Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಲಕ್ಷ್ಮೀಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರುತ್ತೆ!
ಅದೃಷ್ಟ ಯಾರಿಗೆ ತಾನೇ ಬೇಡ ಹೇಳಿ. ಇಲ್ಲಿ ಪ್ರತಿಯೊಬ್ಬರೂ ಕೂಡ ಅದೃಷ್ಟದ ಹಿಂದೆ ಬಿದ್ದವರೇ. ಅದೃಷ್ಟವೊಂದು ನಮ್ಮ ಜೊತೆಗಿದ್ದರೆ ಎಲ್ಲವೂ ನಾವಂದುಕೊಂಡ ಹಾಗೆಯೇ ನಡೆಯುತ್ತದೆ. ಆದರೆ ಈ ಅದೃಷ್ಟವನ್ನು ಪಡೆಯೋದಕ್ಕೆ ನಾವು ಕೆಲವೊಂದು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.

ನಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವಾಗ ಜಾಗರೂಕತೆ ವಹಿಸಬೇಕು. ಆ ವಸ್ತುಗಳು ಇಂತಹದ್ದೇ ಸ್ಥಳದಲ್ಲಿ ಇರಬೇಕು ಅನ್ನೋ ಪದ್ಧತಿಯಿದೆ. ಅಷ್ಟಕ್ಕು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳು ಯಾವ ಜಾಗದಲ್ಲಿ ಇದ್ದರೆ ನಮಗೆ ಅದೃಷ್ಟ ಒಲಿಯುತ್ತೆ ಅನ್ನೋದನ್ನು ಒಂದೊಂದಾಗಿಯೇ ತಿಳಿದುಕೊಳ್ಳೋಣ.
1. ತುಳಸಿ
ಪವಿತ್ರ ತುಳಸಿಯನ್ನು ಭಾರತೀಯ ಸಂಸ್ಕೃತಿಯಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ತುಳಸಿ ಗಿಡವನ್ನು ಪ್ರವೇಶ ದ್ವಾರದ ಬಳಿ ಅಥವಾ ಅಂಗಳದಲ್ಲಿ ಇರಿಸುವುದರಿಂದ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮತ್ತು ನಕಾರಾತ್ಮಕ ಶಕ್ತಿಗಳಿಂದ ನಮ್ಮ ದೂರವಿಡುತ್ತದೆ. ಈ ಪವಿತ್ರ ತುಳಸಿ ಸಸ್ಯವು ಸಮೃದ್ಧಿ ಮತ್ತು ಸಾಮರಸ್ಯವನ್ನು ಆಕರ್ಷಿಸುತ್ತದೆ. ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ.
2. ಬಿದಿರು ಸಸ್ಯ
ಬಿದಿರು ಸಸ್ಯವು ಅದೃಷ್ಟ ಮತ್ತು ಧನಾತ್ಮಕ ಶಕ್ತಿಯ ಮತ್ತೊಂದು ಸಂಕೇತವಾಗಿದೆ. ವಾಸ್ತು ಪ್ರಕಾರ ನಿಮ್ಮ ಮನೆಯ ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಅದೃಷ್ಟಕರ ಬಿದಿರು ಸಸ್ಯವನ್ನು ಇರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಬಹುದು. ಬಿದಿರು ಸಸ್ಯವನ್ನು ಪೋಷಿಸುವುದು ತುಂಬಾನೇ ಸುಲಭ. ಈ ಬಿದಿರು ಸಸ್ಯವು ನಿಮ್ಮ ವಾಸಸ್ಥಳದಲ್ಲಿ ಶಾಂತಿ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
3. ಫೆಂಗ್ ಶೂಯಿ ವಿಂಡ್ ಚೈಮ್ಸ್
ವಿಂಡ್ ಚೈಮ್‌ಗಳು ವಾಸ್ತು ಮತ್ತು ಫೆಂಗ್ ಶೂಯಿ ಪ್ರಾಮುಖ್ಯತೆಯನ್ನು ಹೊಂದಿವೆ. ವಿಂಡ್ ಚೈಮ್‌ಗಳನ್ನು ಪ್ರವೇಶದ್ವಾರಗಳು ಅಥವಾ ಕಿಟಕಿಗಳ ಬಳಿ ಇರಿಸುವುದರಿಂದ ಧನಾತ್ಮಕ ಶಕ್ತಿಯನ್ನು ಸೆರೆಹಿಡಿಯಲು ಮತ್ತು ಅದನ್ನು ಪ್ರಸಾರ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಅದ್ರಲ್ಲಿ ಬರುವ ಶಬ್ಧ ನಮ್ಮ ಧನಾತ್ಮಕ ಶಕ್ತಿಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಅನುಕೂಲಕರ ಶಕ್ತಿಗಳನ್ನು ಸಕ್ರಿಯಗೊಳಿಸಲು ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸಲು ಲೋಹದ ವಿಂಡ್ ಚೈಮ್‌ಗಳನ್ನು ಬಳಸಿದರೆ ಉತ್ತಮ.
