Latest Updates
-
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್!
ಈ ನಾಲ್ಕು ರಾಶಿಯ ಪುರುಷರನ್ನು ಮದುವೆಯಾದರೆ ತುಂಬಾನೇ ಒಳ್ಳೆಯದು
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತೆ ಅಂತಾರೆ. ಕೆಲವೊಂದು ಮದುವೆಗಳಲ್ಲಿ ಮದುವೆಯಾದ ಜೋಡಿ ಕೊನೆವರೆಗೂ ಸುಖವಾಗಿ ಸಂಸಾರ ನಡೆಸುತ್ತಾರೆ. ಇನ್ನೂ ಕೆಲವು ಮದುವೆಗಳು ಅರ್ಧದಲ್ಲೇ ಮುರಿದು ಬಿದ್ದಿದ್ದು ಇದೆ. ಇದಕ್ಕೆಲ್ಲಾ ಕಾರಣ ಇಬ್ಬರ ಮನಸ್ಥಿತಿ ಹೊಂದಾಣಿಕೆ ಆಗದೇ ಇರುವುದು. ಆದರೆ ನಮ್ಮ ಹಾಗೂ ಸಂಗಾತಿಯ ನಡವಳಿಕೆ ಹೊಂದಾಣಿಕೆ ಆದರೆ ಕೊನೆವರೆಗೂ ಸುಖವಾಗಿ ಇರಬಹುದು.
ಅದ್ರಲ್ಲೂ ಹೆಚ್ಚಿನ ಮನೆಗಳಲ್ಲಿ ನಾವು ಗಮನಿಸಿರ್ಬಹುದು. ಸಾಮಾನ್ಯವಾಗಿ ಎಲ್ಲಾ ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಗಂಡಸರು ನಮಗೂ ಮನೆಗೂ ಸಂಬಂಧ ಇಲ್ಲ ಎನ್ನುವಂತೆ ಕುಳಿತಿರುತ್ತಾರೆ. ಆದರೆ ಇನ್ನೂ ಕೆಲ ಮನೆಗಳಲ್ಲಿ ಇಬ್ಬರೂ ಎಲ್ಲಾ ಕೆಲಸವನ್ನು ಹಂಚಿಕೊಂಡು ಮಾಡುತ್ತಾರೆ. ಗಂಡನಾದವನು ಮನೆ, ಮಕ್ಕಳು ಹೀಗೆ ಎಲ್ಲಾ ವಿಚಾರದಲ್ಲೂ ಪತ್ನಿಗೆ ಹೆಗಲಾಗುತ್ತಾನೆ. ಮಹಿಳೆಯರು ಇಂತಹ ಗುಣ ಇರುವ ಪತಿಯನ್ನು ಬಯಸುತ್ತಾರಂತೆ. ಹಾಗಾದ್ರೆ ಆ 4 ರಾಶಿಯ ಪುರುಷರು ಯಾರು ಅನ್ನೋದನ್ನು ತಿಳಿಯೋಣ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಪುರುಷರು ಮನೆಯನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಪತ್ನಿಗೆ ಪ್ರತಿಯೊಂದು ಕೆಲಸದಲ್ಲೂ ಸಹಾಯ ಮಾಡುತ್ತಾರೆ. ಮನೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತರುವ ಜವಾಬ್ದಾರಿಯನ್ನು ಇವರೇ ಹೊತ್ತುಕೊಳ್ಳುತ್ತಾರೆ. ಇನ್ನೂ ಅಡುಗೆ ಕೂಡ ಚೆನ್ನಾಗಿ ಮಾಡುತ್ತಾರೆ. ಇನ್ನೂ ಮಕ್ಕಳ ಶಾಲೆಯ ಬಗ್ಗೆ ಕೂಡ ಹೆಚ್ಚಿನ ಗಮನ ಹರಿಸುವ ಗುಣ ಇವರದ್ದಾಗಿರುತ್ತದೆ. ಹೊರಗಡೆ ದುಡಿಯುತ್ತಿದ್ದರೂ ಕೂಡ ಇವರು ಮನೆಯನ್ನು ಎಂದಿಗೂ ನಿರ್ಲಕ್ಷ್ಯ ಮಾಡೋದಿಲ್ಲ.
