Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಭೂಮಿ ಖರೀದಿಗೆ ಮುಂದಾಗುವವರೇ ನೋಡಿ..! ಇಡೀ ದ್ವೀಪವೇ ಮಾರಾಟಕ್ಕಿದೆ..!
ಭೂಮಿ ಖರೀದಿಸೋದು, ಮನೆ ಕಟ್ಟೋದು ಎಲ್ಲರ ಕನಸಾಗಿರುತ್ತೆ. ಈಗಂತು ಒಂದು ಅಡಿ ಜಾಗಕ್ಕೆ ಬಂಗಾರದ ಬೆಲೆ ಬಂದಿದೆ. ಮಹಾನಗರಗಳಲ್ಲಿ ಜಾಗ ಖರೀದಿಸೋದು ಕನಸಿನ ಮಾತಾಗಿದೆ ಬಿಡಿ. ಏಕೆಂದರೆ ಚಿನ್ನವನ್ನಾದರು ಖರೀದಿಸಬಹುದು ಆದ್ರೆ ಮಹಾ ನಗರಗಳಲ್ಲಿ ಜಾಗ ಖರೀದಿ ಮಾಡೋದು ಅಷ್ಟು ಸುಲಭವಲ್ಲ.
ಆದ್ರೆ ನಿಮ್ಮ ಬಳಿ ಕೋಟಿ ಕೋಟಿ ರೂಪಾಯಿ ಇದ್ರೆ ಇಲ್ಲೊಂದು ಕಡೆ ಇಡೀ ದ್ವೀಪವನ್ನೇ ನೀವು ಖರೀದಿಸಬಹುದು. ಹೌದು ನೀವು ಸಾಕಷ್ಟು ಶ್ರೀಮಂತರಾಗಿದ್ದರೆ ವಿದೇಶದಲ್ಲಿ ಭೂಮಿ ಖರೀದಿಸುವ ಆಸೆ ಇದ್ದರೆ ಇಲ್ಲೊಂದು ಆಫರ್ ಸಹ ಇದೆ.
ಯುರೋಪಿನಲ್ಲಿ ಒಂದು ದ್ವೀಪವಿದೆ, ಅದು ಮಾರಾಟಕ್ಕೂ ಇದೆ. ಈ ದ್ವೀಪವನ್ನು ಶತಮಾನಗಳಿಂದ ಮಿಲಿಟರಿ ರಕ್ಷಣೆಗಾಗಿ ಬಳಸಲಾಗುತ್ತದೆ. ಇದು ತನ್ನದೇ ಆದ ಖಾಸಗಿ ಕಡಲತೀರವನ್ನು ಸಹ ಹೊಂದಿದೆ.

ಈ ದ್ವೀಪದ ಹೆಸರು ಡ್ರೇಕ್ ದ್ವೀಪ. ಇದು ಯುನೈಟೆಡ್ ಕಿಂಗ್‌ಡಮ್‌ನ ಡೆವೊನ್ ಕರಾವಳಿಯ ಪ್ಲೈಮೌತ್ ನಗರದಿಂದ ಕೇವಲ 600 ಗಜಗಳಷ್ಟು ದೂರದಲ್ಲಿದೆ. ಆಧರೆ ಈ ದ್ವೀಪದಲ್ಲಿ ಯಾರು ವಾಸವಿಲ್ಲ, ಆದರೆ 18 ನೇ ಶತಮಾನದ ಫಿರಂಗಿಗಳು, ಖಾಸಗಿ ಬೀಚ್, ಕೋಟೆಗಳು ಮತ್ತು ಬ್ಯಾರಕ್‌ಗಳನ್ನು ಹೊಂದಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ದ್ವೀಪದಲ್ಲಿ ಹೋಟೆಲ್‌ಗಳ ನಿರ್ಮಾಣಕ್ಕೂ ಸರ್ಕಾರ ಅನುಮತಿ ನೀಡಿದೆ.
