Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 3 ರಾಶಿಯವರ ಜನ್ಮಕುಂಡಲಿಯಲ್ಲಿ ರಾಜಯೋಗ : ಜೀವನದಲ್ಲಿ ಅದೃಷ್ಟವೋ ಅದೃಷ್ಟ!
ಕೆಲವರೆಲ್ಲಾ ಹುಟ್ಟುತ್ತಲೇ ರಾಜ ಯೋಗವನ್ನು ಪಡ್ಕೊಂಡಿರುತ್ತಾರೆ. ಮನೆಯಲ್ಲಿ ಸಿಕ್ಕಾಪಟ್ಟೆ ಆಸ್ತಿ, ಸಂಪತ್ತು ಇರುತ್ತೆ. ಹೀಗಾಗಿ ಅವರಿಗೆ ಕಷ್ಟ ಅಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಬಯಸಿದ್ದೆಲ್ಲಾ ಅವರಿಗೆ ಒಲಿದು ಬರುತ್ತೆ. ಇನ್ನೂ ಕೆಲವರು ಜೀವನದಲ್ಲಿ ಕಷ್ಟ ಪಡುತ್ತಲೇ ಇರುತ್ತಾರೆ. ಎಷ್ಟೇ ಕಷ್ಟ ಪಟ್ರು ಕೂಡ ಅದೃಷ್ಟ ಅವರ ಕೈ ಹಿಡಿಯೋದಿಲ್ಲ.
ಹೆಚ್ಚಿನ ಸಂದರ್ಭದಲ್ಲಿ ನಮ್ಮ ಸ್ನೇಹಿತರನ್ನೇ ನಾವು ನೋಡುತ್ತೀವಿ. ಅವರಲ್ಲಿ ಜ್ಞಾನ ಇಲ್ಲದಿದ್ದರೂ, ಯಾವುದೇ ರೀತಿಯ ಕೌಶಲ್ಯಗಳು ಇಲ್ಲದಿದ್ದರೂ ಕೂಡ ಅವರು ಯಾವಾಗಲೂ ನಮಗಿಂತ ಮುಂದಿರುತ್ತಾರೆ. ಕಾರಣ ಅದೃಷ್ಟ ಅವರ ಕೈ ಹಿಡಿದಿರುತ್ತದೆ. ಇದಕ್ಕೆಲ್ಲಾ ಕಾರಣ ರಾಜಯೋಗ. ನಮ್ಮ ಜನ್ಮ ಕುಂಡಲಿಯಲ್ಲಿ ರಾಜ ಯೋಗವಿದ್ದರೆ ನಾವು ರಾಜರಂತೆ ಜೀವನ ನಡೆಸ್ಬಹುದು. ಅಷ್ಟಕ್ಕು ಯಾವೆಲ್ಲಾ ರಾಶಿಯವರು ರಾಜ ಯೋಗವನ್ನು ಹೊಂದಿರುತ್ತಾರೆ ಅನ್ನೋದನ್ನು ತಿಳಿಯೋಣ.

ತುಲಾ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದವರನ್ನು ಅದೃಷ್ಟವಂತರೂ ಅಂತಾನೇ ಹೇಳಬಹುದು. ರಾಜಯೋಗದ ಆಶೀರ್ವಾದ ಅವರ ಮೇಲೆ ಇರೋದ್ರಿಂದ ಅವರು ಅಂದುಕೊಂಡಿರೋ ಎಲ್ಲಾ ಕೆಲಸಗಳು ಕೂಡ ಸುಲಭವಾಗಿ ನೆರವೇರುತ್ತದೆ. ಈ ರಾಶಿಯವರ ಹಣೆಬರಹ ಚೆನ್ನಾಗಿ ಇರೋದ್ರಿಂದ ಇವರು ಬಯಸಿದ್ದೆಲ್ಲಾ ಸುಲಭವಾಗಿ ಸಿಗುತ್ತದೆ. ಇವರು ಯಾವುದೇ ಕೆಲಸ ಮಾಡಿದ್ರು ಕೂಡ ಅದ್ರಲ್ಲಿ ಖಂಡಿತ ಯಶಸ್ವಿಯಾಗುತ್ತಾರೆ.
