Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರಾಶಿಯವರು ಮೊದಲ ಪ್ರೀತಿಯನ್ನು ಕಡೆವರೆಗೂ ಉಳಿಸಿಕೊಳ್ಳುತ್ತಾರೆ
ಮೊದಲ ಪ್ರೀತಿ ಅಂದ್ರೆ ಪ್ರತಿಯೊಬ್ಬರಿಗೂ ತುಂಬಾನೇ ಸ್ಪೆಷಲ್ ಅಲ್ವಾ. ನಮ್ಮ ಜೀವನದಲ್ಲಿ ಎಷ್ಟು ಜನ ಬಂದು ಹೋಗ್ಬಹುದು. ಆದ್ರೆ ಮೊದಲ ಪ್ರೀತಿಯನ್ನು ಅಷ್ಟು ಸುಲಭವಾಗಿ ಮರೆಯೋದಕ್ಕೆ ಸಾಧ್ಯವೇ ಇಲ್ಲ. ಎಲ್ಲರಿಗೂ ಮೊದಲ ಪ್ರೀತಿ ಸಿಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಅನೇಕ ಸಂದರ್ಭಗಳಲ್ಲಿ ಅವರೇ ಬಿಟ್ಟು ಹೋಗುತ್ತಾರೆ.
ಇನ್ನೂ ಕೆಲವು ಸಂದರ್ಭದಲ್ಲಿ ಪೋಷಕರು ವಿಲನ್ ಆಗಿ ಬಿಡ್ತಾರೆ. ಕೆಲವೇ ಕೆಲವು ಜನರು ಮಾತ್ರ ಮೊದಲ ಪ್ರೀತಿಯನ್ನು ಪಡೆದುಕೊಳ್ಳೋದ್ರಲ್ಲಿ ಯಶಸ್ವಿಯಾಗುತ್ತಾರೆ. ಹಾಗಾದ್ರೆ ಮೊದಲ ಪ್ರೀತಿಯನ್ನು ಪಡೆದುಕೊಳ್ಳುವ ಆ ರಾಶಿಯವರು ಯಾರು ಎಂಬುವುದನ್ನುನೋಡೋಣ.

ಸಿಂಹ ರಾಶಿ
ಸಿಂಹ ರಾಶಿಯವರು ಮೊದಲ ಪ್ರೀತಿಯನ್ನು ಪಡೆದುಕೊಳ್ಳೋದಕ್ಕೆ ಹೋರಾಡುತ್ತಾರೆ. ಪ್ರೀತಿಯಲ್ಲಿ ಎಷ್ಟೇ ಏರಿಳಿತಗಳಾದರೂ ಕೂಡ ಇವರು ಮೊದಲ ಪ್ರೀತಿಯನ್ನು ಬಿಟ್ಟು ಕೊಡೋದೇ ಇಲ್ಲ. ಎಷ್ಟೇ ಕಷ್ಟ ಬಂದರೂ ಮೊದಲ ಪ್ರೀತಿಯನ್ನು ಇವರು ಉಳಿಸಿಕೊಳ್ಳುತ್ತಾರೆ. ಕಠಿಣ ಪರಿಶ್ರಮ, ಜಾಣ್ಮೆ, ತ್ಯಾಗ ವಿದ್ದಾಗ ಮಾತ್ರ ಮೊದಲು ಪ್ರೀತಿಯನ್ನು ಪಡೆಯಲು ಸಾಧ್ಯ ಎಂದು ಸಿಂಹ ರಾಶಿಯವರು ನಂಬಿದ್ದಾರೆ. ಪ್ರೀತಿಸಿದವಳನ್ನು ಇವರು ಹೂವಿನಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಪ್ರೀತಿಗೆ ಆದರ್ಶವಾಗಿರುತ್ತಾರೆ. ಅವರು ಎಂದಿಗೂ ತಮ್ಮನ್ನು ಪ್ರೀತಿಸಿದವರಿಗೆ ನೋವು ಮಾಡೋದಕ್ಕೆ ಇಷ್ಟ ಪಡೋದಿಲ್ಲ. ಜಗಳ, ಮನಸ್ಥಾಪ ಬಂದರೂ ಕೂಡ ಅದನ್ನು ಸರಿಪಡಿಸಿಕೊಂಡು ಹೋಗುವ ಗುಣ ಇವರಲ್ಲಿದೆ. ಇವರು ಯಾರಾದರೂ ಒಬ್ಬರನ್ನು ಪ್ರೀತಿಸಲು ಶುರು ಮಾಡಿದರು ಎಂದರೆ ಅದ್ರಲ್ಲಿ ಎಳ್ಳಲ್ಲಿ ಸ್ವಾರ್ಥ ಇರೋದಿಲ್ಲ. ನಿಸ್ವಾರ್ಥ ಪ್ರೀತಿ ಇವರದ್ದಾಗಿರುತ್ತದೆ. ಮೊದಲ ಪ್ರೀತಿಗೆ ಸರ್ವಸ್ವವನ್ನೇ ಮುಡಿಪಾಗಿರಿಸುವ ಗುಣ ಇವರದ್ದಾಗಿರುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರ ಗುಣ ಹೇಗೆಂದರೆ ಇವರಿಗೆ ಯಾರ ಮೇಲಾದರೂ ಒಮ್ಮೆ ಪ್ರೀತಿಯಾದರೆ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ತಮ್ಮ ಪ್ರೀತಿಗಾಗಿ ಹೃದಯದಲ್ಲಿ ಒಂದು ಸ್ಪೆಷಲ್ ಜಾಗ ಕೊಟ್ಟು ಪ್ರೀತಿಯನ್ನು ಭದ್ರ ಮಾಡುವ ಗುಣ ಇವರದ್ದಾಗಿರುತ್ತದೆ. ಪ್ರತಿಯೊಬ್ಬರ ಪ್ರೀತಿಯಲ್ಲೂ ಏರಿಳಿತಗಳಿರೋದು ಸಾಮಾನ್ಯ. ಆದರೆ ಇವರು ಎಷ್ಟೇ ಕಷ್ಟ ಆದರೂ ಸರಿ ಮೊದಲ ಪ್ರೀತಿಯನ್ನು ಬಿಟ್ಟು ಕೊಡೋದಿಲ್ಲ. ಕೊನೆವರೆಗೂ ಉಳಿಸಿಕೊಂಡು ಹೋಗುತ್ತಾರೆ. ಕುಟುಂಬದ ವಿರೋಧ ಬಂದರೂ ಕೂಡ ಮನೆಯವರನ್ನೆಲ್ಲರನ್ನೂ ಒಪ್ಪಿಸಿ ಇವರು ತಮ್ಮ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಮೊದಲ ಪ್ರೀತಿಗೆ ತುಂಬಾನೇ ಗೌರವ ನೀಡುತ್ತಾರೆ. ಹಾಗೂ ಇವರು ನಮ್ಮ ಮೊದಲ ಪ್ರೀತಿಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಇವರು ಪ್ರೀತಿಯಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾರೆ. ಪ್ರೀತಿ ಮುರಿದು ಬೀಳುವ ಪರಿಸ್ಥಿತಿಗೆ ಬಂದರೆ ಅದನ್ನು ಪ್ರಾಣ ಕೊಟ್ಟಾದರೂ ಕಾಪಾಡುತ್ತಾರೆ. ಯಾವುದೇ ಕಾರಣಕ್ಕೂ ಪ್ರೀತಿ ಚೂರು ಚೂರಾಗಲು ಬಿಡೋದಿಲ್ಲ. ಮೊದಲ ಪ್ರೀತಿಯ ಜೊತೆಗೆ ಸಪ್ತಪದಿ ತುಳಿಯುವ ಆಸೆ ಇವರದ್ದಾಗಿರುತ್ತಾರೆ.



Click it and Unblock the Notifications

