Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರಿಗೆ ಆಫಿಸ್ ನಲ್ಲಿ ಕೆಲಸ ಮಾಡೋದು ಇಷ್ಟವಿಲ್ಲ!
ಈ ಪ್ರಪಂಚದಲ್ಲಿ ಎಲ್ಲರ ಸ್ವಭಾವ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜಾಗಗಳು ಇಷ್ಟ ಆಗುತ್ತದೆ. ಕೆಲವರಿಗೆ ನೀರು, ಇನ್ನೂ ಕೆಲವರಿಗೆ ಬಂಡೆಗಳು, ಸರೋವರಗಳು, ಕಡಲತೀರಗಳು, ನೀರು ಮತ್ತು ತಂಪಾದ ಗಾಳಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸ್ಥಳ ಇಷ್ಟವಾಗುತ್ತದೆ.
ಅದ್ರಲ್ಲೂ ಹೆಚ್ಚಿನ ಜನರು ಪ್ರಕೃತಿಯ ಜೊತೆಗೆ ಬದುಕೋದಕ್ಕೆ ಇಷ್ಟ ಪಡುತ್ತಾರೆ. ಹೀಗಾಗಿ ಅವರು ಆಫಿಸ್ ನಲ್ಲಿ ಕೆಲಸ ಮಾಡೋದಕ್ಕೆ ಇಷ್ಟ ಪಡುವುದಿಲ್ಲ. ಆಫಿಸ್ ನ ಕೃತಕ ಪರಿಸರದಲ್ಲಿ ಅವರಿಗೆ ಕೆಲಸ ಮಾಡೋದಕ್ಕೆ ಮನಸ್ಸು ಬರೋದಿಲ್ಲ. ಹೀಗಾಗಿ ಅಂತವರು ಆಫಿಸ್ ಕೆಲಸವನ್ನು ಹೊರಗಿನ ಪರಿಸರದಲ್ಲಿ ಮಾಡೋದಕ್ಕೆ ಇಷ್ಟ ಪಡುತ್ತಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕಚೇರಿಯಲ್ಲಿ ಕೆಲಸ ಮಾಡುವುದಕ್ಕಿಂತ ಹೊರಾಂಗಣದಲ್ಲಿ ಕೆಲಸ ಮಾಡೋದಕ್ಕೆ ಇಷ್ಟ ಪಡುತ್ತಾರೆ. ಇಲ್ಲದಿದ್ದರೆ ಆಫಿಸ್ ನ ಹೊರಗಡೆ ಚಿಕ್ಕ-ಪುಟ್ಟ ಸಸಿಗಳ ಮಧ್ಯೆ ಒಂದು ಸುಂದರ ವಾತಾವರಣವನ್ನು ಅವರು ಸೃಷ್ಟಿಸಿಕೊಳ್ಳುತ್ತಾರೆ. ಈ ರಾಶಿಯವರಿಗೆ ಕಾಡಿಗೆ ಪಿಕ್ನಿಕ್ ಹೋಗಲು ಇಷ್ಟ. ಅರಣ್ಯದ ಶಬ್ಧಗಳನ್ನು ಅವರು ಆನಂದಿಸುತ್ತಾರೆ. ಗಗನಚುಂಬಿ ಕಟ್ಟಡಗಳಲ್ಲಿ ಕಾರ್ಪೊರೇಟ್ ಕಚೇರಿ ಒಳಗಡೆ ಅವರಿಗೆ ಕೆಲಸ ಮಾಡೋದು ಇಷ್ಟ ಆಗೋದಿಲ್ಲ. ಹೊರಗಡೆ ಕೆಲಸ ಮಾಡೋದ್ರಿಂದ ಇವರ ಉತ್ಪಾದಕತೆಯೂ ಹೆಚ್ಚಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ವಾರದಲ್ಲಿ ಕನಿಷ್ಠ ಕೆಲವು ಬಾರಿಯಾದರೂ ಪ್ರಕೃತಿಯ ಮಧ್ಯೆ ಸಮಯ ಕಳೆಯೋದಕ್ಕೆ ಇಚ್ಛಿಸುತ್ತಾರೆ. ಅವರಿಗೆ ಆಫಿಸ್ ಒಳಗಡೆ ಕೆಲಸ ಮಾಡೋದು ಉಸಿರು ಗಟ್ಟಿದ ಅನುಭವವಾಗುತ್ತದೆ. ಇವರು