ಇನ್ನೂ ಜೀವನದಲ್ಲಿ ಹೆಚ್ಚು ಕಷ್ಟವನ್ನು ಇವರು ನೋಡಿರೋದಿಲ್ಲ. ಕೊಂಚ ಶ್ರಮ ಪಟ್ಟರೆ ಸಾಕು ಇಷ್ಟ ಪಟ್ಟಿದ್ದನ್ನೆಲ್ಲಾ ಇವರು ದಕ್ಕಿಸಿಕೊಕೊಳ್ತಾರೆ. ಈ ರಾಶಿಯವರನ್ನು ಬುದ್ಧಿವಂತರು ಮತ್ತು ಶ್ರಮಜೀವಿಗಳೆಂದು ಪರಿಗಣಿಸಲಾಗುತ್ತದೆ. ಇವರು ತಮ್ಮ ಜೀವನದಲ್ಲಿ ಹೇರಳವಾಗಿ ಹಣವನ್ನು ಗಳಿಸುತ್ತಾರೆ. ಅದೃಷ್ಟ ಯಾವಾಗಲೂ ಇವರ ಜೊತೆಗೆ ಇರುತ್ತದೆ. ಇವರು ಕಂಡ ಕನಸನ್ನು ನನಸು ಮಾಡಿಕೊಳ್ಳದೇ ಬಿಡುವವರಲ್ಲ.
ಸಿಂಹ ರಾಶಿ
ಸಿಂಹ ರಾಶಿಯ ವ್ಯಕ್ತಿಗಳನ್ನು ಸಾಮಾಜಿಕವಾಗಿ ಸಾಕಷ್ಟು ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಅವರ ನಡವಳಿಕೆಯು ತುಂಬಾ ವಿಶೇಷವಾಗಿದ್ದು ಇವರು ಎಲ್ಲರ ಹೃದಯವನ್ನು ಸುಲಭವಾಗಿ ಗೆಲ್ಲುತ್ತಾರೆ. ಈ ರಾಶಿಯವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಯಾವುದೇ ಕೆಲಸ ಮಾಡಿದರೂ ಕೂಡ ಇವರು ಯಶಸ್ವಿಯಾಗದೇ ಇರುವವರಲ್ಲ. ಈ ರಾಶಿಯವರು ಶ್ರಮ ಜೀವಿಗಳು. ಯಶಸ್ಸು ಇವರ ಬೆನ್ನ ಹಿಂದೆ ಯಾವತ್ತೂ ಇರುತ್ತದೆ.
ಇವರು ತಮ್ಮ ಅದೃಷ್ಟದಿಂದಲೇ ಸಾಕಷ್ಟು ಹಣ, ಆಸ್ತಿ, ಸಂಪತ್ತುನ್ನು ಗಳಿಸುತ್ತಾರೆ. ಜೀವನದಲ್ಲಿ ಯಾವುದೇ ವಿಚಾರಕ್ಕೂ ಹೆಚ್ಚು ಕಷ್ಟ ಪಟ್ಟು ಇವರಿಗೆ ಗೊತ್ತಿರೋದಿಲ್ಲ. ಎಲ್ಲೇ ಹೋದರೂ ಕೂಡ ಇವರು ಸುಖವಾಗಿಯೇ ಬದುಕುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ರಾಜಯೋಗದ ಬಗ್ಗೆ ಒಲವನ್ನು ಹೊಂದಿರುತ್ತಾರೆ. ಅದೃಷ್ಟ ಇವರ ಜೊತೆಯಲ್ಲೇ ಇರುತ್ತದೆ. ಇವರು ಯಾವ ಕೆಲಸ ಮಾಡೋದಕ್ಕೆ ಹೋದರೂ ಕೂಡ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಅದೃಷ್ಟದ ಮೂಲಕವೇ ಎಲ್ಲವನ್ನೂ ಸುಲಭವಾಗಿ ಪಡೆದುಕೊಳ್ಳುತ್ತಾರೆ. ಈ ರಾಶಿಯವರು ಶ್ರಮದ ಪ್ರತಿಫಲವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪಡೆಯುತ್ತಾರೆ.
ಈ ರಾಶಿಯವರಲ್ಲಿ ತಾಳ್ಮೆ ಹೆಚ್ಚಾಗಿ ಇರುತ್ತದೆ. ಯಾವುದೇ ಕಾರಣಕ್ಕೂ ದುಡುಕುವವರಲ್ಲ ಇವರು. ಹೀಗಾಗಿ ಯಶಸ್ಸಿನ ಖುಷಿಯನ್ನು ಅನುಭವಿಸಲು ಇವರಿಂದ ಸಾಧ್ಯವಾಗುತ್ತದೆ. ಈ ರಾಶಿಯವರು ಸಕಾರಾತ್ಮಕ ಮತ್ತು ಶಾಂತ ಸ್ವಭಾವವನ್ನು ಹೊಂದಿದ್ದಾರೆ. ಈ ರಾಶಿಯವರು ತಮ್ಮ ಜೀವನದಲ್ಲಿ ಯಾವುದೇ ಸೌಕರ್ಯಗಳು ಮತ್ತು ಐಷಾರಾಮಿ ಜೀವನಕ್ಕೆ ಯಾವುದೇ ರೀತಿ ಕೊರತೆ ಇರೋದಿಲ್ಲ.



Click it and Unblock the Notifications
