Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಈ ರಾಶಿಯವರು ಕೊನೆವರೆಗೂ ಪ್ರೀತಿಯನ್ನು ಹೇಳಿಕೊಳ್ಳೋದೇ ಇಲ್ಲ
ಪ್ರೀತಿ ಇಂತಹದ್ದೇ ವ್ತಕ್ತಿಯ ಮೇಲೆ ಆಗುತ್ತೆ ಅಂತ ಹೇಳೋದಿಕ್ಕಾದಿಲ್ಲ. ಪ್ರೀತಿ ಯಾರ ಮೇಲೆ ಬೇಕಾದರೂ ಹುಟ್ಟಬಹುದು. ತುಂಬಾ ಜನ ಪ್ರೀತಿ ಮಾಡುತ್ತಾರೆ. ಅದನ್ನು ತಮ್ಮ ಪ್ರೇಯಸಿ/ ಪ್ರಿಯತಮನಲ್ಲಿ ಹೇಳಿಕೊಂಡು ಆ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ಪ್ರೀತಿಸಿದರೂ ಕೂಡ ಅದನ್ನು ಹೇಳೋದಿಕ್ಕಾಗದೇ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ. ಅವರಲ್ಲಿರೋ ಹಿಂಜರಿಕೆ ಗುಣದಿಂದ ಇದು ಸಾಧ್ಯವಾಗೋದಿಲ್ಲ. ಈ ನಾಲ್ಕು ರಾಶಿಯವರು ಕೂಡ ಪ್ರೀತಿಯನ್ನು ಹೇಳಿಕೊಳ್ಳುವ ಪ್ರಯತ್ನದಲ್ಲಿ ಸೋತಿದ್ದಾರೆ. ಹಾಗಾದ್ರೆ ಆ ನಾಲ್ಕು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮಕರ ರಾಶಿ
ಪ್ರೀತಿ ಯಾವಾಗ ಬೇಕಾದರೂ ಆಗಬಹುದು. ಪ್ರೀತಿಯಲ್ಲಿ ಬೀಳೋದಕ್ಕೆ ಕಾರಣ ಬೇಕಾಗಿಲ್ಲ. ಮಕರ ರಾಶಿಯವರು ಪ್ರೀತಿಯಲ್ಲಿ ತುಂಬಾನೇ ಪ್ರಾಮಾಣಿಕರಾಗಿರುತ್ತಾರಂತೆ. ಇವರು ಒಬ್ಬರನ್ನು ತುಂಬಾನೇ ಪ್ರೀತಿಸುತ್ತಾರೆ. ಆದರೆ ಆ ಪ್ರೀತಿಯನ್ನು ಹೇಳಿಕೊಳ್ಳೋಣ ಎಂದರೆ ಹಿಂಜರಿಕೆ ಇವರನ್ನು ತಡೆಯುತ್ತಂತೆ. ಹೀಗಾಗಿ ಇವರು ಪ್ರೀತಿಯನ್ನ ಹೇಳೋಕಾಗದೇ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದೇ ಇವರ ದೌರ್ಬಲ್ಯ. ಈ ರಾಶಿಯವರಿಗೆ ನಾನು ಪ್ರೀತಿಸಿದವರು ನನ್ನನ್ನು ಎಲ್ಲಿ ತಿರಸ್ಕರಿಸಿ ಬಿಡುತ್ತಾರೋ ಅನ್ನೋ ಭಯ ಕಾಡುತ್ತಂತೆ. ಹೀಗಾಗಿ ಪ್ರೀತಿಯನ್ನು ಹೇಳೋದಿಕ್ಕಾಗದೇ ಮುಚ್ಚಿಡುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಯಾವುದೇ ಕೆಲಸವನ್ನಾದರೂ ಅಚ್ಚು ಕಟ್ಟಾಗಿ ಮಾಡಿ ಮುಗಿಸುತ್ತಾರೆ. ಆದರೆ ಪ್ರೀತಿಯನ್ನು ಹೇಳೋ ವಿಚಾರದಲ್ಲಿ ಇವರು ಯಾವಾಗಲೂ ಒಂದು ಹೆಜ್ಜೆ ಹಿಂದೆಯೇ ಇರುತ್ತಾರೆ. ಇವರು ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಸರಿಯಾದ ಸಮಯ ಬರಲಿ ಎಂದು ಕಾಯುತ್ತಿರುತ್ತಾರೆ. ಆದರೆ ಪ್ರೀತಿಯನ್ನು ಹೇಳಿಕೊಳ್ಳುವ ದೈರ್ಯ ಮಾಡೋದೇ ಇಲ್ಲ. ಇವರ ಪ್ರೀತಿ ಮನಸ್ಸಿನಲ್ಲೇ ಉಳಿದು ಬಿಡುತ್ತದೆ.