ಕನ್ಯಾ ರಾಶಿ
ಕನ್ಯಾ ರಾಶಿಯ ಪುರುಷರು ತಮ್ಮ ವೃತ್ತಿ ಜೀವನದ ಹಾಗೂ ಮನೆಗೂ ಪ್ರಾಮುಖ್ಯತೆಯನ್ನು ಕೊಡುವವರು ಆಗಿರುತ್ತಾರೆ. ಮನೆಯ ಪ್ರತಿಯೊಂದು ಕೆಲಸದಲ್ಲೂ ಪತ್ನಿಗೆ ಸಹಾಯ ಮಾಡುತ್ತಾರೆ. ಮಕ್ಕಳಿಗೂ ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಾರೆ. ಹಾಗೂ ತನ್ನ ಹೆಂಡತಿಯ ಜೊತೆಗೆ ಅತ್ತೆ-ಮಾವನನ್ನು ಚೆನ್ನಾಗಿ ನೋಡಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಹೀಗಾಗಿ ಕುಟುಂಬದಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತದೆ.
ಮೇಷ ರಾಶಿ
ಮೇಷ ರಾಶಿಯವರು ಇದ್ದ ಕಡೆ ಸಂತೋಷಕ್ಕೆ ಪಾರವೇ ಇರೋದಿಲ್ಲ. ಮೇಷ ರಾಶಿಯವರು ಪತ್ನಿಗೆ ತಕ್ಕ ಪತಿ ಎನಿಸಿಕೊಳ್ಳುತ್ತಾರೆ. ಈ ರಾಶಿಯ ಪುರುಷರಿಗೆ ತಾಳ್ಮೆ ಹೆಚ್ಚಾಗಿರುತ್ತದೆ. ಬೇಗ ಕೋಪ ಮಾಡಿಕೊಳ್ಳೋದಿಲ್ಲ. ಯಾವುದೇ ಪರಿಸ್ಥಿತಿಯನ್ನಾದರೂ ಅಚ್ಚು ಕಟ್ಟಾಗಿ ಯಾವ ರೀತಿ ನಿಭಾಯಿಸಬೇಕೆಂಬುದು ಇವರಿಗೆ ಗೊತ್ತಿರುತ್ತದೆ. ಇವರು ಹೊರಗಡೆ ಕೆಲಸ ಮಾಡುವುದು ಮಾತ್ರವಲ್ಲದೇ ಮನೆಯನ್ನು ಚೆನ್ನಾಗಿ ನಿಭಾಯಿಸುವ ಕೌಶಲ್ಯ ಹೊಂದಿರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯ ಪುರುಷರು ಅಹಂಕಾರ ತೋರೋದಿಲ್ಲ. ತಮ್ಮ ಪತ್ನಿಗೂ ಸಮನಾದ ಸ್ಥಾನವನ್ನು ನೀಡುತ್ತಾರೆ. ತಮ್ಮ ಎಲ್ಲಾ ಅಹಂ ಬಿಟ್ಟು ಪತ್ನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅಷ್ಟೇ ಅಲ್ಲದೇ ಮಕ್ಕಳಿಗೂ ಇದನ್ನೇ ಕಲಿಸುತ್ತಾರೆ. ಮನೆಗಾಗಿ ಅವರು ಶಾಪಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ, ಮಕ್ಕಳ ಆರೈಕೆ ಮಾಡೋದಕ್ಕೂ ಹಿಂಜರಿಯೋದಿಲ್ಲ. ಇಂತಹ ಗುಣ ಹೊಂದಿರುವ ಪುರುಷರನ್ನು ಮದುವೆಯಾದರೆ ಖುಷಿಯಿಂದ ಜೀವನ ನಡೆಸಬಹುದು.
ಹೀಗಂತ ಈ ರಾಶಿಯವರ ಎಲ್ಲರ ಗುಣ ಒಂದೇ ರೀತಿ ಇರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಒಬ್ಬೊಬ್ಬರ ಗುಣ ಒಂದೊಂದು ರೀತಿಯಲ್ಲಿ ಇರುತ್ತದೆ. ಆದರೆ ಹೆಚ್ಚಿನವರು ಇದೇ ರೀತಿಯ ಗುಣಗಳನ್ನು ಹೊಂದಿರುತ್ತಾರೆ.



Click it and Unblock the Notifications