ಯಾವಾಗಲೂ ಪರಿಸರದಲ್ಲಿ ಬಿಟ್ಟೆಯಂತೆ ಹಾರಾಡೋದಕ್ಕೆ ಇಷ್ಟ ಪಡುತ್ತಾರೆ. ಯಾಂತ್ರಿಕ ಬದುಕನ್ನು ಈ ರಾಶಿಯವರು ಇಷ್ಟ ಪಡೋದಿಲ್ಲ. ಇವರು ಪರಿಸರ ರಕ್ಷಣೆಗಾಗಿ ಸಾಕಷ್ಟು ಶ್ರಮ ವಹಿಸುತ್ತಾರೆ. ಪರಿಸರದ ಮೇಲಿನ ಎಲ್ಲಾ ರೀತಿಯ ಜೀವಿಗಳನ್ನು ರಕ್ಷಿಸಲು ಇವರು ಪ್ರಯತ್ನಿಸುತ್ತಾರೆ. ಈ ರಾಶಿಯವರು ಸಾಮಾನ್ಯವಾಗಿ ಪಾರ್ಕ್ ರೇಂಜರ್‌ಗಳು, ಪ್ರಾಣಿಶಾಸ್ತ್ರಜ್ಞರು ಅಥವಾ ಪಶುವೈದ್ಯರಾಗಲು ಸೂಕ್ತರಾಗಿದ್ದಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪರಿಸರದ ಮೇಲೆ ಇಂಗಾಲದ ಪ್ರಭಾವವನ್ನು ಕಡಿಮೆ ಮಾಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಇವರು ರೆಸಾರ್ಟ್ ಗಳಲ್ಲಿ ಮೋಜು, ಮಸ್ತಿ ಮಾಡಿ ಪರಿಸರವನ್ನು ಹಾಳು ಮಾಡೋದಕ್ಕೆ ಇಷ್ಟ ಪಡೋದಿಲ್ಲ. ಬದಲಾಗಿ ಪರಿಸರ ರಕ್ಷಿಸುವಲ್ಲಿ ಇವರ ಕಾಳಜಿ ಹೆಚ್ಚಾಗಿರುತ್ತದೆ. ಕಛೇರಿಯಲ್ಲಿ ಕೆಲಸ ಮಾಡೋದು ಇವರಿಗೆ ಬೇಜಾರು ಅನ್ನಿಸುತ್ತದೆ. ನೈಸರ್ಗಿಕ ಸೂರ್ಯನ ಬೆಳಕು, ತಂಗಾಳಿ ಮತ್ತು ಹಸಿರಿನಿಂದ ಕೂಡಿದ ಕಚೇರಿ ಪರಿಸರದಲ್ಲಿ ಕೆಲಸ ಮಾಡೋದಕ್ಕೆ ಅವರು ಇಷ್ಟ ಪಡುತ್ತಾರೆ.
ಧನು ರಾಶಿ
ಧನು ರಾಶಿ ಜನರು ಹೆಚ್ಚಿನ ಒತ್ತಡದ ಕೆಲಸದ ವಾತಾವರಣವನ್ನು ಆನಂದಿಸುತ್ತಾರೆ. ಇವರು ಹೊಸ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ ಮತ್ತು ವಿವಿಧ ಕೌಶಲ್ಯಗಳ ಬಗ್ಗೆ ಕಲಿಯುತ್ತಾರೆ. ಇವರು ತಮ್ಮ ಜೀವನದಲ್ಲಿ ಪ್ರಕೃತಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅರಣ್ಯದಲ್ಲಿ ಸುತ್ತಾಡೋದು ಅಂದ್ರೆ ಇವರಿಗೆ ತುಂಬಾನೇ ಇಷ್ಟ. ಹೀಗಾಗಿ ಇವರಿಗೆ ಇಡೀ ದಿನ ಆಫಿಸ್ ಒಳಗಡೆ ಕೂತು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡೋದಂದ್ರೆ ಒಂಚೂರು ಇಷ್ಟವಿಲ್ಲ.



Click it and Unblock the Notifications