ಆದರೆ ಈ ದ್ವೀಪದಲ್ಲಿ ಭೂತಾತ್ಮಗಳು, ಆತ್ಮಗಳು ಓಡಾಡುತ್ತವೆ ಎಂದು ನಂಬಲಾಗಿದ್ದು, ಯಾರೊಬ್ಬರು ಸಹ ಆ ದ್ವೀಪದಲ್ಲಿ ವಾಸಿಸಲು ಮುಂದಾಗಿಲ್ಲ. ಹೀಗಾಗಿ ಈಗ ಮಾರಾಟಕ್ಕೆ ಮುಂದಾಗಲಾಗಿದೆ. ಅಲ್ಲಿರುವ ಆತ್ಮಗಳು ಬ್ರಿಟಿಷ್ ಸೈನಿಕರದ್ದು ಎಂದು ನಂಬಲಾಗುತ್ತದೆ. ಅವರು ಹೊರಗಿನಿಂದ ಬರುವ ಎಲ್ಲರನ್ನು ಬೆದರಿಸುತ್ತಾರೆ ಹಾಗೂ ದ್ವೀಪದ ರಕ್ಷಣೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಈಗ ಈ ದ್ವೀಪವು ಮೋರ್ಗನ್ ಫಿಲಿಪ್ಸ್ ಎಂಬುವರ ಒಡೆತನದಲ್ಲಿದೆ. ನೀವು ಇಲ್ಲಿಗೆ ಭೇಟಿ ನೀಡಿದರೆ ನೀವು ಖಂಡಿತವಾಗಿಯೂ ವದಂತಿಗಳನ್ನು ನಂಬುತ್ತೀರಿ. ಆತ್ಮಗಳು ಬ್ರಿಟಿಷ್ ಸೈನಿಕರದ್ದು ಎಂದು ಜನರು ಹೇಳುತ್ತಾರೆ. ಯಾವುದೇ ಹೊರಗಿನ ಶಕ್ತಿಯಿಂದ ನಮ್ಮನ್ನು ರಕ್ಷಿಸಲು ಅವರು ಇಲ್ಲಿಯೇ ಇರುತ್ತಾರೆ ಎಂದು ಮಾಲೀಕರೆ ಹೇಳಿದ್ದಾರೆ.
2019 ರಲ್ಲಿ 6 ಮಿಲಿಯನ್ ಪೌಂಡ್‌ಗಳಿಗೆ (ಅಂದಾಜು 64 ಕೋಟಿ ರೂ.) ದ್ವೀಪವನ್ನು ಖರೀದಿಸಿದ್ದರಂತೆ. 43 ಹಾಸಿಗೆಗಳ ಹೋಟೆಲ್ ನಿರ್ಮಿಸಲು ಮಾರ್ಗನ್ ಅನುಮತಿ ಪಡೆದಿದ್ದಾರೆ. ಆದರೆ ಈ ದ್ವಿಪವನ್ನು ಅವರು ಮಾರಾಟ ಮಾಡಲು ಮುಂದಾಗಿದ್ದು, ದರವನ್ನು ನಿಗದಿ ಮಾಡಿಲ್ಲವಂತೆ. ಆದರೆ 2019ರಲ್ಲಿ ಅವರು ನೀಡಿದ್ದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಇಷ್ಟಕ್ಕೆ ಮಾರಾಟ ಮಾಡಬೇಕು ಎಂಬ ನಿಯಮವೂ ಇಲ್ಲವಂತೆ.
ಇದಕ್ಕೂ ಮೊದಲು ಈ ದ್ವೀಪಕ್ಕೆ ಪ್ರವಾಸಿಗರು ಸಹ ಬರುತ್ತಿದ್ದರಂತೆ, ಆದರೆ ಇಲ್ಲಿ ಸುತ್ತ ಮುತ್ತ ಪ್ರವಾಸಿಗರು ಉಳಿದುಕೊಂಡು ಬಳಿಕ ಈ ದ್ವೀಪದ ಸಮುದ್ರ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದ್ರೆ ಬರು ಬರುತ್ತಾ ಈ ದ್ವೀಪದಲ್ಲಿ ಹಾಳು ಬಿದ್ದ ವಸ್ತುಗಳು ತುಕ್ಕು ಹಿಡಿದಿತ್ತು, ಜನರ ಓಡಾಟವಿಲ್ಲದೆ ಇದೊಂದು ಭೂತಗಳ ದ್ವೀಪ ಎಂದು ಕರೆಯಲ್ಪಡುತಿತ್ತು. ನಂತರ ಇದಕ್ಕೆ ಜನರು ಬರುವುದನ್ನೇ ನಿಲ್ಲಿಸಿದರು. ಇದರಿಂದ ಈ ದ್ವೀಪ ಖರೀದಿಸಿದರು ಯಾವುದೇ ಲಾಭವಾಗಲಿಲ್ಲ ಎಂದು ಆತ ಹೇಳಕೊಂಡಿದ್ದಾನೆ.



Click it and Unblock the Notifications