ಧನು ರಾಶಿ
ಧನು ರಾಶಿಯವರು ನಿಷ್ಠಾವಂತರು, ವಿಶ್ವಾಸರ್ಹರು ಹಾಗೂ ಇವರ ಒಡನಾಟವನ್ನು ಪ್ರತಿಯೊಬ್ಬರು ಮೆಚ್ಚುತ್ತಾರೆ. ಆದರೆ ಈ ರಾಶಿಯವರಿಗೆ ಕಮಿಟ್‌ಮೆಂಟ್ ಅಂದ್ರೆ ಇಷ್ಟ ಇರೋದಿಲ್ಲ. ಇವರಿಗೆ ಯಾರ ಮೇಲಾದರೂ ಪ್ರೀತಿಯಾದರೆ ಅದನ್ನು ಹೇಳಿಕೊಳ್ಳಬೇಕಾ? ಬೇಡ್ವಾ? ಎಂದು ಯೋಚಿಸುತ್ತಾರೆ. ಯಾಕಂದರೆ ಮುಂದೆ ಅದನ್ನು ನಿಭಾಯಿಸೋದು ಹೇಗೆ ಎನ್ನುವ ಚಿಂತೆ ಇವರನ್ನು ಕಾಡುತ್ತಿರುತ್ತದೆ. ಇನ್ನೂ ಇವರಿಗೆ ಬಣ್ಣದ ಬಣ್ಣದ ಮಾತುಗಳನ್ನು ಮಾತನಡೋದಕ್ಕೆ ಬರೋದಿಲ್ಲ. ಏನಿದ್ದರೂ ನೇರಾ ನೇರಾ ಮಾತಾಡುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಭಾವನೆಗಳು ಯಾವ ರೀತಿ ವ್ಯಕ್ತ ಪಡಿಸಬೇಕು ಅನ್ನೋದು ಗೊತ್ತಿರೋದಿಲ್ಲ. ತಾವು ಪ್ರೀತಿಸದವರಲ್ಲಿ ತಮ್ಮ ಭಾವನೆಗಳನ್ನು ಹೇಳಿಕೊಳ್ಳೋದಕ್ಕೆ ಹಿಂಜರಿಯುತ್ತಾರೆ. ಈ ರಾಶಿಯವರು ನೇರವಾಗಿ ಪ್ರೀತಿಸುತ್ತಿದ್ದೇನೆ ಎಂದು ಪ್ರೀತಿಯನ್ನು ವ್ಯಕ್ತ ಪಡಿಸೋದಿಲ್ಲ. ಬದಲಾಗಿ ಅದನ್ನು ಬೇರೆ ವಿಧಾನದಲ್ಲಿ ವ್ಯಕ್ತ ಪಡಿಸಲು ಬಯಸುತ್ತಾರೆ. ಆದರೆ ಕೊನೆಗೆ ಪ್ರೀತಿ ವ್ಯಕ್ತ ಪಡಿಸೋದಕ್ಕೆ ದೈರ್ಯ ಸಾಲದೇ ಮನಸ್ಸಲ್ಲೇ ಪ್ರೀತಿಯನ್ನು ಬಚ್ಚಿಡುತ್ತಾರೆ.



Click it and Unblock the Notifications
