Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತಾವು ಅತಿ ಬುದ್ಧಿವಂತರು ಅಂದುಕೊಳ್ಳುವ ರಾಶಿಯವರಂತೆ ಇವರು
ಅನೇಕ ಜನರ ವ್ಯಕ್ತಿತ್ವ ಹೇಗಿರುತ್ತೆ ಎಂದರೆ ಅವರು ಟೀಕೆಗಳನ್ನು ಸಹಿಸೋದಿಲ್ಲ. ಅವರ ಕೆಲಸದಲ್ಲಿ ತಪ್ಪು ಹುಡುಕಿ ಯಾರಾದರೂ ಅವರನ್ನು ಟೀಕಿಸಿದ್ರೆ ಅವರು ಸುತಾರಾಂ ಒಪ್ಪೋದಕ್ಕೆ ರೆಡಿ ಇರೋದಿಲ್ಲ. ಜೊತೆಗೆ ಯಾರ ಮುಂದೆಯೂ ಯಾವುದಕ್ಕೂ ಬಗ್ಗೋದಿಲ್ಲವೆಂದು ಅಹಂಕಾರ ತೋರುತ್ತಾರೆ. ಅಹಂಕಾರ ಅನ್ನೋದು ಇವರಿಗೆ ಹುಟ್ಟಿನಿಂದಲೇ ಬಂದಿದೆ ಅನ್ನೋ ಹಾಗೇ ನಡೆದುಕೊಳ್ಳುತ್ತಾರೆ. ಅದ್ರಲ್ಲೂ ಈ ನಾಲ್ಕು ರಾಶಿಯವರಿಗೆ ಅಹಂಕಾರ ಹೆಚ್ಚಾಗಿರುತ್ತಂತೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುದು ಅನ್ನೋದನ್ನು ತಿಳಿಯೋಣ.
ಸಿಂಹ ರಾಶಿ
ಸಿಂಹ ರಾಶಿಯ ಅನೇಕ ಜನರಿಗೆ ಅಹಂಕಾರ ಹೆಚ್ಚಾಗಿರುತ್ತಂತೆ. ಅವರು ತಮ್ಮನ್ನು ತಾವು ತುಂಬಾ ಬುದ್ಧಿವಂತರು ಎಂದು ಕೊಂಡಿರುತ್ತಾರೆ. ಹೀಗಾಗಿ ಅಹಂಕಾರ ಸಹಜವಾಗೇ ಅವರಲ್ಲಿ ಇರುತ್ತದೆ. ಕೆಲವೊಂದು ಬಾರಿ ಅವರು ಹೇಳಿದ್ದೇ ಸರಿಯಾಗಿರಬಹುದು. ಆದರೆ ಅವರಿಗಿರೋ ಅಹಂಕಾರ ಯಾರು ಏನು ಹೇಳಿದರೂ ಕೇಳಿಸಿಕೊಳ್ಳೋದಿಲ್ಲ. ತಾನು ಮಾಡಿದ್ದೇ ಸರಿ ಎನ್ನುವಂತೆ ನಡೆದುಕೊಳ್ಳುತ್ತಾರೆ. ಇವರಿಗೆ ಅತಿಯಾದ ಆತ್ಮ ವಿಶ್ವಾಸವಿರುತ್ತದೆ. ಇವರ ನಡವಳಿಕೆ ಇತರರಿಗೆ ಇಷ್ಟವಾಗೋದಿಲ್ಲ ಇವರನ್ನು ನೋಡುವಾಗಲೇ ಸೊಕ್ಕಿನ ವ್ಯಕ್ತಿ, ಅಹಂಕಾರಿ ಎಂದು ಜನ ನಿರ್ಧರಿಸುತ್ತಾರೆ.

