Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ಅಕ್ಷಯ ತೃತೀಯದಂದು ಇದೆ 2 ಶುಭ ಯೋಗ: ಮೂರು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ
ಧಾರ್ಮಿಕ ನಂಬಿಕೆಗಳ ಪ್ರಕಾರ ಅಕ್ಷಯ ಅತ್ಯಂತ ಶುಭ ದಿನವಾಗಿದೆ.ಈ ದಿನದಂದು ಚಿನ್ನ, ಬೆಳ್ಳಿ ಖರೀದಿಸಿದರೆ ಸಂಪತ್ತು ವೃದ್ದಿಸುವುದು ಎಂಬ ನಂಬಿಕೆ. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು, ಅಕ್ಷಯ ತೃತೀಯದ ಆಚರಿಸಲಾಗುವುದು, ಈ ವರ್ಷ ಮೇ 10ರಂದು ಅಕ್ಷಯ ತೃತೀಯ ಬಂದಿದೆ.
ಈ ದಿನ ಮನೆಗೆ ಹಳದಿ ಲೋಹ ತಂದರೆ ಶುಭ ಎಂದು ಪರಿಗಣಿಸಲಾಗುವುದು. ಈ ದಿನ ಮದುವೆ, ಗೃಹಪ್ರವೇಶ, ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಈ ರೀತಿ ಶುಭ ಕಾರ್ಯ ಮಾಡಲಾಗುವುದು.

ಈ ದಿನವಿದೆ ಪ್ರಮುಖ ಗ್ರಹಗಳ ಸಂಯೋಜನೆ
ಅಕ್ಷಯ ತೃತೀಯದಲ್ಲಿ ಸೂರ್ಯ, ಶುಕ್ರ ಗ್ರಹದ ಸಂಯೋಗವಿರಲಿದೆ. ಮೇಷ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗ ಮೇಷ ರಾಶಿಯಲ್ಲಿ ಇರಲಿದೆ. ಹೀಗಾಗಿ ಶುಕ್ರಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಇದಲ್ಲದೇ ವೃಷಭರಾಶಿಯಲ್ಲಿ ಚಂದ್ರ ಮತ್ತು ಗುರುಗಳ ಸಂಯೋಗದಿಂದ ಗಜಕೇಸರಿ ಯೋಗವೂ ಇರಲಿದೆ.
ಮೀನ ರಾಶಿಯಲ್ಲಿ ಮಂಗಳ ಮತ್ತು ಬುಧ ಸಂಯೋಗದಿಂದಾಗಿ, ಧನ ಯೋಗ ಉಂಟಾಗುವುದು. ಶನಿ ದೇವನು ತನ್ನ ಮೂಲ ತ್ರಿಕೋನ ರಾಶಿ ಕುಂಭ ರಾಶಿಯಲ್ಲಿದ್ದಾಗ ಶಶ ಯೋಗ ಉಂಟು ಮಾಡುತ್ತದೆ. ಈ ಎಲ್ಲಾ ಯೋಗಗಳಿಂದಾಗಿ ಕೆಲ ರಾಶಿಗಳ ಮೇಲೆಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವಿರಲಿದೆ. ಹಾಗಾಗಿ ಈ ಬಾರಿಯ ಅಕ್ಷಯ ತೃತೀಯ ಈ ರಾಶಿಗಳಿಗೆ ತುಂಬಾನೇ ವಿಶೇಷವಾಗಿರಲಿದೆ ನೋಡಿ:
ಮೇಷ ರಾಶಿ
ಮೇಷ ರಾಶಿಯವರಿಗೆ ಅಕ್ಷಯ ತೃತೀಯ ಹೆಚ್ಚಿನ ಅದೃಷ್ಟ ತಂದಿದೆ. ಲಕ್ಷ್ಮಿಯ ವಿಶೇಷ ಕೃಪೆಯಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಲು ಸಾದ್ಯವಾಗುವುದು. ವೃತ್ತಿ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತಾರೆ. ವ್ಯಾಪಾರಿಗಳು ಕೂಡ ತಮ್ಮ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ ಕಂಡು ಬರಲಿದೆ. ವಿವಾಹಿತರ ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ. ಇನ್ನು ನೀವು ಏನಾದರೂ ಹೊಸ ಕೆಲಸ ಅಥವಾ ಹೊಸ ಕಾರ್ಯ ಮಾಡಲು ಈ ದಿನ ತುಂಬಾ ಶುಭವಾಗಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೂ ಲಕ್ಷ್ಮಿ ಕೃಪೆ ಹೆಚ್ಚಿದೆ. ಗಜಕೇಸರಿ ಯೋಗದ ಬಲದಿಂದಾಗಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ನಿಮ್ಮ ಎಲ್ಲಾ ಕೆಲಸ ಕಾರ್ಗಳು ನೀವು ಊಹಿಸಿದಂತೆಯೇ ತುಂಬಾ ಬಲವಾಗಿದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಹೆಚ್ಚಾಗಲಿದೆ. ವ್ಯಾಪಾರಿಗಳಿಗೆ ತುಂಬಾ ಉತ್ತಮವಾಗಿರಲಿದೆ. ನಿಮ್ಮ ವ್ಯಾಪಾರ ಯೋಜನೆಗಳು ಫಲ ನೀಡಲಿದೆ. ಆದಾಯ ಹೆಚ್ಚಾಗಿಲಿದೆ, ನೀವು ಬಯಸಿದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದು.