4. ಸಾಲ್ಟ್ ಲ್ಯಾಂಪ್ (ಉಪ್ಪು ದೀಪಗಳು)
ಹಿಮಾಲಯನ್ (ಸಾಲ್ಟ್ ಲ್ಯಾಂಪ್) ಉಪ್ಪು ದೀಪಗಳು ಋಣಾತ್ಮಕ ಅಯಾನುಗಳನ್ನು ಬಿಡುಗಡೆ ಮಾಡುತ್ತೆ ಎಂದು ನಂಬಲಾಗಿದೆ. ಇವುಗಳು ಆರೋಗ್ಯಕರ ಮತ್ತು ಹೆಚ್ಚು ಧನಾತ್ಮಕ ವಾತಾವರಣವನ್ನು ಉತ್ತೇಜಿಸುತ್ತದೆ. ವಾಸ್ತು ಪ್ರಕಾರ ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಉಪ್ಪಿನ ದೀಪವನ್ನು ಇಡುವುದರಿಂದ ಅದೃಷ್ಟ, ಸಾಮರಸ್ಯ ಮತ್ತು ಸುಧಾರಿತ ಸಂಬಂಧಗಳನ್ನು ಆಕರ್ಷಿಸಬಹುದು. ದೀಪದ ಬೆಚ್ಚನೆಯ ಹೊಳಪು ಸಹ ಶಾಂತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
5. ವಾಸ್ತು ಯಂತ್ರಗಳು
ವಾಸ್ತು ಯಂತ್ರಗಳು ಶುಭ ಕಂಪನಗಳನ್ನು ಹೊಂದಿರುವ ನಿರ್ದಿಷ್ಟ ಮಾದರಿಗಳೊಂದಿಗೆ ಜ್ಯಾಮಿತೀಯ ರೇಖಾಚಿತ್ರಗಳಾಗಿವೆ. ವಾಸ್ತು ಯಂತ್ರಗಳು ಅಥವಾ ಸ್ವಸ್ತಿಕದಂತಹ ಚಿಹ್ನೆಗಳನ್ನು ನಿಮ್ಮ ಮನೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಇರಿಸುವುದರಿಂದ ಧನಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು. ಮತ್ತು ನಿಮ್ಮ ಮನೆಯ ಜಾಗವನ್ನು ನಕಾರಾತ್ಮಕತೆಯಿಂದ ರಕ್ಷಿಸಬಹುದು. ಈ ಚಿಹ್ನೆಗಳು ನಿಮ್ಮ ಜೀವನವನ್ನು ಸಮನ್ವಯಗೊಳಿಸಲು ಪ್ರಬಲ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ.
ಈ ಎಲ್ಲಾ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಅದೃಷ್ಟವನ್ನು ಆಕರ್ಷಿಸೋದು ಮಾತ್ರವಲ್ಲದೇ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.



Click it and Unblock the Notifications
