, ಸುಮಾರು $300 ಡಾಲರ್ ನೀಡಿ ಖರೀದಿಸಿದ್ದನಂತೆ, ಅದನ್ನು ಪೋಷಕರ ಬಳಿ ಒತ್ತಾಯದಿಂದ ಖರೀದಿಸಿಕೊಂಡಿದ್ದನಂತೆ.
ಇದಾದ ಬಳಿಕ ಯೂಟ್ಯೂಬ್ ಮೂಲಕ 3ಡಿ ಪ್ರಿಂಟಿಂಗ್ ಹಾಗೂ ಅದರ ಮಾರ್ಕೆಟ್ ಕುರಿತು ತಿಳಿದುಕೊಂಡನಂತೆ. ಈ ಕುರಿತು ತನ್ನ ಶಾಲೆಯಲ್ಲು ಆತ ಹೇಳಿಕೊಂಡಿದ್ದನಂತೆ. ಇದಾದ ಬಳಿಕ $949 ಬೆಲೆಯ ಎರಡನೇ 3ಡಿ ಪ್ರಿಂಟರ್ ಆಗಿರುವ Bambu Lab P1S ಮಲ್ಟಿ-ಕಲರ್ ಪ್ರಿಂಟರ್ ಖರೀದಿಸಿದ. ಇದರಿಂದ ಒಂದು ಆಟಿಕೆಗೆ ಹಲವು ಬಣ್ಣ ಬಳಿಯಬಹುದಿತ್ತು. ಏಪ್ರಿಲ್‌ನಲ್ಲಿ ಕುಟುಂಬದ ಸ್ನೇಹಿತರೊಬ್ಬರ ನಿವೃತ್ತಿ ಪಡೆದಾದ ಅವರಿಗೆ ನೀಡಲು ಗಿಫ್ಟ್ ಆಗಿ ಚಿಕಾಗೋದಲ್ಲಿನ ಚೇಸ್ ಟವರ್‌ನ 11-ಇಂಚಿನ ಸುಮಾರು 12 ಪ್ರತಿಕೃತಿಗಳನ್ನು ರಚಿಸಲು ಹೈಟ್‌ಮ್ಯಾನ್‌ಗೆ ಆರ್ಡರ್ ಮಾಡಲಾಗಿತ್ತಂತೆ.
ಮೂಲತಃ ಪ್ರತಿ ಪೀಸ್‌ಗೆ ಆತ $20 ಶುಲ್ಕ ವಿಧಿಸಿದ್ದ, ಹೈಟ್‌ಮನ್‌ನ ತಂದೆ ಈ ದರವನ್ನು $45 ಕ್ಕೆ ಏರಿಸಿದರು. ಒಂದೊಂದು ಚೇಸ್ ಟವರ್‌ಗೆ 9 ಗಂಟೆ ಸಮಯ ಹಿಡಿಯಿತು. ಇದಾದ ಬಳಿಕ ಆತನ ಡಿಸೈನ್‌ಗಳು ಹೆಸರುವಾಸಿಯಾದವು. ಈವರೆಗೆ ಆತ ಲಕ್ಷಕ್ಕೂ ಅಧಿಕ ಹಣ ಮಾಡಿದ್ದಾನೆ. ಈ 12 ಪೀಸ್‌ಗಳಿಂದಲೇ 45,009 ರೂಪಾಯಿ ದುಡಿದಿರುವುದಾಗಿ ವರದಿಯಾಗಿದೆ.



Click it and Unblock the Notifications