ಮೀನ ರಾಶಿ
ಈ ರಾಶಿಯವರ ಮೇಲೆ ಲಕ್ಷ್ಮಿ ಕೃಪೆ ಇರಲಿದೆ. ಮೀನ ರಾಶಿಯವರು ಅಕ್ಷಯ ತೃತೀಯ ಬಳಿಕ ಆರ್ಥಿಕ ಪ್ರಗತಿ ಕಾಣುತ್ತೀರಿ. ಉದ್ಯೋಗಿಗಳಿಗೆ ಹೊಸ ಉದ್ಯೋಗಕ್ಕೆ ಉತ್ತಮ ಅವಕಾಶಗಳು ಸಿಗಬಹುದು. ಯಾರಿಗಾದರೂ ಸಾಲ ಕೊಟ್ಟ ಹಣವನ್ನು ಹಿಂತಿರುಗಿಸಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ , ಈ ಅವಧಿಯಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚಾಗಲಿದೆ.
ಅಕ್ಷಯ ತೃತೀಯ ಪೂಜಾ ಮುಹೂರ್ತ
ಬೆಳಗ್ಗೆ 05:53ರಿಂದ ಮಧ್ಯಾಹ್ನ 12:18ರವರೆಗೆ ಇದೆ ಈ ಸಮಯದಲ್ಲಿ ಲಕ್ಷ್ಮಿಗೆ ಪೂಜೆ ಸಲ್ಲಿಸಿ
ಅಕ್ಷಯ ತೃತೀಯ ತಿಥಿ ಬೆಳಗ್ಗೆ 04:17ರಿಂದ ಪ್ರಾರಂಭವಾಗಿ ಮೇ 11 ಮುಂಜಾನೆ 2:50ಕ್ಕೆ ಮುಕ್ತಾಯವಾಗಲಿದೆ.
ಅಕ್ಷಯ ತೃತೀಯದಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು
ಈ ದಿನ ಚಿನ್ನ ಖರೀದಿ ಒಳ್ಳೆಯದು: ಈ ದಿನದಂದು ಚಿನ್ನ ಖರೀದಿಸುತ್ತಾರೆ, ಚಿನ್ನ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಸುವುದು ಎಂದು ನಂಬಲಾಗುವುದು.
ವಾಹನ ಖರೀದಿಗೆ ಶುಭ ದಿನ:
ಅಕ್ಷಯ ತೃತೀಯದಂದು ವಾಹನ ಖರೀದಿಸಿದರೆ ಒಳ್ಳೆಯದು. ಈ ದಿನ ಖರೀದಿಸಿದರೆ ನಮ್ಮ ಐಶ್ವರ್ಯ ಹೆಚ್ಚಾಗುವುದು ಎಂಬ ನಂಬಿಕೆ.
ಹೊಸ ಮನೆಗೆ ಹೋಗುವುದು
ಈ ದಿನ ಗೃಹ ಪ್ರವೇಶ ಮಾಡುವುದು ಅಥವಾ ಆಸ್ತಿ ಖರೀದಿ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.



Click it and Unblock the Notifications