ಮೀನ ರಾಶಿ
ಮೀನ ರಾಶಿಯವರು ಕೂಡ ಅಹಂಕಾರಿಗಳಾಗಿರುತ್ತಾರೆ. ಇವರು ಟೀಕೆಗಳನ್ನು ಕೇಳಿಸಿಕೊಳ್ಳೋದಕ್ಕೆ ಸಿದ್ಧರಿರೋದಿಲ್ಲ. ಯಾರಾದರೂ ಇವರ ತಪ್ಪನ್ನು ತೋರಿಸೋದಕ್ಕೆ ಹೋದರೆ ಇವರು ಆ ವ್ಯಕ್ತಿಗಳನ್ನೇ ಧೂಷಿಸುತ್ತಾರೆ. ಮೀನ ರಾಶಿಯವರು ಅವರು ಮಾಡಿದ ತಪ್ಪುಗಳಿಂದ ಕಲಿಯುತ್ತಾರೆ ವಿನಹಃ ಬೇರೆಯವರ ಮಾರ್ಗದರ್ಶನ ಇವರಿಗೆ ಬೇಕಾಗಿರೋದಿಲ್ಲ. ಮೀನ ರಾಶಿಯವರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ, ಬೇರೆಯವರ ಮಾರ್ಗದರ್ಶನವನ್ನು ಕೇಳದೇ ನಷ್ಟ ಅನುಭವಿಸುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ. ಇದೇ ಕಾರಣಕ್ಕೆ ಇವರು ಜಂಬ ಪಟ್ಟುಕೊಳ್ಳುತ್ತಾರೆ. ಸಾಮಾನ್ಯ ಜನರು ಇವರ ಕಣ್ಣಿಗೆ ಕಾಣಿಸೋದಿಲ್ಲ. ಮಕರ ರಾಶಿಯವರು ಬೇರೆಯವರ ಮಾತು ಕೇಳಿಸಿಕೊಳ್ಳೋದಿಲ್ಲ. ಟೀಕೆಗಳನ್ನು ಇವರು ಸುತಾರಾಂ ಒಪ್ಪೋದಿಲ್ಲ. ನಾನು ಮಾಡುತ್ತಿರೋದೇ ಸರಿ. ಅದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಅವರು ನಂಬುತ್ತಾರೆ. ಮೊದಲನೇ ಮಾರ್ಗ ಎಷ್ಟು ಅಪಾಯಕಾರಿಯಾಗಿದ್ದರೂ ಪರವಾಗಿಲ್ಲ ಅದರಲ್ಲೇ ಸಾಗುತ್ತಾರೆ ಹೊರತು ಇವರು ಪರ್ಯಾಯ ಮಾರ್ಗ ಕಂಡುಕೊಳ್ಳೋದಿಲ್ಲ. ಇದೇ ಅಹಂಕಾರ ಗುಣದಿಂದ ಇವರು ಸಂಕಷ್ಟವನ್ನು ತಂದುಕೊಳ್ಳುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೂಡ ಅಹಂಕಾರಿಗಳಾಗಿರುತ್ತಾರೆ. ಇವರ ತಲೆಯಲ್ಲಿ ನಾನು ಎಂದಿಗೂ ತಪ್ಪು ಮಾಡೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಹುಚ್ಚು ನಂಬಿಕೆ ಇರುತ್ತದೆ. ಇವರು ಆಫಿಸ್ ಪ್ರೆಸೆಂಟೇಷನ್ ಮಾಡಿದ ಸಂದರ್ಭದಲ್ಲಿ ಯಾರಾದರೂ ಫೀಡ್‌ಬ್ಯಾಕ್ ಕೊಟ್ಟರೆ ಇವರು ಅದನ್ನು ಸ್ವೀಕರಿಸೋದಿಲ್ಲ. ತಪ್ಪಿರಲಿ ಅಥವಾ ಸರಿಯಿರಲಿ ನಾನು ಮಾಡಿದ್ದೇ ಸರಿ ಎಂದು ತಮ್ಮ ಮೂಗಿನ ನೇರಕ್ಕೆ ಮಾತನಾಡುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.



Click it and Unblock the Notifications

